• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

“ಈಗ ಗ್ರಾಮೀಣ ಭಾಗದಲ್ಲಿ ಶೇ. 82 ರಷ್ಟು ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ದೊರೆತಿದೆ”

ಈ ಉತ್ತಮ ಯಶಸ್ಸಿಗೆ, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಮತ್ತು ಅವರ ಇಡೀ ತಂಡವನ್ನು ನಾನು ಅಭಿನಂದಿಸುತ್ತೇನೆ : ರಾಷ್ಟ್ರಪತಿ ಮುರ್ಮು..

ಪ್ರತಿಧ್ವನಿ by ಪ್ರತಿಧ್ವನಿ
March 13, 2026
in Top Story, ಇದೀಗ, ದೇಶ, ರಾಜಕೀಯ
0
“ಈಗ ಗ್ರಾಮೀಣ ಭಾಗದಲ್ಲಿ ಶೇ. 82 ರಷ್ಟು ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ದೊರೆತಿದೆ”
Share on WhatsAppShare on FacebookShare on Telegram

ನವದೆಹಲಿ :  ಕಳೆದ 2019 ರಲ್ಲಿ ಜಲ ಜೀವನ್ ಮಿಷನ್ ಪ್ರಾರಂಭವಾದಾಗ ಶೇ. 17 ರಷ್ಟು ಗ್ರಾಮೀಣ ಕುಟುಂಬಗಳು ನಲ್ಲಿ ನೀರಿನ ಸಂಪರ್ಕವನ್ನು ಹೊಂದಿವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

ADVERTISEMENT
TMC MP Mahua Moitra : ಕೇಂದ್ರ ಸರ್ಕಾರದ ವಿರುದ್ಧ ಮಹೂವಾ ಮೊಯಿತ್ರಾ  ಹೇಳಿದ್ದೇನು..! #pratidhvani

ಇಲ್ಲಿ ಜಲ ಮಹೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ,  ಭಾರತದಲ್ಲಿ ನೀರು ಕೇವಲ ಮೂಲಭೂತ ಸೌಲಭ್ಯವಲ್ಲ, ಬದಲಾಗಿ ದೇಶದ ಸಂಸ್ಕೃತಿ, ಸಂಪ್ರದಾಯ, ಜೀವನೋಪಾಯ ಹಾಗೂ ಸಮುದಾಯಗಳ ಬದುಕಿಗೆ ಮೂಲಾಧಾರವಾಗಿದೆ  ಎಂದು ತಿಳಿಸಿದ್ದಾರೆ.

2019 ರಲ್ಲಿ ಜಲ ಜೀವನ್ ಮಿಷನ್ ಪ್ರಾರಂಭದ ವೇಳೆ ಈ ಅಂಕಿ ಅಂಶವು ಕೇವಲ ಶೇ. 17 ರಷ್ಟಿತ್ತು, ಆದರೆ ಪ್ರಸ್ತುತ ಗ್ರಾಮೀಣ ಭಾಗದ ಕುಟುಂಬಗಳಲ್ಲಿ ಸುಮಾರು ಶೇ. 82 ರಷ್ಟು ಜನರು ನಲ್ಲಿ ನೀರಿನ ಸೌಲಭ್ಯವನ್ನು ಹೊಂದಿದ್ದಾರೆ ಎಂಬುದು ಬಹಳ ತೃಪ್ತಿಕರ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಉತ್ತಮ ಯಶಸ್ಸಿಗೆ, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಮತ್ತು ಅವರ ಇಡೀ ತಂಡವನ್ನು ನಾನು ಅಭಿನಂದಿಸುತ್ತೇನೆ. ನೀರು ಜೀವನದ ಆಧಾರ. ನಮ್ಮ ಸಂಪ್ರದಾಯಗಳಲ್ಲಿ, ನೀರನ್ನು ಅನೇಕ ಕಾಯಿಲೆಗಳಿಗೆ ಪರಿಹಾರವಾಗಿ ಪೂಜಿಸಲಾಗುತ್ತದೆ. ನಮ್ಮ ರಾಷ್ಟ್ರೀಯ ಗೀತೆಯಾದ ವಂದೇ ಮಾತರಂನಲ್ಲಿ – ಅದರ ರಚನೆಯ 150 ನೇ ವಾರ್ಷಿಕೋತ್ಸವವನ್ನು ನಾವು ಸ್ಮರಿಸುತ್ತಿದ್ದೇವೆ – ಮೊದಲ ಪದ ‘ಸುಜಲಂ’, ಇದರ ಅರ್ಥ ‘ಉತ್ತಮ ಜಲಸಂಪನ್ಮೂಲಗಳಿಂದ ಸಮೃದ್ಧ ಎಂಬುವುದಾಗಿ ಅರ್ಥೈಸಿದ್ದಾರೆ.

ಹಿಂದೆ ಗ್ರಾಮೀಣ ಕುಟುಂಬಗಳು ಕುಡಿಯುವ ನೀರಿಗಾಗಿ ಕಷ್ಟಪಡಬೇಕಾಗಿತ್ತು. ಮಹಿಳೆಯರು ಮತ್ತು ಮಕ್ಕಳು ನೀರನ್ನು ಹೊತ್ತು ತರಲು ಬಹಳ ದೂರ ಹೋಗಬೇಕಾಗಿತ್ತು. ಇಂದು ಶುದ್ಧ ಮತ್ತು ಸುರಕ್ಷಿತ ನೀರು ಮನೆಗಳಿಗೆ ತಲುಪುತ್ತಿದೆ, ಇದು ಜಲ ಜೀವನ್ ಮಿಷನ್‌ನ ಯಶಸ್ಸನ್ನು ಪ್ರತಿಬಿಂಬಿಸುತ್ತದೆ ಎಂದು ಶ್ಲಾಘಿಸಿದ್ದಾರೆ.

ಇದನ್ನೂ ಓದಿ : ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು, ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಸುಜಲಾಂ ಭಾರತ್ ಆ್ಯಪ್, ನೈಜ-ಸಮಯದ ಡ್ಯಾಶ್‌ಬೋರ್ಡ್‌ಗಳಂತಹ ವೇದಿಕೆಗಳು ಪಾರದರ್ಶಕತೆಯ ಜೊತೆಗೆ ಪರಿಣಾಮಕಾರಿ ಯೋಜನೆಯಾಗಿವೆ. ಅಷ್ಟೇ ಅಲ್ಲದೆ, ಮೇರಿ ಪಂಚಾಯತ್ ಅಪ್ಲಿಕೇಶನ್ ಮತ್ತು ಪಂಚಾಯತ್ ಡ್ಯಾಶ್‌ಬೋರ್ಡ್‌ನಂತಹ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಗ್ರಾಮ ಪಂಚಾಯತ್ ಮಟ್ಟದಲ್ಲಿ ನೀರಿನ ಸೇವೆಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತಿವೆ ಎಂದು ತಿಳಿಸಿದ್ದಾರೆ.

ಇದು ಸಮುದಾಯದ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತಿದೆ ಮತ್ತು ನೀರು ಸರಬರಾಜು ವ್ಯವಸ್ಥೆಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಬಲಪಡಿಸುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.

ವಿವಿಧ ಕಾರಣಗಳಿಂದ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು  ಬಳಸಲು ಸಾಧ್ಯವಾಗದವರಿಗೂ ಪರಿಹಾರಗಳನ್ನು ಸಹ ಹುಡುಕಲಾಗುತ್ತಿದೆ. ಜಲಸಂಪನ್ಮೂಲಗಳ ಸಂರಕ್ಷಣೆಗಾಗಿ, ತಾಂತ್ರಿಕ ನಿರ್ವಹಣೆಯ ಜೊತೆಗೆ ಸಮಾಜದ ಎಲ್ಲಾ ವರ್ಗಗಳ ಭಾಗವಹಿಸುವಿಕೆ ಅಗತ್ಯ ಎಂದು ಒತ್ತಿ ರಾಷ್ಟ್ರಪತಿ ಮುರ್ಮು ಒತ್ತಿ ಹೇಳಿದ್ದಾರೆ.

ನೀರಿನ ಆರೋಗ್ಯ, ನೈರ್ಮಲ್ಯ ಮತ್ತು ನೀರು ಪೂರೈಕೆಯನ್ನು ಮಾಡುವಲ್ಲಿ ಎಲ್ಲಾ ಪ್ಲಂಬರ್‌ಗಳು ಮತ್ತು ತಂತ್ರಜ್ಞರ ಕೊಡುಗೆಗಳನ್ನು ಮರೆಯಬಾರದು. ಜಲ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ನೀರನ್ನು ಕೇವಲ ಬಳಕೆಗೆ ಇರುವ ಸಂಪನ್ಮೂಲವಾಗಿ ನೋಡಬಾರದು, ಬದಲಾಗಿ ಭವಿಷ್ಯದ ಪೀಳಿಗೆಗೆ ಅಮೂಲ್ಯವಾದ ಪರಂಪರೆಯಾಗಿ ನೋಡಬೇಕು. ನೀರಿದ್ದರೆ ಭವಿಷ್ಯವೂ ಇರುತ್ತದೆ ಎಂದು ರಾಷ್ಟ್ರಪತಿ ಮುರ್ಮು ದೇಶದ ಜನರಿಗೆ ಕರೆ ನೀಡಿದ್ದಾರೆ.

Tags: AI TechnologyDigital technologyGovernment of IndiaGram PanchayatGround Water ResourcesImplementation of Jaljeevan Missionnational newsPM Narendra ModiPratidhvaniPresient Of indiaRural LadiesRural LifeRural publicRural YoutsTap WaterUnion Water Power Minister CR .Vande Mataram
Previous Post

ಕೈ ಪಾಳಯದಲ್ಲಿ ರಾತೋರಾತ್ರಿ ಮಹತ್ವದ ಬೆಳವಣಿಗೆ : ದಿಢೀರ್ ಸಭೆ ಸೇರಿ ಶಾಸಕರು ಚರ್ಚಿಸಿದ್ದೇನು..?

Next Post

ಸ್ಮಾರ್ಟ್ ಮೀಟರ್‌ ಅಳವಡಿಕೆ ಶೀಘ್ರದಲ್ಲೇ ಪೂರ್ಣಗೊಳಿಸಿ : ವಿದ್ಯುತ್ ಇಲಾಖೆಗೆ ಸಂಸದೀಯ ಸಮಿತಿ ತಾಕೀತು..

Related Posts

ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?
Top Story

‘ಕಾಕ್ರೋಚ್ ಜನತಾ ಪಾರ್ಟಿ’ಗೆ ಎಕ್ಸ್‌ನಲ್ಲಿ ಬ್ರೇಕ್..! ಯುವಕರ ಡಿಜಿಟಲ್ ಆಕ್ರೋಶಕ್ಕೆ ಸೆನ್ಸಾರ್‌?

by ಪ್ರತಿಧ್ವನಿ
May 21, 2026
0

ಭಾರತದ ಮುಖ್ಯ ನ್ಯಾಯಮೂರ್ತಿಗಳ ಯುವಜನರ ಕುರಿತ ಹೇಳಿಕೆ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಬೆನ್ನಲ್ಲೇ ಹುಟ್ಟಿಕೊಂಡಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಇದೀಗ ಮತ್ತೊಮ್ಮೆ ಭಾರಿ ಸುದ್ದಿಯಲ್ಲಿದೆ. ಸಾಮಾಜಿಕ...

Read moreDetails
ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

May 21, 2026
*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

May 21, 2026
ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

May 21, 2026
“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

May 21, 2026
Next Post
ಸ್ಮಾರ್ಟ್ ಮೀಟರ್‌ ಅಳವಡಿಕೆ ಶೀಘ್ರದಲ್ಲೇ ಪೂರ್ಣಗೊಳಿಸಿ : ವಿದ್ಯುತ್ ಇಲಾಖೆಗೆ ಸಂಸದೀಯ ಸಮಿತಿ ತಾಕೀತು..

ಸ್ಮಾರ್ಟ್ ಮೀಟರ್‌ ಅಳವಡಿಕೆ ಶೀಘ್ರದಲ್ಲೇ ಪೂರ್ಣಗೊಳಿಸಿ : ವಿದ್ಯುತ್ ಇಲಾಖೆಗೆ ಸಂಸದೀಯ ಸಮಿತಿ ತಾಕೀತು..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada