ಏನು ತಿಳಿಯದ ವೃದ್ದೆಗೆ ವೃದ್ಧಾಪ್ಯ ವೇತನ ಮಾಡಿಸುವುದಾಗಿ ಹೇಳಿ ಕುರಿಗಾಹಿಗಳು ಆಸ್ತಿ ಲಪಟಾಯಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ಹರ್ತಿಕೋಟೆ ಗ್ರಾಮದ ಪಕ್ಕದಲ್ಲರಿಉವ ಕಳವಿಭಾಗಿಯಲ್ಲಿ ನಡೆದಿದೆ.
ನಿಂಗಮ್ಮ(85) ಮೋಸ ಹೋದವರು ಎಂದು ತಿಳಿದು ಬಂದಿದೆ. ಸಂಗೇನಹಳ್ಳಿ ಗ್ರಾಮದ ಕುರಿ ಜಗನ್ನಾಥ್, ಕೆಂಚಲಿಂಗಪ್ಪ, ಪೂಜಾರಿ ಗಿಡ್ಡಪ್ಪ ಆಲಿಯಾಸ್ ನಿಂಗಪ್ಪ, ವೀರಮ್ಮ ಅಜ್ಜಿಗೆ ಮೋಸ ಮಾಡಿರುವವರು ಎಂದು ತಿಳಿದು ಬಂದಿದೆ.
ನಿಂಗಮ್ಮನಿಗೆ ಓದಲು, ಬರೆಯಲು, ದುಡ್ಡು ಎನ್ನಿಸಲು ಸಹ ಬರುವುದಿಲ್ಲ ಮತ್ತು ಅಜ್ಜಿಗೆ ಯಾರು ಹಿಂದೆ ಮುಂದೆ ಇರದಿರುವುದನ್ನು ಅರಿತ ಆರೋಪಿಗಳು ಅಜ್ಜಿಯ ವಿಶ್ವಾಸಗಳಿಸಿ ವೃದ್ದೆಯ ಹೆಸರಿನಲ್ಲಿದ್ದ 3.36 ಎಕರೆ ಜಮೀನನ್ನು ಅಕ್ರಮ ದಾಖಲೆಗಳನ್ನು ಸಿದ್ದಪಡಿಸಿ ವೃದ್ಧಾಪ್ಯ ವೇತನ ಮಾಡಿಸುವುದಾಗಿ ಹೇಳಿ ಹಿರಿಯೂರು ತಾಲ್ಲೂಕು ಕಚೇರಿಗೆ ಕರೆದೊಯ್ದು ಅಜ್ಜಿಯಿಂದ ತಮ್ಮಹೆಸರಿಗೆ ಆಸ್ತಿಯನ್ನ ನೋಂದಾಯಿಸಿಕೊಂಡು ಅಜ್ಜಿಯನ್ನ ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಮೊದಲಿಗೆ ಅಜ್ಜಿಯ ಜಮೀನನ್ನು ಕೋರಿಗೆ ತೆಗೆದುಕೊಂಡಿದ್ದ ಆರೋಪಿಗಳು ಜಮೀನಿನಲ್ಲಿ ಕುರಿಮಂದೆ ಬಿಟ್ಟರೆ ಫಸಲು ಉತ್ತಮವಾಗಿ ಬದುತ್ತದೆ ಎಂದು ಹೇಳಿ ಅಜ್ಜಿಯನ್ನು ನಂಬಿಸಿದ್ದರು. ನಂತರದ ದಿನಗಳಲ್ಲಿ ಅಜ್ಜಿಗೆ ಏನೂ ತಿಳಿಯಲ್ಲ, ಓದಕ್ಕೂ ಬರಲ್ಲ. ಬರೆಯೋಕ್ಕು ಬರಲ್ಲ. ದುಡ್ಡು ಎಣಿಸೋಕು ಬರಲ್ಲ ಎಂದು ತಿಳಿದು ಅಜ್ಜಿಯನ್ನು ಆರಾಮಾಗಿ ಯಾಮಾರಿಸಿ ಹೊಂಚು ಹಾಕಿದರು. ನಿನಗೆ ಸರ್ಕಾರದಿಂದ ಸಂಬಳ ಬರುವಂತೆ ಮಾಡಿಕೊಡುತ್ತೇವೆ ಎಂದು ಹಿರಿಯೂರಿಗೆ ಕರೆದುಕೊಂಡು ಹೋಗಿ ಅಜ್ಜಿ ಹೆಸರಿನಲ್ಲಿದ್ದ ಆಸ್ತಿಯನ್ನ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.
ಸದ್ಯ ಹಿರಿಯೂರು ತಾಲೂಕಿನ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದುಈ ವಿಚಾರ ಗ್ರಾಮದಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದ್ದು ಗ್ರಾಮಸ್ಥರು ಐನಾತಿ ಖತರ್ನಾಕ್ ಕುರಿಗಾಹಿಗಳು ಈಗ ಗ್ರಾಮಸ್ಥರಿಂದ ಹಿಡಿ ಹಿಡಿ ಶಾಪ ಹಾಕಿಸಿಕೊಂಡಿದ್ದಾರೆ ಮತ್ತು ಸಂತ್ರಸ್ತೆ ಅಜ್ಜಿಯ ಪರ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ವಕಾಲತ್ತು ವಹಿಸಿದ್ದು ಅಜ್ಜಿಗೆ ನ್ಯಾಯಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
