ಕೇಂದ್ರ ಸರ್ಕಾರ ಕಳೆದ ತಿಂಗಳು ಜಾರಿಗೆ ತಂದಿದ್ದ ಸೇನೆಗೆ ಅಲ್ಫಾವಧಿ ನೇಮಕಾತಿ ಯೋಜನೆ ಅಗ್ನಿಪಥ್ ದೇಶಾದ್ಯಂತ ಪರ ವಿರೋಧದ ಕಿಡಿ ಹುಟ್ಟುಹಾಕಿತ್ತು.
ಯೋಜನೆಯ ಸಿಂಧುತ್ವವನ್ನ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಹಲವು ರಿಟ್ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆದರೆ, ಸುಪ್ರೀಂ ಕೋರ್ಟ್ ಅರ್ಜಿಗಳನ್ನು ದೆಹಲಿ ಹೈಕೋರ್ಟಿಗೆ ವರ್ಗಾಯಿಸಿ ಆದೇಶ ಹೊರಡಿಸಿದೆ.

ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಸೂರ್ಯಕಾಂತ್ ಹಾಗೂ ಎ.ಎಸ್.ಬೋಪಣ್ಣ ಅವರಿದ್ದ ತ್ರಿಸದಸ್ಯ ಪೀಠವು ಈಗಾಗಲೇ ನಾವು ಅಗ್ನಿಪಥ್ ಯೋಜನೆ ಕುರಿತಾದ ಅರ್ಜಿ ವಿಚಾರಣೆ ನಡೆಸುತ್ತಿದ್ದು ಹೈಕೋರ್ಟಿನ ದೃಷ್ಟಿಕೋನದ ಲಾಭ ನಮ್ಮಗು ಸಿಗಲಿ ಹೈಕೋರ್ಟಿನ ದೃಷ್ಟಿಕೋನವನ್ನು ಪರಿಗಣಿಸುವುದು ಯಾವಾಗಲೂ ಒಳ್ಳೆಯದು ಎಂದು ಅಭಿಪ್ರಯಪಟ್ಟಿದೆ.
ಅಗ್ನಿಪಥ್ ಯೋಜನೆ ವಿರೋಧಿಸಿ ಹರ್ಷ್ ಅಜಯ್ ಸಿಂಗ್, ಎಂಎಲ್ ಶರ್ಮಾ ಮತ್ತು ರವೀಂದ್ರ ಸಿಂಗ್ ಶೇಖಾವತ್ ಸಲ್ಲಿಸಿರುವ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ಪರಿಗಣನೆಗೆ ಬಂದವು.