ಮಂಗಳವಾರ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (MHA) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಭಾರತೀಯ ಪೌರತ್ವವನ್ನು ತ್ಯಜಿಸಸುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಹೌದು, 2020ರಲ್ಲಿ 85,256 ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದರೆ. 2021ರಲ್ಲಿ 1,63,370 ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ. ದೇಶವನ್ನು ತೊರೆದ ಭಾರತೀಯರಲ್ಲಿ ಹೆಚ್ವಿನವರು ಯುಎಸ್, ಕೆನಡಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ಗೆ ಹೋಗಿದ್ದಾರೆ.
ಲೋಕಸಭೆಯಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಸಂಸದ ಹಾಜಿ ಫಜ್ಲುರ್ ರೆಹಮಾನ್ ಕೇಳಿದ ಪ್ರಶ್ನೆಗೆ, ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ (MoS) ನಿತ್ಯಾನಂದ ರೈ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
2019 ರಿಂದ ಇಲ್ಲಿಯವರೆಗೆ ತಮ್ಮ ಪೌರತ್ವವನ್ನು ತ್ಯಜಿಸಿದ ಭಾರತೀಯ ಪ್ರಜೆಗಳ ಸಂಖ್ಯೆ, ಈ ಕ್ರಮಕ್ಕೆ ಉಲ್ಲೇಖಿಸಲಾದ ಕಾರಣಗಳು ಮತ್ತವರು ಬೇರೆ ಪೌರತ್ವವನ್ನು ಪಡೆದ ದೇಶಗಳ ಕುರಿತು ರೆಹಮಾನ್ ವಿವರಗಳನ್ನು ಕೋರಿದ್ದರು.
ಭಾರತೀಯ ಪೌರತ್ವವನ್ನು ತೊರೆಯುವ ಜನರು ಮೊದಲ ಆದ್ಯತೆ, ಅಮೇರಿಕಾ (ಯುಎಸ್) ಈ ದೇಶದ ಭಾರತೀಯರು, 2020ರಲ್ಲಿ 30,828 ಮಂದಿ ತಮ್ಮ ಪೌರತ್ವವನ್ನು ತೊರೆದರೆ, 2021ರಲ್ಲಿ 78,284 ಮಂದಿ ಭಾರತೀಯ ಪೌರತ್ವ ತ್ಯಜಿಸಿ ಅಮೇರಿಕಾ ಪೌರತ್ವ ಸ್ವೀಕರಿಸಿದ್ದಾರೆ ಎಂದು ತಿಳಿಸಿದೆ.
ಭಾರತೀಯ ಪೌರತ್ವವನ್ನು ತೊರೆಯುವ ಜನರ ಎರಡನೇ ಆಯ್ಕೆಯಾಗಿ ಆಸ್ಟ್ರೇಲಿಯಾ ದೇಶವಾಗಿದ್ದು, ಈ ದೇಶದ ಭಾರತೀಯರು, 2020ರಲ್ಲಿ 13,518 ಮಂದಿ ತಮ್ಮ ಪೌರತ್ವವನ್ನು ತೊರೆದಿದ್ದಾರೆ, ಇನ್ನು 2021ರಲ್ಲಿ 23,533 ಮಂದಿ ಭಾರತೀಯ ಪೌರತ್ವ ತ್ಯಜಿಸಿ ಆಸ್ಟ್ರೇಲಿಯಾ ಪೌರತ್ವ ಸ್ವೀಕರಿಸಿದ್ದಾರೆ ಎಂದು ತಿಳಿಸಿದೆ.
ಪ್ರತಿ ವರ್ಷ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಭಾರೀ ಸಂಖ್ಯೆಯಲ್ಲಿ ಭಾರತೀಯರು ಕೆನಡಾಗೆ ತೆರಳುತಾರೆ. ಈ ದೇಶ ಭಾರತೀಯರಿಗೆ ಮೂರನೇ ಆಯ್ಕೆಯಾಗಿದ್ದು, 2021 ರಲ್ಲಿ ಒಟ್ಟು 21,597 ಮಂದಿ ಭಾರತೀಯ ಪೌರತ್ವ ತ್ಯಜಿಸಿ ಕೆನಡಾ ಪೌರತ್ವ ಸ್ವೀಕರಿಸಿದ್ದಾರೆ ಎಂದು ತಿಳಿಸಿದೆ.

2021 ರಲ್ಲಿ ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ ಟಾಪ್ 10 ದೇಶಗಳ ಪಟ್ಟಿ:
1. ಯುನೈಟೆಡ್ ಸ್ಟೇಟ್ಸ್ (2021 ರಲ್ಲಿ 78,284 – 2020 ರಲ್ಲಿ 30,828 ಮಂದಿ)
2. ಆಸ್ಟ್ರೇಲಿಯಾ (2021 ರಲ್ಲಿ 23,533 – 2020 ರಲ್ಲಿ 13,518 ಮಂದಿ)
3. ಕೆನಡಾ (2021 ರಲ್ಲಿ 21,597 – 2020 ರಲ್ಲಿ 17,093 ಮಂದಿ)
4. ಯುನೈಟೆಡ್ ಕಿಂಗ್‌ಡಮ್ (2021 ರಲ್ಲಿ 14,637 – 2020 ರಲ್ಲಿ 6,489 ಮಂದಿ)
5. ಇಟಲಿ (2021 ರಲ್ಲಿ 5,986 – 2020 ರಲ್ಲಿ 2,312 ಮಂದಿ)
6. ನ್ಯೂಜಿಲೆಂಡ್ (2021 ರಲ್ಲಿ 2,643 – 2020 ರಲ್ಲಿ 2,116 ಮಂದಿ)
7. ಸಿಂಗಾಪುರ (2021 ರಲ್ಲಿ 2,516 – 2020 ರಲ್ಲಿ 2,289 ಮಂದಿ)
8. ಜರ್ಮನಿ (2021 ರಲ್ಲಿ 2,381 – 2020 ರಲ್ಲಿ 2,152 ಮಂದಿ)
9. ನೆದರ್ಲ್ಯಾಂಡ್ಸ್ (2021 ರಲ್ಲಿ 2,187 – 2020 ರಲ್ಲಿ 1,213 ಮಂದಿ)
10. ಸ್ವೀಡನ್ (2021 ರಲ್ಲಿ 1,841 – 2020 ರಲ್ಲಿ 1,046 ಮಂದಿ)