ಪ್ಯಾಕ್ ಆದ ಆಹಾರ ಪದಾರ್ಥಗಳು ಮತ್ತು ಲೇಬಲ್ಡ್ ಮಾಡಿದ ವಸ್ತುಗಳ ಮೇಲೆ ಜುಲೈ 18 ರಿಂದ ಜಾರಿಯಾಗಿರುವ ಶೇ 5ರ GST ರಾಷ್ಟ್ರ ವ್ಯಾಪಿ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಈ ವಸ್ತುಗಳನ್ನು ಬಿಡಿಬಿಡಿಯಾಗಿ ಮಾರಾಟ ಮಾಡಿದರೆ ಅಂಥವುಗಳಿಗೆ GST ಅನ್ವಯವಾಗುವುದಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪ್ರೀ ಪ್ಯಾಕ್ ಮತ್ತು ಮೊದಲೇ ಲೇಬಲ್ ಮಾಡಿದ ವಸ್ತುಗಳ ಮೇಲೆ ತೆರಿಗೆ ವಿಧಿಸುವ ನಿರ್ಧಾರವನ್ನು GST ಕೌನ್ಸಿಲ್ ಒಟ್ಟಾರೆಯಾಗಿ ತೆಗೆದುಕೊಂಡಿದೆ, ಇದು ಒಟ್ಟಾರೆ GST ಕೌನ್ಸಿಲ್ ನಿರ್ಧಾರವೇ ಹೊರತು ಒಬ್ಬ ಸದಸ್ಯರ ನಿರ್ಧಾರವಲ್ಲ ಎಂದು ಹೇಳಿದ್ದಾರೆ. GST ಕೌನ್ಸಿಲ್, GST ವಿನಾಯಿತಿ ನೀಡಿರುವ ವಸ್ತುಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.
ಇತ್ತೀಚೆಗೆ GST ಕೌನ್ಸಿಲ್ ನ 47ನೇ ಸಭೆಯು ನಿರ್ದಿಷ್ಟ ಆಹಾರ ಪದಾರ್ಥಗಳಾದ ಕಾಳುಗಳು, ಧಾನ್ಯಗಳು, ಹಿಟ್ಟು ಮೊದಲಾದ ನಿರ್ದಿಷ್ಟ ವಸ್ತುಗಳ ಮೇಲೆ GST ಹೇರಿಕೆಯನ್ನು ಮರು ಪರಿಶೀಲಿಸಬೇಕು ಎಂದು ಶಿಫಾರಸು ಮಾಡಿತ್ತು . ಈ ಬಗ್ಗೆ ಹಲವಾರು ತಪ್ಪುಕಲ್ಪ ನೆಗಳಿದ್ದು ಅವುಗಳನ್ನು ಪ್ರಚಾರಮಾಡಲಾಗಿದೆ. ಇಲ್ಲಿದೆ ಸತ್ಯಾಂಶ ಎಂದು ಟ್ವೀಟ್ ಮಾಡಿದ್ದಾರೆ.
ಪ್ಯಾಕ್ ಮಾಡಲಾದ ಮತ್ತು ಲೇಬಲ್ ಮಾಡಲಾದ ಸರಕುಗಳನ್ನ ಸರಬರಾಜು ಮಾಡಿದಾಗ GST ಅನ್ವಯವಾಗುತ್ತದೆ. ಈ ಕೆಳಗೆ ನೀಡಲಾದ ಪಟ್ಟಿಯಲ್ಲಿರುವ ನಿರ್ದಿಷ್ಟ ವಸ್ತುಗಳನ್ನು ಬಿಡಿಯಾಗಿ ಮಾರಿದಾಗ, ಮೊದಲೇ ಪ್ಯಾಕ್ ಮಾಡಿಲ್ಲದೆ ಅಥವಾ ಮೊದಲೇ ಲೇಬಲ್ ಮಾಡದೇ ಇದ್ದರೆ ಅದಕ್ಕೆ GST ಅನ್ವಯವಾಗುವುದಿಲ್ಲ ಎಂದು ವಿತ್ತ ಸಚಿವೆ ಹೇಳಿದ್ದಾರೆ.
ಎಲ್ಲ ರಾಜ್ಯಗಳು, ಬಿಜೆಪಿಯೇತರ ಆಡಳಿತ ರಾಜ್ಯಗಳು ಕೂಡ (ಪಂಜಾಬ್, ರಾಜಸ್ಥಾನ್, ಛತ್ತೀ ಸಗಡ, ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ) ದಿನನಿತ್ಯದ ಆಹಾರ ಪದಾರ್ಥಗಳ ಮೇಲಿನ ಜಿಎಸ್‌ಟಿ ಹೇರುವ ನಿರ್ಧಾರಕ್ಕೆ ಸಹಮತಸೂಚಿಸಿದ್ದವು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಬಿಡಿಯಾಗಿ ಮಾರಿದಾಗ GST ಅನ್ವಯವಾಗದೇ ಇರುವ ವಸ್ತುಗಳ ಪಟ್ಟಿ ಇಲ್ಲಿದೆ:
ದ್ವಿದಳ ಧಾನ್ಯ / ಬೇಳೆ
ಗೋಧಿ
ಸಣ್ಣ ಗೋಧಿ
ಓಟ್ಸ್
ಮೈದಾ
ಅಕ್ಕಿ
ಗೋಧಿ ಹಿಟ
ಸೂಜಿ/ ರವಾ
ಕಡಲೆ ಹಿಟ್ಟು
ಮಂಡಕ್ಕಿ
ಮೊಸರು/ ಲಸ
#GST @FinMinIndia @PIB_India @PIBMumbai @PIBChandigarh @PIBHyderabad @pibchennai @PIBKolkata @PIBKohima @PIBGuwahati @PIBHindi @cbic_india https://t.co/EDWfuYnGzC
— Nirmala Sitharaman (@nsitharaman) July 19, 2022