• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ವಿದೇಶ

Ukraine ಮೇಲೆ Russia ಆಕ್ರಮಣ : ಯುದ್ಧ ಬೆಳವಣಿಗೆ, ಸೇನಾ ಸಾಮರ್ಥ್ಯದ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ!

ಫೈಝ್ by ಫೈಝ್
February 25, 2022
in ವಿದೇಶ
0
Ukraine ಮೇಲೆ Russia ಆಕ್ರಮಣ : ಯುದ್ಧ ಬೆಳವಣಿಗೆ, ಸೇನಾ ಸಾಮರ್ಥ್ಯದ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ!
Share on WhatsAppShare on FacebookShare on Telegram

ADVERTISEMENT

ಅಮೆರಿಕಾ, ಯುರೋಪ್‌ (Europe) ಹಾಗೂ ಜಾಗತಿಕ ಇತರೆ ರಾಷ್ಟ್ರಗಳು ನೀಡಿದ ಎಚ್ಚರಿಕೆಯನ್ನು ಧಿಕ್ಕರಿಸಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (President Vladimir Putin) ಗುರುವಾರ ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆ ಘೋಷಿಸಿದ್ದಾರೆ. ಆ ಮೂಲಕ ಉಕ್ರೇನ್‌ ವಿರುದ್ಧ ಪೂರ್ಣ ಪ್ರಮಾಣದ ಯುದ್ಧಕ್ಕೆ ರಷ್ಯಾ ತೊಡಗಿಸಿಕೊಂಡಿದೆ.

ಗುರುವಾರ ಟಿವಿ ಚಾನೆಲ್‌ ಮೂಲಕ ಉಕ್ರೇನ್‌ಗೆ ಸಂದೇಶ ನೀಡಿದ ಪುಟಿನ್‌, ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ಉಕ್ರೇನ್ ಸೈನಿಕರಿಗೆ ಕರೆ ನೀಡಿದ್ದಾರೆ. ಇದೇ ವೇಳೆ, ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆಯ () ನಿರ್ಧಾರವನ್ನು ಘೋಷಿಸಿದ ಅವರು ಉಕ್ರೇನ್‌ ವಿರುದ್ಧದ ಕಾರ್ಯಾಚರಣೆಗೆ ಮಧ್ಯ ಪ್ರವೇಶಿಸುವ ದೇಶಗಳ ವಿರುದ್ಧ ಕೂಡಾ ಪ್ರತೀಕಾರ ಮಾಡುವುದಾಗಿ ಎಚ್ಚರಿಸಿದ್ದಾರೆ. ಹಾಗಾಗಿ, ಉಕ್ರೇನ್‌ ಬೆಂಬಲಕ್ಕೆ ಮಿಲಿಟರಿ ಸಹಾಯ ಮಾಡಿದರೆ, ಮೂರನೇ ವಿಶ್ವ ಯುದ್ಧ ಆಗುವ ಸಾಧ್ಯತೆಯನ್ನೂ ಅಂದಾಜಿಸಲಾಗಿದೆ.

ಈ ನಡುವೆ ಉಕ್ರೇನ್ ನಲ್ಲಿ ವಾಯುಪ್ರದೇಶ ಸಂಪೂರ್ಣವಾಗಿ ಮುಚ್ಚಿದ್ದು, ವಿಶೇಷ ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿತ್ತು. ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಉಕ್ರೇನ್ ಸರ್ಕಾರವು ಬುಧವಾರ ಮಧ್ಯರಾತ್ರಿಯಿಂದ ಬೆಳಿಗ್ಗೆ 7 ಗಂಟೆಯವರೆಗೆ ಪೂರ್ವ ಉಕ್ರೇನ್‌ನ ವಿಮಾನ ನಿಲ್ದಾಣಗಳನ್ನು ಮುಚ್ಚಲು ಆದೇಶಿಸಿತ್ತು.

ಯುದ್ಧ ಆರಂಭ

ಗುರುವಾರ ಬೆಳಗ್ಗೆಯಿಂದಲೇ ಆಕ್ರಮಣ ಆರಂಭಿಸಿದ ರಷ್ಯಾ ಉಕ್ರೇನ್‌ನಲ್ಲಿ 11 ವಾಯುನೆಲೆಗಳು ಸೇರಿದಂತೆ 70 ಕ್ಕೂ ಹೆಚ್ಚು ಮಿಲಿಟರಿ ತಾಣಗಳನ್ನು ನಾಶಪಡಿಸಿದೆ. ಗುರುವಾರ ಮಧ್ಯಾಹ್ನದ ಹೊತ್ತಿಗಾಗಲೇ ಸುಮಾರು 40 ಕ್ಕೂ ಹೆಚ್ಚು ಉಕ್ರೇನಿನ್‌ ಸೈನಿಕರು ಮತ್ತು ಸುಮಾರು 10 ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರ ಸಹಾಯಕ ಸುದ್ದಿಗಾರರಿಗೆ ತಿಳಿಸಿದ್ದಾರೆ

ರಷ್ಯಾ ಪೂರ್ಣ ಪ್ರಮಾಣದ ಆಕ್ರಮಣ ಮಾಡಿದ್ದು, ನಾಗರಿಕ ವಿಮಾನ ನಿಲ್ದಾಣಗಳ (Airports) ಮೇಲೆ, ಪ್ರಮುಖ ನಗರಗಳ ( Ukraine City) ಮೇಲೆ ನಿರಂತರ ಬಾಂಬ್‌ ದಾಳಿ (Bomb) ನಡೆಸಿದೆ. ಹಲವೆಡೆ ಸ್ಫೋಟದ ಸದ್ದು ಕೇಳಿಬರುತ್ತಿದೆ ಎಂದು ಉಕ್ರೇನ್ ಹೇಳಿದೆ. ಮೂಲಗಳ ಪ್ರಕಾರ, ಪುಟಿನ್ ಘೋಷಣೆ ಮಾಡುತ್ತಿದ್ದಂತೆ, ಉಕ್ರೇನ್‌ನ ಹಲವು ನಗರಗಳಲ್ಲಿ ಸ್ಫೋಟಗಳ ಸದ್ದು ಕೇಳಿಸುತ್ತಿದೆ ವರದಿಯಾಗಿದೆ.

ಈಗಾಗಲೇ ರಷ್ಯಾದ ಭೂ ಸೇನೆ ಉಕ್ರೇನ್‌ ನ ಹಲವು ದಿಕ್ಕುಗಳಿಂದ ಗಡಿ ದಾಟಿ ಪ್ರವೇಶಿಸಿವೆ. ರಷ್ಯಾದ ಟ್ಯಾಂಕರ್‌ಗಳು ಮತ್ತು ಯುದ್ಧೋಪಕರಣಗಳನ್ನು ಒಳಗೊಂಡ ಸೇನೆಯು ದೇಶದ ಉತ್ತರ ಭಾಗ ಮತ್ತು ದಕ್ಷಿಣದಲ್ಲಿ ರಷ್ಯಾ ವಶದಲ್ಲಿರುವ ಕ್ರಿಮಿಯಾದಿಂದ ಗಡಿಯನ್ನು ದಾಟಿವೆ ಎಂದು ಉಕ್ರೇನ್‌ನ ಗಡಿ ಭದ್ರತಾ ಪಡೆ ತಿಳಿಸಿದೆ.‌

ಈ ನಡುವೆ ರಷ್ಯಾದ 5 ವಿಮಾನಗಳು ಮತ್ತು ಹೆಲಿಕಾಪ್ಟರ್‌ ಅನ್ನು ಹೊಡೆದು ಉರುಳಿಸಿರುವುದಾಗಿ ಉಕ್ರೇನ್ ಸೇನೆ ಹೇಳಿಕೊಂಡಿದೆ. ಎರಡು ಬಂಡುಕೋರ ಪ್ರದೇಶಗಳಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಿದ ರಷ್ಯಾದ 50 ಆಕ್ರಮಣಕಾರರನ್ನು ಕೂಡಾ ಹೊಡೆದುರುಳಿಸಿರುವುದಾಗಿ ಉಕ್ರೇನ್‌ ತಿಳಿಸಿದೆ.

ಅಮೇರಿಕಾ ಮತ್ತು ಮಿತ್ರ ರಾಷ್ಟ್ರಗಳಿಗೆ ರಷ್ಯಾ ಎಚ್ಚರಿಕೆ

ಪೂರ್ಣ ಪ್ರಮಾಣದ ಯುದ್ಧಕ್ಕೆ ಮೊದಲೇ ಅಣಿಯಾಗಿದ್ದ ಪುಟಿನ್, ಅದಿಕ್ಕೆ ಬೇಕಾದ ಸಂಸತ್ತಿನ ಅನುಮೋದನೆಯನ್ನು ಮೊದಲೇ ಪಡೆದುಕೊಂಡು ದಾಳಿಗೆ ಸನ್ನದ್ಧರಾಗಿದ್ದರು.

ಈ ನಡುವೆ ಅಮೇರಿಕ, ಬ್ರಿಟನ್‌ ಸೇರಿದಂತೆ ತನ್ನ ಉಕ್ರೇನ್‌ ಪರ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದ ಪುಟಿನ್ ನಮ್ಮ ನಾಗರಿಕರ ಭದ್ರತೆಯಲ್ಲಿ ರಾಜಿಮಾಡಿಕೊಂಡು ಯಾವುದೇ ಮಾತುಕತೆ ನಡೆಸಲು ಸಾಧ್ಯವಿಲ್ಲ, ನಮ್ಮ ಕಾರ್ಯಾಚರನೆಗೆ ಮಧ್ಯಪ್ರವೇಶಿಸಿದರೆ ಅಂತಹವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿ ಭೀತಿ ಹುಟ್ಟಿಸಿದ್ದಾರೆ.

ದೇಶದ ರಕ್ಷಣೆಗೆ ಎಲ್ಲರಿಗೂ ಶಸ್ತ್ರಾಸ್ತ್ರ: ಉಕ್ರೇನ್‌ ಅಧ್ಯಕ್ಷ

ಈ ನಡುವೆ ಮಿಲಿಟರಿ ಪ್ರಮಾಣದಲ್ಲಿ ರಷ್ಯಾ ಎದುರು ಕುಬ್ಜವಾಗಿರುವ ಉಕ್ರೇನ್‌, ತನ್ನ ನಾಗರಿಕರಿಗೆ ದೇಶ ರಕ್ಷಣೆಗೆ ಆಹ್ವಾನ ನೀಡಿದೆ. ದೇಶವನ್ನು ರಕ್ಷಿಸಲು ಬಯಸುವ ಎಲ್ಲರಿಗೂ ನಾವು ಶಸ್ತ್ರಾಸ್ತ್ರಗಳನ್ನು ನೀಡುತ್ತೇವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.

ನಮ್ಮ ನಗರಗಳ ರಸ್ತೆಗಳಲ್ಲಿ ಉಕ್ರೇನ್ ಪರ ನಿಲ್ಲಲು ಸಿದ್ಧವಾಗಿರಿ. ದೇಶವನ್ನು ರಕ್ಷಿಸಲು ಬಯಸುವ ಎಲ್ಲರಿಗೂ ನಾವು ಶಸ್ತ್ರಾಸ್ತ್ರಗಳನ್ನು ನೀಡುತ್ತೇವೆ. ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದು ದೇಶವನ್ನು ರಕ್ಷಿಸಲು ಸಿದ್ಧವಾಗಿರುವ ನಾಗರಿಕರ ಮೇಲಿನ ಎಲ್ಲಾ ನಿರ್ಬಂಧಗಳನ್ನು ನಾವು ತೆಗೆದುಹಾಕುತ್ತೇವೆ ಎಂದವರು ತಿಳಿಸಿದ್ದಾರೆ.

ರಷ್ಯಾದೊಂದಿಗೆ ನಾವು ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿದ್ದೇವೆ. ಆತ್ಮಸಾಕ್ಷಿಯನ್ನು ಕಳೆದುಕೊಳ್ಳದ ರಷ್ಯಾದ ಎಲ್ಲ ನಾಗರಿಕರೂ ಈ ಯುದ್ಧದ ವಿರುದ್ಧ ಹೊರ ಬಂದು ಪ್ರತಿಭಟಿಸುವ ಸಮಯವಿದು ಎಂದು ಉಕ್ರೇನ್‌ ಅಧ್ಯಕ್ಷರು ಟ್ವೀಟ್‌ ಮಾಡಿದ್ದಾರೆ.

‘2ನೇ ಜಾಗತಿಕ ಯುದ್ಧದ ವೇಳೆ, ನಾಜಿ ಜರ್ಮನಿಯ ರೀತಿಯಲ್ಲಿಯೇ ರಷ್ಯಾ ನಮ್ಮ ಮೇಲೆ ದಾಳಿ ನಡೆಸಿದೆ. ದುಷ್ಟ ಮಾರ್ಗವನ್ನು ರಷ್ಯಾ ಅನುಸರಿಸಿದೆ. ಆದರೆ, ಉಕ್ರೇನ್‌ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದೆ. ಮಾಸ್ಕೋದ ಯಾವುದೇ ಕ್ರಮಕ್ಕೂ ಉಕ್ರೇನ್‌ ತನ್ನ ಸ್ವಾತಂತ್ರ್ಯವನ್ನು ಬಿಟ್ಟುಕೊಡುವುದಿಲ್ಲ’ ಎಂದು ಝೆಲೆನ್‌ಸ್ಕಿ ತಿಳಿಸಿದ್ದಾರೆ.

ಉಕ್ರೇನ್‌ಗೆ ಸಶಸ್ತ್ರ ಪಡೆ ಕಳಿಸಲ್ಲ; ನ್ಯಾಟೋ

ಉಕ್ರೇನ್ ಪಾಶ್ಚಾತ್ಯ ರಕ್ಷಣಾ ಒಕ್ಕೂಟದ ಪಾಲುದಾರ ರಾಷ್ಟ್ರ. ಆದರೆ ನ್ಯಾಟೊದ ಸದಸ್ಯ ರಾಷ್ಟ್ರವಲ್ಲ ಎಂದು ನ್ಯಾಟೋ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಹೇಳಿದ್ದಾರೆ. ಹಾಗೂ ಉಕ್ರೇನ್‌ನೊಳಗೆ ನ್ಯಾಟೊದ ಸಶಸ್ತ್ರ ಪಡೆಗಳು ಕಳುಹಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಆ ದೇಶಕ್ಕೆ ಸೇನಾ ಪಡೆಯನ್ನು ರವಾನಿಸುವ ಯೋಜನೆಯನ್ನು ನಾವು ಹೊಂದಿಲ್ಲ. ಆದರೆ, ನ್ಯಾಟೊ ಸದಸ್ಯ ರಾಷ್ಟ್ರಗಳು ಮತ್ತು ನ್ಯಾಟೊ ಭೂಪ್ರದೇಶದ ಪೂರ್ವ ಭಾಗದಲ್ಲಿ ಸೇನಾ ಪಡೆಗಳ ಉಪಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಂತರಾಷ್ಟ್ರೀಯ ತೈಲ ಮಾರುಕಟ್ಟಯಲ್ಲಿ ಅಲ್ಲೋಲ-ಕಲ್ಲೋಲ

ಎರಡು ತೈಲ ಸರಬರಾಜು ಮಾಡುವ ರಾಷ್ಟ್ರಗಳ ನಡುವೆ ತಲೆದೋರಿದ ಭಾರೀ ಬಿಕ್ಕಟ್ಟಿಗೆ ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲವಾಗಿದೆ.

ಮುಂಬರುವ ದಿನಗಳಲ್ಲಿ ತೈಲ ಪೂರೈಕೆಯಲ್ಲಿ ಭಾರೀ ವ್ಯತ್ಯವಾಗಬಹುದೆಂದು ಅಂದಾಜಿಸಿದ್ದು, ಕ್ರೂಡ್‌ ಆಯಿಲ್‌ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ. ಎಂಟು ವರ್ಷಗಳ ನಂತರ ಬ್ರೆಂಟ್ ಬ್ಯಾರಲ್ಗೆ 100 ಅಮೇರಿಕಾ ಡಾಲರ್‌ ಗಡಿಯನ್ನು ದಾಟಿದೆ.

ಇದು ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಬೆಲೆ ಏರಿಕೆ ಸಮಸ್ಯೆಗೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ.

ರಷ್ಯಾ vs ಉಕ್ರೇನ್;‌ ಉಭಯ ದೇಶಗಳ ಸೇನಾ ಸಾಮರ್ಥ್ಯ

ರಷ್ಯಾಗೆ ಹೋಲಿಸಿದರೆ ಪುಟ್ಟ ರಾಷ್ಟ್ರವಾಗಿರುವ ಉಕ್ರೇನ್‌ ಸೇನೆ ತೀರಾ ಕುಬ್ಜವಾಗಿದೆ.

ರಷ್ಯಾದ ಎಲ್ಲ ಸೇನಾ ವಿಭಾಗದಲ್ಲಿ ಒಟ್ಟಾರೆ 8.50 ಲಕ್ಷ ಸೈನಿಕರು ಇದ್ದಾರೆ. ಉಕ್ರೇನ್‌ ಕೇವಲ 2.50 ಲಕ್ಷ ಸೇನಾ ಸಿಬ್ಬಂದಿಯನ್ನು ಹೊಂದಿದೆ.

ರಷ್ಯಾದಲ್ಲಿ 12,500 ಸೇನಾ ಟ್ಯಾಂಕ್‌ಗಳು ಇದೆ. ಉಕ್ರೇನ್‌ ಬಳಿ ಕೇವಲ 2,600 ಸೇನಾ ಟ್ಯಾಂಕ್‌ ಇದೆ.

30,000 ಕ್ಕೂ ಅಧಿಕ ಸಶಸ್ತ್ರ ವಾಹನಗಳನ್ನು ರಷ್ಯಾ ಹೊಂದಿದ್ದು, ಉಕ್ರೇನ್ 12,000 ಸಶಸ್ತ್ರ ವಾಹನಗಳನ್ನು ಮಾತ್ರ ಹೊಂದಿದೆ.

ರಷ್ಯಾ ಬಳಿ 14,000 ಕ್ಕೂ ಅಧಿಕ ಫಿರಂಗಿಗಳಿದೆ. ಉಕ್ರೇನ್ ಬಳಿ ಕೇವಲ 3,000 ಫಿರಂಗಿಗಳಿವೆ.

ಇನ್ನು ನೌಕಾಪಡೆಯಲ್ಲೂ ರಷ್ಯಾ ಬಲಾಢ್ಯವಾಗಿದ್ದು, ಬರೋಬ್ಬರಿ 600ಕ್ಕೂ ಅಧಿಕ ಬೃಹತ್ ಯುದ್ಧ ನೌಕೆಗಳನ್ನು ರಷ್ಯಾ ಹೊಂದಿದೆ. ಉಕ್ರೇನ್‌ ಬಳಿ ಕೇವಲ 30 ಬೃಹತ್ ಯುದ್ಧ ನೌಕೆಗಳು ಇವೆ.

ರಷ್ಯಾ ಬಳಿ 70 ಬೃಹತ್ ಜಲಾಂತರ್ಗಾಮಿಗಳು ಇದೆ. ಅದೇ ವೇಳೆ, ಇಂತಹ ಯಾವುದೇ ಜಲಾಂತರ್ಗಾಮಿ ನೌಕೆಯನ್ನು ಉಕ್ರೇನ್‌ ಹೊಂದಿಲ್ಲ.

ಉಳಿದೆರಡರಂತೆ ವಾಯುಸೇನೆಯಲ್ಲಿ ಕೂಡಾ ರಷ್ಯಾದ್ದೇ ಪ್ರಾಬಲ್ಯ. ರಷ್ಯಾ ಬಳಿ, 4,100 ಯುದ್ಧ ವಿಮಾನಗಳು ಇದ್ದು, ಅವುಗಳಲ್ಲಿ 722 ಫೈಟರ್ ಜೆಟ್‌ಗಳಾಗಿವೆ.

ಆದರೆ, ಕೇವಲ 318 ಯುದ್ಧ ವಿಮಾನಗಳನ್ನು ಹೊಂದಿರುವ ಉಕ್ರೇನ್ 69 ಪೈಟರ್ ಜಟ್‌ಗಳನ್ನು ಮಾತ್ರ ಹೊಂದಿದೆ.

2020 ರ ಅಂಕಿ ಅಂಶದ ಪ್ರಕಾರ ವಾರ್ಷಿಕವಾಗಿ ರಷ್ಯಾ 67.7 ಬಿಲಿಯನ್ ಯುಎಸ್ ಡಾಲರ್‌ ರಕ್ಷಣಾ ಕ್ಷೇತ್ರಕ್ಕೆ ಖರ್ಚು ಮಾಡಿದರೆ ಉಕ್ರೇನ್ ಅದಕ್ಕಿಂತ ಸುಮಾರು 10 ಪಟ್ಟು ಕಡಿಮೆ ಖರ್ಚು ಮಾಡುತ್ತಿದೆ. ಉಕ್ರೇನ್‌ ಮಿಲಿಟರಿ ವೆಚ್ಚ ಕೇವಲ 5.9 ಬಿಲಿಯನ್ ಯುಎಸ್ ಡಾಲರ್‌ ಮಾತ್ರ.

ಅಂಕಿ ಅಂಶ:

Tags: airportscompareddeployinginfrastructuremassive arsenalmilitary strengthsmissile technologymissilesoverwhelm Ukraine’s forcesPutinrocketsRussiaUkraineUkraine borderಅಮೇರಿಕಆಕ್ರಮಣ ಆರಂಭಉಕ್ರೇನ್ - ರಷ್ಯಾಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕೀಉಕ್ರೇನ್ ಬಿಕ್ಕಟ್ಟುಉಕ್ರೇನ್ ಮೇಲೆ ರಷ್ಯಾ ದಾಳಿಉಕ್ರೇನ್-ರಷ್ಯಾಯುದ್ದ ಬೆಳವಣಿಗೆಶಸ್ತ್ರಾಸ್ತಸೆಂಟ್ರಲ್ ಬ್ಯಾಂಕ್ ಆಫ್ ರಷ್ಯಾ
Previous Post

ಪಂಜಾಬ್ ಚುನಾವಣಾ ಫಲಿತಾಂಶವು ಕೇಜ್ರಿವಾಲ್ ರಾಜಕೀಯ ಭವಿಷ್ಯವನ್ನು ಹೇಗೆ ಮರು ವ್ಯಾಖ್ಯಾನಿಸಲಿದೆ?

Next Post

ವೈಚಾರಿಕ-ಧೋರಣೆ ಇಲ್ಲದ ಪ್ರಗತಿಪರತೆ ಬೌದ್ಧಿಕ ನಿರ್ವಾತ ಸೃಷ್ಟಿಸುತ್ತದೆ

Related Posts

Top Story

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

by ಪ್ರತಿಧ್ವನಿ
July 3, 2025
0

ದೇವನಹಳ್ಳಿಯ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ 080 ಲಾಂಜ್ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆತಿಥ್ಯ ಕ್ಷೇತ್ರದಲ್ಲಿ ಒಟ್ಟು ಹತ್ತು ಜಾಗತಿಕ ಪ್ರಶಸ್ತಿ ದೊರೆತಿವೆ. ಸ್ಪೇನ್‌ನ...

Read moreDetails

Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!

July 2, 2025
ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

July 1, 2025
ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

July 1, 2025

Bangalore Stampede: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಪ್ರಕರಣ

July 1, 2025
Next Post
ವೈಚಾರಿಕ-ಧೋರಣೆ ಇಲ್ಲದ ಪ್ರಗತಿಪರತೆ ಬೌದ್ಧಿಕ ನಿರ್ವಾತ ಸೃಷ್ಟಿಸುತ್ತದೆ

ವೈಚಾರಿಕ-ಧೋರಣೆ ಇಲ್ಲದ ಪ್ರಗತಿಪರತೆ ಬೌದ್ಧಿಕ ನಿರ್ವಾತ ಸೃಷ್ಟಿಸುತ್ತದೆ

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada