• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, October 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಚನ್ನಾ ಬಟಾಣಿ ತಿನ್ನೋಕೆ ದೆಹಲಿಗೆ ಹೋಗ್ಬೇಕಾ..? ಮೆಜೆಸ್ಟಿಕ್​ನಲ್ಲೂ ಸಿಗುತ್ತೆ..! ಅಲ್ವಾ..?

ಪ್ರತಿಧ್ವನಿ by ಪ್ರತಿಧ್ವನಿ
April 21, 2024
in ದೇಶ, ರಾಜಕೀಯ
0
ಚನ್ನಾ ಬಟಾಣಿ ತಿನ್ನೋಕೆ ದೆಹಲಿಗೆ ಹೋಗ್ಬೇಕಾ..? ಮೆಜೆಸ್ಟಿಕ್​ನಲ್ಲೂ ಸಿಗುತ್ತೆ..! ಅಲ್ವಾ..?
Share on WhatsAppShare on FacebookShare on Telegram

ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಬೆಂಗಳೂರಿನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಮನ್ಸೂರ್ ಆಲಿ ಖಾನ್ ಪರವಾಗಿ ಮತಯಾಚನೆ ಮಾಡಿದ್ದಾರೆ. ಜನರನ್ನು ಉದ್ದೇಶಿಸಿ ಮಾತನಾಡಿರುವ ರೇವಂತ್​ ರೆಡ್ಡಿ, ಮನ್ಸೂರ್​ ಅಲಿಖಾನ್​ ಗೆಲ್ಲಿಸಲು ನೀವೆಲ್ಲಾ ಬಂದಿದ್ದಿರಾ.. ಎಲ್ಲರಿಗೂ ವಂದನೆಗಳು. ಕರ್ನಾಟಕದಲ್ಲಿ ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಶಕ್ತಿ ತೋರಿಸುವ ಸಮಯ ಬಂದಿದೆ ಎಂದಿದ್ದಾರೆ.

ADVERTISEMENT

ಆಂಧ್ರ ಪ್ರದೇಶ, ತೆಲಂಗಾಣದಿಂದ ಬಂದಿರುವ ಲಕ್ಷಾಂತರ ಜನ ಇಲ್ಲಿ ವಾಸವಿದ್ದೀರಿ, ಇಡೀ ಪ್ರಪಂಚದಲ್ಲೇ ಐಟಿಗೆ ಬೆಂಗಳೂರು ಹೆಸರುವಾಸಿ, ಲಕ್ಷಾಂತರ ಯುವಕರಿಗೆ ಉದ್ಯೋಗ ಅವಕಾಶ ನೀಡಿದೆ. ಮಹದೇವಪುರದಲ್ಲಿ ಸಾಕಷ್ಟು ಆಂಧ್ರ, ತೆಲಂಗಾಣದ ಜನರಿದ್ದಾರೆ. ಪಿ.ಸಿ ಮೋಹನ್ ಅವರನ್ನು ಕಳೆದ ಮೂರು ಸಾರಿ ಆಯ್ಕೆ ಮಾಡಿ ಪಾರ್ಲಿಮೆಂಟ್​​ಗೆ ಕಳಿಸಿದ್ದೀರಿ. ಬೆಂಗಳೂರಿನ ಬಗ್ಗೆ ಕೇಂದ್ರದಲ್ಲಿ ಒಂದೇ ಒಂದು ಮಾತನಾಡಿಲ್ಲ, ಕಾವೇರಿ ಬಗ್ಗೆ ಮಾತಾಡಿಲ್ಲ, ಒಂದು ಬಾರಿಯೂ ಕರ್ನಾಟಕದ ಸಮಸ್ಯೆ ಬಗ್ಗೆ ಮಾತಾಡಿಲ್ಲ ಎಂದು ಕಿಡಿಕಾರಿದ್ದಾರೆ.

ಚನ್ನಾ ಬಟಾಣಿ ತಿನ್ನೋಕೆ ಪಿ.ಸಿ ಮೋಹನ್ ದೆಹಲಿಗೆ ಹೋಗ್ತಾರೆ ಎಂದು ವ್ಯಂಗ್ಯವಾಡಿರುವ ತೆಲಂಗಾಣ ಮುಖ್ಯಮಂತ್ರಿ ರೇವಂತ್​ ರೆಡ್ಡಿ, ಚನ್ನಾ ಬಟಾಣಿ ಬೆಂಗಳೂರು ಬಸ್ ಸ್ಟಾಂಡ್​ನನ್ನೂ ಸಿಗುತ್ತೆ, ಅದಕ್ಕೆ ದೆಹಲಿಗೆ ಹೋಗಬೇಕಾ..? ಎಂದು ಪ್ರಶ್ನಿಸಿದ್ದಾರೆ. ಉದ್ಯೋಗ ಕೊಡ್ತೀವಿ ಅಂತಾ ಪ್ರಧಾನಿ ‌ಮೋದಿ ಹೇಳಿದ್ರು. ಆದ್ರೆ ದೇಶದಲ್ಲಿ ನಿರುದ್ಯೋಗ ಜಾಸ್ತಿಯಾಗ್ತಿದೆ. ರೈತರ ಮೇಲೆ ಪೊಲೀಸ್ ಮೂಲಕ ದೌರ್ಜನ್ಯ ಮಾಡಿಸುತ್ತಿದ್ದಾರೆ. ರೈತರ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶಕ್ಕೆ ಕಪ್ಪು ಹಣ ತರ್ತಿವಿ, 15 ಲಕ್ಷ ಹಣವನ್ನು ನಿಮ್ಮ ಅಕೌಂಟ್​ಗೆ ಹಾಕ್ತೀನಿ ಅಂತಾ ಹೇಳಿದ್ರು, ಹಾಕಿದ್ದಾರಾ..? ಒಂದು ಪೈಸೆಯೂ ಯಾರ ಅಕೌಂಟ್​ಗೂ ಬಂದಿಲ್ಲ. ಕುಟುಂಬ ರಾಜಕೀಯದ ಬಗ್ಗೆ ಮೋದಿ ಮಾತಾಡ್ತಾರೆ, ಆದರೆ ಯಡಿಯೂರಪ್ಪ ಮಗ ವಿಜಯೇಂದ್ರ ಪಾರ್ಟಿ ಅಧ್ಯಕ್ಷ, ಮತ್ತೊಬ್ಬರು ಸಂಸದರು. ರಾಜನಾಥ್ ಸಿಂಗ್ ಕೇಂದ್ರ ಸಚಿವ ಅವರ ಮಗ ಶಾಸಕ, ತೇಜಸ್ವಿ ಸೂರ್ಯ ಸಂಸದ, ಅವರ ಚಿಕ್ಕಪ್ಪ ಶಾಸಕರು, ನಿಮ್ಮ ಪಾರ್ಟಿಯಲ್ಲಿ ಇರುವವರೆಲ್ಲರೂ ಕುಟುಂಬ ರಾಜಕೀಯ ಮಾಡುವವರೇ ಆಗಿದ್ದಾರೆ ಎಂದು ಬಿಜೆಪಿ ವಿರುದ್ಧ ಟೀಕೆಗಳ ಸುರಿಮಳೆ ಮಾಡಿದ್ದಾರೆ. ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಐದು ಗ್ಯಾರಂಟಿ ಕೊಟ್ಟಿದ್ದಾರೆ. ಕಾಂಗ್ರೆಸ್​ಗೆ ಮತ ನೀಡಿ ಎಂದು ಕೇಳಿಕೊಂಡಿದ್ದಾರೆ.

Tags: BJPcongressCongress PartyElectionRevant Reddysiddaramaiahಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

Blackheads-Natural remedie :ಬ್ಲಾಕ್ ಹೆಡ್ಸ್ ಗೆ ಇಲ್ಲಿದೆ ಶಾಶ್ವತ ಪರಿಹಾರ.!

Next Post

ಇಂದು ಹಾಗೂ ನಾಳೆ ರಾಜ್ಯದಲ್ಲಿ ಭರ್ಜರಿ ಮಳೆಯ ಮುನ್ಸೂಚನೆ!

Related Posts

BREAKING Horrific tragedy in Maharashtra 8 students drown in the sea
Top Story

BREAKING : ಮಹಾರಾಷ್ಟ್ರದಲ್ಲಿ ಭೀಕರ ದುರಂತ: ಸಮುದ್ರದಲ್ಲಿ ಮುಳುಗಿ 8 ವಿದ್ಯಾರ್ಥಿಗಳು ಜಲಸಮಾಧಿ

by ಪ್ರತಿಧ್ವನಿ
October 1, 2026
0

ಮುಂಬೈ : ಮಹಾರಾಷ್ಟ್ರದ (Maharashtra) ರಾಯಗಢ ಜಿಲ್ಲೆಯಲ್ಲಿ ಭೀಕರ ದುರಂತವೊಂದು ಸಂಭವಿಸಿದ್ದು, ಪ್ರವಾಸಕ್ಕೆಂದು ತೆರಳಿದ್ದ ಪುಣೆಯ ಎಂಟು ಮಂದಿ ವಿದ್ಯಾರ್ಥಿಗಳು (Students) ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ...

Read moreDetails
GOOD NEWS: Centre approves procurement of sunflower, green gram, and soybean at minimum support price

GOOD NEWS : ಬೆಂಬಲ ಬೆಲೆಯಡಿ ಸೂರ್ಯಕಾಂತಿ, ಹೆಸರುಕಾಳು, ಸೋಯಾಬೀನ್‌ಗೆ  ಖರೀದಿಗೆ ಕೇಂದ್ರ ಅನುಮೋದನೆ

October 1, 2026
H.C. Balakrishna misappropriated 36 acres of government land A. Manjunath

36 ಎಕರೆ ಸರಕಾರಿ ಭೂಮಿ ಲಪಟಾಯಿಸಿದ ಹೆಚ್.ಸಿ.ಬಾಲಕೃಷ್ಣ : ಮಾಜಿ ಶಾಸಕ ಎ.ಮಂಜುನಾಥ್ ಗಂಭೀರ ಆರೋಪ | A. Manjunath

October 1, 2026
The BJP is snatching away peoples right to vote under the pretext of SIR

ಬಿಜೆಪಿಯವರು SIR ನೆಪದಲ್ಲಿ ಜನರಿಂದ ಮತದಾನದ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದಾರೆ : ಸಿಎಂ ಡಿಕೆ ಶಿವಕುಮಾರ್ | CM DK Shivakumar

October 1, 2026
Commercial LPG cylinder price hiked by ₹62.50

ಹಬ್ಬದ ಹೊತ್ತಲ್ಲೇ ಗ್ರಾಹಕರಿಗೆ ಶಾಕ್ : ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ 62.50 ರೂ. ಏರಿಕೆ | LPG

October 1, 2026
Next Post
ಇಂದು ಹಾಗೂ ನಾಳೆ ರಾಜ್ಯದಲ್ಲಿ ಭರ್ಜರಿ ಮಳೆಯ ಮುನ್ಸೂಚನೆ!

ಇಂದು ಹಾಗೂ ನಾಳೆ ರಾಜ್ಯದಲ್ಲಿ ಭರ್ಜರಿ ಮಳೆಯ ಮುನ್ಸೂಚನೆ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada