ಮುಂಬೈ : ಮಹಾರಾಷ್ಟ್ರದ (Maharashtra) ರಾಯಗಢ ಜಿಲ್ಲೆಯಲ್ಲಿ ಭೀಕರ ದುರಂತವೊಂದು ಸಂಭವಿಸಿದ್ದು, ಪ್ರವಾಸಕ್ಕೆಂದು ತೆರಳಿದ್ದ ಪುಣೆಯ ಎಂಟು ಮಂದಿ ವಿದ್ಯಾರ್ಥಿಗಳು (Students) ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.

ಪುಣೆಯ ಆಳಂದಿಯಲ್ಲಿರುವ ‘ವಿನ್ನರ್ಸ್ ಅಕಾಡೆಮಿ ಫಾರ್ 11th & 12th’ ಎಂಬ ಖಾಸಗಿ ಕೋಚಿಂಗ್ ಕ್ಲಾಸ್ನಿಂದ 25 ಬಾಲಕರು, 17 ಬಾಲಕಿಯರು ಹಾಗೂ 6 ಮಂದಿ ಶಿಕ್ಷಕರು ಸೇರಿದಂತೆ ಒಟ್ಟು 48 ಜನರ ತಂಡವು ರಾಯಗಢದ ದಿವ್ಯಾಗರ್ ಬೀಚ್ಗೆ ವಿಹಾರಕ್ಕಾಗಿ ಬಂದಿತ್ತು.
ಸ್ಥಳೀಯ ಮೂಲಗಳು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ವಿದ್ಯಾರ್ಥಿಗಳು ಸಮುದ್ರದಲ್ಲಿ ಈಜಾಡಲು ಇಳಿದಾಗ ನೀರಿನ ಆಳ ಮತ್ತು ಭಾರಿ ಅಲೆಗಳ ರಭಸದ ಸರಿಯಾದ ಅರಿವಿಲ್ಲದೆ ಕೊಚ್ಚಿಹೋಗಿದ್ದಾರೆ. ನೀರಿನ ರಭಸಕ್ಕೆ ಸಿಲುಕಿ ಎಂಟು ವಿದ್ಯಾರ್ಥಿಗಳು ಮುಳುಗುತ್ತಿದ್ದಂತೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ತಕ್ಷಣವೇ ರಕ್ಷಣಾ ಕಾರ್ಯಾಚರಣೆಗಿಳಿದ ಸ್ಥಳೀಯರು, ಪೊಲೀಸರು ಮತ್ತು ಸ್ಥಳೀಯ ವಾಟರ್ ಸ್ಪೋರ್ಟ್ಸ್ ತಂಡದ ಸಹಯೋಗದೊಂದಿಗೆ ಮುಳುಗಿದ ಎಲ್ಲಾ ಎಂಟು ವಿದ್ಯಾರ್ಥಿಗಳ ಮೃತದೇಹಗಳನ್ನು ಹೊರತೆಗೆಯಲಾಗಿದೆ.
ದುರಂತದಲ್ಲಿ ಮೃತಪಟ್ಟವರೆಲ್ಲರೂ 16 ವರ್ಷ ವಯಸ್ಸಿನವರಾಗಿದ್ದು, ಅವರನ್ನು ತನ್ಮಯ್ ದತ್ತಾತ್ರೇಯ ವಾಹಿಲೆ, ಸುಮಿತ್ ಭರತ್ ಅಹಿರೆ, ಪ್ರಣವ್ ರಾಮದಾಸ್ ಬನ್ಸೋಡೆ, ಕೈವಲ್ಯ ಸತೀಶ್ ವಾಸನ್ಕರ್, ರಾಜ್ವೀರ್ ಯುವರಾಜ್ ವಾಹಿಲೆ, ಯಶ್ ಕಿರಣ್ ವಾಂಖೆಡೆ, ಸೋಹಮ್ ತುಕಾರಾಮ್ ಭಾಂಡವಲ್ಕರ್ ಹಾಗೂ ಕೌಸ್ತುಭ್ ಸಂದೀಪ್ ದೌಂಡ್ ಎಂದು ಗುರುತಿಸಲಾಗಿದೆ. ರಾಯಗಢದ ಪ್ರಸಿದ್ಧ ಪ್ರವಾಸಿ ತಾಣವಾದ ದೀವ್ಯಾಗರ್ ಬೀಚ್ನಲ್ಲಿ ಸಂಭವಿಸಿದ ಈ ದುರ್ಘಟನೆ ಇಡೀ ಪ್ರದೇಶದಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.
Maharashtra | Eight students died after drowning in the sea off Diveagar beach in Raigad district. A total of 48 students and teachers from Winners Academy, Alandi, Pune, comprising 25 boys, 17 girls, and 6 teachers, visited Dighi Sagari, Diveagar Beach, for a picnic/tour.…
— ANI (@ANI) October 1, 2026
ದಂಡ ಕಟ್ಟದಿದ್ದರೆ ವಾಹನದ RC, PUC, DL ಸೇವೆಗಳಿಗೆ ತಡೆ? ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಚುನಾವಣಾ ವ್ಯವಸ್ಥೆ ಸುಧಾರಣೆಯಾಗದಿದ್ದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ: ಮಾಜಿ ಸಿಎಂ ಸಿದ್ದರಾಮಯ್ಯ | Siddaramaiah






