• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಾಂಸ್ಕೃತಿಕ ಸಿಕ್ಕುಗಳ ನಡುವೆ ರಂಗಭೂಮಿಯ ಪ್ರಸ್ತುತತೆ

ನಾ ದಿವಾಕರ by ನಾ ದಿವಾಕರ
December 3, 2024
in Top Story, ಕರ್ನಾಟಕ, ಸಿನಿಮಾ
0
ಸಾಂಸ್ಕೃತಿಕ ಸಿಕ್ಕುಗಳ ನಡುವೆ ರಂಗಭೂಮಿಯ ಪ್ರಸ್ತುತತೆ
Share on WhatsAppShare on FacebookShare on Telegram

ಜನಸಂಸ್ಕೃತಿಯನ್ನು ಬಹುಸಂಖ್ಯಾವಾದದಲ್ಲಿ ಮುಳುಗಿಸುತ್ತಿರುವ ಸನ್ನಿವೇಶದಲ್ಲಿ ನಾವಿದ್ದೇವೆ

ADVERTISEMENT

ನಾ ದಿವಾಕರ

 (ಬೆಂಗಳೂರಿನ ರಂಗಸಂಪದ ಐವತ್ತು ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಸ್ಮರಣಸಂಚಿಕೆಗೆ ಬರೆದ ವಿಶೇಷ ಲೇಖನ)

ಯಾವುದೇ ಸಮಾಜದಲ್ಲಾದರೂ ಸಾರ್ವಜನಿಕ ಅಥವಾ ಸಾರ್ವತ್ರಿಕ ಎಂದು ಪರಿಭಾವಿಸಲಾಗುವ ನಿರೂಪಣೆಗಳನ್ನು (Narratives) ಮತ್ತು ವ್ಯಾಖ್ಯಾನಗಳನ್ನು (Interpretations) ತಳಮಟ್ಟದ ಜನಸಾಮಾನ್ಯರವರೆಗೂ ತಲುಪಿಸಿ, ಇಡೀ ಸಮಾಜವನ್ನು ಅವುಗಳ ಪ್ರಭಾವಕ್ಕೊಳಪಡಿಸುವ ಪ್ರಕ್ರಿಯೆಯ ಹಿಂದೆ, ಆಯಾ ಸಮಾಜದ ಮೇಲೆ ಬೌದ್ಧಿಕ ಹಿಡಿತ, ಭೌತಿಕ ಪ್ರಾಬಲ್ಯ ಮತ್ತು ಸಾಂಸ್ಕೃತಿಕ ಪಾರಮ್ಯ ಸಾಧಿಸಿರುವಂತಹ ಚಿಂತನಾಧಾರೆಗಳು ಪ್ರಧಾನವಾಗಿ ಕಾಣುತ್ತವೆ. ಇದನ್ನೇ ಕಾರ್ಲ್‌ ಮಾರ್ಕ್ಸ್‌ ಮತ್ತು ಏಂಗೆಲ್ಸ್‌ ತಮ್ಮ ” ಆಳುವ ವರ್ಗಗಳು ಮತ್ತು ಆಳುವ ಚಿಂತನೆಗಳು ” ಎಂಬ ಪ್ರಬಂಧದಲ್ಲಿ                   “ ಒಂದು ನಿರ್ದಿಷ್ಟ ಸಮಾಜದಲ್ಲಿ ಚಾಲ್ತಿಯಲ್ಲಿರುವ ಕಲ್ಪನೆಗಳು ಮತ್ತು ಚಿಂತನಾ ವಿಧಾನಗಳು ಆಳುವ ವರ್ಗಗಳಿಂದಲೇ ರೂಪುಗೊಳ್ಳುವುದಲ್ಲದೆ, ಅದರ ಬಲದಿಂದಲೇ ಸ್ಥಾಪಿತ ಅಭಿಪ್ರಾಯಗಳಾಗುತ್ತವೆ. ಭೌತಿಕ ಸಂಪತ್ತಿನ ಉತ್ಪಾದನೆಯನ್ನು ನಿಯಂತ್ರಿಸುವ ವರ್ಗವೇ ಸಮಾಜದ ಬೌದ್ಧಿಕ ಉತ್ಪಾದನೆಯನ್ನೂ ನಿಯಂತ್ರಿಸುತ್ತದೆ ” ಎಂದು ಹೇಳುತ್ತಾರೆ. ವರ್ತಮಾನದ ಭಾರತದಲ್ಲಿ ಈ ಆಳುವ ವರ್ಗಗಳನ್ನು ಪ್ರತಿನಿಧಿಸುತ್ತಿರುವುದು ಸಾಂಪ್ರದಾಯಿಕ ಸಾಂಸ್ಕೃತಿಕ ರಾಜಕಾರಣ.

M Lakshman : ಹೇಯ್ ವಿಜಯೇಂದ್ರ ಯತ್ನಾಳ್‌ ನಿನ್ನ ಕಳ್ಳ ಅಂತಿದ್ದಾನೆ ನಿಜನಾ..?? #pratidhvani

ಮಾರ್ಕ್ಸ್‌ನ ಈ ಮಾತುಗಳು ಸಾರ್ವಕಾಲಿಕ ಸತ್ಯ ಎನ್ನಲು ಯಾವ ಚಾರಿತ್ರಿಕ ಪುರಾವೆಯೂ ಬೇಕಿಲ್ಲ.. ಸಮಕಾಲೀನ ವಸಾಹತೋತ್ತರ ಭಾರತದ , 1990ರ ಜಾಗತೀಕರಣ ಮತ್ತು ಅಯೋಧ್ಯೆ ನಂತರದ ಸಾಮಾಜಿಕ-ಸಾಂಸ್ಕೃತಿಕ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ. ವಿಕಾಸದತ್ತ ತೆರೆದುಕೊಳ್ಳುತ್ತಿರುವ, ವಿಕಸಿತ ಭಾರತದ ಕನಸುಗಳನ್ನು 2047ರ ಹೊತ್ತಿಗೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಭಾರತದ ಆರ್ಥಿಕತೆ ನಡೆಯುತ್ತಿರುವ ಹಾದಿಯ ಅಂತಿಮ ಪರಿಣಾಮಗಳೇನೇ ಇರಲಿ, ಈ ಕಾಲಾವಧಿಯಲ್ಲಿ ಭಾರತೀಯ ಸಮಾಜವು ಎದುರಿಸಬಹುದಾದ ಸಾಂಸ್ಕೃತಿಕ ಸಿಕ್ಕುಗಳು, ತಳಮಟ್ಟದ ಸಮಾಜವು ಎದುರಿಸಬೇಕಾದ ಸಾಮಾಜಿಕ ಸವಾಲುಗಳು ಹಾಗೂ ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಬಹುದೊಡ್ಡ ಸಮಾಜವು ಮುಖಾಮುಖಿಯಾಗಬಹುದಾದ ಸಾಂಪ್ರದಾಯಿಕ ಶಕ್ತಿಗಳ ಬೌದ್ಧಿಕ ಪ್ರಾಬಲ್ಯವನ್ನು ವರ್ತಮಾನದಲ್ಲಿಟ್ಟು ನೋಡಿದಾಗ, ಬಹುಸಾಂಸ್ಕೃತಿಕ ಭಾರತ ತನ್ನ ಅಂತಃಸತ್ವವನ್ನು ಉಳಿಸಿಕೊಳ್ಳಲು ಸಾಧ್ಯವೇ ಎಂಬ ಅನುಮಾನ ಸಹಜವಾಗಿ ಕಾಡುತ್ತದೆ.

D K Shivakumar : ಆರಂಭದಲ್ಲೇ Siddaramaiah ಅಭಿಮಾನಿಗಳ ಬಳಗದಿಂದ Samavesha ಅಂದಿದ್ರಲ್ಲ ಸರ್? #pratidhvani

 ಸಾಮಾಜಿಕ-ಸಾಂಸ್ಕೃತಿಕ ಸಿಕ್ಕುಗಳ ನಡುವೆ

 ಈ ಆತಂಕಗಳ ನಡುವೆಯೇ ವಿಕಸಿತ ಭಾರತ ತನ್ನ ವಿಕಾಸದ ಹಾದಿಯಲ್ಲಿ ಸಾಗುತ್ತಾ ಭೌಗೋಳಿಕ ಅಖಂಡತೆಯನ್ನು ರಕ್ಷಿಸಿಕೊಳ್ಳುತ್ತಲೇ ಆಂತರಿಕವಾಗಿ ಸಾಂಸ್ಕೃತಿಕ ವಿಘಟನೆಯ ಅಪಾಯವನ್ನೂ ಎದುರಿಸುತ್ತಿರುವುದು ವರ್ತಮಾನದ ವಿರೋಧಾಭಾಸ. ನವ ಉದಾರವಾದ ಮತ್ತು ಬಂಡವಾಳಶಾಹಿ ಜಾಗತೀಕರಣವು ಸಮಾಜವನ್ನು ಆರ್ಥಿಕ ನೆಲೆಯಲ್ಲಿ ಇಬ್ಭಾಗ ಮಾಡಿದ್ದರೆ, ಈ ಜಾಗತಿಕ ಪ್ರಕ್ರಿಯೆಯೊಂದಿಗೇ ಭಾರತವನ್ನು ಆವರಿಸಿದ ಹಿಂದುತ್ವವಾದದ ಬಹುಸಂಖ್ಯಾವಾದದ ರಾಜಕಾರಣ, ಸಾಮಾಜಿಕ-ಸಾಂಸ್ಕೃತಿಕ ನೆಲೆಯಲ್ಲಿ ಸಮಾಜವನ್ನು ತಳಮಟ್ಟದವರೆಗೂ ಭಂಗಗೊಳಿಸುತ್ತಾ ಬಂದಿದೆ. ಇಲ್ಲಿ ಅಪಾಯಕ್ಕೊಳಗಾಗುತ್ತಿರುವುದು ಶತಮಾನಗಳಿಂದ ಉಸಿರಾಡಿಕೊಂಡು ಬಂದಿರುವ ಭಾರತದ ಜನಸಾಂಸ್ಕೃತಿಕ ನೆಲೆಗಳು ಮತ್ತು ಅದನ್ನು ಪ್ರತಿನಿಧಿಸುವ ಬಹುಸಂಖ್ಯಾತ ತಳಸಮುದಾಯಗಳು. ಜನಪದೀಯ ಇತಿಹಾಸದಿಂದ ಡಿಜಿಟಲ್‌ ಯುಗದ ಸತ್ಯೋತ್ತರ ಕಾಲದವರೆಗೂ ವಿಸ್ತರಿಸುವ ಒಂದು ಬಹುತ್ವದ ಸಾಂಸ್ಕೃತಿಕ ಎಳೆಯನ್ನು ಅಡ್ಡಡ್ಡಲಾಗಿ ಸೀಳುತ್ತಾ ಲಂಬಕ್ರಮದಲ್ಲಿ ವಿಘಟಿಸುತ್ತಾ ಬರುತ್ತಿರುವ ಬಹುಸಂಖ್ಯಾವಾದ ಮತ್ತು ಅದಕ್ಕೆ ಪ್ರತಿಯಾಗಿ-ಪೂರಕವಾಗಿ ಬೆಳೆಯುತ್ತಿರುವ ಮತೀಯ ಮೂಲಭೂತವಾದವು ಭಾರತೀಯ ಸಮಾಜವನ್ನು ಸ್ಪಷ್ಟವಾಗಿ ಎರಡು ಧೃವಗಳಲ್ಲಿ ತಂದು ನಿಲ್ಲಿಸಿದೆ.

ಈ ಅಪಾಯಗಳ ನಡುವೆಯೇ ನವ ಭಾರತ ತನ್ನ ಸಾಂಸ್ಕೃತಿಕ ಬೇರುಗಳನ್ನು ಮತ್ತಷ್ಟು ಗಟ್ಟಿಯಾಗಿಸುವ ಪ್ರಯತ್ನಗಳತ್ತ ಗಮನಹರಿಸಬೇಕಿದೆ. ಇದು ಸಾಧ್ಯವಾಗುವುದು/ಆಗಬೇಕಿರುವುದು ಸಾಂಸ್ಕೃತಿಕ ಜಗತ್ತನ್ನು ಪ್ರತಿನಿಧಿಸುವ ಸಾಹಿತ್ಯ, ಕಲೆ, ರಂಗಭೂಮಿ ಮತ್ತು ಇನ್ನಿತರ ಜನಸ್ಪಂದನೆಯ ಸೃಜನಶೀಲ ಅಭಿವ್ಯಕ್ತಿಗಳ ಮೂಲಕ. ವಿಪರ್ಯಾಸವೆಂದರೆ ಗೋದ್ರೋತ್ತರ ಭಾರತ ಈ ಎಲ್ಲ ವಲಯಗಳ ಅಭಿವ್ಯಕ್ತಿಗಳ ಸದ್ದಡಗಿಸುವಂತಹ ಒಂದು ಸಮಾಜವನ್ನು ನಮ್ಮ ನಡುವೆ ತಂದು ನಿಲ್ಲಿಸಿದೆ. ಈ ಸಾಂಸ್ಕೃತಿಕ ಧ್ವನಿಗಳನ್ನು ಅಡಗಿಸುವ ಪ್ರಭುತ್ವದ ಪ್ರಯತ್ನಗಳ ಜೊತೆಗೇ ಸ್ವಯಂಪ್ರೇರಿತವಾಗಿ ಮೌನಕ್ಕೆ ಜಾರುವ ಅಥವಾ ಸುರಕ್ಷಿತ ತಾಣಗಳನ್ನು ಆಶ್ರಯಿಸುವ ಸಾಹಿತ್ಯಕ-ಕಲಾಭಿವ್ಯಕ್ತಿಗಳನ್ನೂ ಕಳೆದ ಎರಡು ದಶಕಗಳಲ್ಲಿ ಗುರುತಿಸಬಹುದು. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ವಿಕಸಿತ ಭಾರತ ಎದುರಿಸುತ್ತಿರುವ ತಲ್ಲಣಗಳಿಗೆ ನಿರ್ಭೀತ ಸ್ವಾಯತ್ತತೆಯೊಂದಿಗೆ, ಸೃಜನಶೀಲತೆಯಿಂದ ಸ್ಪಂದಿಸುವ ಧೀ ಶಕ್ತಿ ಇರುವುದು/ಉಳಿಸಿಕೊಂಡಿರುವುದು ರಂಗಭೂಮಿ ಎನ್ನುವುದು ವಾಸ್ತವ.

 ರಂಗಭೂಮಿಯ ಪ್ರಸ್ತುತತೆ-ಮಹತ್ವ

 ರಂಗಭೂಮಿಯನ್ನು ಕೇವಲ ನಾಲ್ಕು ಗೋಡೆಗಳೊಳಗೆ, ಕೆಲವೇ ಪ್ರೇಕ್ಷಕರ ನಡುವೆ ಬಂಧಿಸದೆ, ವಿಶಾಲ ಸಮಾಜದ ನಡುವೆ ಇಟ್ಟು ನೋಡಿದಾಗ, ಎಂತಹುದೇ ಸಾಂಸ್ಕೃತಿಕ ಪಲ್ಲಟಗಳನ್ನು ಎದುರಿಸುವ ಅದರ ಅಂತಃಶಕ್ತಿಯನ್ನು ಗ್ರಹಿಸಬಹುದು. ಭಾರತೀಯ/ಕನ್ನಡದ ರಂಗಭೂಮಿ ಇದನ್ನು ಚಾರಿತ್ರಿಕವಾಗಿ ನಿಭಾಯಿಸಿ, ಸಮಕಾಲೀನವಾಗಿ ನಿರ್ವಹಿಸುತ್ತಲೇ ಬಂದಿದೆ. ಆದಾಗ್ಯೂ ಕಳೆದ ಹತ್ತುವರ್ಷಗಳ ಬಹುಸಂಖ್ಯಾವಾದಿ ಹಿಂದುತ್ವ ರಾಜಕಾರಣದ ಪ್ರಭಾವ ರಂಗಭೂಮಿಯ ಮೇಲೆ ಸಹ ಕರಾಳ ಛಾಯೆಯನ್ನು ಹರಡಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ತಳಮಟ್ಟದವರೆಗಿನ ಸಮಾಜದ  ಅಂತರಂಗದ ಒಳಹೊಕ್ಕು ಅದರೊಳಗಿನ ಜನಜೀವನ, ಜೀವನೋಪಾಯ ಹಾಗೂ ನಿತ್ಯ ಬದುಕಿನ ವಿವಿಧ ಆಯಾಮಗಳತ್ತ ಒಳಗಣ್ಣಿನಿಂದ ನೋಡುವ ರಂಗಭೂಮಿ ಮೂಲತಃ ವರ್ತಮಾನದ ಸಮಾಜವನ್ನು ಕಾಡುತ್ತಿರುವ ಜಟಿಲ ಸವಾಲುಗಳನ್ನು ಗಮನಿಸುವುದೇ ಅಲ್ಲದೆ, ಈ ಸಮಾಜದ ಕಟ್ಟುವಿಕೆಯಲ್ಲಿ ಚಾರಿತ್ರಿಕವಾಗಿ ಎದುರಾಗಿದ್ದ ಸಾಮಾಜಿಕ ಅನಿಷ್ಠಗಳನ್ನು, ಸಾಂಪ್ರದಾಯಿಕತೆಯ ಅಪಾಯಗಳನ್ನು, ಸಾಂಸ್ಕೃತಿಕ ತಡೆಗೋಡೆಗಳನ್ನು ಸಹ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ.

 ಹಾಗಾಗಿಯೇ ರಂಗಪ್ರಯೋಗ ಎನ್ನುವುದು ಸಮಾಜವನ್ನು ಒಳಗಣ್ಣಿನಿಂದ ನೋಡುವುದಷ್ಟೇ ಅಲ್ಲದೆ, ಅದರೊಳಗಿನ ಅಪಸವ್ಯಗಳನ್ನು ಹೊರಗೆಳೆದು ವರ್ತಮಾನದಲ್ಲಿ ನಿಕಶಕ್ಕೊಡ್ಡುವ ಒಂದು ಸೃಜನಶೀಲ ಕಲಾಭಿವ್ಯಕ್ತಿಯಾಗಿ ರೂಪುಗೊಂಡಿದೆ. ಪುರಾಣ-ಮಿಥ್ಯೆ-ಐತಿಹ್ಯಗಳನ್ನು ಚರಿತ್ರೆಯನ್ನಾಗಿಸುವ ಅಥವಾ ಲಿಖಿತ ಚರಿತ್ರೆಯನ್ನೂ ಮಿಥ್ಯೆಯಾಗಿಸುವ ಸಾಂಸ್ಕೃತಿಕ ರಾಜಕಾರಣದ ಸತತ ಪ್ರಯತ್ನಗಳ ನಡುವೆಯೂ ಚರಿತ್ರೆ ಮತ್ತು ವರ್ತಮಾನವನ್ನು ಮುಖಾಮುಖಿಯಾಗಿಸುತ್ತಾ, ವರ್ತಮಾನದ ಸಮಾಜಕ್ಕೆ-ಭವಿಷ್ಯದ ತಲೆಮಾರಿಗೆ ಅಗತ್ಯವಾದ ಒಳನೋಟಗಳನ್ನು ನೀಡುವ ಪ್ರಯತ್ನಗಳು ರಂಗಭೂಮಿಯಿಂದ ಮಾತ್ರವೇ ಸಾಧ್ಯ. ಇದನ್ನು ಭ್ರಷ್ಟಗೊಳಿಸುವ ಸಂಕುಚಿತ ಸಾಂಸ್ಕೃತಿಕ ಚಿಂತನೆಗಳು ರಂಗಭೂಮಿಯನ್ನು ಕಲುಷಿತಗೊಳಿಸುತ್ತಿರುವ ಹೊತ್ತಿನಲ್ಲಿ ಸೃಜನಶೀಲ ರಂಗಭೂಮಿಯ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ. ಚರಿತ್ರೆಯನ್ನು ವರ್ತಮಾನವಾಗಿಸದೆ ಸಮಕಾಲೀನಗೊಳಿಸಿ ಪ್ರೇಕ್ಷಕರ ಮುಂದಿಡುವ ಮೂಲಕ ಅಲ್ಲಿ ಅಡಗಿರಬಹುದಾದ ಸಾಮಾಜಿಕ-ಸಾಂಸ್ಕೃತಿಕ ಅಪಸವ್ಯಗಳು ಮರುಕಳಿಸದಂತೆ ಜಾಗೃತಿ ಮೂಡಿಸುವ ಒಂದು ನೈತಿಕ ಜವಾಬ್ದಾರಿ ರಂಗಭೂಮಿಯ ಮೇಲಿದೆ.

 ಇಂದಿಗೂ ನಮ್ಮ ಸಮಾಜವನ್ನು ಕಾಡುತ್ತಿರುವ ಪಿತೃಪ್ರಧಾನತೆ, ಮಹಿಳಾ ದೌರ್ಜನ್ಯ, ಅಸ್ಪೃಶ್ಯತೆ, ಜಾತಿ ತಾರತಮ್ಯಗಳು ಮತ್ತು ಈ ಪೀಡೆಗಳನ್ನು ಯಥಾಸ್ಥಿತಿಯಲ್ಲಿ ಕಾಪಾಡುವ ಸಾಂಸ್ಕೃತಿಕ ರಾಜಕಾರಣದ ಆಕ್ರಮಣಗಳಿಗೆ ಪ್ರತಿಯಾಗಿ, ಭಾರತದ ಬಹುತ್ವವನ್ನು, ಬಹುಸಾಂಸ್ಕೃತಿಕ ನೆಲೆಗಳನ್ನು, ಜನಪದೀಯ ಶ್ರೀಮಂತಿಕೆಯನ್ನು ಮುಂದಿನ ತಲೆಮಾರಿಗೂ ದಾಟಿಸುವ ಒಂದು ಮಹತ್ತರ ಹೊರೆ ರಂಗಭೂಮಿಯ ಮೇಲಿದೆ. ಸಾಹಿತ್ಯಕ ನೆಲೆಯಲ್ಲಿ ಇದು ಸಾಧ್ಯವಾಗಬಹುದಾದರೂ ಅಲ್ಲಿ ಆವರಿಸಿರುವ ನೀರವ ಮೌನ ರಂಗಭೂಮಿಯನ್ನು ಒಂದು ರೀತಿಯಲ್ಲಿ ಏಕಾಂಗಿಯಾಗಿಸಿದೆ. ಸಂಸ್ಕೃತಿ ಎಂಬ ವಿಶಾಲಾರ್ಥದ ವಿದ್ಯಮಾನವನ್ನು ನಿರ್ದಿಷ್ಟ ಮತ ಅಥವಾ ಧರ್ಮದ ಬೇಲಿಗಳೊಳಗೆ ಬಂಧಿಸಿ ಸಂಕುಚಿತಗೊಳಿಸುತ್ತಿರುವ ಹೊತ್ತಿನಲ್ಲಿ, ರಂಗಭೂಮಿಯು ಅದರ ಮೂಲ ಬೇರುಗಳನ್ನು ಶೋಧಿಸಿ, ಹೊರಗೆಳೆದು, ಪ್ರೇಕ್ಷಕರ ಮುಂದಿರಿಸಿ, ಸಮಕಾಲೀನಗೊಳಿಸುವ ಪ್ರಯತ್ನಗಳನ್ನು ಮಾಡಬೇಕಿದೆ.

ಕನ್ನಡ ರಂಗಭೂಮಿಯ ಹಿರಿಮೆ

ಹೆಮ್ಮೆಯಿಂದ ಹೇಳಬಹುದಾದ ಸತ್ಯ ಎಂದರೆ ಭಾರತೀಯ-ಕನ್ನಡ ರಂಗಭೂಮಿ, ಗೋದ್ರೋತ್ತರ ಭಾರತದ ಎಲ್ಲ ಸಾಂಸ್ಕೃತಿಕ ದಾಳಿಗಳನ್ನೂ ಸಮರ್ಥವಾಗಿ ಎದುರಿಸಿ, ತನ್ನ ಹಿರಿಮೆಯನ್ನು ಕಾಪಾಡಿಕೊಂಡು ಬಂದಿರುವುದೇ ಅಲ್ಲದೆ ಈ ಪ್ರಯತ್ನಗಳಿಗೆ ಮುಂದಾಗುತ್ತಲೇ ಇದೆ.  ಹವ್ಯಾಸಿ ರಂಗಭೂಮಿ ಕರ್ನಾಟಕದಲ್ಲಿ ಕಟ್ಟಿಕೊಟ್ಟಿರುವ ವಿಶಾಲ ವೇದಿಕೆಯಲ್ಲಿ ನೂರಾರು ರಂಗ ತಂಡಗಳು ತಮ್ಮ ಈ ಸಾಂಸ್ಕೃತಿಕ ನೊಗವನ್ನು ಹೊರುತ್ತಲೇ ಬಂದಿವೆ. ಈ ನಿಟ್ಟಿನಲ್ಲಿ ಮೈಸೂರಿನ ಪ್ರತಿಷ್ಠಿತ ರಂಗಾಯಣ ಮತ್ತು ಅದು ಕಟ್ಟಿಕೊಟ್ಟಿರುವ ವಿಶಾಲ ರಂಗಪ್ರಪಂಚ ಬಹಳ ಮುಖ್ಯ ಭೂಮಿಕೆ ವಹಿಸಿದೆ. ಕರ್ನಾಟಕದ ಹವ್ಯಾಸಿ ರಂಗಭೂಮಿಯನ್ನು ಕಟ್ಟಿ ಬೆಳೆಸಿದ ರಂಗ ಸಮುದಾಯವನ್ನು ಮತ್ತಷ್ಟು ಸೃಜನಶೀಲಗೊಳಿಸುವ ಮತ್ತು ಸಮಾಜಮುಖಿಯಾಗಿಸುವ ಒಂದು ಪ್ರಯೋಗಶಾಲೆಯಾಗಿ ರಂಗಾಯಣ ತನ್ನ ನಡಿಗೆಯನ್ನು ಮುಂದುವರೆಸುತ್ತಾ ಬಂದಿದೆ. ಹಲವು ಶಾಖೆಗಳಾಗಿ ಹರಡಿರುವ ಇಲ್ಲಿ ಬಿತ್ತಿದ ಬೀಜಗಳು ಇಂದು ಟಿಸಿಲೊಡೆದು ಕನ್ನಡ ರಂಗಭೂಮಿಯ ಹಂದರವನ್ನು ವಿಸ್ತರಿಸುತ್ತಾ ಬೃಹತ್‌ ವೃಕ್ಷಗಳಾಗಿ ಬೆಳೆದು ನಿಂತಿವೆ.

 ರಂಗಾಯಣ ಜನ್ಮ ತಳೆಯುವ ಮುಂಚೆಯೇ ಮೈಸೂರಿನ ಸಾಂಸ್ಕೃತಿಕ ವಾತಾವರಣದಲ್ಲಿ ರಂಗಭೂಮಿಯನ್ನು ಕಟ್ಟಿದ ಮಿತ್ರಮೇಳ, ಸಮತೆಂತೋ, ಅಮರ ಕಲಾಸಂಘ, ಕಲಾಪ್ರಿಯ, ಕದಂಬ ರಂಗವೇದಿಕೆ ಮತ್ತು ಸಮುದಾಯ ಮೊದಲಾದ ತಂಡಗಳು ಇಂದಿಗೂ ಜೀವಂತಿಕೆಯಿಂದಿರುವುದನ್ನು ಹೆಮ್ಮೆಯಿಂದ ಗುರುತಿಸಬಹುದು. ಸಾಮಾಜಿಕ ಅನ್ಯಾಯಗಳ ವಿರುದ್ಧ ದನಿ ಎತ್ತುತ್ತಾ, ನೊಂದ ತಳಸಮಾಜದೊಡನೆ ದನಿಗೂಡಿಸುತ್ತಾ, ತಳಸಮುದಾಯಗಳ ನೋವು ತಲ್ಲಣಗಳಿಗೆ ಸ್ಪಂದಿಸುವ ಒಂದು ಔದಾತ್ಯದೊಂದಿಗೆ ಕರ್ನಾಟಕದಲ್ಲಿ ಉದಯಿಸಿದ ಸಮುದಾಯ ತಂಡ ರಂಗಭೂಮಿಯನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದರೆ ಅದಕ್ಕೆ ಮೈಸೂರಿನ ರಂಗಾಸಕ್ತರ ಮತ್ತು ರಂಗ ಕಲಾವಿದರ ಕೊಡುಗೆ ಸಾಕಷ್ಟಿದೆ ಎನ್ನುವುದು ಸರ್ವವೇದ್ಯ. ಇದರ ಮುಂದುವರಿಕೆಯಾಗಿ ಮೈಸೂರಿನಲ್ಲಿ ಹಲವು ಕಲಾ ತಂಡಗಳು ರಂಗಭೂಮಿಯನ್ನು ಜನರ ಹತ್ತಿರ ಕೊಂಡೊಯ್ಯುವ ಪ್ರಯತ್ನಗಳನ್ನು ಮಾಡುತ್ತಿವೆ. ಜಿಪಿಐಇಆರ್‌, ನಟನ, ಸುರುಚಿ, ಪರಿವರ್ತನ, ಜನಮನ, ದೇಸಿರಂಗ, ನಿರಂತರ, ರಂಗವಲ್ಲಿ, ರಂಗಾಂತರಂಗ ಮೊದಲಾದ ತಂಡಗಳು ಉಲ್ಲೇಖನಾರ್ಹ.

Siddaramaiah in Tumakur: ಭಾಷಣ ಮುಗಿಸಿ ಸಿಎಂ ಸಿದ್ದರಾಮಯ್ಯ ತೆರಳುವಾಗ ಕಿರುಚಾಡಿದ ಮಹಿಳೆ #pratidhvani

 ರಂಗಾಯಣದ ಮೂಲಕವೇ ರಂಗಭೂಮಿಯನ್ನು ಕಲ್ಪಿತ ಸೈದ್ಧಾಂತಿಕ ನೆಲೆಗಳಲ್ಲಿ ಅಡ್ಡಡ್ಡಲಾಗಿ ವಿಭಜಿಸಿ ರಂಗಪ್ರಜ್ಞೆಯನ್ನೇ ಭಂಗಗೊಳಿಸುವ ಪ್ರಯತ್ನಗಳ ಹೊರತಾಗಿಯೂ ಮೈಸೂರು ತನ್ನ ರಂಗಾಭಿವ್ಯಕ್ತಿ ಮತ್ತು ರಂಗಪ್ರಜ್ಞೆಯನ್ನು ಉಳಿಸಿಕೊಂಡಿರುವುದು ಸಾಹಸವೇ ಸರಿ. ಅದಕ್ಕೆ ಕಾರಣ 1970ರ ದಶಕದಿಂದಲೂ ಇಲ್ಲಿ ನೆಲೆಕಂಡಿರುವ ಸೂಕ್ಷ್ಮ ಸಂವೇದನೆಯ ರಂಗಪ್ರಜ್ಞೆ ಮತ್ತು ಅದನ್ನು ಪ್ರತಿನಿಧಿಸುವ/ಪ್ರತಿನಿಧಿಸುತ್ತಿರುವ ಸೃಜನಶೀಲ ಕಲಾವಿದರ ಬೃಹತ್‌ ತಂಡ. ಮೈಸೂರಿನ ರಂಗತಂಡಗಳು ಇಲ್ಲಿನ ರಂಗಪ್ರೇಕ್ಷಕರ ಮುಂದೆ ಮಂಟೇಸ್ವಾಮಿಯ ಜನಪದೀಯ ನೆಲೆಗಳನ್ನು ಇರಿಸುವಷ್ಟೇ ಪರಿಣಾಮಕಾರಿಯಾಗಿ ಅತೊಲ್‌ ಫ್ಯೂಗಾರ್ಡ್‌ ಎಂಬ ನಾಟಕಕಾರನನ್ನೂ,  ಒಡಲಾಳದ ಸಾಕವ್ವನನ್ನೂ, ಠಾಗೋರರ ʼಲೋಕದ ಒಳಹೊರಗʼನ್ನೂ, ಉತ್ತರ ಭಾರತದ ದೋಪ್ಡಿಯನ್ನೂ, ಫೂಲನ್‌ ದೇವಿಯನ್ನೂ, ಬಂಜಾರರ ಬದುಕನ್ನೂ  ಇರಿಸುವ ಮೂಲಕ ಜನಪದ-ಚರಿತ್ರೆ-ವರ್ತಮಾನದ ಒಂದು ಸಾಂಸ್ಕೃತಿಕ ಹೂರಣವನ್ನು ಉಣಬಡಿಸುತ್ತಾ ಬಂದಿದೆ.

 ಮೈಸೂರು ತನ್ನ ಸಾಂಸ್ಕೃತಿಕ ನಗರಿ ಎಂಬ ಹೆಸರನ್ನು ಭವಿಷ್ಯಕ್ಕೂ ರವಾನಿಸುವ ನಿಟ್ಟಿನಲ್ಲಿ ಇಲ್ಲಿನ ರಂಗಭೂಮಿ ತನ್ನ ಸೃಜನಶೀಲ ಪ್ರಯೋಗಗಳಿಂದ ರಂಗಕಲೆಯನ್ನು ಉದ್ಧಿಪನಗೊಳಿಸುತ್ತಿರುವುದು ಅತಿಶಯದ ಮಾತೇನಲ್ಲ. ಇದಕ್ಕೆ ಕಾರಣ ನೂರಾರು ಕಲಾವಿದರು, ಸಹೃದಯ ರಂಗಾಸಕ್ತರು ಮತ್ತು ಈ ಆಂಡ್ರಾಯ್ಡ್‌ ಯುಗದಲ್ಲೂ ರಂಗಪ್ರಯೋಗಗಳನ್ನು ಆನಂದಿಸಲು ಕಿಕ್ಕಿರಿದು ನೆರೆಯುವ ಮೈಸೂರಿನ ಸಾಂಸ್ಕೃತಿಕ ಮನಸ್ಸುಗಳು. ಹಾಗಾಗಿಯೇ ರಂಗಾಯಣದಲ್ಲಿ ನಡೆಯುವ ಬಹುರೂಪಿ ಇಂದು ವಿಶ್ವಮಾನ್ಯತೆ ಪಡೆದುಕೊಂಡಿದೆ. ಇದರ ಮೂಲ ಧಾತುವನ್ನು ರಂಗಾಯಣ ಹುಟ್ಟುಹಾಕಿದ ಕಲಾಪ್ರತಿಭೆಗಳಲ್ಲಿ ಗುರುತಿಸುತ್ತಲೇ, ಸಮಕಾಲೀನ ಹವ್ಯಾಸಿ ರಂಗಭೂಮಿಯನ್ನು ಪ್ರವೇಶಿಸುತ್ತಿರುವ ಯುವ ರಂಗಕರ್ಮಿಗಳಲ್ಲೂ ಗುರುತಿಸುವುದು ಅಗತ್ಯ. ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಲೇ ಇರುವ ಇಲ್ಲಿನ ಯುವ ರಂಗಪ್ರತಿಭೆಗಳು ಮತ್ತು ಈ ಕುಡಿಗಳನ್ನು ಪೋಷಿಸುತ್ತಿರುವ ಹಿರಿಯ ಕಲಾವಿದರು ಮೈಸೂರಿನ ರಂಗಭೂಮಿಯನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತಿರುವುದು ಹೆಮ್ಮೆಯ ವಿಚಾರ.

ವರ್ತಮಾನ-ಭವಿಷ್ಯದ ಕನಸುಗಳೊಂದಿಗೆ ,,,

 ವರ್ತಮಾನದ ಭಾರತವನ್ನು ಕಾಡುತ್ತಿರುವ ಹಿಂದುತ್ವದ ಬಹುಸಂಖ್ಯಾವಾದ, ಮತೀಯ ಮೂಲಭೂತವಾದ ಮತ್ತು ಮತಾಂಧತೆ, ಕೋಮುವಾದ ಮತ್ತು ಜಾತಿ ಶ್ರೇಷ್ಠತೆಯ ಅಪಸವ್ಯಗಳನ್ನು ದಾಟಿ ಒಂದು ಸರ್ವಜನಾಂಗದ ಸುಂದರ ತೋಟವನ್ನು ಕಟ್ಟಬೇಕಾದರೆ, ಸಮಾಜದ ತಳಮಟ್ಟವನ್ನು ತಲುಪಿ ಅಲ್ಲಿ ಹುದುಗಿರಬಹುದಾದ ಮನುಜಸೂಕ್ಷ್ಮ ಸಂವೇದನೆಯ ತಂತುಗಳನ್ನು ಭೇದಿಸಿ ಹೊರತೆಗೆಯುವುದು ಈ ಹೊತ್ತಿನ ತುರ್ತು. ಮನುಜ ಸಂಬಂಧಗಳನ್ನು ಜಾತಿ-ಧರ್ಮಗಳ ಅಸ್ಮಿತೆಗಳಲ್ಲಿ ಸಿಲುಕಿಸಿ, ಎತ್ತರೆತ್ತರದ ಗೋಡೆಗಳನ್ನು ಕಟ್ಟುತ್ತಲೇ ಇರುವ ಸಾಂಸ್ಕೃತಿಕ ರಾಜಕಾರಣದ ನಡುವೆಯೇ, ಈ ಗೋಡೆಗಳನ್ನು ಕೆಡವಿ ಪರಸ್ಪರ ಸಂಬಂಧಗಳನ್ನು ಬೆಸೆಯುವ ಮಾನವೀಯ ಸರಪಳಿಗಳನ್ನು ಸೃಷ್ಟಿಸುವ ಒಂದು ದೊಡ್ಡ ಜವಾಬ್ದಾರಿ ಇಂದಿನ ಸಮಾಜದ ಮೇಲಿದೆ. ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಮೇಲು ಕೀಳುಗಳ ಬೇಲಿಗಳನ್ನು ಕಿತ್ತೊಗೆದು, ಸಮ ಸಮಾಜವನ್ನು ಕಟ್ಟುವ ಮುಂಗಾಣ್ಕೆಯನ್ನು ವರ್ತಮಾನದ ಯುವಸಂಕುಲಕ್ಕೆ ನೀಡುವ ಜವಾಬ್ದಾರಿಯೂ ನಮ್ಮ ಮೇಲಿದೆ.

 ಈ ನೊಗವನ್ನು ಹೊರಲೇಬೇಕಾದ ಪರಿಸ್ಥಿತಿಯಲ್ಲಿ, ತನ್ನ ಸಾಂಸ್ಕೃತಿಕ ತಳಪಾಯವನ್ನು ಇಂದಿಗೂ ಸುರಕ್ಷಿತವಾಗಿರಿಸಿಕೊಂಡಿರುವ ರಂಗಭೂಮಿ ತನ್ನ ಹೊಣೆಗಾರಿಕೆಯನ್ನು ಅರಿತು ಮುನ್ನಡೆಯುತ್ತಿರುವುದು ಹೆಮ್ಮೆಯ ವಿಚಾರ. ವ್ಯಕ್ತಿನಿಷ್ಠವಾಗಿ ನೋಡದೆ ರಂಗಭೂಮಿಯ ಈ ನಡಿಗೆಯನ್ನು ವಸ್ತುನಿಷ್ಠವಾಗಿ ನೋಡುತ್ತಾ, ಸಮಷ್ಟಿ ಪ್ರಜ್ಞೆಯೊಂದಿಗೆ ನಿಕಶಕ್ಕೊಳಪಡಿಸಿದಾಗ, ಸುತ್ತ ಕವಿಯುತ್ತಿರುವ ʼಅಂಧಯುಗʼವನ್ನು ಭೇದಿಸುವ ಬೆಳಕಿನ ಹೊಂಗಿರಣಗಳು ಗೋಚರಿಸುತ್ತವೆ. ಈ ಬೆಳಕಿಂಡಿಗಳನ್ನು ನಿರಂತರವಾಗಿ ತೆರೆಯುತ್ತಲೇ ಇರುವುದು ರಂಗಭೂಮಿ ಎಂಬ ಒಂದು ದೃಶ್ಯಕಲೆ ಮತ್ತದರ ಸೃಜನಶೀಲ ಪ್ರಯೋಗಗಳು. ಈ ಕಿರಣಗಳ ಸುತ್ತ ಕತ್ತಲಾವರಿಸದಂತೆ ಎಚ್ಚರ ವಹಿಸುತ್ತಾ ತಮ್ಮೊಳಗಿನ ಕಲಾಪ್ರತಿಭೆ ಮತ್ತು ಕಲಾಭಿವ್ಯಕ್ತಿಯನ್ನು ವಿಶಾಲ ಸಮಾಜದ ಔನ್ನತ್ಯಕ್ಕಾಗಿ ಸಮರ್ಪಿಸುತ್ತಾ ಸಾಗಿರುವುದು ಮೈಸೂರಿನ ರಂಗಭೂಮಿನ್ನು ಪ್ರತಿನಿಧಿಸುವ ಸಮಸ್ತ ಕಲಾವಿದರು.

 ಈ ಮಹತ್ತರ ಕೆಲಸವನ್ನು ಸಾಂಸ್ಕೃತಿಕ ಜವಾಬ್ದಾರಿಯೆಂದೆಣಿಸಿ, ಭವಿಷ್ಯದ ತಲೆಮಾರಿಗೆ ವರ್ತಮಾನವು ನೀಡಬಹುದಾದ ಅಮೂಲ್ಯ ಕೊಡುಗೆ ಎಂದು ಭಾವಿಸುತ್ತಾ, ಇನ್ನೂ ಹೆಚ್ಚಿನ ನಾವೀನ್ಯತೆಯೊಂದಿಗೆ ನೂತನ ರಂಗಪ್ರಯೋಗಗಳಿಗೆ ತೆರೆದುಕೊಳ್ಳಬೇಕಾದ ತುರ್ತು ನಮಗೆ ಎದುರಾಗಿದೆ. ಈ ದೊಡ್ಡ ಹೊರೆಯನ್ನು ಹೊತ್ತು ನಿಭಾಯಿಸಿ ರಥಚಕ್ರಗಳನ್ನು ಮುಂದೆಳೆಯುವ ಸಾಂಸ್ಕೃತಿಕ ಸಂವೇದನೆ ಮತ್ತು ಸೃಜನಶೀಲತೆ ರಂಗಭೂಮಿಯಲ್ಲಿದೆ. ಕರ್ನಾಟಕದ ರಂಗಭೂಮಿ ಈ ಅಮೂಲ್ಯ ಸಂಪತ್ತನ್ನು ಸುರಕ್ಷಿತವಾಗಿ ಕಾಪಾಡಿಕೊಂಡು, ಭವಿಷ್ಯದೆಡೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಸಾಗುತ್ತಿರುವುದೂ ಹೌದು. ಸೃಜನಶೀಲ ಕಲೆಯಾಗಿ ರಂಗಭೂಮಿಯನ್ನು ಕಟ್ಟಿಬೆಳೆಸಿದ ಪೂರ್ವಸೂರಿಗಳಿಗೆ ನಾವು ಸಲ್ಲಿಸಬಹುದಾದ ಗೌರವ ಮತ್ತು ಶ್ರದ್ಧಾಂಜಲಿ ಈ ರಥಚಕ್ರಗಳನ್ನು ಮುಕ್ಕಾಗದ ಹಾಗೆ ನೋಡಿಕೊಳ್ಳುವುದರಲ್ಲಿದೆ.

 ಇಂತಹ ಸಾರಥ್ಯ ವಹಿಸಿರುವ ʼರಂಗ ಸಂಪದʼ ತನ್ನ ಐದು ದಶಕಗಳನ್ನು ಪೂರೈಸಿ ಮುನ್ನಡೆಯುತ್ತಿರುವುದು ಕರ್ನಾಟಕದ ಹೆಮ್ಮೆ ಕನ್ನಡ ರಂಗಭೂಮಿಯ ಹಿರಿಮೆ. ʼ ರಂಗ ಸಂಪದ ʼ ತನ್ನ ಸಾಂಸ್ಕೃತಿಕ ಕಲಾಭಿವ್ಯಕ್ತಿಯ ಗಜನಡಿಗೆಯನ್ನು ಹೀಗೆಯೇ ಮುಂದುವರಿಸುತ್ತಾ, ಭವಿಷ್ಯದ ತಲೆಮಾರಿಗೆ ಅತ್ಯವಶ್ಯವಾದ ಒಂದು ಮಾನವೀಯ ಸಂವೇದನಾಶೀಲ ಸೃಜನಾತ್ಮಕ ಹೊಸ ಜಗತ್ತನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಯಶಸ್ವಿಯಾಗಲಿ ಎಂದು ಈ ಸಂದರ್ಭದಲ್ಲಿ ಹಾರೈಸುತ್ತೇನೆ.

-೦-೦-೦-

Tags: 20th century american historyabbey theatreancient celtsancient origins of the celtsarchitecture of los angelescultural studiesgolden age of hollywoodhistory of europehistory of new york documentaryhistory of retailhistory of slaverylives of the super richmanifesto of carethe many faces of billie holidaythe shadow of the gunmanwar of the roseswealthy family documentarieswealthy people documentary
Previous Post

ಇದ್ದಕ್ಕಿದ್ದ ಹಾಗೆ ಬಿಗ್ ಬಾಸ್ ಮನೆಯಿಂದ ಹೊರಬಂದ ಚೈತ್ರಾ – ಇದಕ್ಕೆ ಕಾರಣ ಏನು ಗೊತ್ತಾ?

Next Post

ಛತ್ರಪತಿ ಶಿವಾಜಿ ಮಹಾರಾಜ್ ಚಿತ್ರದಲ್ಲಿ ರಿಷಬ್ ಶೆಟ್ಟಿ 2027ರ ಜನವರಿ 21ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್

Related Posts

ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..
Top Story

ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

by ಪ್ರತಿಧ್ವನಿ
May 1, 2026
0

• ರಾಜ್ಯ ಸರ್ಕಾರದ ನೇತೃತ್ವದಲ್ಲಿನ ದೇಶದ ಮೊದಲ ಶ್ರೇಷ್ಠತಾ ಕೇಂದ್ರ • ಬಾಹ್ಯಾಕಾಶ ನಾವೀನ್ಯತೆಯ ರಾಷ್ಟ್ರೀಯ ಕೇಂದ್ರವಾಗಿ ಬಲಗೊಂಡ ಕರ್ನಾಟಕದ ಸ್ಥಾನ • ಕೃಷಿ, ಹವಾಮಾನ, ನೈಸರ್ಗಿಕ...

Read moreDetails
ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

May 1, 2026
“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

May 1, 2026
ಹೆದರಿಸಿ ಮಹಿಳೆಯರ ಮೇಲೆ ಎಗರುತ್ತಿದ್ದ ಕಾಮುಕ ಅಂದರ್‌ : ವಿವಾಹಿತರೇ ಈ ವಂಚಕನ ಟಾರ್ಗೆಟ್..!

ಹೆದರಿಸಿ ಮಹಿಳೆಯರ ಮೇಲೆ ಎಗರುತ್ತಿದ್ದ ಕಾಮುಕ ಅಂದರ್‌ : ವಿವಾಹಿತರೇ ಈ ವಂಚಕನ ಟಾರ್ಗೆಟ್..!

May 1, 2026
ಗಂಡನ ಸಾಲ, ಹೆಂಡತಿ ಅಕೌಂಟ್‌ಗೆ ಬಿತ್ತು ಕತ್ತರಿ : ಗೃಹ ಲಕ್ಷ್ಮಿ ಹಣಕ್ಕೂ ಬ್ಯಾಂಕ್‌ಗಳಲ್ಲಿ ಇಲ್ಲದಾಯಿತೇ ಭದ್ರತೆ..?

ಗಂಡನ ಸಾಲ, ಹೆಂಡತಿ ಅಕೌಂಟ್‌ಗೆ ಬಿತ್ತು ಕತ್ತರಿ : ಗೃಹ ಲಕ್ಷ್ಮಿ ಹಣಕ್ಕೂ ಬ್ಯಾಂಕ್‌ಗಳಲ್ಲಿ ಇಲ್ಲದಾಯಿತೇ ಭದ್ರತೆ..?

May 1, 2026
Next Post
ಛತ್ರಪತಿ ಶಿವಾಜಿ ಮಹಾರಾಜ್ ಚಿತ್ರದಲ್ಲಿ ರಿಷಬ್ ಶೆಟ್ಟಿ 2027ರ ಜನವರಿ 21ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್

ಛತ್ರಪತಿ ಶಿವಾಜಿ ಮಹಾರಾಜ್ ಚಿತ್ರದಲ್ಲಿ ರಿಷಬ್ ಶೆಟ್ಟಿ 2027ರ ಜನವರಿ 21ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada