• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, September 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರಾಜ್ಯ ಸರ್ಕಾರದಿಂದ ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ ನೇಮಕಾತಿ : ಇಂದಿನಿಂದ ದೈಹಿಕ ಪರೀಕ್ಷೆ ಆರಂಭ | Civil Police Constable

ಪ್ರತಿಧ್ವನಿ by ಪ್ರತಿಧ್ವನಿ
September 28, 2026
in Top Story, ಕರ್ನಾಟಕ
0
Recruitment of Civil Police Constables by the State Government
Share on WhatsAppShare on FacebookShare on Telegram

ಬೆಂಗಳೂರು : ನಾಡಿನ ಯುವಕರಿಗೆ ಭದ್ರ ಭವಿಷ್ಯ ನಿರ್ಮಿಸಲು ಕರ್ನಾಟಕ ಸರ್ಕಾರ (Government of Karnataka) 3,991 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (Civil Police Constable) ಹುದ್ದೆಗಳಿಗೆ ನೇಮಕಾತಿ ಆರಂಭಿಸಿದೆ. ಸೆಪ್ಟೆಂಬರ್ 28ರಿಂದ 19,396 ಅರ್ಹ ಅಭ್ಯರ್ಥಿಗಳಿಗೆ ವಲಯವಾರು ದೈಹಿಕ ಪರೀಕ್ಷೆಗಳು ನಡೆಯಲಿವೆ.

ADVERTISEMENT
Vishnuvardhan fans :  ವಿಷ್ಣು ವರ್ಧನ್ ಸಮಾಧಿಗಾಗಿ ಹೋರಾಟ ಮಾಡಿದ್ರೆ ಅರೆಸ್ಟ್ ಮಾಡಿಸಿದ್ರು... #pratidhvani

ಅರ್ಹ ಅಭ್ಯರ್ಥಿಗಳು KEA ಅಧಿಕೃತ ವೆಬ್ಸೈಟ್ನಿಂದ ಕರೆ ಪತ್ರ (Call Letter) ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅರ್ಹ ಅಭ್ಯರ್ಥಿಗಳು ತಮಗೆ ನಿಗದಿಪಡಿಸಿದ ದಿನಾಂಕದಂದು ನಿಗದಿತ ದೈಹಿಕ ಪರೀಕ್ಷಾ ಕೇಂದ್ರಕ್ಕೆ ವರದಿ ಮಾಡಬಹುದು.

.ಈ ಬೃಹತ್ ನೇಮಕಾತಿ ಅಭಿಯಾನದಡಿ ಒಟ್ಟು 3,991 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ರಾಜ್ಯಾದ್ಯಂತ ವಿವಿಧ ಹಂತಗಳಲ್ಲಿ ಆಯ್ಕೆಯಾಗಿರುವ ಒಟ್ಟು 19,396 ಅರ್ಹ ಅಭ್ಯರ್ಥಿಗಳು ಈ ದೈಹಿಕ ಪರೀಕ್ಷೆಗಳಲ್ಲಿ ಭಾಗವಹಿಸಲಿದ್ದಾರೆ.

ಉಳಿಕೆ ಮೂಲ ವೃಂದದ ಒಟ್ಟು 3,395 ಹುದ್ದೆಗಳಿಗೆ 16,454 ಅಭ್ಯರ್ಥಿಗಳು ಪರೀಕ್ಷೆಗೆ ಅರ್ಹತೆ ಪಡೆದಿದ್ದರೆ, ಕಲ್ಯಾಣ ಕರ್ನಾಟಕ ವೃಂದದ 596 ಹುದ್ದೆಗಳಿಗೆ 2,942 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ.

DK Shivakumar: ತಲೆ ಮೇಲೆ ಕೈ ಇಟ್ಟುಕೊಂಡು ಮಹಾವೀರ್ ಜೈನ್ ಬಗ್ಗೆ ಮಾತನಾಡಿದ ಡಿಕೆಶಿ #pratidhvani

ಉಳಿಕೆ ಮೂಲ ವೃಂದದ ಪರೀಕ್ಷಾ ವಿವರಗಳು:

ಬೆಂಗಳೂರು ನಗರ ಘಟಕ: ಈ ಘಟಕ ವ್ಯಾಪ್ತಿಯಲ್ಲಿ 2,015 ಹುದ್ದೆಗಳಿದ್ದು, ಒಟ್ಟು 9,887 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಇವರಿಗೆ 2026ರ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 05 ರವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಗಳು ಸಿಎಆರ್ (ಹೆಚ್‌ಕ್ಯೂ) ಚಾಮರಾಜಪೇಟೆಯ ಸಿರ್ಸಿ ಸರ್ಕಲ್ ಮೈದಾನ, ಆಡುಗೋಡಿಯ ಸಿಎಆರ್ (ದಕ್ಷಿಣ) ಮೈದಾನ ಹಾಗೂ ಆರ್.ಕೆ. ಹೆಗಡೆ ನಗರದ ತಣಿಸಂದ್ರ ಮುಖ್ಯ ರಸ್ತೆಯಲ್ಲಿರುವ ಸಿಎಆರ್ (ಉತ್ತರ) ಪರೇಡ್ ಮೈದಾನಗಳಲ್ಲಿ ಜರುಗಲಿವೆ.

ಕೇಂದ್ರ ವಲಯ: ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಜಿಲ್ಲೆ ಹಾಗೂ ರೈಲ್ವೆ ಘಟಕಗಳನ್ನು ಒಳಗೊಂಡಂತೆ 200 ಹುದ್ದೆಗಳಿಗೆ 946 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಇವರ ಪರೀಕ್ಷೆಗಳು 2026ರ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 03 ರವರೆಗೆ ಬೆಂಗಳೂರಿನ ಕೊರಮಂಗಲದ ಮಡಿವಾಳ ಮಾರುಕಟ್ಟೆ ಎದುರು 3ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನದಲ್ಲಿ ನಡೆಯಲಿವೆ.

DK Shivakumar: ನಿಮ್ಮ ಸರ್ಕಾರ ಸದಾ ಇರ್ಬೇಕು ಅಂದ್ರೆ ನಿಮ್ಮ ಈ ಮಗ ಅಧಿಕಾರದಲ್ಲಿ ಇರಬೇಕು #pratidhvani

ದಕ್ಷಿಣ ವಲಯ: ಮೈಸೂರು ನಗರ, ಮೈಸೂರು ಜಿಲ್ಲೆ, ಹಾಸನ, ಕೊಡಗು, ಚಾಮರಾಜನಗರ ಮತ್ತು ಮಂಡ್ಯ ಘಟಕಗಳ 395 ಹುದ್ದೆಗಳಿಗೆ 1,891 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇವರಿಗೆ 2026ರ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 05 ರವರೆಗೆ ಮೈಸೂರಿನ ರೇಸ್ ಕೋರ್ಸ್ ಹಿಂಭಾಗದಲ್ಲಿರುವ ಸಿಟಿ ಆರ್ಮ್ಡ್ ರಿಸರ್ವ್ ಪರೇಡ್ ಮೈದಾನದಲ್ಲಿ ದೈಹಿಕ ಪರೀಕ್ಷೆ ಜರುಗಲಿದೆ.

ಪೂರ್ವ ವಲಯ: ಶಿವಮೊಗ್ಗ, ಹಾವೇರಿ, ದಾವಣಗೆರೆ ಹಾಗೂ ಚಿತ್ರದುರ್ಗ ಘಟಕಗಳ ವ್ಯಾಪ್ತಿಯ 250 ಹುದ್ದೆಗಳಿಗೆ 1,234 ಅಭ್ಯರ್ಥಿಗಳು ಪರೀಕ್ಷೆಗೆ ಅರ್ಹರಾಗಿದ್ದಾರೆ. ಇರ ಪರೀಕ್ಷೆಯು 2026ರ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 06 ರವರೆಗೆ ಶಿವಮೊಗ್ಗದ ನವಿಲೆಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನದಲ್ಲಿ ನಡೆಯಲಿದೆ.

ಪಶ್ಚಿಮ ವಲಯ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ (ಕಾರವಾರ), ಚಿಕ್ಕಮಗಳೂರು ಮತ್ತು ಮಂಗಳೂರು ನಗರ ಘಟಕಗಳ 395 ಹುದ್ದೆಗಳಿಗೆ 1,803 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಇವರಿಗೆ 2026ರ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 03 ರವರೆಗೆ ಮಂಗಳೂರಿನ ಲಾಲ್‌ಬಾಗ್‌ನಲ್ಲಿರುವ ಮಂಗಳ ಕ್ರೀಡಾಂಗಣದಲ್ಲಿ ದೈಹಿಕ ಪರೀಕ್ಷೆ ನಿಗದಿಯಾಗಿದೆ.

ಉತ್ತರ ವಲಯ: ಗದಗ ಹಾಗೂ ಹುಬ್ಬಳ್ಳಿ-ಧಾರವಾಡ ನಗರ ಘಟಕ ಒಳಗೊಂಡ 110 ಹುದ್ದೆಗಳಿಗೆ 549 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಇವರಿಗೆ 2026ರ ಸೆಪ್ಟೆಂಬರ್ 29 ಮತ್ತು 30 ರಂದು ಬೆಳಗಾವಿಯ ವಿಟಿಯು ಹತ್ತಿರದ ಮಚ್ಚೆಯಲ್ಲಿರುವ 2ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನದಲ್ಲಿ ಪರೀಕ್ಷೆ ನಡೆಯಲಿದೆ.

ಬಳ್ಳಾರಿ ವಲಯ: ಬಳ್ಳಾರಿ ಮತ್ತು ರಾಯಚೂರು ಘಟಕಗಳ 30 ಹುದ್ದೆಗಳಿಗೆ 144 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಇವರಿಗೆ ಪರೀಕ್ಷೆಯು 2026ರ ಅಕ್ಟೋಬರ್ 05 ರಿಂದ ಅಕ್ಟೋಬರ್ 06 ರವರೆಗೆ ಕೊಪ್ಪಳದ ಮುನಿರಾಬಾದ್‌ನ ಹೊಸಹಳ್ಳಿ ಬಳಿಯಿರುವ ಕೆಎಸ್‌ಆರ್‌ಪಿ ಪಿ.ಟಿ.ಎಸ್. ಮೈದಾನದಲ್ಲಿ (ಐಆರ್‌ಬಿ ಕ್ಯಾಂಪಸ್) ನಡೆಯಲಿದೆ.

ಕಲ್ಯಾಣ ಕರ್ನಾಟಕ ವೃಂದದ ಪರೀಕ್ಷಾ ವಿವರಗಳು:

ಸಿಒಪಿ ಬೆಂಗಳೂರು ನಗರ: ಈ ಭಾಗದ 171 ಹುದ್ದೆಗಳಿಗೆ 833 ಅಭ್ಯರ್ಥಿಗಳು ಅರ್ಹರಾಗಿದ್ದು, 2026ರ ಅಕ್ಟೋಬರ್ 08 ರಂದು ಬೆಂಗಳೂರಿನ ಚಾಮರಾಜಪೇಟೆಯ ಸಿಎಆರ್ ಪರೇಡ್ ಮೈದಾನ (ಹೆಚ್‌ಕ್ಯೂ) ಹಾಗೂ ಆಡುಗೋಡಿಯ ಸಿಎಆರ್ ಪರೇಡ್ ಮೈದಾನಗಳಲ್ಲಿ (ದಕ್ಷಿಣ) ಏಕಕಾಲದಲ್ಲಿ ದೈಹಿಕ ಪರೀಕ್ಷೆ ನಡೆಯಲಿದೆ.

ಬಳ್ಳಾರಿ ವಲಯ (ಕೆಕೆ ಘಟಕಗಳು): ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಘಟಕಗಳ 174 ಹುದ್ದೆಗಳಿಗೆ 869 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಇವರಿಗೆ 2026ರ ಅಕ್ಟೋಬರ್ 12 ರಿಂದ 15 ರವರೆಗೆ ಕೊಪ್ಪಳದ ಮುನಿರಾಬಾದ್ ಹೊಸಹಳ್ಳಿಯಲ್ಲಿರುವ ಕೆಎಸ್‌ಆರ್‌ಪಿ ಪಿ.ಟಿ.ಎಸ್. ಮೈದಾನದಲ್ಲಿ ದೈಹಿಕ ಪರೀಕ್ಷೆ ನಡೆಸಲಾಗುವುದು.

ಈಶಾನ್ಯ ವಲಯ: ಕಲಬುರಗಿ ನಗರ, ಕಲಬುರಗಿ ಜಿಲ್ಲೆ ಹಾಗೂ ಬೀದರ್ ಘಟಕಗಳ 251 ಹುದ್ದೆಗಳಿಗೆ 1,240 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇವರ ಪರೀಕ್ಷೆಯು 2026ರ ಅಕ್ಟೋಬರ್ 12 ರಿಂದ 14 ರವರೆಗೆ ಕಲಬುರಗಿಯ ತಾಜ್ ಸುಲ್ತಾನ್‌ಪುರದಲ್ಲಿರುವ 6ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನದಲ್ಲಿ ನಡೆಯಲಿದೆ.

ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆ:

ಪರೀಕ್ಷೆಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ತಮ್ಮ ಕರೆ ಪತ್ರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅರ್ಹ ಅಭ್ಯರ್ಥಿಗಳು ತಮಗೆ ನಿಗದಿಪಡಿಸಿದ ದಿನಾಂಕಗಳಂದು ನಿಗದಿತ ದೈಹಿಕ ಪರೀಕ್ಷಾ ಕೇಂದ್ರಗಳಿಗೆ ಕಡ್ಡಾಯವಾಗಿ ವರದಿ ಮಾಡಬೇಕೆಂದು ಪೊಲೀಸ್ ನೇಮಕಾತಿ ವಿಭಾಗವು ಸ್ಪಷ್ಟಪಡಿಸಿದೆ.

ನಾಡಿನ ಯುವಕರಿಗೆ ಭದ್ರ ಭವಿಷ್ಯ ನಿರ್ಮಿಸಲು ರಾಜ್ಯ ಸರ್ಕಾರ 3,991 ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಆರಂಭಿಸಿದೆ. ಸೆಪ್ಟೆಂಬರ್ 28ರಿಂದ 19,396 ಅರ್ಹ ಅಭ್ಯರ್ಥಿಗಳಿಗೆ ವಲಯವಾರು ದೈಹಿಕ ಪರೀಕ್ಷೆಗಳು ನಡೆಯಲಿವೆ.

ಅರ್ಹ ಅಭ್ಯರ್ಥಿಗಳು KEA ಅಧಿಕೃತ ವೆಬ್‌ಸೈಟ್‌ನಿಂದ ಕರೆ ಪತ್ರ (Call Letter) ಡೌನ್‌ಲೋಡ್… pic.twitter.com/46aQPqdEk5

— DIPR Karnataka (@KarnatakaVarthe) September 26, 2026

 

Tags: Civil Police ConstablesKarnatakaPhysical tests
Previous Post

ರಾಜ್ಯದಲ್ಲಿ ಲೋಡ್‌ ಶೆಡ್ಡಿಂಗ್ ಇಲ್ಲ. ಕೃಷಿಗೆ ಪೂರ್ಣ 7 ಗಂಟೆ ವಿದ್ಯುತ್ ಪೂರೈಕೆ : ಸಚಿವ ಕೆ.ಜೆ. ಜಾರ್ಜ್ | LOAD SHEDDING

Next Post

ಹಬ್ಬದ ಸೀಸನ್‌ನಲ್ಲೇ ಗ್ರಾಹಕರಿಗೆ ಶಾಕ್: ಅ.1 ರಿಂದ ಟಿವಿ,ಎಸಿ, ಫ್ರೀಡ್ಜ್ ಸೇರಿ ಗೃಹೋಪಯೋಗಿ ವಸ್ತುಗಳ ಬೆಲೆ ಏರಿಕೆ | Price Hike

Related Posts

ದರ್ಶನ್‌ ಪರ ವಕೀಲ ಹಸ್ಮತ್‌ ಪಾಷಾ ಹೇಳಿದ್ದೇನು?; ಪ್ರದೋಷ್‌ ಮಾಫಿ ಸಾಕ್ಷಿ ವಿಚಾರದಲ್ಲಿ ಮಹತ್ವದ ಮಾಹಿತಿ
Top Story

ದರ್ಶನ್‌ ಪರ ವಕೀಲ ಹಸ್ಮತ್‌ ಪಾಷಾ ಹೇಳಿದ್ದೇನು?; ಪ್ರದೋಷ್‌ ಮಾಫಿ ಸಾಕ್ಷಿ ವಿಚಾರದಲ್ಲಿ ಮಹತ್ವದ ಮಾಹಿತಿ

by ಪ್ರತಿಧ್ವನಿ
September 28, 2026
0

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್‌ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲಾಗಿದ್ದು, ವಿಚಾರಣಾ ನ್ಯಾಯಾಲಯದಲ್ಲಿ ಇಂದು ಅವರ ಹೇಳಿಕೆ...

Read moreDetails
HD Kumaraswamy Targets NICE: A Strategy for Political Comeback

ಬಿಡದಿ, ನೈಸ್‌ ಹಿಂದೆ ಬಿದ್ದ ಕುಮಾರಸ್ವಾಮಿ: ರಾಜಕೀಯ ಪುನರಾಗಮನದ ತಂತ್ರವೇ? HD Kumaraswamy

September 28, 2026
ಷೇರುಪೇಟೆ ಭಾರೀ ಕುಸಿತಕ್ಕೆ ಕಾರಣವೇನು? ₹8.92 ಲಕ್ಷ ಕೋಟಿ ಸಂಪತ್ತು ಕರಗಲು 5 ಪ್ರಮುಖ ಕಾರಣಗಳು

ಷೇರುಪೇಟೆ ಭಾರೀ ಕುಸಿತಕ್ಕೆ ಕಾರಣವೇನು? ₹8.92 ಲಕ್ಷ ಕೋಟಿ ಸಂಪತ್ತು ಕರಗಲು 5 ಪ್ರಮುಖ ಕಾರಣಗಳು

September 28, 2026
Breaking :2018ರ ಗಲಾಟೆ ಪ್ರಕರಣ: ಸಚಿವ ಲಕ್ಷ್ಮಣ ಸವದಿಗೆ ಕೋರ್ಟ್ ಸಮನ್ಸ್!

Breaking :2018ರ ಗಲಾಟೆ ಪ್ರಕರಣ: ಸಚಿವ ಲಕ್ಷ್ಮಣ ಸವದಿಗೆ ಕೋರ್ಟ್ ಸಮನ್ಸ್!

September 28, 2026
ಸೊಹ್ರಬುದ್ದೀನ್ ಎನ್‌ಕೌಂಟರ್  ಕೇಸ್‌ಗೆ ಸುಪ್ರೀಂ ಟ್ವಿಸ್ಟ್: ಅಮಿತ್ ಶಾ ವಿರುದ್ಧದ ಅರ್ಜಿ ತಿರಸ್ಕಾರ ಅಥವಾ ಪುರಸ್ಕಾರ ?

ಸೊಹ್ರಬುದ್ದೀನ್ ಎನ್‌ಕೌಂಟರ್  ಕೇಸ್‌ಗೆ ಸುಪ್ರೀಂ ಟ್ವಿಸ್ಟ್: ಅಮಿತ್ ಶಾ ವಿರುದ್ಧದ ಅರ್ಜಿ ತಿರಸ್ಕಾರ ಅಥವಾ ಪುರಸ್ಕಾರ ?

September 28, 2026
Next Post
Prices of household appliances to rise from October 1

ಹಬ್ಬದ ಸೀಸನ್‌ನಲ್ಲೇ ಗ್ರಾಹಕರಿಗೆ ಶಾಕ್: ಅ.1 ರಿಂದ ಟಿವಿ,ಎಸಿ, ಫ್ರೀಡ್ಜ್ ಸೇರಿ ಗೃಹೋಪಯೋಗಿ ವಸ್ತುಗಳ ಬೆಲೆ ಏರಿಕೆ | Price Hike

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada