• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, September 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಹಬ್ಬದ ಸೀಸನ್‌ನಲ್ಲೇ ಗ್ರಾಹಕರಿಗೆ ಶಾಕ್: ಅ.1 ರಿಂದ ಟಿವಿ,ಎಸಿ, ಫ್ರೀಡ್ಜ್ ಸೇರಿ ಗೃಹೋಪಯೋಗಿ ವಸ್ತುಗಳ ಬೆಲೆ ಏರಿಕೆ | Price Hike

ಪ್ರತಿಧ್ವನಿ by ಪ್ರತಿಧ್ವನಿ
September 28, 2026
in Top Story, ದೇಶ, ವಾಣಿಜ್ಯ
0
Prices of household appliances to rise from October 1
Share on WhatsAppShare on FacebookShare on Telegram

ಬೆಂಗಳೂರು : ದಸರಾ ಮತ್ತು ದೀಪಾವಳಿ (Dasara and Diwali) ಹಬ್ಬಗಳ ಸಂಭ್ರಮದಲ್ಲಿ ಹೊಸ ಗೃಹೋಪಯೋಗಿ ಉಪಕರಣಗಳನ್ನು ಖರೀದಿಸಲು ಯೋಜಿಸುತ್ತಿದ್ದ ಗ್ರಾಹಕರಿಗೆ ಉತ್ಪಾದನಾ ಕಂಪನಿಗಳು ಬೆಲೆ ಏರಿಕೆಯ (Price Hike)  ಶಾಕ್ ನೀಡಿವೆ.

ADVERTISEMENT

ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಹವಾನಿಯಂತ್ರಕಗಳು (AC), ಸ್ಮಾರ್ಟ್ ಟಿವಿಗಳು, ವಾಷಿಂಗ್ ಮೆಷಿನ್‌ಗಳು ಹಾಗೂ ರೆಫ್ರಿಜರೇಟರ್‌ಗಳ ದರವನ್ನು ಶೇಕಡಾ 5 ರಿಂದ 8 ರಷ್ಟು ಹೆಚ್ಚಿಸಲು ಪ್ರಮುಖ ಎಲೆಕ್ಟ್ರಾನಿಕ್ಸ್ ಕಂಪನಿಗಳು ನಿರ್ಧರಿಸಿವೆ. ಸಾಮಾನ್ಯವಾಗಿ ಹಬ್ಬದ ದಿನಗಳಲ್ಲಿ ಭರ್ಜರಿ ರಿಯಾಯಿತಿ ಮತ್ತು ಆಫರ್‌ಗಳನ್ನು ಎದುರುನೋಡುವ ಗ್ರಾಹಕರ ಜೇಬಿಗೆ ಇದು ನೇರ ಹೊರೆಯಾಗಲಿದೆ. 2026ನೇ ಸಾಲಿನಲ್ಲಿ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಇದು ಸತತ ಮೂರನೇ ಬಾರಿಯ ಬೆಲೆ ಏರಿಕೆಯಾಗಿದೆ.

Vishnuvardhan fans :  ವಿಷ್ಣು ವರ್ಧನ್ ಸಮಾಧಿಗಾಗಿ ಹೋರಾಟ ಮಾಡಿದ್ರೆ ಅರೆಸ್ಟ್ ಮಾಡಿಸಿದ್ರು... #pratidhvani

ಕಚ್ಚಾವಸ್ತುಗಳ ದರ ಹೆಚ್ಚಳವೇ ಬೆಲೆ ಏರಿಕೆಗೆ ಮುಖ್ಯ ಕಾರಣ

ಕಳೆದ ಕೆಲವು ತಿಂಗಳುಗಳಿಂದ ಉತ್ಪಾದನಾ ವೆಚ್ಚ ನಿರಂತರವಾಗಿ ಏರಿಕೆಯಾಗುತ್ತಿದ್ದರೂ, ಕಂಪನಿಗಳೇ ಆ ಹೊರೆಯನ್ನು ಭರಿಸಿಕೊಂಡು ಬಂದಿದ್ದವು. ಆದರೆ ಈಗ ಲಾಭದ ಪ್ರಮಾಣ ತೀವ್ರವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಈ ಹೊರೆಯನ್ನು ಗ್ರಾಹಕರ ಮೇಲೆಯೇ ವರ್ಗಾಯಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಾಮ್ರ (ಕಾಪರ್), ಉಕ್ಕು, ಅಲ್ಯೂಮಿನಿಯಂ ಹಾಗೂ ಕಚ್ಚಾ ತೈಲ ಆಧಾರಿತ ಪ್ಲಾಸ್ಟಿಕ್ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರೊಂದಿಗೆ ಪಶ್ಚಿಮ ಏಷ್ಯಾದ ಭೌಗೋಳಿಕ-ರಾಜಕೀಯ ಬಿಕ್ಕಟ್ಟು, ಅಂತಾರಾಷ್ಟ್ರೀಯ ಸಾರಿಗೆ ವೆಚ್ಚದ ಏರಿಕೆ ಮತ್ತು ರೂಪಾಯಿ ಮೌಲ್ಯದ ಏರಿಳಿತಗಳು ಕಂಪನಿಗಳ ನಿರ್ವಹಣಾ ವೆಚ್ಚವನ್ನು ತೀವ್ರವಾಗಿ ಹೆಚ್ಚಿಸಿವೆ.

DK Shivakumar: ತಲೆ ಮೇಲೆ ಕೈ ಇಟ್ಟುಕೊಂಡು ಮಹಾವೀರ್ ಜೈನ್ ಬಗ್ಗೆ ಮಾತನಾಡಿದ ಡಿಕೆಶಿ #pratidhvani

ಎಸಿ, ಟಿವಿ ಮತ್ತು ಫ್ರಿಡ್ಜ್‌ಗಳ ಮೇಲೆ ಎಷ್ಟು ಏರಿಕೆ?

ಹವಾನಿಯಂತ್ರಕಗಳ ತಯಾರಿಕೆಯಲ್ಲಿ ತಾಮ್ರ ಪ್ರಮುಖ ಕಚ್ಚಾವಸ್ತುವಾಗಿದ್ದು, ಹಿಂದೆ ಮೆಟ್ರಿಕ್ ಟನ್‌ಗೆ 8,000 ರಿಂದ 9,000 ಡಾಲರ್ ಇದ್ದ ಇದರ ಬೆಲೆ ಈಗ ಬರೋಬ್ಬರಿ 14,500 ಡಾಲರ್‌ಗೆ ತಲುಪಿದೆ. ಈ ಕಾರಣದಿಂದ ಎಸಿಗಳ ದರ ಗರಿಷ್ಠವಾಗಿ ಶೇಕಡಾ 5 ರಿಂದ 8 ರಷ್ಟು ಹೆಚ್ಚಾಗಲಿದೆ. ಉಳಿದಂತೆ ವಾಷಿಂಗ್ ಮೆಷಿನ್‌ಗಳು, ರೆಫ್ರಿಜರೇಟರ್‌ಗಳು ಮತ್ತು ಎಲ್‌ಇಡಿ ಟಿವಿಗಳ ಬೆಲೆ ಶೇಕಡಾ 2 ರಿಂದ 4 ರಷ್ಟು ಏರಿಕೆಯಾಗಲಿದೆ ಎಂದು ಮಾರುಕಟ್ಟೆ ಮೂಲಗಳು ಸ್ಪಷ್ಟಪಡಿಸಿವೆ. ಬ್ಲೂಸ್ಟಾರ್, ಗೋದ್ರೆಜ್, ಹೈಯರ್, ಡೈಕಿನ್, ಸೂಪರ್ ಪ್ಲಾಸ್ಟ್ರಾನಿಕ್ಸ್ ಹಾಗೂ ವೋಲ್ಟಾಸ್ ಕಂಪನಿಗಳು ಈಗಾಗಲೇ ಈ ದರ ಏರಿಕೆಯನ್ನು ದೃಢಪಡಿಸಿದ್ದು, ಎಲ್‌ಜಿ, ಬಾಷ್ ಮತ್ತು ಪ್ಯಾನಾಸಾನಿಕ್ ಸಂಸ್ಥೆಗಳು ಕೂಡ ಬೆಲೆ ಹೆಚ್ಚಳದ ಹಾದಿಯಲ್ಲಿವೆ.

 

DK Shivakumar: ನಿಮ್ಮ ಸರ್ಕಾರ ಸದಾ ಇರ್ಬೇಕು ಅಂದ್ರೆ ನಿಮ್ಮ ಈ ಮಗ ಅಧಿಕಾರದಲ್ಲಿ ಇರಬೇಕು #pratidhvani

ಗ್ರಾಹಕರಿಗೆ ಸಿಗಲಿದೆ ತಾತ್ಕಾಲಿಕ ರಿಲೀಫ್: ಹಳೆ ಸ್ಟಾಕ್ ಮುಗಿಯುವವರೆಗೆ ಹಳೆ ದರವೇ ಲಭ್ಯ

ದರ ಏರಿಕೆಯ ಬಿಸಿ ತಟ್ಟುತ್ತಿದ್ದರೂ ಗ್ರಾಹಕರಿಗೆ ಒಂದು ಸಮಾಧಾನಕರ ಸಂಗತಿಯಿದೆ. ಕಂಪನಿಗಳು ಹೊಸ ದರಗಳನ್ನು ಘೋಷಿಸಿದ್ದರೂ, ಡೀಲರ್‌ಗಳು ಮತ್ತು ವಿತರಕರ ಬಳಿ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲೇ ತರಿಸಿಕೊಂಡ ಹಳೆಯ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದೆ. ಸುಮಾರು ಒಂದು ತಿಂಗಳಿಂದ ಒಂದೂವರೆ ತಿಂಗಳಿಗೆ ಸಾಕಾಗುವಷ್ಟು ಹಳೆಯ ಸ್ಟಾಕ್ ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ, ದೀಪಾವಳಿ ಹಬ್ಬ ಮುಗಿಯುವವರೆಗೆ ಗ್ರಾಹಕರಿಗೆ ಹಳೆಯ ದರದಲ್ಲೇ ಉಪಕರಣಗಳು ದೊರೆಯುವ ಸಾಧ್ಯತೆಯಿದೆ. ದೀಪಾವಳಿಯ ನಂತರವೇ ಹೊಸ ದರಗಳು ಮಾರುಕಟ್ಟೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಅನ್ವಯವಾಗಲಿವೆ. ಹೀಗಾಗಿ ಹೊಸ ವಸ್ತುಗಳನ್ನು ಖರೀದಿಸುವ ಉದ್ದೇಶವಿದ್ದರೆ, ಡೀಲರ್‌ಗಳ ಬಳಿ ಹಳೆಯ ಸ್ಟಾಕ್ ಇರುವಾಗಲೇ ಖರೀದಿಸುವುದು ಜಾಣತನದ ನಿರ್ಧಾರವಾಗಲಿದೆ.

Vishnuvardhan Amrutha Mahotsava| ವಿಷ್ಣುವರ್ಧನ್ ತರಾನೇ ಡೈಲಾಗ್ ಹೇಳಿದ ಈ ಹುಟ್ಟು ಬಾಲಕ #pratidhvani

ಆಟೋಮೊಬೈಲ್ ರಂಗಕ್ಕೂ ತಟ್ಟಿದ ಬಿಸಿ: ಕಾರುಗಳ ದರವೂ ಏರಿಕೆ

ಕೇವಲ ಗೃಹೋಪಯೋಗಿ ಉಪಕರಣಗಳು ಮಾತ್ರವಲ್ಲದೆ ವಾಹನ ತಯಾರಿಕಾ ಕ್ಷೇತ್ರದಲ್ಲೂ ಬೆಲೆ ಏರಿಕೆಯ ಬಿಸಿ ಜೋರಾಗಿದೆ. ಲೋಹಗಳು ಮತ್ತು ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ತಮ್ಮ ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳ (SUV) ಬೆಲೆಯನ್ನು ಹೆಚ್ಚಿಸಲು ಮಹೀಂದ್ರಾ ಅಂಡ್ ಮಹೀಂದ್ರಾ ಸಂಸ್ಥೆ ಚಿಂತನೆ ನಡೆಸಿದೆ. ಇದೇ ವೇಳೆ ಟಾಟಾ ಮೋಟಾರ್ಸ್ ಕೂಡ ತನ್ನ ಪ್ರಯಾಣಿಕ ವಾಹನಗಳ ದರವನ್ನು ಹಂತ-ಹಂತವಾಗಿ ಹೆಚ್ಚಿಸುವುದಾಗಿ ತಿಳಿಸಿದೆ. ಇನ್ನು ದೇಶದ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆಯಾದ ಮಾರುತಿ ಸುಜುಕಿ ಕೂಡ ಕಚ್ಚಾ ತೈಲ ಹಾಗೂ ಕಚ್ಚಾವಸ್ತುಗಳ ವೆಚ್ಚ ಹೆಚ್ಚಳದಿಂದಾಗಿ ವಾಹನಗಳ ದರ ಹೆಚ್ಚಿಸಲು ಮುಂದಾಗಿದ್ದು, ಮುಂದಿನ ಎರಡು ವಾರಗಳಲ್ಲಿ ಈ ಕುರಿತು ಸ್ಪಷ್ಟ ಚಿತ್ರಣ ಹೊರಬೀಳಲಿದೆ.

ರಾಜ್ಯ ಸರ್ಕಾರದಿಂದ ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ ನೇಮಕಾತಿ : ಇಂದಿನಿಂದ ದೈಹಿಕ ಪರೀಕ್ಷೆ ಆರಂಭ | Civil Police Constable

Tags: ACPrice Hiketv
Previous Post

ರಾಜ್ಯ ಸರ್ಕಾರದಿಂದ ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ ನೇಮಕಾತಿ : ಇಂದಿನಿಂದ ದೈಹಿಕ ಪರೀಕ್ಷೆ ಆರಂಭ | Civil Police Constable

Next Post

ಪೇನ್‌ಕಿಲ್ಲರ್ ಔಷಧಿಗಳ ಬೇಕಾಬಿಟ್ಟಿ ಬಳಕೆಗೆ ಕಡಿವಾಣ : ಕಿಡ್ನಿ ಹಾನಿಯ ಎಚ್ಚರಿಕೆ ನೀಡಿದ ಸಿಡಿಎಸ್‍ಸಿಒ | CDSCO

Related Posts

ದರ್ಶನ್‌ ಪರ ವಕೀಲ ಹಸ್ಮತ್‌ ಪಾಷಾ ಹೇಳಿದ್ದೇನು?; ಪ್ರದೋಷ್‌ ಮಾಫಿ ಸಾಕ್ಷಿ ವಿಚಾರದಲ್ಲಿ ಮಹತ್ವದ ಮಾಹಿತಿ
Top Story

ದರ್ಶನ್‌ ಪರ ವಕೀಲ ಹಸ್ಮತ್‌ ಪಾಷಾ ಹೇಳಿದ್ದೇನು?; ಪ್ರದೋಷ್‌ ಮಾಫಿ ಸಾಕ್ಷಿ ವಿಚಾರದಲ್ಲಿ ಮಹತ್ವದ ಮಾಹಿತಿ

by ಪ್ರತಿಧ್ವನಿ
September 28, 2026
0

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್‌ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲಾಗಿದ್ದು, ವಿಚಾರಣಾ ನ್ಯಾಯಾಲಯದಲ್ಲಿ ಇಂದು ಅವರ ಹೇಳಿಕೆ...

Read moreDetails
ಷೇರುಪೇಟೆ ಭಾರೀ ಕುಸಿತಕ್ಕೆ ಕಾರಣವೇನು? ₹8.92 ಲಕ್ಷ ಕೋಟಿ ಸಂಪತ್ತು ಕರಗಲು 5 ಪ್ರಮುಖ ಕಾರಣಗಳು

ಷೇರುಪೇಟೆ ಭಾರೀ ಕುಸಿತಕ್ಕೆ ಕಾರಣವೇನು? ₹8.92 ಲಕ್ಷ ಕೋಟಿ ಸಂಪತ್ತು ಕರಗಲು 5 ಪ್ರಮುಖ ಕಾರಣಗಳು

September 28, 2026
ಸೊಹ್ರಬುದ್ದೀನ್ ಎನ್‌ಕೌಂಟರ್  ಕೇಸ್‌ಗೆ ಸುಪ್ರೀಂ ಟ್ವಿಸ್ಟ್: ಅಮಿತ್ ಶಾ ವಿರುದ್ಧದ ಅರ್ಜಿ ತಿರಸ್ಕಾರ ಅಥವಾ ಪುರಸ್ಕಾರ ?

ಸೊಹ್ರಬುದ್ದೀನ್ ಎನ್‌ಕೌಂಟರ್  ಕೇಸ್‌ಗೆ ಸುಪ್ರೀಂ ಟ್ವಿಸ್ಟ್: ಅಮಿತ್ ಶಾ ವಿರುದ್ಧದ ಅರ್ಜಿ ತಿರಸ್ಕಾರ ಅಥವಾ ಪುರಸ್ಕಾರ ?

September 28, 2026
Rohit Sharma slips and falls from team bus steps Video goes viral

ಟೀಮ್ ಬಸ್ ಮೆಟ್ಟಿಲಿನಿಂದ ಜಾರಿ ಬಿದ್ದ ರೋಹಿತ್ ಶರ್ಮಾ: ವಿಡಿಯೋ ವೈರಲ್ | Rohit Sharma

September 28, 2026
Havent received your income tax refund yet

ಆದಾಯ ತೆರಿಗೆ ರಿಫಂಡ್ ಇನ್ನೂ ಬಂದಿಲ್ಲವೇ? ದೂರು ನೀಡುವ ಮುನ್ನ ಈ 3 ವಿಷಯ ಪರಿಶೀಲಿಸಿ | ITR

September 28, 2026
Next Post
Curbing indiscriminate use of painkillers CDSCO warns of kidney damage

ಪೇನ್‌ಕಿಲ್ಲರ್ ಔಷಧಿಗಳ ಬೇಕಾಬಿಟ್ಟಿ ಬಳಕೆಗೆ ಕಡಿವಾಣ : ಕಿಡ್ನಿ ಹಾನಿಯ ಎಚ್ಚರಿಕೆ ನೀಡಿದ ಸಿಡಿಎಸ್‍ಸಿಒ | CDSCO

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada