• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಆರ್‌ಸಿಬಿ ಯಾವಾಗಲೂ ನನ್ನ ಡಿಎನ್‌ಎಯ ಭಾಗವಾಗಿ ಉಳಿದಿದೆ : ಟೀಂ ಮಾರಾಟಕ್ಕೆ ಮಲ್ಯ ಹೇಳಿದ್ದೇನು..?

ನಾನು 2008ರಲ್ಲಿ ಫ್ರಾಂಚೈಸಿಯನ್ನು 450 ಕೋಟಿ ರೂಪಾಯಿಗೆ ಖರೀದಿಸಿದೆ. ಆಗ ಬಹುತೇಕರು ನನ್ನನ್ನು ನೋಡಿ ನಕ್ಕಿದ್ದರು ಎಂದ ನೆನಪಿಸಿಕೊಂಡ ಮಲ್ಯ..

ಪ್ರತಿಧ್ವನಿ by ಪ್ರತಿಧ್ವನಿ
March 26, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಿದೇಶ
0
ಆರ್‌ಸಿಬಿ ಯಾವಾಗಲೂ ನನ್ನ ಡಿಎನ್‌ಎಯ ಭಾಗವಾಗಿ ಉಳಿದಿದೆ : ಟೀಂ ಮಾರಾಟಕ್ಕೆ ಮಲ್ಯ ಹೇಳಿದ್ದೇನು..?
Share on WhatsAppShare on FacebookShare on Telegram

ಬೆಂಗಳೂರು : ಐಪಿಎಲ್‌ ಹಬ್ಬ ಶುರುವಾಗೋಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಇದಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (KSCA) ಸಿದ್ಧವಾಗಿದೆ. ಈ ನಡುವೆವೇ ಕ್ರಿಕೆಟ್‌ ತಂಡಗಳ ಹರಾಜು ಪ್ರಕ್ರಿಯೆಯು ನಡೆಯುತ್ತಿದೆ.

ADVERTISEMENT
Budget Session: ನಿಮ್ಮ ಸಹಾಯಕ್ಕೆ ಬರ್ತೀನಿ ಎಂದ ಸುನಿಲ್‌ ಕುಮಾರ್.. ಸಹಾಯ ಬೇಡ ಅಂತಾ ಕಾಲೆಳೆದ ಸಿದ್ರಾಮಯ್ಯ

ಚೊಚ್ಚಲ ಐಪಿಎಲ್ ಚಾಂಪಿಯನ್ಸ್ ‘ರಾಜಸ್ಥಾನ್ ರಾಯಲ್ಸ್’ (Rajasthan Royals) ಫ್ರಾಂಚೈಸಿ ಈಗಾಗಲೇ ದಾಖಲೆಯ ದುಬಾರಿ ಮೊತ್ತಕ್ಕೆ ಮಾರಾಟವಾಗಿದೆ. ಅಮೆರಿಕ ಮೂಲದ ವಾಣಿಜ್ಯೋದ್ಯಮಿ ಕಲ್ ಸೋಮಾನಿ (Kal Somani) ನೇತೃತ್ವದ ಹೂಡಿಕೆದಾರರ ಸಮೂಹವು ಬರೋಬ್ಬರಿ 1.63 ಬಿಲಿಯನ್ ಡಾಲರ್ (ಅಂದಾಜು 15,300 ಕೋಟಿ ರೂಪಾಯಿ) ನೀಡಿ ರಾಜಸ್ಥಾನ್ ತಂಡವನ್ನು ಖರೀದಿಸಿದೆ.

ಇದಾದ ಬೆನ್ನಲ್ಲೇ ಕ್ರೀಡಾಭಿಮಾನಿಗಳು ಎದುರು ನೋಡುತ್ತಿರುವ 19ನೇ ಆವೃತ್ತಿಯ ಐಪಿಎಲ್​ ಟೂರ್ನಿಗೂ ಮುನ್ನವೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ( RCB ) ತಂಡದ ಮಾರಾಟ ಪ್ರಕ್ರಿಯೆ ಮುಗಿದಿದೆ. ಆರ್​ಸಿಬಿ ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್  ಸ್ವಾಧೀನಪಡಿಸಿಕೊಂಡಿದ್ದು, ಬರೋಬ್ಬರಿ 16,706 ಕೋಟಿ ರೂ.ಗಳಿಗೆ ಖರೀದಿ ಮಾಡಿದೆ.

ಇದನ್ನೂ ಓದಿ : ಚುನಾವಣೆಯಲ್ಲಿ ಇವಿಎಂ ಬಾಯ್, ಬ್ಯಾಲೆಟ್ ಹಾಯ್: ಕರ್ನಾಟಕದಲ್ಲಿ ಐತಿಹಾಸಿಕ ವಿಧೇಯಕ ಅಂಗೀಕಾರ!

ಬಿರ್ಲಾ ಗ್ರೂಪ್ ಜೊತೆಗೆ, ಇತರೆ ಮೂರು ಕಂಪನಿಗಳು ಕೂಡ ಆರ್​ಸಿಬಿ ತಂಡದ ಷೇರುಗಳನ್ನು ಖರೀದಿ ಮಾಡಿವೆ. ಇನ್ನು ಮುಂದೆ ಆರ್​ಸಿಬಿಗೆ ಹೊಸ ಮಾಲೀಕತ್ವದಲ್ಲಿ ತನ್ನ ಐಪಿಎಲ್​ ಪ್ರಯಾಣವನ್ನು ಆರಂಭಿಸಲಿದೆ.

ಇನ್ನೂ ಇದೀಗ ಆರ್‌ಸಿಬಿಯ ಮಾರಾಟದ ಕುರಿತು ಮಾಜಿ ಮಾಲೀಕ ಹಾಗೂ ಕಿಂಗ್‌ ಫಿಶರ್‌ನ ವಿಜಯ್‌ ಮಲ್ಯ ನೂತನ ಆಡಳಿತ ಮಂಡಳಿಗೆ, ಆರ್‌ಸಿಬಿಯ ಹೊಸ ಮಾಲೀಕರಿಗೆ ನನ್ನ ಹೃತ್ಪೂರ್ವಕವಾಗಿ ಅಭಿನಂದನೆಗಳು. ಐಪಿಎಲ್‌ನಲ್ಲಿ ಅತ್ಯಂತ ಅಮೂಲ್ಯವಾದ ಫ್ರಾಂಚೈಸಿಯನ್ನು ಖರೀದಿಸಿದ ನಿಮಗೆ ಶುಭ ಹಾರೈಸುತ್ತೇನೆ. ನಾನು 2008ರಲ್ಲಿ ಫ್ರಾಂಚೈಸಿಯನ್ನು 450 ಕೋಟಿ ರೂಪಾಯಿಗೆ ಖರೀದಿಸಿದೆ. ಆಗ ಬಹುತೇಕರು ನನ್ನನ್ನು ನೋಡಿ ನಕ್ಕಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಆಗ ನಾನು ಮಾಡಿದ್ದ  ಹೂಡಿಕೆ ವ್ಯರ್ಥ ಎಂದು ಜರಿದಿದ್ದರು. ರಾಯಲ್ ಚಾಲೆಂಜ್ ಬ್ರ್ಯಾಂಡ್ ಅನ್ನು ಕಟ್ಟಬೇಕೆಂದು ನನಗೆ ಬಹಳ ತುಡಿತ ಇತ್ತು. ಈ ಕಾರಣದಿಂದ ನಾನು ತಂಡಕ್ಕೆ ಆರ್‌ಸಿಬಿ ಎಂದು ಹೆಸರಿಸಿದ್ದೆ. ನನ್ನ 450 ಕೋಟಿ ರೂಪಾಯಿ ಹೂಡಿಕೆ ಈಗ 16,500 ಕೋಟಿ ರೂಪಾಯಿಗಳಿಗೆ ಬೆಳೆದಿರುವುದನ್ನು ನೋಡಲು ನನಗೆ ಸಾಕಷ್ಟು ಸಂತೋಷವಾಗುತ್ತಿದೆ. ಆರ್‌ಸಿಬಿ ಯಾವಾಗಲೂ ನನ್ನ ಡಿಎನ್‌ಎಯ ಭಾಗವಾಗಿ ಉಳಿಯುತ್ತದೆ ಎಂದು ಮಲ್ಯ ತಂಡದ ಕುರಿತು ಅಭಿಮಾನದ ಮಾತುಗಳನ್ನಾಡಿದ್ದಾರೆ.

ಆರ್​​​ಸಿಬಿ ತಂಡದ ಆಟಗಾರರು ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಎಲ್ಲಾ ಆರ್‌ಸಿಬಿ ಅಭಿಮಾನಿಗಳಿಗೆ, ಕೃತಜ್ಞತೆಯ ಜೊತೆಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ದಯವಿಟ್ಟು ಬೆಂಗಳೂರಿನ ಸಿಂಹ ಆರ್‌ಸಿಬಿಯನ್ನು ಬೆಂಬಲಿಸುವುದನ್ನು ಮುಂದುವರಿಸಿ, ನಮಸ್ಕಾರ ಎಂದು ವಿಜಯ್‌ ಮಲ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡು ಮನವಿ ಮಾಡಿಕೊಂಡಿದ್ದಾರೆ.

Tags: Aditya Birla GroupBlack Stone CompanyinvestmentsKal SomaniKSCAPratidhvaniRajasthan RoyalsRCBRCB Cricket TeamRCB CRICKETERSRCB fansRCB ownersVijay MallyaVirat Kohli
Previous Post

ಐಪಿಎಲ್ ಪಂದ್ಯಕ್ಕಾಗಿ ಮೆಟ್ರೋ ಸೇವೆ ವಿಸ್ತರಣೆ: ಇಲ್ಲಿದೆ ಹೊಸ ವೇಳಾಪಟ್ಟಿ

Next Post

ಎರಡು ಕ್ಷೇತ್ರಗಳಲ್ಲೂ ಕೈ ಅಭ್ಯರ್ಥಿಗಳಿಗೆ ಜಯ : ಸಚಿವೆ ಹೆಬ್ಬಾಳ್ಕರ್ ಕೊಟ್ಟ ಕಾರಣವೇನು..?

Related Posts

ಅಮೆರಿಕ–ಇರಾನ್ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ?
ವಿದೇಶ

ಅಮೆರಿಕ–ಇರಾನ್ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ?

by ಪ್ರತಿಧ್ವನಿ
April 15, 2026
0

ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷಕ್ಕೆ ಅಂತ್ಯ ತರಲು ಅಮೇರಿಕಾ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಪ್ರಯತ್ನಗಳು ಮತ್ತೆ ಚುರುಕುಗೊಳ್ಳುತ್ತಿರುವ ಸೂಚನೆಗಳು ಗೋಚರಿಸುತ್ತಿವೆ. ಇತ್ತೀಚೆಗೆ ನಡೆದ ಮಾತುಕತೆಗಳು ಸ್ಪಷ್ಟ...

Read moreDetails
ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

April 14, 2026
ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ

ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ

April 14, 2026
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
Next Post
ಎರಡು ಕ್ಷೇತ್ರಗಳಲ್ಲೂ ಕೈ ಅಭ್ಯರ್ಥಿಗಳಿಗೆ ಜಯ : ಸಚಿವೆ ಹೆಬ್ಬಾಳ್ಕರ್ ಕೊಟ್ಟ ಕಾರಣವೇನು..?

ಎರಡು ಕ್ಷೇತ್ರಗಳಲ್ಲೂ ಕೈ ಅಭ್ಯರ್ಥಿಗಳಿಗೆ ಜಯ : ಸಚಿವೆ ಹೆಬ್ಬಾಳ್ಕರ್ ಕೊಟ್ಟ ಕಾರಣವೇನು..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada