• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, June 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮದ್ವೆ ಬಳಿಕ ಕ್ಯಾಮೆರಾ ಮುಂದೆ ರಶ್ಮಿಕಾ! : ಬ್ರೇಕ್‌ಲೆಸ್‌ ಶೂಟ್…! ಇದು ಬಿಗ್‌ ಅಪ್‌ಡೇಟ್‌

ರಶ್ಮಿಕಾ ಮಂದಣ್ಣರಿಂದ ತಮ್ಮ ಫ್ಯಾನ್ಸ್‌ ಗೆ ಬ್ಯಾಕ್ ಟು ಬ್ಯಾಕ್ ಗುಡ್‌ ನ್ಯೂಸ್‌..!

ಪ್ರತಿಧ್ವನಿ by ಪ್ರತಿಧ್ವನಿ
June 10, 2026
in Top Story, ಇದೀಗ, ಕರ್ನಾಟಕ, ಸಿನಿಮಾ
0
ಮದ್ವೆ ಬಳಿಕ ಕ್ಯಾಮೆರಾ ಮುಂದೆ ರಶ್ಮಿಕಾ! : ಬ್ರೇಕ್‌ಲೆಸ್‌ ಶೂಟ್…! ಇದು ಬಿಗ್‌ ಅಪ್‌ಡೇಟ್‌
Share on WhatsAppShare on FacebookShare on Telegram

ಬೆಂಗಳೂರು : ಸಾಮಾನ್ಯವಾಗಿ ಸೆಬ್ರಿಟೀಸ್‌ ಮದ್ವೆ ಬಳಿಕ ಸಿನಿಮಾಗಳಿಂದ ಬ್ರೇಕ್‌ ಪಡೆದುಕೊಳ್ಳೋದು ಸಹಜ. ಅಷ್ಟೇ ಅಲ್ಲ, ಕೆಲವರಂತೂ ಚಿತ್ರರಂಗದಿಂದ ಸ್ವಲ್ಪ ದೂರವೇ ಇರುತ್ತಾರೆ. ಆದರೆ, ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ಮಾತ್ರ ಮದ್ವೆ ನಂತರವೂ ಬ್ರೇಕ್‌ ಪಡೆಯದೆ ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ.

ADVERTISEMENT
Basavaraj Bommai : ದೇವೇಗೌಡರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿ ಕಾಂಗ್ರೆಸ್ ದೊಡ್ಡ ಅನ್ಯಾಯ ಮಾಡಿದೆ..!

ಹೌದು, ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ‘ಮೈಸಾ’ ಸಿನಿಮಾದ 5 ನೇ ಶೆಡ್ಯೂಲ್ ಯಶಸ್ವಿಯಾಗಿ ಮುಗಿದಿದೆ. ಶೀಘ್ರದಲ್ಲೇ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಬುಡಕಟ್ಟು ಜನಾಂಗದ ಹಿನ್ನೆಲೆಯ ಹೈ-ವೋಲ್ಟೇಜ್ ಆಕ್ಷನ್ ಡ್ರಾಮಾ ಇದಾಗಿದೆ. ಸದ್ಯ ಈ ಸಿನಿಮಾ ಮೇಲೆ ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ತಮ್ಮ ಫ್ಯಾನ್ಸ್‌ ಗೆ ಬ್ಯಾಕ್ ಟು ಬ್ಯಾಕ್ ಗುಡ್‌ ನ್ಯೂಸ್‌ ಕೊಡುತ್ತಿದ್ದಾರೆ. ರಶ್ಮಿಕಾ ಇತ್ತೀಚೆಗಷ್ಟೇ ವಿಜಯ್‌ ದೇವರಕೊಂಡ ಅವರ ಜೊತೆ ಹಸೆಮಣೆ ಏರಿ ಹೊಸ ಬದುಕಿಗೆ ಕಾಲಿಟ್ಟಿದ್ದರು. ಮದುವೆ ಬಳಿಕ ರಶ್ಮಿಕಾ ಬ್ರೇಕ್‌ ಪಡೆಯದೆ, ಒಪ್ಪಿಕೊಂಡಿದ್ದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಅದೇ ಈ ಹೊತ್ತಿನ ವಿಶೇಷ. ವಿವಾಹದ ಬಳಿಕವು ಅವರು ಸಿನಿಮಾಗಳಲ್ಲಿ ಬಿಝಿಯಾಗುತ್ತಿರುವುದು ಸಹಜವಾಗಿಯೇ ಅವರ ಅಭಿಮಾನಿಗಳಿಗೆ ಖುಷಿ ಆಗುತ್ತಿದೆ. ಇನ್ನು, ಒಪ್ಪಿಕೊಂಡ ಸಿನಿಮಾಗಳನ್ನು ಬೇಗ ಮುಗಿಸಿಕೊಡಬೇಕು ಎಂಬ ಹಿನ್ನೆಲೆಯಲ್ಲಿ ಬ್ರೇಕ್‌ ಪಡೆಯದೆ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ : ಗೃಹಲಕ್ಷ್ಮಿ ಯೋಜನೆಯಲ್ಲಿ ಮಹತ್ವದ ಬದಲಾವಣೆ : ಸಾವಿರಾರು ಫಲಾನುಭವಿಗಳಿಗೆ ಬಿಗ್‌ ಶಾಕ್‌..!

ಇನ್ನು, ಖ್ಯಾತ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಬಯೋಪಿಕ್‌ನಲ್ಲೂ ಕನ್ನಡದ ನಟಿ ರಶ್ಮಿಕಾ ನಟಿಸಲಿದ್ದಾರೆ ಎಂಬ ಬಿಸಿಬಿಸಿ ಸುದ್ದಿ ಇದೆ. ಆ ನಡುವೆಯೇ, ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ಯಾನ್ ಇಂಡಿಯಾ ಬಿಗ್ ಪ್ರಾಜೆಕ್ಟ್ ‘ಮೈಸಾ’ ಚಿತ್ರದ ಕೆಲಸಕ್ಕೆ ಹಾಜರಾಗಿದ್ದಾರೆ. ಅಂದಹಾಗೆ, ಇದು ಬುಡಕಟ್ಟು ಜನಾಂಗದ ಹಿನ್ನೆಲೆಯುಳ್ಳ ಆಕ್ಷನ್ ಡ್ರಾಮಾ. ಈಗಾಗಲೆ ಐದನೇ ಹಂತದ ಚಿತ್ರೀಕರಣ ಮುಗಿದಿದೆ.

ಈ ಸಿನಿಮಾದ ಐದನೇ ಶೆಡ್ಯೂಲ್‌ ಮುಗಿಯುತ್ತಿರುವಂತೆಯೇ ನಿರ್ಮಾಪಕ ಅಜಯ್ ಸಾಯಿಪುರೆಡ್ಡಿ ಅಭಿಮಾನಿಗಳಿಗೆ ಮತ್ತೊಂದು ಬಿಗ್ ಅಪ್‌ಡೇಟ್ ನೀಡಿದ್ದಾರೆ. ಸದ್ಯದಲ್ಲೇ ಚಿತ್ರದ ಅಧಿಕೃತ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ. ರಶ್ಮಿಕಾ ತಮ್ಮ ಮದ್ವೆ ಬಳಿಕ ಅಪ್‌ಡೇಟ್ ಅಗುತ್ತಿರುವ ಸಿನಿಮಾ ಇದು. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

‘ಮೈಸಾ’ ಬಿಗ್‌ ಬಜೆಟ್‌ ಚಿತ್ರ. ರವೀಂದ್ರ ಪುಲ್ಲೆ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ‘ಅನ್‌ಫಾರ್ಮುಲಾ ಫಿಲ್ಮ್ಸ್’ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಚಿತ್ರಕ್ಕೆ ಜೇಕ್ಸ್ ಬಿಜಾಯ್ ಸಂಗೀತವಿದೆ. ಈ ಚಿತ್ರದ ಮತ್ತೊಂದು ವಿಶೇಷವೆಂದರೆ, ಕನ್ನಡದ ತಾರಕ್ ಪೊನ್ನಪ್ಪ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Tags: Actor Vijay DevarakondaActress Rashmika MandannaCinema newsM S subbalakshmiMaisa MoviePratidhvaniSandalwood Actrees
Previous Post

BREAKING NEWS : ಟಿಎಂಸಿಯಲ್ಲಿ ತಣ್ಣಗಾಗದ ಬಂಡಾಯದ ಬಿರುಗಾಳಿ : ಆಪ್ತೆ ಸುಷ್ಮಿತಾ ದೇವ್‌ರಿಂದ ಮಮತಾ ಬ್ಯಾನರ್ಜಿಗೆ ಬಿಗ್‌ ಶಾಕ್..!

Next Post

Shubha Poonja: ವಿಚ್ಛೇದನ ವದಂತಿ ಬಗ್ಗೆ ಮೌನ ಮುರಿದ ನಟಿ ಶುಭಾ ಪೂಂಜಾ

Related Posts

ಶಬರಿಮಲೆಯಲ್ಲಿ ಎಐ ತಂತ್ರಜ್ಞಾನ ಅಳವಡಿಕೆ: ಭಕ್ತರ ದರ್ಶನಕ್ಕೆ ಮತ್ತಷ್ಟು ಸುಗಮ ವ್ಯವಸ್ಥೆ
Top Story

ಶಬರಿಮಲೆಯಲ್ಲಿ ಎಐ ತಂತ್ರಜ್ಞಾನ ಅಳವಡಿಕೆ: ಭಕ್ತರ ದರ್ಶನಕ್ಕೆ ಮತ್ತಷ್ಟು ಸುಗಮ ವ್ಯವಸ್ಥೆ

by ಪ್ರತಿಧ್ವನಿ
June 13, 2026
0

ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಶಬರಿಮಲೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ತಿರುವಿತಾಂಕುರ್ ದೇವಸ್ವಂ ಬೋರ್ಡ್ (ಟಿಡಿಬಿ) ಮಹತ್ವದ ನಿರ್ಧಾರ ಕೈಗೊಂಡಿದೆ....

Read moreDetails
ರಾಜಕೀಯ ಚದುರಂಗದಲ್ಲಿ ಯಾವ ಕಾಯಿ ನಡೆಸ್ತಾರೆ ಅಂತಾ ಯಾರೂ ಹೇಳಲ್ಲ: ಸಿಎಂ ಡಿಕೆಶಿ

ಅಧಿಕಾರಿಗಳಿಗೆ ಸಿಎಂ ಡಿಕೆ ಶಿವಕುಮಾರ್ ಖಡಕ್ ಸಂದೇಶ: ‘ಲಂಚಕ್ಕೆ ಬ್ರೇಕ್, ಡ್ರಗ್ಸ್‌ಗೆ ಕಡಿವಾಣ, ಜನಸೇವೆಗೆ ಆದ್ಯತೆ’

June 13, 2026
ಇರಾನ್ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತಿಮ ಯಾತ್ರೆಗೆ ದಿನಾಂಕ ನಿಗದಿ:ವಿಧಿವಿಧಾನ ಹೀಗಿರಲಿದೆ

ಇರಾನ್ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತಿಮ ಯಾತ್ರೆಗೆ ದಿನಾಂಕ ನಿಗದಿ:ವಿಧಿವಿಧಾನ ಹೀಗಿರಲಿದೆ

June 13, 2026
‘ಜೋಡಿ ನಂ.1’ನಾ ಅಥವಾ ‘ಡಿವೋರ್ಸ್ ನಂ.1’ನಾ? ರಿಯಾಲಿಟಿ ಶೋ ವಿರುದ್ಧ ವೀಕ್ಷಕರ ಆಕ್ರೋಶ

‘ಜೋಡಿ ನಂ.1’ನಾ ಅಥವಾ ‘ಡಿವೋರ್ಸ್ ನಂ.1’ನಾ? ರಿಯಾಲಿಟಿ ಶೋ ವಿರುದ್ಧ ವೀಕ್ಷಕರ ಆಕ್ರೋಶ

June 13, 2026
Priyanka Kharge: ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನೀತಿ 2025–32ಕ್ಕೆ ಅನುಮೋದನೆ

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ 50 ಕೃತಕ ಬುದ್ಧಿಮತ್ತೆ ಪ್ರಯೋಗಾಲಯ: ಭವಿಷ್ಯಕ್ಕಾಗಿ ಮಹತ್ವದ ಹೆಜ್ಜೆ

June 13, 2026
Next Post
Shubha Poonja: ವಿಚ್ಛೇದನ ವದಂತಿ ಬಗ್ಗೆ ಮೌನ ಮುರಿದ ನಟಿ ಶುಭಾ ಪೂಂಜಾ

Shubha Poonja: ವಿಚ್ಛೇದನ ವದಂತಿ ಬಗ್ಗೆ ಮೌನ ಮುರಿದ ನಟಿ ಶುಭಾ ಪೂಂಜಾ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada