ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಕೊಟ್ಟರೆ ಗ್ಯಾರಂಟಿ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.

ಡಿಕೆಶಿ ಹನಿ ಟ್ರ್ಯಾಪ್ ಮೂಲಕ ನನ್ನ ಸಿಡಿ ಮಾಡಿಸಿದ್ದಾರೆ ಇದನ್ನು ಸಿಬಿಐ ತನಿಖೆ ಮಾಡಬೇಕು ಎಂದು ಶಾಸಕ ರಮೇಶ್ ಜಾರಕಿಹೊಳಿ ಆರೋಪಕ್ಕೆ, ತುಮಕೂರು ನಗರದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಶಾಸಕರ ಬಳಿ ಇರುವ ದಾಖಲೆಗಳನ್ನು ಕೊಟ್ಟರೆ, ಅದರ ಆಧಾರದ ಮೇಲೆ ಪೊಲೀಸರಿಂದ ತನಿಖೆ ಮಾಡಿಸಲಾಗುವುದು. ಅನ್ಯಾಯವಾಗಿದ್ದರೆ ನ್ಯಾಯ ಒದಗಿಸೋಣ ಎಂದು ಹೇಳಿದ್ದಾರೆ.