• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಗಲ್ಫ್‌ ರಾಷ್ಟ್ರಗಳಿಗೂ ಹರಡುತ್ತಾ ಇಸ್ರೇಲ್-‌ಗಾಝಾ ಯುದ್ಧ? ಯಮೆನ್‌ ಸಂಘಟನೆಯಿಂದ ರಣರಂಗ ಪ್ರವೇಶ!

ಪ್ರತಿಧ್ವನಿ by ಪ್ರತಿಧ್ವನಿ
November 1, 2023
in Top Story, ವಿದೇಶ
0
ಗಲ್ಫ್‌ ರಾಷ್ಟ್ರಗಳಿಗೂ ಹರಡುತ್ತಾ ಇಸ್ರೇಲ್-‌ಗಾಝಾ ಯುದ್ಧ? ಯಮೆನ್‌ ಸಂಘಟನೆಯಿಂದ ರಣರಂಗ ಪ್ರವೇಶ!
Share on WhatsAppShare on FacebookShare on Telegram

ಇಸ್ರೇಲ್‌ ಹಮಾಸ್‌ ನಡುವಿನ ಸಂಘರ್ಷ ಗಲ್ಫ್‌ ರಾಜ್ಯಗಳಿಗೂ ವಿಸ್ತರಣೆಯಾಗುತ್ತದಾ ಎಂಬ ಆತಂಕ ಎದುರಾಗಿದೆ. ಸೌದಿ, ಇರಾನ್‌, ಯಮೆನ್‌, ಲೆಬನಾನ್‌ಗಳು ಪ್ಯಾಲೆಸ್ತೀನ್‌ಗೆ ಬೆಂಬಲ ಘೋಷಣೆ ಮಾಡಿರುವುದು ಮಾತ್ರವಲ್ಲದೆ ನೇರವಾಗಿ ಯುದ್ಧದ ಭಾಗವಾಗಬಹುದಾ ಎಂಬ ಚರ್ಚೆಗಳು ಆರಂಭವಾಗಿದೆ.

ADVERTISEMENT

ಈಗಾಗಲೇ ಲೆಬನಾನ್‌, ಹಿಝ್ಬುಲ್ಲಾ ಸಂಘಟನೆ ಇಸ್ರೇಲ್‌ ವಿರುದ್ಧ ದಾಳಿಗೆ ಸಜ್ಜಾಗಿದ್ದರೆ, ಇನ್ನೊಂದೆಡೆ ಯೆಮನ್‌ ನ ಹೌಥಿ ಬಂಡುಕೋರ ಪಡೆಯು ಫೆಲೆಸ್ತೀನ್‌ ಪರವಾಗಿ ರಾಕೆಟ್‌ ದಾಳಿಯನ್ನು ನಡೆಸಿದ್ದು, ಇಸ್ರೇಲ್‌ ಮೇಲೆ ದಾಳಿ ನಡೆಸಿದೆ ಎಂದು ಹೇಳಿದೆ.

ಯುದ್ಧ ನಡೆಯುತ್ತಿರುವ ಸ್ಥಳದಿಂಧ 1000 ಮೈಲಿಗಳಾಚೆಗೆ ತಮ್ಮ ಅಧಿಕಾರ ಕೇಂದ್ರ ಇದ್ದರೂ ಹೌಥಿಗಳು ಈ ಯುದ್ಧದಲ್ಲಿ ಭಾಗಿಯಾಗಲು ನಿರ್ಧರಿಸಿದ್ದೇ ಅಲ್ಲದೆ ತಾವು ಇಸ್ರೇಲ್‌ನತ್ತ ಡ್ರೋನ್‌ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿದ್ದಾಗಿ ಹೇಳಿಕೊಂಡಿದ್ದಾರೆ.

 ತಮ್ಮ ಸಂಘಟನೆಯು ಬ್ಯಾಲಿಸ್ಟಿಕ್‌ ಕ್ಷಿಪಣಿಗಳನ್ನು ಹಾಗೂ ಡ್ರೋನ್‌ಗಳನ್ನು ಇಸ್ರೇಲ್‌ನತ್ತ ಉಡಾಯಿಸಿರುವುದಾಗಿ ಹೌಥಿ ಮಿಲಿಟರಿ ವಕ್ತಾರ ಯಹ್ಯಾ ಸರೀ ಹೇಳಿದ್ದಾರೆ.

ಅಲ್ಲದೆ, ಫೆಲೆಸ್ತೀನೀಯರ ವಿಜಯಕ್ಕೆ ಸಹಾಯ ಮಾಡಲು ಇಂತಹ ಇನ್ನಷ್ಟು ದಾಳಿಗಳು ನಡೆಯಲಿವೆ ಎಂದಿದ್ದಾರೆ.

ಸಂಘರ್ಷ ಆರಂಭವಾದಂದಿನಿಂದ ಇಸ್ರೇಲ್‌ ಮೇಲೆ ನಮ್ಮ ಮೂರನೇ ದಾಳಿ ಎಂದು ಅವರು ಹೇಳಿದ್ದಾರೆ.

ಇಸ್ರೇಲ್‌ನ ಆಕ್ರಮಣ ನಿಲ್ಲುವ ತನಕ ಹೌಥಿಗಳ ದಾಳಿ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.

ಹೌಥಿಗಳ ದಾಳಿಯನ್ನು ಸಹಿಸುವುದು ಅಸಾಧ್ಯ ಎಂದು ಇಸ್ರೇಲ್‌ನ ರಾಷ್ಟ್ರೀಯ ಸುರಕ್ಷತಾ ಸಲಹೆಗಾರ ಝಾಚಿ ಹನೆಗ್ಬಿ ಹೇಳಿದ್ದಾರೆ. ಆದರೆ ಇಸ್ರೇಲ್‌ ಇದಕ್ಕೆ ಹೇಗೆ ಪ್ರತಿಕ್ರಿಯೆ ನೀಡಲಿದೆ ಎಂದು ಅವರು ತಿಳಿಸಲು ನಿರಾಕರಿಸಿದ್ದಾರೆ.

ಹೌಥಿಗಳ ಕ್ಷಿಪಣಿ ದಾಳಿಗಳು ಸೌದಿ ಅರೇಬಿಯಾ, ಜೋರ್ಡಾನ್ ಆತಂಕಕ್ಕೂ ಕಾರಣವಾಗಿದ್ದು, ಹೌಥಿಗಳ ಕ್ಷಿಪಣಿಗಳು ಯೆಮನ್‌ನಿಂದ ಸೌದಿ ಅರೇಬಿಯಾದ ಆಗಸದಲ್ಲಿ ರೆಡ್‌ ಸೀ ಸಮೀಪದಿಂದ ಸಾಗಿ ಜೋರ್ಡಾನ್‌ ದಾಟಿ ಇಸ್ರೇಲ್‌ ತಲುಪುತ್ತವೆ.‌

ಹೌಥಿಗಳೊಂದಿಗೆ ಸೌದಿ ಅರೇಬಿಯಾಗೂ ಸಂಘರ್ಷ ಇರುವುದರಿಂದ ಹೌಥಿಗಳ ದಾಳಿಯ ಬಗ್ಗೆ ಸೌದಿ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ

Tags: dronesfire barrageHouthiIsraelIsrael-Hamas warmissilesrebelsYemen
Previous Post

ರಮೇಶ್ ಜಾರಕಿಹೊಳಿ ‘ಅಶ್ಲೀಲ ಸಿಡಿ’ ಪ್ರಕರಣ : ಅಗತ್ಯ ದಾಖಲೆ ನೀಡಿದರೆ ತನಿಖೆ ಗ್ಯಾರಂಟಿ : ಗೃಹ ಸಚಿವ ಜಿ.ಪರಮೇಶ್ವರ

Next Post

Priyanka Upendra | ಹಾರರ್ ಸಿನಿಮಾಗಳ ಕುರಿತು : ಅಮ್ಮನೊಟ್ಟಿಗೆ Interview With ಆಯುಷ್ ಉಪೇಂದ್ರ | Ayush Upendra

Related Posts

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?
Top Story

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

by ಪ್ರತಿಧ್ವನಿ
April 26, 2026
0

ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯ ಹಿಲ್ಟನ್ ಹೋಟೆಲ್‌ನಲ್ಲಿ ನಡೆದ ಹೈಪ್ರೊಫೈಲ್ ವರದಿಗಾರರ ಔತಣಕೂಟದ ವೇಳೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಹತ್ಯೆ ಯತ್ನ ನಡೆದಿದೆ ಎಂಬ...

Read moreDetails
150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

April 26, 2026
ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ

April 26, 2026
ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

April 25, 2026
ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

April 24, 2026
Next Post

Priyanka Upendra | ಹಾರರ್ ಸಿನಿಮಾಗಳ ಕುರಿತು : ಅಮ್ಮನೊಟ್ಟಿಗೆ Interview With ಆಯುಷ್ ಉಪೇಂದ್ರ | Ayush Upendra

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada