ಕೋವಿಡ್‌ ಸೋಂಕಿತರಿಗೆ ಸ್ಥೈರ್ಯ ತುಂಬಲು ʼಹಲೋ ಡಾಕ್ಟರ್ʼ‌ ವೈದ್ಯಕೀಯ ಸಹಾಯವಾಣಿ ಆರಂಭಿಸಿದ ಕಾಂಗ್ರೆಸ್; ರಾಹುಲ್‌ ಗಾಂಧಿ ಚಾಲನೆ

[Sassy_Social_Share]

ಕೋವಿಡ್‌ 19 ಸೋಂಕಿನೊಂದಿಗೆ ಹೋರಾಡುತ್ತಿರುವವರಿಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ʼಹಲೋ ಡಾಕ್ಟರ್‌ʼ ಎಂಬ ವೈದ್ಯಕೀಯ ಸಹಾಯವಾಣಿಗೆ ಚಾಲನೆ ನೀಡಿದ್ದಾರೆ.

ದೇಶವು ಕರೋನಾ ಎರಡನೇ ಅಲೆಯ ತೀವೃತೆಗೆ ತತ್ತರಿಸಿರುವ ಹಿನ್ನೆಲೆಯಲ್ಲಿ ದೇಶವಾಸಿಗಳಿಗೆ ಸಹಾಯ ಮಾಡುವ ಸಲುವಾಗಿ ಕಾಂಗ್ರೆಸ್(AICC) ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಈ ಕುರಿತು ಟ್ವೀಟ್‌ ಮಾಡಿದ ರಾಹುಲ್‌ ಗಾಂಧಿ, ನಾವು ʼಹಲೋ ಡಾಕ್ಟರ್‌ʼ ಎಂಬ ವೈದ್ಯಕೀಯ ಸಹಾಯವಾಣಿಯನ್ನು ಆರಂಭಿಸಿದ್ದೇವೆ. ವೈದ್ಯಕೀಯ ಸಲಹೆಗಳಿಗಾಗಿ +919983836838 ಸಂಖ್ಯೆಗೆ ಕರೆ ಮಾಡಿ ಎಂದು ಅವರು ತಿಳಿಸಿದ್ದಾರೆ.

ಸಾಂಕ್ರಾಮಿಕ ಸಮಯದಲ್ಲಿ ಜನರಿಗೆ ಸಹಾಯ ಮಾಡಲು ತಮ್ಮನ್ನು ದಾಖಲಿಸುವಂತೆ ರಾಹುಲ್‌ ಗಾಂಧಿ ವೈದ್ಯರಿಗೆ ಮನವಿ ಮಾಡಿದ್ದಾರೆ, ವೈದ್ಯರು ಸ್ವ ಇಚ್ಛೆಯಿಂದ ನಮೂದಿಸಲು ಗೂಗಲ್ ಫಾರ್ಮ್ ಲಿಂಕ್ ಅನ್ನು ಇದರೊಂದಿಗೆ ಅವರು ಲಗತ್ತಿಸಿದ್ದಾರೆ.

ಆತ್ಮೀಯ ವೈದ್ಯರೇ, ಮಾನಸಿಕ ಆರೋಗ್ಯ ಸಮಾಲೋಚಕರೇ, ನಮಗೆ ನಿಮ್ಮ ಸಹಾಯದ ಅಗತ್ಯವಿದೆ. ದಯವಿಟ್ಟು ಈ ಲಿಂಕ್‌ನಲ್ಲಿ ದಾಖಲಿಸಿಕೊಳ್ಳಿ ಎಂದು ಅವರು ಕೋರಿಕೊಂಡಿದ್ದಾರೆ.

ವೈದ್ಯರು ತಮ್ಮನ್ನು ತಾವು ತೊಡಗಿಸಿಕೊಳ್ಳಲು ‘COVID ಸಮಾಲೋಚನೆ’ ಮತ್ತು ‘ಮಾನಸಿಕ ಆರೋಗ್ಯ ಸಮಾಲೋಚನೆ’ ಎಂಬ ಎರಡು ಆಯ್ಕೆಗಳನ್ನು ಒದಗಿಸಲಾಗಿದೆ.

ಭಾರತವು ಒಟ್ಟಾಗಿ ನಿಂತು ತಮ್ಮ ಜನರಿಗೆ ಸಹಾಯ ಮಾಡಬೇಕಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

Related posts

Latest posts

ನೆಹರೂ-ಗಾಂಧಿ ಕುಟುಂಬದಿಂದಲೇ ಭಾರತ ಇಂದು ಉಳಿದುಕೊಂಡಿದೆ: ಕೇಂದ್ರಕ್ಕೆ ಚಾಟಿಯೇಟು ನೀಡಿದ ಶಿವಸೇನೆ

COVID-19 ಅನ್ನು ನಿಭಾಯಿಸಲು ನೆರೆಹೊರೆಯ ಸಣ್ಣ ದೇಶಗಳು ಭಾರತಕ್ಕೆ ಸಹಾಯ ನೀಡುತ್ತಿದ್ದರೆ, ದೆಹಲಿಯಲ್ಲಿ ಬಹುಕೋಟಿ ಸೆಂಟ್ರಲ್ ವಿಸ್ಟಾ ಯೋಜನೆಯ ಕೆಲಸವನ್ನು ನಿಲ್ಲಿಸುವ ಕನಿಷ್ಟ ಸೌಜನ್ಯವನ್ನೂ ಮೋದಿ ಸರ್ಕಾರ ತೋರುತ್ತಿಲ್ಲ ಎಂದು ಕೇಂದ್ರ ಸರ್ಕಾರವನ್ನು...

ರಾಜ್ಯಗಳಿಗೆ ಆಕ್ಸಿಜನ್ ವಿತರಿಸಲು 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆ ಸ್ಥಾಪಿಸಿದ ಸುಪ್ರೀಂ ಕೋರ್ಟ್.!

ದೇಶಾದ್ಯಂತ ಕರೋನ ಎರಡನೇ ಅಲೆ ವ್ಯಾಪಕವಾಗಿ ಹರಡಿರುವ ಮಧ್ಯೆ ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದು ಅದನ್ನು ಸಮರ್ಪಕವಾಗಿ ಎದುರಿಸಲು ಮತ್ತು ವೈಜ್ಞಾನಿಕವಾಗಿ ಮೆಡಿಕಲ್ ಆಕ್ಸಿಜನ್ಗಳನ್ನು ಹಂಚುವ ವಿಧಾನವನ್ನು ರೂಪಿಸಲು...

ಲಾಕ್ ಡೌನ್ ಘೋಷಿಸಿ ಬಡವರ್ಗದವರಿಗೆ ಯಾವುದೇ ಯೋಜನೆ ಘೋಷಿಸದ ರಾಜ್ಯ ಸರ್ಕಾರ

ಕೊರೋನ ಸಾಂಕ್ರಮಿಕವು ದಿನೇ ದಿನೇ ಉಲ್ಪಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಇದಕ್ಕೆ ಕಡಿವಾಣ ಹಾಕಲು ಸರ್ಕಾರಗಳು ಲಾಕ್ ಡೌನ್ ಘೋಷಿಸಿವೆ. ಇದು ಅನಿವಾರ್ಯ ಕ್ರಮವೂ ಕೂಡ ಆಗಿದೆ. ಆದರೆ ಈ ಲಾಕ್ ಡೌನ್ ಘೋಷಣೆಯಿಂದ...