ನಟ ರಾಜ್ ಕುಮಾರ್ ಎಂದರೇ ಎಲ್ಲಾ ವಯೋಮಾನದವರಿಗೂ ಅಚ್ಚುಮೆಚ್ಚು. ಅಪ್ಪನಂತೆ ಮಗ ಪುನೀತ್ ರಾಜ್ ಕುಮಾರ್ ಕೂಡ ಎಲ್ಲಾ ವಯೋಮಾನದ ಜನಮನ ಗೆದ್ದಿದ್ದಾರೆ. ನಟನೇ ಹೊರತಾಗಿಯೂ ಡಾ. ರಾಜ್ ಮತ್ತವರ ಪುತ್ರ ಪುನೀತ್ ಇಬ್ಬರೂ ಜನರ ಮನಸ್ಸಿಗೆ ಹತ್ತಿರವಾಗುವ ಒಂದು ಅದ್ಭುತ ಕಥೆ ಇದು.
ಹೌದು, ಡಾ. ರಾಜ್ ಮತ್ತು ಪುನೀತ್ ರಾಜ್ ಕುಮಾರ್ ಅನೇಕ ಸಾಮಾಜಿಕ ಕಳಕಳಿ ಇರುವ ವ್ಯಕ್ತಿಗಳು. ಬಲಗೈಯಲ್ಲಿ ಮಾಡಿದ ಸಹಾಯ ಎಡಗೈಗೆ ಗೊತ್ತಾಗಬಾರದು ಎಂಬ ಮಾತಿಗೆ ಅಕ್ಷರಶಃ ಒಂದುಕೊಳ್ಳುವಂತೆ ನಡೆದುಕೊಂಡವರು. ಅಂದು ನಂದಿನ ಹಾಲಿನ ಜಾಹೀರಾತು ರಾಯಭಾರಿಯಾಗಿದ್ದ ಡಾ. ರಾಜ್ ಒಂದು ನಯಾಪೈಸೆ ತೆಗೆದುಕೊಳ್ಳದೆ ರೈತ ಪರನಿಂತಿದ್ದರು. ತಂದಯೇ ದಾರಿಯಲ್ಲೆ ನಡೆದ ಅಪ್ಪು ಒಂದು ರೂಪಾಯನ್ನು ಸಹ ತಗೆದುಕೊಳ್ಳದೆ ನಂದಿನಿ ಹಾಲಿನ ರಾಯಭಾರಿಯಾಗಿ ಜಾಹೀರಾತು ಮಾಡಿದರು. ಆದರೆ ಪ್ರಸ್ತುತವಾಗಿ ಅವರು ನಮ್ಮನ್ನಗಲಿದ್ದಾರೆ ಎಂಬುದು ನಂಬಲಾರದ ಸತ್ಯ.
1974ರ ದಶಕದಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (kmf) ಕರ್ನಾಟಕ ಡೈರಿ ಡೆವಲಪ್ಮೆಂಟ್ ಪ್ರೋಗ್ರಾಮ್ ಎಂಬ ಹೆಸರಿನಲ್ಲಿ, ಆಗ ತಾನೆ ಮಾರುಕಟ್ಟೆಗೆ ಹೆಜ್ಜೆ ಹಿಟ್ಟಿತು. ಇದಕ್ಕೂ ಮೊದಲು, ಜನವರಿ 13, 1970ರಲ್ಲಿ ಆಪರೇಷನ್ ಫ್ಲಡ್ ಎಂದು ವಿಶ್ವದ ಅತಿದೊಡ್ಡ ಡೈರಿ ಅಭಿವೃದಿ ಮತ್ತು ಭಾರತದ ರಾಷ್ಟ್ರೀಯ ಡೈರಿ ಅಭಿವೃದ್ದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಇದರ ಉದ್ದೇಶ ಏನೆಂದರೆ ಭಾರತವನ್ನು ಹಾಲು ಕೊರತೆಯ ರಾಷ್ಟ್ರದಿಂದ ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವನ್ನಾಗಿ ಪರಿವರ್ತಿಸುವುದು. ಇದರಿಂದ ರೈತರಿಗೆ ಉದ್ಯೋಗದ ಅವಕಾಶ ಸಿಗುವುದು. ಮಕ್ಕಳಿಗೆ ಆರೋಗ್ಯಕರ ಹಾಲು ಸಿಗುವಂತೆ ಮಾಡುವುದು.
ಈ ಎಲ್ಲಾ ಉದ್ದೇಶದಿಂದ ಉದಯಿಸಿದ KMF ಸಂಸ್ಥೆ ಗ್ರಾಮ ಮಟ್ಟ ಡೈರಿ ಸಹಕಾರಿ ಸಂಸ್ಥೆಗಳ ಸಹಯೋಗದೊಂದಿಗೆ ಕರ್ನಾಟಕದಲ್ಲಿ ನಂದಿನಿ ಉತ್ಪಾದನ ಘಟಕವನ್ನು ಪ್ರಾರಂಭಿಸಿತು.

ತನ್ನ ಹಾಲು ಮಾರುಕಟ್ಟೆಯನ್ನು ವಿಸ್ತರಿಸಿಕೊಂಡು ಜನರಿಗೆ ಗುಣಮಟ್ಟದ ಹಾಲನ್ನು ನೀಡಲು ಸಕಲ ಪ್ರಯತ್ನ ಮಾಡುತ್ತಿತು. ಗ್ರಾಮಿಣ ಭಾಗದಲ್ಲಿ ಇರುವ ರೈತರಿಂದ ಹಾಲನ್ನು ಪಡೆದುಕೊಂಡು ತಯಾರಿಸಲಾಗುತ್ತಿತ್ತು. ಹೀಗೆ ನಂದಿನಿ ಸಂಸ್ಥೆ ತನ್ನ ಪ್ರಯತ್ನದೊಂದಿಗೆ ಸಾಗಿತ್ತು. ಈ ಸಂಸ್ಥೆ ಡಾ ರಾಜಕುಮಾರ್ ಅವರನ್ನು ತನ್ನ ರಾಯಭಾರಿಯಾಗಿ ಆಯ್ಕೆ ಮಾಡಿಕೊಂಡಿತು.
ವರ ನಟನನ್ನು ಭೇಟಿಯಾಗಿ ಜಾಹೀರಾತು ಮಾಡಲು ನಂದಿನಿ ಸಂಸ್ಥೆ ಕೇಳಿಕೊಂಡಿತು. ಸಂಸ್ಥೆಯ ಮಾತಿಗೆ ಓಗೊಟ್ಟ ಡಾ.ರಾಜ್, ಅದೇ ಮೊದಲ ಬಾರಿಗೆ 1996ರಲ್ಲಿ ಒಂದು ರೂಪಾಯಿನ್ನು ಕೂಡಾ ಪಡೆಯದೇ ನಂದಿನಿ ಹಾಲಿನ ರಾಯಭಾರಿಯಾಗಿ ದೂರದರ್ಶನದಲ್ಲಿ ಜಾಹೀರಾತು ಮಾಡಿದರು.
ವಿಶೇಷವೆಂದರೆ ತಮ್ಮ ವೃತ್ತಿ ಜೀವನದಲ್ಲಿ ಯಾವುದೇ ಸಂಸ್ಥೆಗೆ ಜಾಹಿರಾತು ನೀಡದ ಮೇರು ನಟ KMFನ ಸದುದ್ದೇಶಕ್ಕೆ ಮಾರುಹೋಗಿ ಇದೇ ಮೊದಲ ಬಾರಿಗೆ ನಂದಿನಿ ಜಾಹಿರಾತಿನಲ್ಲಿ ಕಾಣಿಸಿಕೊಂಡರು. ಇದು ರೈತರ ಮೇಲೆ ಅವರಿಗೆ ಇರುವ ಕಾಳಜಿ ತೋರುತ್ತದೆ.
ನಂದಿನಿ ಹಾಲನ್ನು ಜಾಹೀರಾತು ಮಾಡುವುದಕ್ಕೆ ಇದ್ದ ಮತ್ತೊಂದು ಕಾರಣವಿತ್ತು. ಅದೇನೆಂದರೆ, ಮಕ್ಕಳ ಹಾಗೂ ಜನರ ಅರೋಗ್ಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಮಕ್ಕಳ ಅಪೌಷ್ಠಿಕತೆಯನ್ನು ಹೋಗಲಾಡಿಸುವ ಸಂದೇಶವನ್ನು ಡಾ. ರಾಜಕುಮಾರವರು ನಂದಿನಿ ಹಾಲಿನ ಮೂಲಕ ಜನರಿಗೆ ನೀಡಿದ್ದರು. ನಂದಿನಿ ಹಾಲು ನೈಸರ್ಗಿಕವಾದದ್ದು, ದೇಹಕ್ಕೆ ಅರೋಗ್ಯಕರ ಮತ್ತು ಪೌಷ್ಠಿಕಾಂಶಯುಳ್ಳ ಉತ್ಪನ್ನವಾಗಿದೆ ಅತ್ಯಂತ ರುಚಿಯಾಗಿದೆ. ಎಲ್ಲರೂ ಉಪಯೋಗಿಸಬಹುದು ಎಂದು ಜಾಹೀರಾತು ಮಾಡಿದ್ದರು.

ಡಾ. ರಾಜಕುಮಾರ್ ಅವರ ನಂತರ ಅವರ ಮಗನಾದ ಪುನೀತ್ ರಾಜ್ಕುಮಾರ್ ತಂದೆಯೆಂತೆಯೇ ಅವರು ಕೂಡ ಒಂದು ರೂಪಾಯನ್ನು ಸಹ ತಗೆದುಕೊಳ್ಳದೆ. 2009ರಲ್ಲಿ ನಂದಿನಿ ಹಾಲಿನ ಉತ್ಪನ್ನಗಳ ರಾಯಭಾರಿಯಾಗಿ ಜಾಹೀರಾತು ಮಾಡಿದರು. ಡಾ. ರಾಜ್ ಮತ್ತವರ ಪುತ್ರ ಪುನೀತ್ ಇಬ್ಬರೂ ರೈತರ ಕಷ್ಟವನ್ನು ಅರ್ಥ ಮಾಡಿಕೊಳ್ಳುವ ಸಹಾನುಭೂತಿಯುಳ್ಳ ವ್ಯಕ್ತಿಗಳು ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ ಸಂದರ್ಭ ಇದು.
ಕಳೆದ ವರ್ಷ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಚೆಲುವ ಚಾಮರಾಜನಗರದ ರಾಯಭಾರಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಂದೇಶ ಇರುವ ” ಹುಲಿಗಳ ನಾಡು ” ಚಾಮರಾಜನಗರ ಎಂಬ ಪ್ರಮೋಷನ್ ವಿಡಿಯೋವೊಂದನ್ನು ಜಿಲ್ಲಾಡಳಿತ ಸಿದ್ದಪಡಿಸಿ ಬಿಡುಗಡೆ ಮಾಡಿತ್ತು.
ಜಿಲ್ಲೆಯ ಪರಿಸರ , ಧಾರ್ಮಿಕ, ಆಧ್ಯಾತ್ಮ ,ಪ್ರವಾಸೋದ್ಯಮ, ಸಾಹಸ ಹಾಗೂ ಪಾರಂಪರಿಕ ಪ್ರವಾಸಿ ತಾಣಗಳ ಸೌಂದರ್ಯ ಅನಾವರಣಗೊಳಿಸುವ ಈ ವಿಡಿಯೋದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಯಾವುದೇ ರೀತಿಯ ಸಂಭಾವನೆ ಪಡೆಯದೆ ಸಂದೇಶ ನೀಡುವ ಮೂಲಕ ತವರು ಜಿಲ್ಲೆಯ ಅಭಿವೃದ್ಧಿಗೆ ಸಾಥ್ ನೀಡಿದ್ದರು.

ಈ ಐಟಿಐ ನಲ್ಲಿ ಹೊಸದಾಗಿ ಕೊರ್ಸ್ ಗಳು ಶುರುವಾಗಿದ್ದು ಅದಕ್ಕೂ ಪುನೀತ್ ರಾಜ್ ಕುಮಾಋ ಅವರೇ ಜಾಹಿರಾತು ರಾಯಭಾರಿಯಾಗಿದ್ದರು ಎನನ್ನಲಾಗಿದೆ.