
ಕಳೆದ ವರ್ಷ ಭಾರೀ ಮಳೆಯಾಗಿತ್ತು. ರೈತರು ಬೆಳೆಯುವುದಕ್ಕೂ ಸಾಧ್ಯವಿಲ್ಲದ ಹಾಗೆ ಮಳೆರಾಯ ಅಬ್ಬರಿಸಿದ್ದ. ಇದೀಗ ರಾಜ್ಯದಲ್ಲಿ ಬೇಸಿಗೆ ಆರಂಭ ಆಗಿದ್ದು, ರಾಜಧಾನಿಗೆ ಮಳೆರಾಯನ ಎಂಟ್ರಿಯಾಗಿದೆ. ಇಂದು ಸಂಜೆ ಆಗ್ತಿದ್ದ ಹಾಗೆ ಬೆಂಗಳೂರಿನಲ್ಲಿ ಮಳೆ ಸುರಿದಿದೆ.

ಬಿಸಿಲಿನ ಬೇಗೆಯಲ್ಲಿ ಬಳಲಿದ್ದ ರಾಜಧಾನಿ ಜನರಿಗೆ ಮಳೆಯ ಸಿಂಚನ ಆಗಿದೆ. ತುಂತುರು ಮಳೆ ಶುರುವಾಗಿದ್ದು, ಬಿಸಿಲ ಬೇಗೆಗೆ ಮಳೆರಾಯ ತಂಪೆರೆದ ಎಂದು ಜನರು ಮಾತನಾಡುವಂತಾಗಿದೆ.. ನಗರದಾದ್ಯಂತ ಸಂಜೆ ವೇಳೆಗೆ ಮಳೆಯ ಆಗಮನ ಆಗಿದೆ.
ಕಾರ್ಪೊರೇಷನ್ ಸರ್ಕಲ್, ಮೆಜೆಸ್ಟಿಕ್ ಸುತ್ತಮುತ್ತ ಮಳೆ ಸುರಿಯುತ್ತಿದೆ. ಕಚೇರಿ ಕೆಲಸ ಮುಗಿಸಿ ಮನೆ ಕಡೆಗೆ ಹೊರಟಿದ್ದವರಿಗೆ ಮಳೆ ರಾಯ ಅಡ್ಡಿ ಮಾಡಿದ್ದಾನೆ. ಪೂರ್ವ ಮುಂಗಾರು ಎಂಟ್ರಿ ಕೊಡೋದಾಗಿ ಹವಮಾನ ಇಲಾಖೆ ಮಾಹಿತಿ ಕೊಟ್ಟ ಬೆನ್ನಲ್ಲೇ ಮಳೆರಾಯನ ಆಗಮನ ಆಗಿದೆ.

ಇಂದಿನಿಂದ ಮೂರು ದಿನಗಳ ಮಳೆ ಬರೊದಾಗಿ ರಾಜ್ಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ಯುಗಾದಿ ಹಬ್ಬಕ್ಕೂ ಮೊದಲೇ ಮಳೆ ಬಂದಿರುವುದು ನೆಲ ತಣ್ಣಗಾಯ್ತು ಅನ್ನೋ ನೆಮ್ಮದಿ ಜೊತೆಗೆ ಸಾಕಷ್ಟು ಆರೋಗ್ಯ ಸಮಸ್ಯೆಗೆಳು ಎದುರಾಗುವ ಆತಂಕವೂ ಎದುರಾಗಿದೆ.