• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಖಾತೆ ಬದಲಾವಣೆ ಬಗ್ಗೆ ಮಾತಾಡದೆ ಎಂಟಿಬಿ ನಾಗರಾಜ್ ಗಪ್ ಚುಪ್ ; ಅಸಮಾಧಾನ ಬಳಿಕ ಸೈಲೆಂಟ್ ಆಗಿದ್ದೇಕೆ?

ನಚಿಕೇತು by ನಚಿಕೇತು
October 31, 2021
in Uncategorized, ಕರ್ನಾಟಕ, ರಾಜಕೀಯ
0
ಖಾತೆ ಬದಲಾವಣೆ ಬಗ್ಗೆ ಮಾತಾಡದೆ ಎಂಟಿಬಿ ನಾಗರಾಜ್ ಗಪ್ ಚುಪ್ ; ಅಸಮಾಧಾನ ಬಳಿಕ ಸೈಲೆಂಟ್ ಆಗಿದ್ದೇಕೆ?
Share on WhatsAppShare on FacebookShare on Telegram

ಖಾತೆ ಬದಲಾವಣೆ ಕುರಿತು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ತಮ್ಮ ಕ್ಯಾತೆಯ ಖಾತೆ ಬಂದ್ ಮಾಡಿದ್ದಾರೆ. ಅಸಮಾಧಾನಕ್ಕೆ ಶಟರ್ ಎಳೆದಿದ್ದಾರೆ.. ಕೊಟ್ಟ ಖಾತೆಯಲ್ಲಿ ಮುಂದುವರೆಯಲು ಮೌನಂ ಸಮ್ಮತಿ ಲಕ್ಷಣಂ ಅಂತಿದ್ದಾರೆ. ಅಷ್ಟಕ್ಕೂ ಏಕಾಏಕಿ ಎಂಟಿಬಿ ನಾಗರಾಜ್ ಸೈಲೆಂಟ್ ಆಗಿದ್ದೇಕೆ? ಸೈಲೆಂಟ್ ಆಟಕ್ಕೆ ಏನಾದ್ರೂ ಇಳಿದಿದ್ದಾರಾ ಎಂಬ ಚರ್ಚೆಗಳು ಜೋರಾಗಿವೆ.

ADVERTISEMENT

ಖಾತೆ ಕಿಚ್ಚು, ಸಂಪುಟ ಅಸಮಾಧಾನ. ಇದು ಬೊಮ್ಮಾಯಿ ಸರ್ಕಾರಕ್ಕೆ ಅಂಟಿಕೊಂಡೇ ಜನ್ಮತಾಳಿರುವ ರೋಗ. ಡಜನ್ಗೂ ಹೆಚ್ಚು ನಾಯಕರು ತಮ್ಮದೇ ಸರ್ಕಾರದ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ತಮಗೆ ಬೇಕಾದ ಖಾತೆ ಸಿಗಲಿಲ್ಲ ಅಂತ ಕೆಲವರೂ ಹೇಳಿದ್ರೆ, ಸಂಪುಟ ಸೇರಿಸಿಕೊಳ್ಳಲೇ ಇಲ್ಲ ಅನ್ನೋ ಸಿಟ್ಟು ಸೆಡವು ಇನ್ನೂ ಹಲವು ನಾಯಕರದ್ದು.

ಅಸಮಾಧಾನ ಬಳಿಕ ಎಂಟಿಬಿ ಸೈಲೆಂಟ್ ಆಗಿದ್ದೇಕೆ?

ಪ್ರಬಲ ಖಾತೆಗಾಗಿ ರಾಜೀನಾಮೆ ತುದಿಗೂ ಬಂದು ಹೋದ ಎಂಟಿಬಿ ನಾಗರಾಜ್ ಈಗ ಮೌನ ತಾಳಿದ್ದಾರೆ. ಎಷ್ಟೇ ಬಂಡಾಯವೆದ್ದಿದ್ರೂ, ಅಸಮಾಧಾನಗೊಂಡ್ರೂ, ಪಟ್ಟು ಹಿಡಿದ್ರೂ ಲಾಭ ಸಿಗಲ್ಲ ಎಂದು ಎಂಟಿಬಿ ಅರ್ಥ ಆಗಿಬಿಟ್ಟಿದೆ. ಸಿಕ್ಕ ಖಾತೆಯಲ್ಲೇ ನೆಮ್ಮದಿ ಕಾಣಲು ಎಂಟಿಬಿ ಬಯಸಿದಂತಿದೆ.
ಎಂಟಿಬಿ ನಾಗರಾಜ್ ಪಡೆದ ಲಾಭದಷ್ಟು ಮತ್ಯಾರು ಪಡೆದಿರಲಾರರು ಅನಿಸುತ್ತೆ.

ಹೊಸಕೋಟೆಯಲ್ಲಿ ಕಮಲ ಅರಳಿಸುವಲ್ಲಿ ವಿಫಲವಾದ ಎಂಟಿಬಿಗೆ ಮೇಲ್ಮನೆಗೆ ಕಳುಹಿಸಿದ್ದಲ್ಲದೇ ಮಂತ್ರಿ ಪಟ್ಟ ಕಟ್ಟಿಸಿಕೊಂಡವರು. ಎಂಟಿಬಿ ಜೊತೆಗೆ ಹೆಜ್ಜೆ ಹಾಕಿದ್ದ ಆರ್.ಶಂಕರ್, ಹೆಚ್.ವಿಶ್ವನಾಥ್ ಮೇಲ್ಮನೆ ಪ್ರವೇಶ ಪಡೆಯಲು ಮಾತ್ರ ಸಾಧ್ಯವಾಗಿತ್ತು. ಆದ್ರೆ, ಈ ವಿಚಾರದಲ್ಲಿ ಎಂಟಿಬಿ ನಾಗರಾಜ್ ಅದೃಷ್ಟವಂತ ಅಂತಾನೇ ಹೇಳಬಹುದು. ಬಿಎಸ್ವೈ ಸರ್ಕಾರದಂತೆ ಬೊಮ್ಮಾಯಿ ಸರ್ಕಾರದಲ್ಲೂ ಸ್ಥಾನಮಾನ ಗಿಟ್ಟಿಸಿದ ಎಂಟಿಬಿ, ಬೇಕಾದ ಖಾತೆಗಾಗಿ ಕೊಸರಾಡಿದ್ದುಂಟು.

ಹೊಸ ಖಾತೆ ಬಗ್ಗೆ ಕ್ಯಾತೆ ಇಲ್ಲ!

ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದ ಎಂಟಿಬಿ ನಾಗರಾಜ್ ಏಕಾಏಕಿ ಸೈಲೆಂಟ್ ಆಗಿದ್ದಾರೆ. ಇಷ್ಟವಾದ ಖಾತೆ ನೀಡಲಿಲ್ಲ ಅಂತ ಬೇಸರ ಹೊಂದಿದ್ದ ಎಂಟಿಬಿ, ಸಿಎಂಗೆ ಹಲವು ಬಾರಿ ಮನವಿ ಮಾಡಿದ್ರೂ ಖಾತೆ ಸಿಕ್ಕಿಲ್ಲ. ಈ ಕಾರಣದಿಂದ ಖಾತೆ ಬದಲಾವಣೆ ಅಸಮಾಧಾನ ವಿಚಾರ ಕೈಬಿಟ್ಟಿದ್ದಾರೆ. ಇಲಾಖೆ ಕಡೆ ಗಮನ ಹರಿಸಲು ತೀರ್ಮಾನಿಸಿದ್ದಾರೆ.

ಅಂದುಕೊಂಡಂತ ಖಾತೆ ಸಿಗೋದಿಲ್ಲ ಅನ್ನೋದು ಖಾತರಿ ಆಗ್ತಿದ್ದಂತೆ ಎಂಟಿಬಿ ಬೇರೆಯದ್ದೇ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಕೊಟ್ಟ ಖಾತೆಯನ್ನ ಉತ್ತಮವಾಗಿ ನಿಭಾಯಿಸಿಕೊಂಡು ಹೋಗ್ತೀನಿ ಅನ್ನೋ ಮಾತು ಹೇಳಿದ್ದಾರೆ. ಅಷ್ಟಕ್ಕೂ ಎಂಟಿಬಿ ಹೀಗೆ ದಿಢೀರ್ ವರಸೆ ಬದಲಿಸಲು ಕಾರಣಗಳು ಹಲವು ಇವೆ..

ಎಂಟಿಬಿ ಸೈಲೆಂಟ್ ಗೇಮ್ಗೆ ಕಾರಣಗಳು

  1. ಹೈಕಮಾಂಡ್ ಮಟ್ಟದಲ್ಲಿ ನಮ್ಮ ಮನವಿಗೆ ಪುರಸ್ಕಾರ ಸಿಗಲ್ಲ
  2. ಖಾತೆ ಬದಲಾವಣೆ ವಿಚಾರದಲ್ಲಿ ಬೊಮ್ಮಾಯಿ ಅಸಹಾಯಕರು
  3. ಖಾತೆ ಬದಲಾವಣೆಗೆ ಪಟ್ಟು ಹಿಡಿದ್ರೆ ಸುಮ್ಮನೆ ಅದು ಕಾಲಹರಣ
  4. ಸದ್ಯ ಕೊಟ್ಟ ಖಾತೆಯನ್ನ ಜವಾಬ್ದಾರಿಯಾಗಿ ನಿರ್ವಹಿಸಬೇಕು
  5. ಉತ್ತಮವಾಗಿ ಕೆಲಸ ಮಾಡಿದ್ರೆ ಮುಂದೆ ಟಿಕೆಟ್ ಸಿಗಬಹುದು

ಮಂತ್ರಿಗಿರಿ ವಿಚಾರಕ್ಕೆ ಕಿತ್ತಾಟ ನಡೆಸ್ತಾರ ಸಮಯ ವ್ಯರ್ಥ ಮಾಡದೇ 2023ರ ಚುನಾವಣೆಗೆ ಸೋಲಿನ ಸೇಡು ತೀರಿಸಿಕೊಳ್ಳಲು ಎಂಟಿಬಿ ಹವಣಿಸ್ತಿದ್ದಾರೆ. ಸಚಿವ ಸ್ಥಾನಕ್ಕಿಂತಲೂ ಎಂಟಿಬಿಗೆ ಹೊಸಕೋಟೆ ಗೆಲ್ಲಬೇಕು ಅನ್ನೋ ಮಹತ್ವಾಕಾಂಕ್ಷೆಯೇ ಮಿಗಿಲು. ಆ ಕಾರಣದಿಂದಲೇ ಕ್ಷೇತ್ರದಲ್ಲಿ ರಾಜಕೀಯ ಪ್ರಾಬಲ್ಯ ಮೆರೆಯಲು ಎಂಟಿಬಿಗೆ ಮಂತ್ರಿಗಿರಿ ಅನ್ನೋದು ಜಸ್ಟ್ ಒಂದು ಉರುಗೋಲು.

Tags: ಆರ್.ಶಂಕರ್ಎಂಟಿಬಿ ನಾಗರಾಜ್ಹೆಚ್.ವಿಶ್ವನಾಥ್
Previous Post

ತಂದೆಯ ದಾರಿಯಲ್ಲೆ ನಡೆದ ಮಗ ; ಸಂಭಾವನೆ ಪಡೆಯದೇ ಜಾಹೀರಾತು ಮಾಡಿದ ಅಪ್ಪು!

Next Post

ದುರ್ಬಲಗೊಳ್ಳುತ್ತಿರುವ ಪ್ರಜಾಪ್ರಭುತ್ವವನ್ನು ರಕ್ಷಿಸುವುದೇ ಸರ್ದಾರ್ ಪಟೇಲ್’ರಿಗೆ ಸಲ್ಲಿಸುವ ನಿಜವಾದ ಗೌರವ: ರಾಹುಲ್ ಗಾಂಧಿ

Related Posts

ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?
Top Story

ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

by ಪ್ರತಿಧ್ವನಿ
April 21, 2026
0

ಬೆಂಗಳೂರು : ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ ಗ್ರೇಡ್ ಬದಲು ಅಂಕಗಳನ್ನು ನೀಡಬೇಕು ಎಂಬ ಹೈಕೋರ್ಟ್ ಆದೇಶದ ವಿಚಾರದಲ್ಲಿ ಮಹತ್ವದ...

Read moreDetails
ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

April 21, 2026
ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

April 21, 2026
ದೇವೇಗೌಡರಿಗೆ ಸಿದ್ದರಾಮಯ್ಯ ಭರ್ಜರಿ ಗಿಫ್ಟ್..!‌: ಗುರುವಿಗೆ ಶಿಷ್ಯನ ಕೊಡುಗೆ ಏನು..?

ದೇವೇಗೌಡರಿಗೆ ಸಿದ್ದರಾಮಯ್ಯ ಭರ್ಜರಿ ಗಿಫ್ಟ್..!‌: ಗುರುವಿಗೆ ಶಿಷ್ಯನ ಕೊಡುಗೆ ಏನು..?

April 21, 2026
ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!

April 20, 2026
Next Post
ದುರ್ಬಲಗೊಳ್ಳುತ್ತಿರುವ ಪ್ರಜಾಪ್ರಭುತ್ವವನ್ನು ರಕ್ಷಿಸುವುದೇ ಸರ್ದಾರ್ ಪಟೇಲ್’ರಿಗೆ ಸಲ್ಲಿಸುವ ನಿಜವಾದ ಗೌರವ: ರಾಹುಲ್ ಗಾಂಧಿ

ದುರ್ಬಲಗೊಳ್ಳುತ್ತಿರುವ ಪ್ರಜಾಪ್ರಭುತ್ವವನ್ನು ರಕ್ಷಿಸುವುದೇ ಸರ್ದಾರ್ ಪಟೇಲ್'ರಿಗೆ ಸಲ್ಲಿಸುವ ನಿಜವಾದ ಗೌರವ: ರಾಹುಲ್ ಗಾಂಧಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada