ಒಂದೆಡೆ ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ (State bjp president) ಜಟಾಪಟಿ ಬಹಳ ಜೋರಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಈ ಗೊಂದಲಗಳಿಗೆ ತೆರೆ ಎಳೆಯುವ ಸಲುವಾಗಿ ಉಸ್ತುವಾರಿ ನೇಮಕದ ಜವಾಬ್ದಾರಿಯನ್ನು ಶಿವರಾಜ್ ಸಿಂಗ್ ಚೌಹಾಣ್ ಗೆ (Shivaraj singh chauhan) ಹೆಗಲಿಗೆ ನೀಡಲಾಗಿದೆ.

ಆದ್ರೆ ಸದ್ಯ ಬಿಜೆಪಿ ರೆಬಲ್ ನಾಯಕರು (Bjp rebels) ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಇವತ್ತು ರೆಬಲ್ಸ್ ಟೀಮ್ ಹೈಕಮಾಂಡ್ ನಾಯಕರನ್ನ ಭೇಟಿ ಮಾಡೋ ಸಾಧ್ಯತೆಯಿದೆ. ಸದ್ಯ ಮಾಜಿ ಸಚಿವ ಅರವಿಂದ್ ಲಿಂಬಾವಳಿ (Aravind limbavali) ಇವತ್ತು ದೆಹಲಿಗೆ ಆಗಮಿಸಿ, ಅಮಿತ್ ಶಾರನ್ನ (Amit sha) ಭೇಟಿ ಮಾಡಲಿದ್ದಾರೆ ಎನ್ನಲಾಗ್ತಿದೆ.

ಇನ್ನು ಬೆಂಗಳೂರಲ್ಲಿ (Bengaluru) ನಡೆದ ಕಾರ್ಯಕ್ರಮವೊಂದರಲ್ಲಿ ಅಮಿತ್ ಶಾಗೆ ಅರವಿಂದ್ ಲಿಂಬಾವಳಿ, ಚೀಟಿ ಬರೆದುಕೊಟ್ಟು ಭೇಟಿಗೆ ಅವಕಾಶ ಕೇಳಿದ್ರು. ಅಮಿತ್ ಶಾ ಸೂಚನೆ ಮೇರೆಗೆ ಇವತ್ತು ಭೇಟಿ ಮಾಡಿ, ಹಲವು ವಿಚಾರಗಳ ಕುರಿತು ಚರ್ಚಿಸಲಿದ್ದಾರೆ ಎನ್ನಲಾಗಿದೆ.