ಜಗತ್ತಿನಲ್ಲಿ ನಾನು ರೀತಿಯ ವಿಚಿತ್ರ ಅಪರಾಧ (Criminal) ಪ್ರಕರಣಗಳು (cases) ಬೆಳಕಿಗೆ ಬರುತ್ತಲೇ ಇರುತ್ತವೆ. ಅಂತಹ ಪ್ರಕರಣಗಳನ್ನು ಹೊರಗೆಳೆದು, ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ಕೆಲಸವನ್ನು ಪೊಲೀಸರು (police) ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಪೊಲೀಸರೇ ಅಪರಾಧವನ್ನು ಮಾಡಿಸುವ ಪ್ರಕರಣಗಳು ಕೂಡ ಇರುತ್ತವೆ. ಆದರೆ ಕೆಲವೊಂದು ಅಪರೂಪದ ಪ್ರಕರಣಗಳಲ್ಲಿ ಪೊಲೀಸರೇ ಅಪರಾಧಿಗಳಿಂದ ಅನ್ಯಾಯಕ್ಕೆ ಒಳಪಡುವ ಘಟನೆಗಳು ಕೂಡ ನಡೆಯುತ್ತವೆ.

ಇದೀಗ ಅಂತಹದ್ದೇ ಒಂದು ವಿಚಿತ್ರ ಘಟನೆ ಕೇರಳದಲ್ಲಿ(Kerala) ನಡೆದಿದೆ. ಇದು ಇಡೀ ಕೇರಳ ಪೊಲೀಸರನ್ನೆ ಅಚ್ಚರಿಗೆ ದೂಡಿದೆ . ಅಷ್ಟಕ್ಕೂ ಕೇರಳದಲ್ಲಿ ನಡೆದ ಆ ವಿಚಿತ್ರವಾದ ಘಟನೆ ಏನು ಅಂದ್ರೆ. ಜೈಲಿನಲ್ಲಿ(jail) ತನಗೆ ಬಡಿಸಿದ ಮಟನ್ ಕರಿ (Mutton Curry) ಪ್ರಮಾಣದಿಂದ ಕೈದಿಯೊಬ್ಬ ತೃಪ್ತನಾಗಿರಲಿಲ್ಲ. ಹೀಗಾಗಿ ಕೇರಳದ ಈ ಕೈದಿ ಜೈಲು ಅಧಿಕಾರಿಗಳನ್ನು ಹೊಡೆದಿದ್ದಾನೆ. ಈ ಪ್ರಕರಣದ ಬಗ್ಗೆ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ಮಾಹಿತಿಯನ್ನ ನೀಡಿದ್ದಾರೆ.

ಅಷ್ಟಕ್ಕೂ ಈ ಕೈದಿ ವಯನಾಡ್ ಮೂಲದ ಫೈಜಾಸ್ ಅಂತ ತಿಳಿದು ಬಂದಿದೆ. ಈತನನ್ನ ಡ್ರಗ್ (drugs) ಪ್ರಕರಣದಲ್ಲಿ ಶಿಕ್ಷೆಗೆ ಒಳಪಡಿಸಿ ಕೇರಳದ ಪೂಜಾಪುರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಎಂದಿನಂತೆ ಇದೇ ಶನಿವಾರ (Saturday) ಮಟನ್ ಕರಿ ಸೇರಿದಂತೆ ಇತರೆ ಆಹಾರವನ್ನು ಕೈದಿಗಳಿಗೆ ನೀಡಲಾಗಿದೆ, ಆದರೆ ಈ ಆಹಾರದಲ್ಲಿ ತನಗೆ ಮಟನ್ ಕರಿ ಸಾಕಾಗಿಲ್ಲ ಎಂದು ಜೈಲು ಅಧಿಕಾರಿಗಳನ್ನ ಹೊಡೆದಿದ್ದಾನೆ. ಅಧಿಕಾರಿಗಳ ದೂರಿನ ಆಧಾರದ ಮೇಲೆ ಪ್ರಕರಣ ಇದೀಗ ಪ್ರಕರಣವನ್ನ ದಾಖಲಿಸಿಕೊಳ್ಳಲಾಗಿದೆ. ಇನ್ನು ಈ ಆರೋಪಿ ಎಲ್ಲರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ತನಗೆ ಮಟನ್ ಕರಿ ನೀಡಬೇಕು ಎಂದು ಆವರಣದಲ್ಲಿ ಸಮಸ್ಯೆ ಸೃಷ್ಟಿಸಿದ್ದಾನೆ ಅಂತ ಜೈಲಿನ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಅವರು ಮಾಧ್ಯಮಗಳಿಗೆ ನೀಡಿದ ಮಾಹಿತಿಯ ಪ್ರಕಾರ “ಎಂದಿನಂತೆ ಶನಿವಾರದಂದು ನಾವು ಕೈದಿಗಳಿಗೆ ಮಟನ್ ಕರಿ ಬಡಿಸುತ್ತೇವೆ. ಅವರಿಗೆ ನಿಯಮಾವಳಿಗಳ ಪ್ರಕಾರ ಸಾಮಾನ್ಯ ಪ್ರಮಾಣವನ್ನ ನೀಡಲಾಗಿತ್ತು. ಆದರೆ ಆತ ಹೆಚ್ಚಿನ ಪ್ರಮಾಣದಲ್ಲಿ ಕೇಳಿ ರಾದ್ದಾಂತ ಸೃಷ್ಟಿಸಿದ್ದ, ಜೊತೆಗೆ ನಾವು ನೀಡಿದ್ದ ಆಹಾರವನ್ನ ತ್ಯಾಜ್ಯ ಬುಟ್ಟಿಗೆ ಎಸೆದಿದ್ದ. ಇದನ್ನ ಪ್ರಶ್ನಿಸಲು ಬಂದ ಉಪ ಅಧೀಕ್ಷಕರು ಸೇರಿದಂತೆ ಹಿರಿಯ ಜೈಲು ಅಧಿಕಾರಿಗಳ ಮೇಲೆಯೂ ಆತ ಹಲ್ಲೆ ಮಾಡಿದ್ದಾನೆ” ಅಂತ ತಿಳಿಸಿದ್ದಾರೆ.


ಒಟ್ಟಾರೆಯಾಗಿ ಇದೀಗ ಇಂತಹ ವಿಚಿತ್ರ ಪ್ರಕರಣಕ್ಕೆ ಕೇರಳ ಪೊಲೀಸರು ಸಾಕ್ಷಿಯಾಗಿದ್ದು ಇದೀಗ ಆರೋಪಿಯ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಮುಂದಿನ ಹಂತದ ತನಿಖೆಯ ನಂತರ, ಈ ಆರೋಪಿ ನಿಜಕ್ಕೂ ಮಟನ್ ಕರಿಗಾಗಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದನಾ ಅಥವಾ ಈ ಪ್ರಕರಣದಲ್ಲಿ ಈತನನ್ನ ಸಿಕ್ಕಿಸಿಬೀಳಲಾಗುತ್ತಿದ್ಯಾ ಅನ್ನೋದು ತನಿಖೆಯ ನಂತರ ಹೊರಬರಬೇಕಿದೆ