ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ಗೋವುಗಳನ್ನು ಅಕ್ರಮವಾಗಿ ಕಳ್ಳಸಾಗಾಣೆ ಮಾಡುತಿದ್ದ ಕಟುಕರನ್ನು ಗೋ ರಕ್ಷಕರು ಹುಲ್ಲಹಳ್ಳಿ ಬಳಿ ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ಠಾಣೆಗೆ ಕೊಂಡೊಯ್ಯುವ ವೇಳೆ ಮಾರ್ಗ ಮಧಯೆ ಪಿಂಜಾರಾ ಪೋಲ್ ಬಳಿ ಅಧಿಕಾರಿಗಳು ಕಟುಕರ ಜೊತೆ ಶಾಮೀಲಾಗಿ ಗೋವುಗಳನ್ನು ವಾಪಸ್ ಹಸ್ತಾಂತರಿಸಿದ್ದಾರೆ ಎಂದು ಆರೋಪಿಸಿ ಗೋ ಗ್ಯಾನ್ ಫೌಂಡೇಶನ್ ಸದಸ್ಯರು ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ದೂರು ಸಲ್ಲಿಸಿದ್ದಾರೆ.

ದಾರಿ ಮಧ್ಯೆ ಕಟುಕರು ದೊಡ್ಡ ದೊಡ್ಡ ರಾಸುಗಳನ್ನು ಇಳಿಸಿಕೊಂಡು ಾದರ ಬದಲಾಗಿ ಸಣ್ಣ ರಾಸುಗಳನ್ನು ವಾಹನದಲ್ಲಿ ತುಂಬಿದ್ದಾರೆ. ಇದಕ್ಕೆ ಪೂರಕವೆಂಬಂತೆ ಸಾಮಾಜಿಕ ಜಾಲತಣದಲ್ಲಿ ವಡಿಯೋ ವೈರಲ್ ಆಗಿದ್ದು ಎಲ್ಲರು ಪೊಲೀಸರ ನೈತಿಕತೆಯನ್ನು ಪ್ರಶ್ನಿಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಿಪಿಐ ಲಕ್ಷ್ಮೀಕಾಂತ ತಳವಾರ್ ಘಟನೆ ಕುರಿತು ವ್ಯಾಪಕವಾಗಿ ದೂರುಗಳು ಕೇಳಿ ಬಂದ ಕಾರಣ ಪ್ರಕರಣವನ್ನ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.






