ಈ ಪುಸ್ತಕದಲ್ಲಿ ಲೇಖಕರು ನೆರೆಯ ರಾಜ್ಯಗಳಿಗೆ ಮೈಸೂರಿನ ಪ್ರಜೆಗಳ ವಲಸೆಯ ಬಗ್ಗೆಯೂ ಅಧ್ಯಯನಪೂರ್ಣ ವಿಷಯಗಳನ್ನು ದಾಖಲಿಸಿದ್ದಾರೆ. ೧೯೦೯ ರಲ್ಲಿ ಪ್ರಕಟವಾದ ಈ ಪುಸ್ತಕದ ೩ ನೇ ಸಂಪುಟದಲ್ಲಿ, ಬ್ರಿಟಿಷ್ ಆಡಳಿತದ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ (ಆಧುನಿಕ ತಮಿಳುನಾಡು ರಾಜ್ಯ) ಕಂಡುಬರುವ ಕನ್ನಡಿಗರ ಬಗ್ಗೆ ಆಸಕ್ತಿದಾಯಕ ಮಾಹಿತಿಯನ್ನು ನೀಡಿದ್ದಾರೆ. ಈ ವಲಸಿಗ ಕನ್ನಡಿಗರು ಬೇರಾರೂ ಅಲ್ಲದೆˌ ಮೈಸೂರು ಅರಸರ ಅಕ್ರಮಣಕ್ಕೆ ಹೆದರಿ ಓಡಿ ಬಂದ ಲಿಂಗಾಯತರು ಎಂದು ತಿಳಿಸಿದ್ದಾರೆ. ಮೈಸೂರು ಅರಸರ ಆಕ್ರಮಣದಿಂದ ತಪ್ಪಿಸಿಕೊಂಡು ತಮಿಳುನಾಡಿಗೆ ಹೋದ ಲಿಂಗಾಯತರ ವಲಸೆಯ ಕಾಲ ಮತ್ತು ಅದಕ್ಕೆ ಸಂಬಂಧಿಸಿದ ಕಾರಣಗಳ ಪ್ರಶ್ನೆಗಳಿಗೆ ಲೇಖಕರು ಹೀಗೆ ಬರೆಯುತ್ತಾರೆ:
“ಚಿಕ್ಕದೇವರಾಜನ ಆಳ್ವಿಕೆಯ ೧೭ನೇ ಶತಮಾನದ ಅಂತ್ಯದ ವೇಳೆ ಎಂದು ಹೇಳಬಹುದಾದ ಆರಂಭಿಕ ದಿನಗಳಲ್ಲಿ ಲಿಂಗಾಯತರು ತಮಿಳುನಾಡಿಗೆ ವಲಸೆ ಬಂದಂತೆ ತೋರುತ್ತದೆ. ಮೈಸೂರು ರಾಜ್ಯದಾದ್ಯಂತ ತಮ್ಮ ವಿರುದ್ಧ ಎದ್ದಿದ್ದ ವ್ಯಾಪಕ ಬಂಡಾಯವನ್ನು ಹತ್ತಿಕ್ಕಲು ಲಿಂಗಾಯತರ ಮೇಲೆ ಹಿಂಸಾತ್ಮಕ ದಮನಕಾರಿ ಕ್ರಮಗಳನ್ನು ಒಡೆಯರು ನಡೆಸಿದರು. ಮೈಸೂರು ಅರಸರ ಆರ್ಥಿಕ ಸುಧಾರಣೆಯ ಹೆಸರಿನ ಲ್ಲಿ ನಡೆಸಿದ ಅಕ್ರಮಗಳು ಲಿಂಗಾಯತರ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರಿದ್ದವು.
ಇದರಿಂದ ಲಿಂಗಾಯತ ರೈತರು ಹಾಗೂ ವ್ಯಾಪಾರಿಗಳು ಕಂಗಾಲಾಗಿದ್ದರೆನ್ನುವ ತಮ್ಮ ವಾದವನ್ನು ಸಮರ್ಥಿಸಲು ಲೇಖಕರು ಮೈಸೂರು ಪ್ರಾಂತ್ಯದ ಪ್ರಸಿದ್ಧ ಬ್ರಿಟಿಷ್ ಇತಿಹಾಸಕಾರ ವಿಲ್ಕ್ಸ್ ಅವರನ್ನು ಉಲ್ಲೇಖಿಸಿದ್ದಾರೆ. ವಿಲ್ಕ್ಸ್ ‘ಭಾರತದ ದಕ್ಷಿಣದ ಐತಿಹಾಸಿಕ ರೇಖಾಚಿತ್ರಗಳು’ (೧೮೧೭) ನಲ್ಲಿ ಈ ಕೆಳಗಿನ ಸಂಗತಿಗಳನ್ನು ಉದಾಹರಿಸಲಾಗಿ (೧೦);
“ಎಲ್ಲೆಡೆ ತಲೆಕೆಳಗಾದ ನೇಗಿಲು, ಮರದ ದಿಣ್ಣೆಗಳಿಂದ ಮುಚ್ಚಲಾದ ಹಳ್ಳಿಯ ಹೆಬ್ಬಾಗಿಲುಗಳು, ಕತ್ತಲೆಯ ನೆರಳುಗಳು ಅಲ್ಲಿನ ಲಿಂಗಾಯತರು ಸಭೆ ಸೇರುವ ಸ್ಥಳವಾಗಿತ್ತು. ಇದು ಅಕ್ಷರಶಃ ದಂಗೆಯ ಸ್ಥಿತಿಯನ್ನು ವರ್ಣಿಸುತ್ತಿತ್ತು. ಲಿಂಗಾಯತ ರೈತರು ತಮ್ಮ ಭೂಮಿಯನ್ನು ಉಳುಮೆ ಮಾಡದಿರಲು ನಿರ್ಧರಿಸಿದ ನಂತರ, ತಮ್ಮ ಹಳ್ಳಿಗಳನ್ನು ತೊರೆದು ಒಟ್ಟುಗೂಡಿˌ ದೂರದ ವಸಾಹತುಗಳನ್ನು ಹುಡುಕುತ್ತಾ ವಲಸೆ ಹೋದರು.” ಲಿಂಗಾಯತರ ಬಂಡಾಯಕ್ಕೆ ಪ್ರತಿಕ್ರಿಯೆಯಾಗಿ ಮೈಸೂರು ಅರಸರ ಪ್ರತಿನಿಧಿಯಾಗಿ ವಿಶಾಲಾಕ್ಷ ಪಂಡಿತನೆಂಬ ಅಯ್ಯಂಗಾರಿ ದಿವಾನನು ೪೦೦ ಕ್ಕೂ ಹೆಚ್ಚು ಲಿಂಗಾಯತ ಜಂಗಮರನ್ನು ಸಂಧಾನದ ನೆಪದಲ್ಲಿ ಕರೆಸಿ ಸಾಮೂಹಿಕ ಹತ್ಯೆ ಮಾಡಿಸಿದನು ಎಂದು ವಿಲ್ಕ್ಸ್ ವರ್ಣಿಸಿದ್ದಾನೆ.
“ಚಿಕ್ಕದೇವರಾಜನ ಅಸಾಧಾರಣ ದುಷ್ಟತನವು ಅತ್ಯಂತ ಚುರುಕಾಗಿತ್ತು. ಲಿಂಗಾಯತರು ಮೈಸೂರು ರಾಜ್ಯ ತೊರೆಯಲು ಅವರ ಮೇಲೆ ನಡೆದ ಬಹಿರಂಗ ಹಿಂಸಾಚಾರದ ಕ್ರಮಗಳು ಅತ್ಯಂತ ಕ್ರೌರ್ಯದಿಂದ ಕೂಡಿದ್ದವು. ನುಂಜನಗೂಡಿನ ದೊಡ್ಡ ದೇವಸ್ಥಾನದಲ್ಲಿ ರಾಜನನ್ನು ಭೇಟಿಯಾಗಲು ಬಂಡಾಯಗಾರ ಲಿಂಗಾಯತ ಜಂಗಮರಿಗೆ ಆಮಂತ್ರಣವನ್ನು ಕಳುಹಿಸಲಾಯಿತು. ವಿಶ್ವಾಸಘಾತುಕತನದಿಂದ, ಅಲ್ಲಿಗೆ ಬಂದಿದ್ದ ೪೦೦ ಕ್ಕೂ ಹೆಚ್ಚು ಲಿಂಗಾಯತ ಜಂಗಮರನ್ನು ಟೆಂಟ್ ಗೋಡೆಗಳ ಹಿಂಬದಿಯ ದೊಡ್ಡ ಹೊಂಡದಲ್ಲಿ ಒಬ್ಬೊಬ್ಬರನ್ನೆ ಅವ್ಹಾನಿಸಿ ನುರಿತ ತಲೆ ಕಡಿಯುವ ಕಟುಕರಿಂದ ಅನುಕ್ರಮವಾಗಿ ಪ್ರತಿಯೊಬ್ಬ ಲಿಂಗಾಯತ ಜಂಗಮನ ಶಿರಚ್ಛೇದ ಮಾಡಿ ಹೊಂಡಕ್ಕೆ ದೂಡಲಾಯಿತು. ಈ ಬರ್ಬರ ಕೃತ್ಯವು ಸಾರ್ವಜನಿಕರಿಗೆ ಯಾವುದೆ ಬಗೆಯ ಸಂಶಯ ಬರದಂತೆ ನಡೆಸಲಾಗಿತ್ತು. ನಂಜನಗೂಡಿನಲ್ಲಿ ನಡೆದ ಲಿಂಗಾಯತರ ಈ ಸಾಮೂಹಿಕ ಹತ್ಯೆಯ ನಂತರವೂ ಮೈಸೂರು ರಾಜರು ಲಿಂಗಾಯತರ ಮೇಲಿನ ತಮ್ಮ ಆಕ್ರಮಣವನ್ನು ನಿಲ್ಲಿಸಲಿಲ್ಲ. ಲಿಂಗಾಯತ ಮಠಗಳು ಮತ್ತು ಅದರ ಅನುಯಾಯಿಗಳನ್ನು ನಾಶಮಾಡಲು ಆದೇಶ ನೀಡಿದರು ಎಂದು ವಿಲ್ಕ್ಸ್ ಬರೆಯುತ್ತಾರೆ. ಇದು ೭೦೦ ಕ್ಕೂ ಹೆಚ್ಚು ಲಿಂಗಾಯತ ಮಠಗಳ ನಾಶಕ್ಕೆ ಮತ್ತು ಅಸಂಖ್ಯಾತ ಲಿಂಗಾಯತರ ಸಾವಿಗೆ ಕಾರಣವಾಯಿತು ಎಂದು ಅವರು ಬರೆದಿದ್ದಾರೆ.
“ಮೈಸೂರಿನ ಅಧಿಪತ್ಯದಲ್ಲಿರುವ ಎಲ್ಲಾ ಲಿಂಗಾಯತ ಮಠಗಳು ಮತ್ತು ಅವರ ವಾಸಸ್ಥಾನಗಳು ಒಂದೇ ದಿನದಲ್ಲಿ ನಾಶಪಡಿಸಲು ಸುತ್ತೋಲೆ ಆದೇಶಗಳನ್ನು ಕಳುಹಿಸಲಾಗಿತ್ತು ಎನ್ನುವ ಸಂಗತಿ ವಿಲ್ಕ್ಸ್ ವಿವರಿಸಿದ್ದಾನೆ. ಕಾವಿ ನಿಲುವಂಗಿ ತೊಟ್ಟ ಪ್ರತಿಯೊಬ್ಬ ಲಿಂಗಾಯತ ಜಂಗಮನನ್ನು ಸಂಹರಿಸಲು ಅಶ್ವ ಸೈನ್ಯದ ಪಡೆಗಳನ್ನು ನಿಯೋಜಿಸಲಾಗಿತ್ತಂತೆ. ಹೀಗೆ ಮೈಸೂರಿನ ಅರಸರು ತಮ್ಮ ದುರಾಡಳಿತವನ್ನು ಭದ್ರಪಡಿಸಿಕೊಳ್ಳಲು ಶಾಂತರೀತಿಯಲ್ಲಿ ಬದುಕಿದ್ದ ಲಿಂಗಾಯತರ ಮೇಲೆ ಅತ್ಯಂತ ಕ್ರೂರವಾದ ಆಕ್ರಮಣವನ್ನು ಮಾಡಿರುವ ಕುರಿತು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಹಿಂದೂ ಅರಸರಾಗಿದ್ದ ಮೈಸೂರು ಒಡೆಯರ್ ಹಿಂದೂ ಲಿಂಗಾಯತರ ಮೇಲೆ ಮಾಡಿದ ಅಮಾನುಷ ದಾಳಿಯ ಕುರಿತು ವರ್ತಮಾನದಲ್ಲಿ ಯಾರೊಬ್ಬರೂ ಮಾತನಾಡುವುದಿಲ್ಲ ಎನ್ನುವುದು ದೊಡ್ಡ ವಿಪರ್ಯಾಸ.
ಇಂದು ರಾಷ್ಟ್ರವು ಪ್ರಬುದ್ಧ ಪ್ರಜಾಪ್ರಭುತ್ವಕ್ಕೆ ತರ್ಕಬದ್ಧವಾದ ರಾಜಕೀಯ ಭಾಷಣದ ಕೊರತೆ ಎದುರಿಸುತ್ತಿದೆ. ಇಲ್ಲಿ ಕೇವಲ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಕೃತ್ಯಗಳು ಮಹತ್ವ ಪಡೆಯುತ್ತಿವೆ. ರಾಷ್ಟ್ರವು ಇಂದು ಪ್ರಸ್ತುತ ಇತಿಹಾಸದ ಸಂಘರ್ಷದ ಆವೃತ್ತಿಗಳ ಆಧಾರದ ಮೇಲೆ ರಾಜಕೀಯದ ಅಭೂತಪೂರ್ವ ಅಲೆಗೆ ಸಾಕ್ಷಿಯಾಗಿದೆ. ‘ಪರ’ ಮತ್ತು ‘ವಿರುದ್ಧ’ ಎಂಬ ದೊಡ್ಡ ಸದ್ದುಗದ್ದಲದಲ್ಲಿ, ನೈಜವಾದ ಐತಿಹಾಸಿಕ ಘಟನೆಗಳು ಮತ್ತು ಸಂಘರ್ಷಗಳು ಸಂಭವಿಸಿದ ಸಾಮಾಜಿಕ ಸಂದರ್ಭವನ್ನು ನಾವು ಕಡೆಗಣಿಸುತ್ತಿದ್ದೇವೆ. ತಮ್ಮದೆ ಧರ್ಮದವರ ಮೇಲೆ ನಡೆದ ರಾಜರ ಆಕ್ರಮಣಗಳನ್ನು ಇಂದು ಚರ್ಚಿಸುತ್ತಿಲ್ಲ. ಬದಲಾಗಿ ಅನ್ಯ ಧರ್ಮದ ಜನರ ಮೇಲಿನ ದಾಳಿಗಳನ್ನು ಅತಿರಂಜಿತವಾಗಿ ಚರ್ಚಿಸಲಾಗುತ್ತಿದೆ. ಆದರೆ ಇಂದು ಭಾರತದಲ್ಲಿ ಬಲಪಂಥೀಯ ಮತೀಯವಾದಿಗಳು ಪರಧರ್ಮ ದ್ವೇಷದ ವಾತಾವರಣವನ್ನು ನಿರ್ಮಿಸಿದ್ದಾರೆ. ಇದು ದೇಶದಲ್ಲಿ ಸಾಮಾಜಿಕ ಘರ್ಷಣೆಯನ್ನು ಹುಟ್ಟುಹಾಕಿದೆ. ಈ ವಾತಾವರಣವು ಪ್ರಪಂಚದ ದೃಷ್ಟಿಯಲ್ಲಿ ಭಾರತವನ್ನು ಒಂದು ಪ್ರಬುದ್ಧ ಪ್ರಜಾಪ್ರಭುತ್ವ ದೇಶವಾಗಿ ಕಾಣಲು ದೊಡ್ಡ ಅಡಚಣಿಯಾಗಿದೆ ಎನ್ನುತ್ತಾರೆ ಲೇಖಕರು.
ಉಲ್ಲೇಖಗಳು:
(೧) ರೈಸ್.ಬಿ.ಎಲ್., ‘ಮೈಸೂರು ಗೆಜೆಟರ್’, ಸಂಪುಟ 2, 1897.
(೨) ಮುನೀರ್ ಅಹಮದ್ ತುಮಕೂರಿ, ತುಮಕೂರು ಮೂಲದ ಇತಿಹಾಸಕಾರ ಮತ್ತು ಲೇಖಕರೊಂದಿಗೆ ವೈಯಕ್ತಿಕ ಸಂವಹನ, 0೪ ನವೆಂಬರ್ ೨೦೧೬.
(೩) ಬಾಂಬೆ ಪ್ರೆಸಿಡೆನ್ಸಿಯ ಗೆಜೆಟಿಯರ್, ಸಂಪುಟ. XXV, ಭಾಗ ೨ˌ ಕನರಾ, ೧೮೮೩.
(೪) ಮೂರ್, ಎಡ್ವರ್ಡ್., ‘ಕ್ಯಾಪ್ಟನ್ ಲಿಟಲ್‌ನ ಬೇರ್ಪಡುವಿಕೆಯ ಕಾರ್ಯಾಚರಣೆಗಳ ನಿರೂಪಣೆ ಮತ್ತು ಪರ್ಸೆರಾಮ್ ಭೋ ನೇತೃತ್ವದಲ್ಲಿ ಮಹರತ್ತಾ ಸೈನ್ಯ; ಭಾರತದಲ್ಲಿನ ಹಳೆಯ ಒಕ್ಕೂಟದ ಸಮಯದಲ್ಲಿ, ನವಾಬ್ ಟಿಪ್ಪು ಸುಲ್ತಾನ್ ಬಹದ್ದೂರ್ ವಿರುದ್ಧ, ಲಂಡನ್, ಜೆ.ಜಾನ್ಸನ್, ೧೭೯೪.
(೫) ಡಿರೋಮ್, ‘ಭಾರತದಲ್ಲಿನ ಅಭಿಯಾನದ ನಿರೂಪಣೆ, ಇದು ೧೭೯೨ ರಲ್ಲಿ ಟಿಪ್ಪು ಸುಲ್ತಾನನೊಂದಿಗಿನ ಯುದ್ಧವನ್ನು ಕೊನೆಗೊಳಿಸಿತು’, ೧೭೯೩.
(೬) ದಕ್ಷಿಣಾಮ್ನ್ಯಾಯ ಶ್ರೀ ಶಾರದ ಪೀಠಂ, ಶೃಂಗೇರಿ, ಭಾರತ ವೆಬ್‌ಸೈಟ್, ೫ ನವೆಂಬರ್ ೨೦೧೬ ಡೌನ್‌ಲೋಡ್ ಮಾಡಲಾಗಿದೆ.
(೭) ಮೈಲ್ಸ್, ಡಬ್ಲ್ಯೂ., ‘ದಿ ಹಿಸ್ಟರಿ ಆಫ್ ಹೈದೂರ್ ನಾಯ್ಕ್, ಮೀರ್ ಹುಸೇನ್ ಅಲಿ ಖಾನ್, ಕಿರ್ಮಾನಿ’, ೧೮೪೨.
(8) ಕರ್ನಲ್ ಕಿರ್ಕ್‌ಪ್ಯಾಟ್ರಿಕ್, ‘ವಿವಿಧ ಸಾರ್ವಜನಿಕ ಕಾರ್ಯಕಾರಿಗಳಿಗೆ ಟಿಪ್ಪು ಸುಲ್ತಾನ್‌ನ ಆಯ್ದ ಪತ್ರಗಳು. ವಿಲಿಯಂ ಕಿರ್ಕ್‌ಪ್ಯಾಟ್ರಿಕ್ ಅವರಿಂದ ಅನುವಾದ ಮತ್ತು ವ್ಯವಸ್ಥಿತಗೊಳಿಸಲಾಗಿದೆ’, ೧೮೧೧.
(೯) ಥರ್ಸ್ಟನ್ ಮತ್ತು ರಂಗಾಚಾರಿ, ‘ಕಾಸ್ಟ್ಸ್ ಅಂಡ್ ಟ್ರೈಬ್ಸ್ ಆಫ್ ಸೌತ್ ಇಂಡಿಯಾ’, ಸಂಪುಟ. ೩, ೧೯೦೯.
(೧೦) ವಿಲ್ಕ್ಸ್, ಮಾರ್ಕ್., ‘ಭಾರತದ ದಕ್ಷಿಣದ ಐತಿಹಾಸಿಕ ರೇಖಾಚಿತ್ರಗಳು’ (೧೫೬೪ – ೧೭೯೯), ಸಂಪುಟ ೧’, ೧೮೧೭.
ವಿಲ್ಕ್ಸ್ ಅವರ ಕೃತಿಯನ್ನು ಅನೇಕ ಬ್ರಿಟಿಷ್ ಬರಹಗಾರರು ಮತ್ತು ೧೯ ಮತ್ತು ೨೦ ನೇ ಶತಮಾನದ ಮೈಸೂರು ಇತಿಹಾಸಕಾರರು ಈ ಕೆಳಗಿನ ಕೃತಿಗಳನ್ನು ಉಲ್ಲೇಖಿಸಿದ್ದಾರೆ.
(೧೧) ಬೌರಿಂಗ್, ಲೆವಿನ್ ಬಿ., ‘ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಮತ್ತು ದಕ್ಷಿಣದ ಮುಸಲ್ಮಾನ್ ಶಕ್ತಿಗಳೊಂದಿಗೆ ಹೋರಾಟ’, ೧೮೯೩.
(೧೨) ಸಿ.ಹಯವದನ ರಾವ್, ‘ಮೈಸೂರು ಇತಿಹಾಸ’, ೩ನೇ ಸಂಪುಟ, ೧೯೪೪.