• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪ್ಯಾನ್‌ ಇಂಡಿಯಾ ನಾಗಬಂಧಂ ಚಿತ್ರದ ರುದ್ರ ಪಾತ್ರದ ಮೊದಲ ಝಲಕ್‌ ಬಿಡುಗಡೆ; ವಿರಾಟ್‌ ಕರ್ಣನ ವಿರಾಟರೂಪ ಅನಾವರಣ

ಪ್ರತಿಧ್ವನಿ by ಪ್ರತಿಧ್ವನಿ
January 13, 2025
in Top Story, ಇದೀಗ, ಕರ್ನಾಟಕ, ದೇಶ, ವಿಶೇಷ, ಸಿನಿಮಾ
0
Share on WhatsAppShare on FacebookShare on Telegram

ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ‘ನಾಗಬಂಧಂ’ನ (Nagabandam) ರುದ್ರ ಪಾತ್ರದಲ್ಲಿ ಯುವ ನಾಯಕ ವಿರಾಟ್ ಕರ್ಣ (Virat karna) ನಟಿಸುತ್ತಿದ್ದು, ಅದರ ಬಹುನಿರೀಕ್ಷಿತ ಪ್ರಿ- ಲುಕ್ ಕುತೂಹಲ ಕೆರಳಿಸಿದೆ. ವಿಶೇಷ ಏನೆಂದರೆ, ಅಭಿಷೇಕ್ ನಾಮ ನಿರ್ದೇಶನದ ಫಸ್ಟ್ ಲುಕ್ ಪೋಸ್ಟರ್ ಅನ್ನು ಇಂದು (ಜ. 13) ರಾಣಾ ದಗ್ಗುಬಾಟಿ (Rana Daggubati) ಬಿಡುಗಡೆ ಮಾಡಿ, ಇಡೀ ತಂಡಕ್ಕೆ ಶುಭಕೋರಿದ್ದಾರೆ. ಅಭಿಷೇಕ್ ನಾಮಾ ನಿರ್ದೇಶನ ಮಾತ್ರವಲ್ಲದೆ, ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನೂ ಬರೆದಿದ್ದಾರೆ.

ADVERTISEMENT

ಅಭಿಷೇಕ್ ಪಿಕ್ಚರ್ಸ್ (Abhishek Pictures) ಸಹಯೋಗದಲ್ಲಿ ಎನ್‌ಐಕೆ ಸ್ಟುಡಿಯೋಸ್ (NIK Studios Banner) ಬ್ಯಾನರ್‌ನಲ್ಲಿ ಕಿಶೋರ್ ಅನ್ನಪುರೆಡ್ಡಿ (Kishore Annapureddy) ಮತ್ತು ತಾರಕ್ ಸಿನಿಮಾಸ್ (Tarak Cinemas) ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಲಕ್ಷ್ಮಿ ಇರಾ ಮತ್ತು ದೇವಾಂಶ್ ನಾಮಾ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಈ ಚಿತ್ರದಲ್ಲಿ ತೆಲುಗಿನ ಪೆದ್ದ ಕಾಪು ಚಿತ್ರದ ಮೂಲಕ ಗುರುತಿಸಿಕೊಂಡ ವಿರಾಟ್ ಕರ್ಣ ನಾಯಕನಾಗಿದ್ದು, ಅವರ ರುದ್ರನ ಲುಕ್‌ ಸದ್ಯ ಸೆನ್ಸೆಷನ್‌ ಸೃಷ್ಟಿಸುತ್ತಿದೆ.

ಹೇಗಿದೆ ರುದ್ರನ ಫಸ್ಟ್‌ ಲುಕ್‌
ಸದ್ಯ ಬಿಡುಗಡೆ ಆಗಿರುವ ನಾಗಬಂಧಂ ಸಿನಿಮಾದ ಫಸ್ಟ್‌ ಲುಕ್‌ ಅಕ್ಷರಶಃ ಕುತೂಹಲಭರಿತವಾಗಿದೆ. ಚಿತ್ರದ ನಾಯಕ ವಿರಾಟ್‌ ಕರ್ಣ, ರುದ್ರ ಪಾತ್ರದ ಉಗ್ರರೂಪ ತೋರಿದ್ದಾರೆ. ಮೊಸಳೆಯ ಬಾಯಿಯನ್ನು ಸೀಳಿ, ರುದ್ರನ ಪೌರುಷ ಅನಾವರಣವಾಗಿದೆ. ಗುಂಗುರು ಕೂದಲು, ಕುರುಚಲು ಗಡ್ಡ, ಹುರಿಗಟ್ಟಿದ ಮೈಕಟ್ಟಿನಲ್ಲಿ ರುದ್ರ ಪಾತ್ರಧಾರಿ ವಿರಾಟ್‌ ಕರ್ಣ ಖಡಕ್‌ ಆಗಿ ಕಂಡಿದ್ದಾರೆ. ಶರ್ಟ್‌ಲೆಸ್ ನಿಲುವಿನಲ್ಲಿ ಸಿಕ್ಸ್-ಪ್ಯಾಕ್‌ನಲ್ಲಿಯೂ ಗಮನ ಸೆಳೆದಿದ್ದಾರೆ. ಒಟ್ಟಾರೆ ಈ ಪಾತ್ರಕ್ಕಾಗಿ ಹೆಚ್ಚು ಶ್ರಮವಹಿಸಿರುವುದು ಪೋಸ್ಟರ್‌ನಲ್ಲಿ ಕಂಡು ಬಂದಿದೆ.

ನಾಗಬಂಧಂ ಚಿತ್ರವು ಭಾರತದ ಪ್ರಾಚೀನ ವಿಷ್ಣು ದೇವಾಲಯಗಳ ಗುಪ್ತ ರಹಸ್ಯಗಳ ಸುತ್ತ ಸುತ್ತಲಿದೆ. ಪದ್ಮನಾಭಸ್ವಾಮಿ ಮತ್ತು ಪುರಿ ಜಗನ್ನಾಥ ದೇವಾಲಯಗಳಲ್ಲಿ ಪತ್ತೆಯಾದ ನಿಧಿಯ ಕಾಲ್ಪನಿಕ ಕಥೆ ಇದಾಗಿದ್ದು, ಅಭಿಷೇಕ್ ನಾಮ ಈ ಸಿನಿಮಾದ ಕಥೆ ಬರೆದಿದ್ದಾರೆ. ನಾಗಬಂಧಂ ಭಾರತದಲ್ಲಿನ 108 ವಿಷ್ಣು ದೇವಾಲಯಗಳ ಸುತ್ತಲಿನ ರಹಸ್ಯವನ್ನು ಸಿನಿಮಾ ಮೂಲಕ ತೆರೆದಿಡಲಿದೆಯಂತೆ. ಆ ನಿಧಿಯನ್ನು ಸರ್ಪಗಳು ರಕ್ಷಿಸುತ್ತಿವೆ ಎಂಬ ನಂಬಿಕೆಯ ಹಿನ್ನೆಲೆಯ ಕಥೆಯೂ ಈ ಚಿತ್ರದ್ದಾಗಿರಲಿದೆ.

ಪಾತ್ರವರ್ಗ ಮತ್ತು ತಾರಾಗಣ
ನಾಗಬಂಧಂ ಚಿತ್ರದಲ್ಲಿ ನಭಾ ನಟೇಶ್ ಮತ್ತು ಈಶ್ವರ್ಯ ಮೆನನ್ ನಾಯಕಿಯರಾಗಿ ನಟಿಸಿದ್ದಾರೆ ಮತ್ತು ಜಗಪತಿ ಬಾಬು, ಜಯಪ್ರಕಾಶ್, ಮುರಳಿ ಶರ್ಮಾ ಮತ್ತು ಕೆಜಿಎಫ್ ಚಿತ್ರದ ಮೂಲಕ ಖ್ಯಾತಿ ಪಡೆದಿರುವ ಕನ್ನಡದ ನಟ ಅವಿನಾಶ್ ಅಘೋರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೌಂದರ್ ರಾಜನ್ ಎಸ್ ಕ್ಯಾಮರಾಮನ್‌ ಆಗಿದ್ದು, ಅಭೆ ಸಂಗೀತ ನೀಡಿದ್ದಾರೆ. ಕಲ್ಯಾಣ್ ಚಕ್ರವರ್ತಿ ಸಂಭಾಷಣೆ ಬರೆದಿದ್ದು, ಸಂತೋಷ್ ಕಾಮಿರೆಡ್ಡಿ ಸಂಕಲನ ಮಾಡಿದ್ದಾರೆ. ಅಶೋಕ್ ಕುಮಾರ್ ಪ್ರೊಡಕ್ಷನ್ ಡಿಸೈನರ್ ಆಗಿದ್ದಾರೆ. ನಾಗಬಂಧಂ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, 2025ರಲ್ಲಿ ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಲಿದೆ.

Tags: abhishekAbhishek PicturesAishwarya MenonAvinashJagapati BabuJayaprakashKishore AnnapureddyNagabandaNagabandamNIK StudiosPadmanabhaswamyPan India MoviePuri JagannathTarak CinemasVirat KarnaVishnu Temple
Previous Post

ಝಡ್​-ಮೋಡ್ ಸುರಂಗ ಮಾರ್ಗ​ ಉದ್ಘಾಟಿಸಲಿರುವ ಪ್ರಧಾನಿ ಮೋದಿ..!!

Next Post

ಮಂಡ್ಯದ ಮದ್ದೂರಿನ ಸೊಸೆ ಈಗ ಮಿಸೆಸ್ ಇಂಡಿಯಾ – ಯಾರು ಗೊತ್ತಾ ಈ ಕಿರೀಟ ಹೊತ್ತ ಚೆಲುವೇ ?! 

Related Posts

₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ
Top Story

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

by ಪ್ರತಿಧ್ವನಿ
April 10, 2026
0

ಬಾಹ್ಯಾಕಾಶ ಪ್ರಿಯರಿಗೆ ಸಂತಸದ ಸುದ್ದಿ ಕೇಳಿಬಂದಿದ್ದು, ಒಮ್ಮೆ ಸೌರಮಂಡಲದ ಒಂಬತ್ತನೇ ಗ್ರಹವೆಂದು ಪರಿಗಣಿಸಲ್ಪಟ್ಟಿದ್ದ Pluto ಮತ್ತೆ ಗ್ರಹ ಸ್ಥಾನಮಾನ ಪಡೆಯುವ ಸಾಧ್ಯತೆ ಕುರಿತು ಹೊಸ ಚರ್ಚೆಗಳು ಆರಂಭವಾಗಿವೆ.ಈ...

Read moreDetails
ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

April 10, 2026
ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

April 10, 2026
ಸ್ಯಾಂಡಲ್ ವುಡ್ ನಟಿ ಪಿಯುಸಿಯಲ್ಲಿ ಮಿಂಚಿದ ಅಂಕಿತಾ ಜಯರಾಮ್ ಪಡೆದ ಅಂಕ ಎಷ್ಟು?

ಸ್ಯಾಂಡಲ್ ವುಡ್ ನಟಿ ಪಿಯುಸಿಯಲ್ಲಿ ಮಿಂಚಿದ ಅಂಕಿತಾ ಜಯರಾಮ್ ಪಡೆದ ಅಂಕ ಎಷ್ಟು?

April 10, 2026
ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

April 10, 2026
Next Post
ಮಂಡ್ಯದ ಮದ್ದೂರಿನ ಸೊಸೆ ಈಗ ಮಿಸೆಸ್ ಇಂಡಿಯಾ – ಯಾರು ಗೊತ್ತಾ ಈ ಕಿರೀಟ ಹೊತ್ತ ಚೆಲುವೇ ?! 

ಮಂಡ್ಯದ ಮದ್ದೂರಿನ ಸೊಸೆ ಈಗ ಮಿಸೆಸ್ ಇಂಡಿಯಾ - ಯಾರು ಗೊತ್ತಾ ಈ ಕಿರೀಟ ಹೊತ್ತ ಚೆಲುವೇ ?! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada