• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ವಿದೇಶಿ ಸಂಪರ್ಕ? ನೆಟ್ಟಿಗರ ಪ್ರಶ್ನೆಗೆ ಸಂಸ್ಥಾಪಕ‌ ಹೇಳಿದ್ದೇನು‌?

ಪ್ರತಿಧ್ವನಿ by ಪ್ರತಿಧ್ವನಿ
May 22, 2026
in Top Story
0
‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ವಿದೇಶಿ ಸಂಪರ್ಕ? ನೆಟ್ಟಿಗರ ಪ್ರಶ್ನೆಗೆ ಸಂಸ್ಥಾಪಕ‌ ಹೇಳಿದ್ದೇನು‌?
Share on WhatsAppShare on FacebookShare on Telegram

ದೇಶಾದ್ಯಂತ ಇತ್ತೀಚೆಗೆ “ಕಾಕ್ರೋಚ್ ಜನತಾ ಪಾರ್ಟಿ” (CJP) ಎಂಬ ಹೆಸರಿನ ಸೋಷಿಯಲ್ ಮೀಡಿಯಾ ಅಭಿಯಾನ ಭಾರೀ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ವೇಗವಾಗಿ ಜನಪ್ರಿಯತೆ ಗಳಿಸಿರುವ ಈ ಪೇಜ್‌, ಐದು ದಿನಗಳಲ್ಲೇ ಲಕ್ಷಾಂತರ ಫಾಲೋವರ್ಸ್‌ಗಳನ್ನು ಸೆಳೆದು ಗಮನ ಸೆಳೆದಿದೆ.ಇನ್‌ಸ್ಟಾಗ್ರಾಮ್‌ನಲ್ಲಿ ಬಿಜೆಪಿಗೆ ಸುಮಾರು 87 ಲಕ್ಷ ಫಾಲೋವರ್ಸ್‌ ಇದ್ದರೆ, ಸಿಜೆಪಿಯ ಫಾಲೋವರ್ಸ್‌ ಸಂಖ್ಯೆ 1.5 ಕೋಟಿಯನ್ನು ದಾಟಿದೆ ಎಂದು ಹೇಳಲಾಗುತ್ತಿದೆ. ಆರಂಭದಲ್ಲಿ ಇದು ರಾಜಕೀಯ ವಿಡಂಬನೆ ಅಥವಾ ವ್ಯಂಗ್ಯ ಅಭಿಯಾನವೆಂದು ಕಂಡರೂ, ಇದೀಗ ಇದರ ಉದ್ದೇಶ ಮತ್ತು ಹಿನ್ನೆಲೆ ಕುರಿತು ಹಲವು ಪ್ರಶ್ನೆಗಳು ಉದ್ಭವಿಸಿವೆ.

ADVERTISEMENT

ದೇಶದ ರಾಜಕೀಯ ವ್ಯವಸ್ಥೆಯ ವಿರುದ್ಧ ಬೇಸತ್ತ ಯುವಜನತೆ ಈ ಅಭಿಯಾನ ಆರಂಭಿಸಿದ್ದಾರೆ ಎನ್ನಲಾಗಿದ್ದರೂ, ಸಿಜೆಪಿಯ ಪೋಸ್ಟ್‌ಗಳು ಮತ್ತು ಅಭಿಯಾನಗಳು ಹೆಚ್ಚಾಗಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿಯನ್ನು ಗುರಿಯಾಗಿಸಿಕೊಂಡಿವೆ ಎಂಬ ಟೀಕೆ ಕೇಳಿಬರುತ್ತಿದೆ. ಇದರಿಂದಾಗಿ ಕೆಲವು ವಲಯಗಳು ಇದನ್ನು ವಿಪಕ್ಷಗಳ ಟೂಲ್‌ಕಿಟ್‌ನ ಭಾಗವಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸುತ್ತಿವೆ.ಸಿಜೆಪಿಯ ಫಾಲೋವರ್ಸ್‌ಗಳ ಕುರಿತು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಚರ್ಚೆಗಳು ನಡೆಯುತ್ತಿವೆ. ಪಾಕಿಸ್ತಾನ, ಬಾಂಗ್ಲಾದೇಶ, ಟರ್ಕಿ ಹಾಗೂ ಸೌದಿ ಅರೇಬಿಯಾ ದೇಶಗಳಿಂದ ಹೆಚ್ಚಿನ ಫಾಲೋವರ್ಸ್‌ ಇದ್ದಾರೆ ಎಂಬ ಪೋಸ್ಟ್‌ಗಳು ವೈರಲ್‌ ಆಗಿವೆ. ಆದರೆ ಈ ಅಂಕಿ-ಅಂಶಗಳಿಗೆ ಯಾವುದೇ ಅಧಿಕೃತ ಅಥವಾ ಸ್ವತಂತ್ರ ದೃಢೀಕರಣ ಲಭ್ಯವಾಗಿಲ್ಲ.

Veerashaiva Lingayat : ಚಾಮರಾಜನಗರ ಜಿಲ್ಲಾಡಳಿತ ಭವನದ ಅವರಣದಲ್ಲಿರುವ ಬಸವ ಪುತ್ಥಳಿಗೆ ಮಾಲಾರ್ಪಣೆ..!

ಇನ್ನೊಂದೆಡೆ, ಕಾಂಗ್ರೆಸ್‌, ಆಮ್ ಆದ್ಮಿ ಪಾರ್ಟಿ ಹಾಗೂ Social Democratic Party of India ಪಕ್ಷಗಳ ಬೆಂಬಲ ಸಿಜೆಪಿಗೆ ಇದೆ ಎನ್ನುವ ವಾದಗಳೂ ಕೇಳಿಬರುತ್ತಿವೆ. ಸಿಜೆಪಿಯನ್ನು ಆರಂಭಿಸಿದ್ದರೆಂದು ಹೇಳಲಾಗುತ್ತಿರುವ ಅಭಿಜಿತ್ ದಿಪ್ಕೆ ಈ ಹಿಂದೆ ಆಮ್ ಆದ್ಮಿ ಪಾರ್ಟಿಯೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿಯೂ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಅವರು ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಎನ್ನಲಾಗಿದೆ.ಈ ಎಲ್ಲ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಅಭಿಜಿತ್ ದಿಪ್ಕೆ, “ಸಿಜೆಪಿಯ ಫಾಲೋವರ್ಸ್‌ಗಳಲ್ಲಿ ಶೇಕಡ 94ರಷ್ಟು ಮಂದಿ ಭಾರತೀಯರೇ” ಎಂದು ಸ್ಪಷ್ಟನೆ ನೀಡಿದ್ದಾರೆ. “ಕಾಕ್ರೋಚ್ ಜನತಾ ಪಾರ್ಟಿ” ಪರ-ವಿರೋಧ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ರೀತಿಯ ತಿರುವು ಪಡೆಯಲಿದೆ ಎಂಬುದರ ಮೇಲೆ ಎಲ್ಲರ ಗಮನ ನೆಟ್ಟಿದೆ.

Tags: #AbhijitDipke#bjp#CockroachJantaParty#DigitalCampaign#InstagramTrend#OnlineCampaign#PoliticalDiscussion#PoliticalSatire#socialmedia#TrendingNow#ViralPostCJPIndiaPoliticsSocialMediaDebateviralnews
Previous Post

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

Next Post

ಕಸಬ್ ಉದಾಹರಣೆ ನೀಡಿ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ಪ್ರಶ್ನೆ ಹೀಗಿದೆ! ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ಗಂಭೀರ ವಾದ

Related Posts

‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ವಿದೇಶಿ ಸಂಪರ್ಕ? ನೆಟ್ಟಿಗರ ಪ್ರಶ್ನೆಗೆ ಸಂಸ್ಥಾಪಕ‌ ಹೇಳಿದ್ದೇನು‌?
Top Story

ಸಾಮಾನ್ಯ ಭಕ್ತರಿಗೆ ಟಿಟಿಡಿಯಿಂದ ಬಂಪರ್ ಸಿಹಿಸುದ್ದಿ: ಶ್ರೀವಾರಿ ದರ್ಶನ ಇನ್ನಷ್ಟು ಸುಲಭ

by ಪ್ರತಿಧ್ವನಿ
May 22, 2026
0

ಕಲಿಯುಗದ ಪ್ರತ್ಯಕ್ಷ ದೈವ ತಿರುಪತಿ ದೇವರ ದರ್ಶನಕ್ಕಾಗಿ ಆಗಮಿಸುವ ಸಾಮಾನ್ಯ ಭಕ್ತರಿಗೆ ತಿರುಮಲದ ತಿರುಪತಿ ದೇವಸ್ಥಾನ ಮಹತ್ವದ ಸಿಹಿಸುದ್ದಿ ನೀಡಿದೆ. ಇನ್ಮುಂದೆ ಗಂಟೆಗಟ್ಟಲೆ ಕಾಯುವ ಅವಶ್ಯಕತೆ ಕಡಿಮೆಯಾಗಲಿದ್ದು,...

Read moreDetails
‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ವಿದೇಶಿ ಸಂಪರ್ಕ? ನೆಟ್ಟಿಗರ ಪ್ರಶ್ನೆಗೆ ಸಂಸ್ಥಾಪಕ‌ ಹೇಳಿದ್ದೇನು‌?

ಕಸಬ್ ಉದಾಹರಣೆ ನೀಡಿ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ಪ್ರಶ್ನೆ ಹೀಗಿದೆ! ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ಗಂಭೀರ ವಾದ

May 22, 2026
ಅಮೆರಿಕ ಗುಪ್ತಚರ ಇಲಾಖೆಯ ಎಚ್ಚರಿಕೆ: ಯುದ್ಧದ ಗಾಯ ಮರೆತು ಮತ್ತೆ ಬಲಗೊಳ್ಳುತ್ತಿರುವ ಇರಾನ್..!

ಅಮೆರಿಕ ಗುಪ್ತಚರ ಇಲಾಖೆಯ ಎಚ್ಚರಿಕೆ: ಯುದ್ಧದ ಗಾಯ ಮರೆತು ಮತ್ತೆ ಬಲಗೊಳ್ಳುತ್ತಿರುವ ಇರಾನ್..!

May 22, 2026
ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?

‘ಕಾಕ್ರೋಚ್ ಜನತಾ ಪಾರ್ಟಿ’ಗೆ ಎಕ್ಸ್‌ನಲ್ಲಿ ಬ್ರೇಕ್..! ಯುವಕರ ಡಿಜಿಟಲ್ ಆಕ್ರೋಶಕ್ಕೆ ಸೆನ್ಸಾರ್‌?

May 21, 2026
ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

May 21, 2026
Next Post
‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ವಿದೇಶಿ ಸಂಪರ್ಕ? ನೆಟ್ಟಿಗರ ಪ್ರಶ್ನೆಗೆ ಸಂಸ್ಥಾಪಕ‌ ಹೇಳಿದ್ದೇನು‌?

ಕಸಬ್ ಉದಾಹರಣೆ ನೀಡಿ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ಪ್ರಶ್ನೆ ಹೀಗಿದೆ! ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ಗಂಭೀರ ವಾದ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!