• Home
  • About Us
  • ಕರ್ನಾಟಕ
Tuesday, November 18, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಓವೈಸಿ ಮತ್ತು ಬಿಜೆಪಿ ಒಂದೇ ತಂಡ: ರೈತ ನಾಯಕ ರಾಕೇಶ್ ಟಿಕಾಯತ್ ಆರೋಪ

Any Mind by Any Mind
September 15, 2021
in ದೇಶ, ರಾಜಕೀಯ
0
ರೈತ ಮುಖಂಡ ರಾಕೇಶ್‌ ಟಿಕಾಯತ್‌ ವಿರುದ್ಧ ಬಂಧನ ವಾರೆಂಟ್!
Share on WhatsAppShare on FacebookShare on Telegram

ಭಾರತೀಯ ಕಿಸಾನ್ ಯೂನಿಯನ್ (BKU) ನಾಯಕ ರಾಕೇಶ್ ಟಿಕಾಯತ್ ಮಂಗಳವಾರ ಓವೈಸಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಆಲ್ ಇಂಡಿಯಾ ಮಜ್ಲಿಸ್-ಇ-ಇಟ್ಟೇಹದುಲ್ ಮುಸ್ಲಿಮೀನ್ (AIMIM) ನಾಯಕ ಅಸಾದುದ್ದೀನ್ ಓವೈಸಿ ಮತ್ತು ಬಿಜೆಪಿ ಒಂದೇ ತಂಡವಾಗಿದ್ದು, ರೈತರು ಅವರ ನಡೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ADVERTISEMENT

“ಓವೈಸಿ ಮತ್ತು ಬಿಜೆಪಿ ಒಂದು ತಂಡ. ಅವರು ಬಿಜೆಪಿಯ ‘ಚಾಚಾ ಜಾನ್’. ಅವರು ಬಿಜೆಪಿಯ ಆಶೀರ್ವಾದ ಹೊಂದಿದ್ದಾರೆ. ಓವೈಸಿಯನ್ನು ಬಿಜೆಪಿಯವರು ದುರುಪಯೋಗಪಡಿಸಿಕೊಳ್ಳುತ್ತಾರೆ, ಆದರೆ ಅವರು ಆತನ ವಿರುದ್ಧ ಪ್ರಕರಣ ದಾಖಲಿಸುವುದಿಲ್ಲ ಎಂಬ ಹೇಳಿಕೆಯನ್ನು ನೀಡಿ ದೇಶದ ಜನರನ್ನು ಆಶ್ಚರ್ಯ ಮೂಡಿಸಿದ್ದಾರೆ.

ಅವರ ಸಹಾಯವನ್ನು ಬಿಜೆಪಿ ತೆಗೆದುಕೊಳ್ಳುತ್ತದೆ. ಓವೈಸಿ ಎರಡು ಮುಖ ಉಳ್ಳವರು ರೈತರು ಇವರ ನಡೆಗಳನ್ನು ಅರ್ಥಮಾಡಿಕೊಳ್ಳಬೇಕು. ಓವೈಸಿ ರೈತರನ್ನು ಹಾಳು ಮಾಡುತ್ತಾನೆ. ಚುನಾವಣೆ ಸಮಯದಲ್ಲಿ ಅವರು ಪಿತೂರಿಗಳನ್ನು ಮಾಡುತ್ತಾರೆ. ಬಾಗಪತ್ ಜನರು ಕ್ರಾಂತಿಕಾರಿಗಳು ಎಂದೂ ಯಾಮಾರುವುದಿಲ್ಲ” ಎಂದು ಟಿಕಾಯತ್ ಹೇಳಿದ್ದಾರೆ.

ಸರ್ಕಾರವು ರೈತರ ಬೇಡಿಕೆಗಳನ್ನು ಒಪ್ಪುವುದಿಲ್ಲ ಮತ್ತು ಕಾನೂನುಗಳನ್ನು ರದ್ದುಗೊಳಿಸುವವರೆಗೂ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಟಿಕಾಯತ್  ತಮ್ಮ ಸ್ಪಷ್ಟ ನಿಲುವನ್ನು ಹಾಕಿದರು.

“ಸರ್ಕಾರವು ನಮ್ಮ ಬೇಡಿಕೆಗಳನ್ನು ಒಪ್ಪುವುದಿಲ್ಲ ಮತ್ತು ಕಾನೂನುಗಳನ್ನು ರದ್ದುಗೊಳಿಸುವವರೆಗೂ ಪ್ರತಿಭಟನೆ ಮುಂದುವರಿಯುತ್ತದೆ. ಅಲ್ಲಿಯವರೆಗೆ, ನಾವು ದೆಹಲಿ ಗಡಿಯಲ್ಲೇ ಬೀಡುಬಿಟ್ಟಿರುತ್ತೇವೆ. ನಮ್ಮ ಕೊನೆಯ ಉಸಿರು ಇರುವವರೆಗೂ ನಾವು ಹೋರಾಡುತ್ತೇವೆ. ಅವರು ನಮಗೆ ಸ್ಪಷ್ಟವಾಗಿ ಹೇಳಬೇಕು ಅವರಿಗೆ ಯಾರು ಹೆಚ್ಚು ಪ್ರಿಯರು, ರೈತರೋ ಅಥವಾ ಕಾರ್ಪೊರೇಟ್‌ಗಳು “ಎಂದು ಟಿಕಾಯತ್  ಹೇಳಿದ್ದಾರೆ.

“ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಪಡಿಸುವ ಕಾನೂನುಗಳನ್ನು ಪರಿಚಯಿಸುವವರೆಗೂ ರೈತರಿಗೆ ಲಾಭ ಸಿಗುವುದಿಲ್ಲ” ಎಂದು ಟಿಕಾಯತ್  ಹೇಳಿದ್ದು ಇದೇ ವೇಳೆ, ಕೇಂದ್ರವನ್ನು ಕಾರ್ಪೊರೇಟ್‌ಗಳು ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೇಂದ್ರದ ಹೊಸ ಕಾರ್ಮಿಕ ಕಾನೂನುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, “ಕಾರ್ಖಾನೆ ಕಾರ್ಮಿಕರು ಇನ್ನು ಮುಂದೆ ಆಂದೋಲನ ಮಾಡಲು ಮತ್ತು ಸಂಘಗಳನ್ನು ರಚಿಸಲು ಸಾಧ್ಯವಿಲ್ಲ. ಕೇಂದ್ರ ಎಲ್ಲವನ್ನೂ ಮಾರಾಟ ಮಾಡುತ್ತಿದ್ದಾರೆ. ಅವರು ಮಂಡಿಗಳನ್ನು ಮುಚ್ಚಲು ಪ್ರಯತ್ನಿಸುತ್ತಿದ್ದಾರೆ” ಎಂದು ಬಿಕೆಯು ನಾಯಕ ಟಿಕಾಯತ್ ಹೇಳಿದ್ದಾರೆ.

ರೈತರು ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸುತ್ತಿದ್ದಾರೆ – ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಬಡ್ತಿ ಮತ್ತು ಸೌಲಭ್ಯ) ಮಸೂದ 2020, ಮತ್ತು ರೈತರು (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020 ಇವುಗಳಾಗಿವೇ.

Tags: AIMIMAsaduddhin OwaisiBJPfarm bills 2020Farm laws protestFarmersFarmers protestrakesh tikaitYogi Adityanathಬಿಜೆಪಿ
Previous Post

ನಿಫಾ ವೈರಸ್‌ : ಗೋವಾದಿಂದ ಮಂಗಳೂರಿಗೆ ಬಂದ ವ್ಯಕ್ತಿಯಲ್ಲಿ ನಿಫಾ ಸೋಂಕಿನ ಗುಣಲಕ್ಷಣಗಳು ಪತ್ತೆ !

Next Post

BJP, RSSನವರು ತಮ್ಮ ಲಾಭಕ್ಕಾಗಿ ಧರ್ಮವನ್ನು ಬಳಸುವ ‘ನಕಲಿ ಹಿಂದುಗಳು’ : ರಾಹುಲ್ ಗಾಂಧಿ

Related Posts

ಶ್ವಾಸಕೋಶದಲ್ಲಿ ಸೋಂಕು: ಸಿಎಂ ಪತ್ನಿ ಆಸ್ಪತ್ರೆಗೆ ದಾಖಲು
ಕರ್ನಾಟಕ

ಶ್ವಾಸಕೋಶದಲ್ಲಿ ಸೋಂಕು: ಸಿಎಂ ಪತ್ನಿ ಆಸ್ಪತ್ರೆಗೆ ದಾಖಲು

by ಪ್ರತಿಧ್ವನಿ
November 18, 2025
0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಉಸಿರಾಟದ ಸಮಸ್ಯೆಯಿಂದ...

Read moreDetails
ಪ್ರಧಾನಿ ಮೋದಿ ಎದುರು ಸಿಎಂ ಸಿದ್ದು 5 ಬೇಡಿಕೆಗಳು ಏನು..?

ಪ್ರಧಾನಿ ಮೋದಿ ಎದುರು ಸಿಎಂ ಸಿದ್ದು 5 ಬೇಡಿಕೆಗಳು ಏನು..?

November 17, 2025
ಬೆಂಗಳೂರು-ತುಮಕೂರು ಮೆಟ್ರೋ ವಿಸ್ತರಣೆಗೆ ತೇಜಸ್ವಿ ಸೂರ್ಯ ವಿರೋಧ ಯಾಕೆ..?

ಬೆಂಗಳೂರು-ತುಮಕೂರು ಮೆಟ್ರೋ ವಿಸ್ತರಣೆಗೆ ತೇಜಸ್ವಿ ಸೂರ್ಯ ವಿರೋಧ ಯಾಕೆ..?

November 17, 2025
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ

November 17, 2025
ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ

ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ

November 17, 2025
Next Post
70 ವರ್ಷಗಳಲ್ಲಿ ಕಾಂಗ್ರೆಸ್‌ ಮಾಡಿದ ಆಸ್ತಿಯನ್ನು ಬಿಜೆಪಿ ಮಾರುತ್ತಿದೆ – ರಾಹುಲ್‌ ಗಾಂಧಿ

BJP, RSSನವರು ತಮ್ಮ ಲಾಭಕ್ಕಾಗಿ ಧರ್ಮವನ್ನು ಬಳಸುವ 'ನಕಲಿ ಹಿಂದುಗಳು' : ರಾಹುಲ್ ಗಾಂಧಿ

Please login to join discussion

Recent News

Daily Horoscope: ಇಂದು ಕಚೇರಿಯಲ್ಲಿ ಎಚ್ಚರಿಕೆಯಿಂದ ಇರಬೇಕಾದ ರಾಶಿಗಳಿವು..!
Top Story

Daily Horoscope: ಇಂದು ಕಚೇರಿಯಲ್ಲಿ ಎಚ್ಚರಿಕೆಯಿಂದ ಇರಬೇಕಾದ ರಾಶಿಗಳಿವು..!

by ಪ್ರತಿಧ್ವನಿ
November 18, 2025
ಪ್ರಧಾನಿ ಮೋದಿ ಎದುರು ಸಿಎಂ ಸಿದ್ದು 5 ಬೇಡಿಕೆಗಳು ಏನು..?
Top Story

ಪ್ರಧಾನಿ ಮೋದಿ ಎದುರು ಸಿಎಂ ಸಿದ್ದು 5 ಬೇಡಿಕೆಗಳು ಏನು..?

by ಪ್ರತಿಧ್ವನಿ
November 17, 2025
ಬೆಂಗಳೂರಿನಲ್ಲಿ ಕಸ ಸುಟ್ಟರೆ ಕಠಿಣ ಕ್ರಮ: ಒಂದು ಲಕ್ಷ ದಂಡ, ಐದು ವರ್ಷ ಜೈಲು!
Top Story

ಬೆಂಗಳೂರಿನಲ್ಲಿ ಕಸ ಸುಟ್ಟರೆ ಕಠಿಣ ಕ್ರಮ: ಒಂದು ಲಕ್ಷ ದಂಡ, ಐದು ವರ್ಷ ಜೈಲು!

by ಪ್ರತಿಧ್ವನಿ
November 17, 2025
ಬೆಂಗಳೂರು-ತುಮಕೂರು ಮೆಟ್ರೋ ವಿಸ್ತರಣೆಗೆ ತೇಜಸ್ವಿ ಸೂರ್ಯ ವಿರೋಧ ಯಾಕೆ..?
Top Story

ಬೆಂಗಳೂರು-ತುಮಕೂರು ಮೆಟ್ರೋ ವಿಸ್ತರಣೆಗೆ ತೇಜಸ್ವಿ ಸೂರ್ಯ ವಿರೋಧ ಯಾಕೆ..?

by ಪ್ರತಿಧ್ವನಿ
November 17, 2025
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ
Top Story

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ

by ಪ್ರತಿಧ್ವನಿ
November 17, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಶ್ವಾಸಕೋಶದಲ್ಲಿ ಸೋಂಕು: ಸಿಎಂ ಪತ್ನಿ ಆಸ್ಪತ್ರೆಗೆ ದಾಖಲು

ಶ್ವಾಸಕೋಶದಲ್ಲಿ ಸೋಂಕು: ಸಿಎಂ ಪತ್ನಿ ಆಸ್ಪತ್ರೆಗೆ ದಾಖಲು

November 18, 2025
Daily Horoscope: ಇಂದು ಕಚೇರಿಯಲ್ಲಿ ಎಚ್ಚರಿಕೆಯಿಂದ ಇರಬೇಕಾದ ರಾಶಿಗಳಿವು..!

Daily Horoscope: ಇಂದು ಕಚೇರಿಯಲ್ಲಿ ಎಚ್ಚರಿಕೆಯಿಂದ ಇರಬೇಕಾದ ರಾಶಿಗಳಿವು..!

November 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!