Tag: Asaduddhin Owaisi

ಕಂಗಾನ ಭಿಕ್ಷೆ ಹೇಳಿಕೆಯನ್ನು ಮುಸಲ್ಮಾನರು ಹೇಳಿದ್ದರೆ ಗುಂಡು ಹಾರಿಸುತ್ತಿದ್ದರು – ಓವೈಸಿ

ಕಂಗಾನ ಭಿಕ್ಷೆ ಹೇಳಿಕೆಯನ್ನು ಮುಸಲ್ಮಾನರು ಹೇಳಿದ್ದರೆ ಗುಂಡು ಹಾರಿಸುತ್ತಿದ್ದರು – ಓವೈಸಿ

1947ರಲ್ಲಿ ದೇಶಕ್ಕೆ ಸಿಕ್ಕಿದ್ದು ಸ್ವಾತಂತ್ರ್ಯ ಅಲ್ಲ ಭಿಕ್ಷೆ ಎಂದ ಬಾಲಿವುಡ್​ ನಟಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕಂಗನಾ ರಣಾವತ್​ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಕಿಡಿಕಾರಿದ್ದಾರೆ. ...

ರೈತ ಮುಖಂಡ ರಾಕೇಶ್‌ ಟಿಕಾಯತ್‌ ವಿರುದ್ಧ ಬಂಧನ ವಾರೆಂಟ್!

ಓವೈಸಿ ಮತ್ತು ಬಿಜೆಪಿ ಒಂದೇ ತಂಡ: ರೈತ ನಾಯಕ ರಾಕೇಶ್ ಟಿಕಾಯತ್ ಆರೋಪ

ಭಾರತೀಯ ಕಿಸಾನ್ ಯೂನಿಯನ್ (BKU) ನಾಯಕ ರಾಕೇಶ್ ಟಿಕಾಯತ್ ಮಂಗಳವಾರ ಓವೈಸಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಆಲ್ ಇಂಡಿಯಾ ಮಜ್ಲಿಸ್-ಇ-ಇಟ್ಟೇಹದುಲ್ ಮುಸ್ಲಿಮೀನ್ (AIMIM) ನಾಯಕ ಅಸಾದುದ್ದೀನ್ ...

ತಾಲಿಬಾನ್ ಐಎಸ್ಐನ ಸೂತ್ರದ ಗೊಂಬೆ- ಅಸಾದುದ್ದೀನ್ ಒವೈಸಿ

ತಾಲಿಬಾನ್ ಐಎಸ್ಐನ ಸೂತ್ರದ ಗೊಂಬೆ- ಅಸಾದುದ್ದೀನ್ ಒವೈಸಿ

ಅಖಿಲ ಭಾರತ ಮಜ್ಲಿಸ್-ಇ-ಇತ್ತೇಹಾದುಲ್ ಮುಸ್ಲಿಮೀನ್   (AIMIM) ಅಧ್ಯಕ್ಷರು ಹಾಗೂ ಸಂಸದರೂ ಆಗಿರುವ ಅಸಾದುದ್ದೀನ್ ಒವೈಸಿ ಅವರು, ಅಫ್ಘಾನಿಸ್ತಾನದ ಪ್ರಸ್ತುತ ಸ್ಥಿತಿಗತಿಗಳ ಕುರಿತು ಪ್ರಧಾನಿ ಮೋದಿಯವರ ಮೌನವನ್ನು ಟೀಕಿಸಿದ್ದಾರೆ. ಐಎಸ್ಐ ಹಿಡಿತದಲ್ಲಿರುವ ತಾಲಿಬಾನ್ ಅನ್ನು ಯಾವುದೇ ಸಂದರ್ಭದಲ್ಲಿಯೂ ಭಾರತದ ವಿರುದ್ದ ಪಾಕಿಸ್ತಾನ ಬಳಸಿಕೊಳ್ಳಬಹುದು ಎಂಬ ಎಚ್ಚರಿಕೆಯ ಸಂದೇಶವನ್ನು ಕೊಟ್ಟಿದ್ದಾರೆ.  ಹೈದಾರಾಬಾದ್’ನಲ್ಲಿ ಮೊಹರಂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಮಾತನಾಡಿರುವ ಒವೈಸಿ, ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಿರುವುದು ಪಾಕಿಸ್ತಾನಕ್ಕೆ ವರದಾನವಾಗಿದೆ. ಇಂಟರ್‌ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ತಾಲಿಬಾನ್ ಅನ್ನು ಸೂತ್ರದ ಗೊಂಬೆಯಂತೆ ಬಳಸಿಕೊಳ್ಳುತ್ತದೆ, ಎಂದಿದ್ದಾರೆ.  “ಅಲ್ ಖೈದ ಹಾಗೂ ದಯೇಶ್’ನಂತಹ ಭಯೊತ್ಪಾದಕ ಸಂಘಟನೆಗಳು ಈಗಾಗಲೇ ಅಫ್ಘಾನಿಸ್ತಾನ್ ಸೇರಿ ಆಗಿದೆ. ಐಎಎಸ್ಐ ಮೇಲ್ವಿಚಾರಿಕೆಯಲ್ಲಿ ಇದೆಲ್ಲಾ ನಡೆಯುತ್ತಿದೆ. ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಚೀನಾ ಕೂಡಾ ಈ ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ,” ಎಂದಿದ್ದಾರೆ.  ಕಾಬುಲ್ ಮುಖಾಂತರ ಇರಾನ್’ಗೆ ಅಂತರಾಷ್ಟ್ರೀಯ ಹೆದ್ದಾರಿ ನಡೆಸಲು ಚೀನಾ ದೇಶಕ್ಕೆ ಪಾಕಿಸ್ತಾನ ನೆರವಾಗಲಿದೆ. ಇದನ್ನು ತಡೆಯಲು ನೀವೇನು ಮಾಡುತ್ತಿದ್ದೀರಾ? ಕ್ವಾಡ್ ಒಪ್ಪಂದದ ಪ್ರಕಾರ ರಷ್ಯಾ, ಉಜ್ಬೇಕಿಸ್ತಾನ್, ತುರ್ಕ್ಮೆನಿಸ್ತಾನ್, ತಜೆಕಿಸ್ತಾನ್ ದೇಶಗಳು ಕಾಬುಲ್ ಗೆ ರಸ್ತೆ ಸಂಪರ್ಕ ಹೊಂದಲು ಸಾಧ್ಯವಿಲ್ಲ. ಅಮೇರಿಕಾದ ಕಾರಣದಿಂದ ಇಷ್ಟೆಲ್ಲಾ ನಡೆದಿದೆ. ನೀವು ಡೊನಾಲ್ಡ್ ಟ್ರಂಪ್ ಅವರನ್ನು ಅಪ್ಪಿಕೊಳ್ಳುವಲ್ಲಿ ನಿರತರಾಗಿದ್ರಿ, ಎಂದು ಪ್ರಧಾನಿ ಮೋದಿ ವಿರುದ್ದ ಒವೈಸಿ ಕಿಡಿಕಾರಿದ್ದಾರೆ.  ಇದರೊಂದಿಗೆ ಮುಂಬರುವ ದಿನಗಳಲ್ಲಿ ಪಾಕಿಸ್ತಾನ, ಚೀನಾ ಹಾಗೂ ತಾಲಿಬಾನ್ ನಿಂದ ದೇಶಕ್ಕೆ ಒದಗಿ ಬರಲಿರುವ ಆಪತ್ತಿನ ಕುರಿತು ಈಗಲೇ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಒವೈಸಿ, ಆದಷ್ಟು ಶೀಘ್ರದಲ್ಲಿ ದೇಶದ ನಿಲುವು ಸ್ಪಷ್ಟಪಡಿಸುವಂತೆ ಕೇಳಿದ್ದಾರೆ.