• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, June 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಹಾ ರಾಜಕೀಯದಲ್ಲಿ “ಆಪರೇಷನ್‌ ಟೈಗರ್‌” ಸಂಚಲನ : ಠಾಕ್ರೆಗೆ ಕೈ ಕೊಟ್ಟು “ಶಿಂಧೆಯ” ಬಾಣ ಹೂಡ್ತಾರಾ ಸಂಸದರು..?

ಏಕನಾಥ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಲು ಠಾಕ್ರೆ ಬಣದ ಸಂಸದರಿಂದ ತೆರೆಮರೆಯಲ್ಲಿ ಸಿದ್ಧತೆಯ ಸ್ಫೋಟಕ ಮಾಹಿತಿ ಬಯಲು..

ಪ್ರತಿಧ್ವನಿ by ಪ್ರತಿಧ್ವನಿ
June 11, 2026
in Top Story, ಇದೀಗ, ದೇಶ, ರಾಜಕೀಯ
0
ಮಹಾ ರಾಜಕೀಯದಲ್ಲಿ “ಆಪರೇಷನ್‌ ಟೈಗರ್‌” ಸಂಚಲನ : ಠಾಕ್ರೆಗೆ ಕೈ ಕೊಟ್ಟು “ಶಿಂಧೆಯ” ಬಾಣ ಹೂಡ್ತಾರಾ ಸಂಸದರು..?

Ekanath Shinde Shiv Sena Stir

Share on WhatsAppShare on FacebookShare on Telegram

ಬೆಂಗಳೂರು : ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಟಕ್ಕರ್‌ ನೀಡುವ ನಿಟ್ಟಿನಲ್ಲಿ ಪ್ರಬಲ ವಿರೋಧ ಪಕ್ಷವಾಗಿ ಗುರುತಿಸಿಕೊಂಡಿದ್ದ ಪಶ್ಚಿಮ ಬಂಗಾಳದ ಟಿಎಂಸಿ ಇದೀಗ ಇಬ್ಭಾಗವಾಗಿದೆ. ತೃಣಮೂಲ ಕಾಂಗ್ರೆಸ್‌ ಪಕ್ಷದ ಅಧಿನಾಯಕಿ ಎನ್ನಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ವಿರುದ್ಧ ಬಂಡಾಯವೆದ್ದು ಶಾಸಕರ ಗುಂಪೊಂದು ಪ್ರತ್ಯೇಕ ಬಣವನ್ನು ರಚಿಸಿಕೊಂಡಿದೆ. ಅಲ್ಲದೆ ನಮ್ಮದೇ ಅಧಿಕೃತ ವಿಪಕ್ಷವೆಂದು ವಿಧಾನಸಭೆಯ ಸ್ಪೀಕರ್‌ಗೆ ಪತ್ರ ಬರೆದು ಮನವಿ ಮಾಡಿದೆ. ಸ್ಪೀಕರ್‌ ಈ ಪತ್ರವನ್ನು ಮನ್ನಿಸಿ ಬಂಡಾಯ ಶಾಸಕರ ಬಣಕ್ಕೆ ವಿಪಕ್ಷದ ಪಟ್ಟವನ್ನು ನೀಡಿದ್ದಾರೆ.

ADVERTISEMENT
Bharathiraja : ನಿಮಗೆ ಗೊತ್ತಿರದ ಭಾರತಿ ರಾಜ್ ಕಥೆ #pratidhvani

ಇನ್ನುಳಿದಂತೆ ಟಿಎಂಸಿಯ ಸಂಸದರು ಬಹಿರಂಗವಾಗಿ 20 ಜನರು ತಮ್ಮ ಬೆಂಬಲವನ್ನು ಎನ್‌ಡಿಎ ಸರ್ಕಾರಕ್ಕೆ ಘೋಷಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಜರ್ಜರಿತರಾಗಿರುವ ಮಮತಾ ಬ್ಯಾನರ್ಜಿ ತಮ್ಮ ಪಕ್ಷದ ಅಸ್ತಿತ್ವಕ್ಕಾಗಿ ಹೋರಾಡುವ ಕಠಿಣ ಸ್ಥಿತಿಗೆ ತಲುಪಿದ್ದಾರೆ. ಈ ನಡುವೆಯೇ ಮಹಾರಾಷ್ಟ್ರದಲ್ಲಿ ಇನ್ನೊಂದು ವಿಪಕ್ಷವಾಗಿರುವ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆಯಲ್ಲಿ ಬಂಡಾಯದ ಬಾವುಟ ಹಾರುವ ಲಕ್ಷಣಗಳು ದಟ್ಟವಾಗಿವೆ.

ಸದ್ಯ ಮಹಾ ಒಕ್ಕೂಟದಲ್ಲಿ (ಮಹಾಯುತಿ) ಗುರುತಿಸಿಕೊಂಡಿರುವ ಉಪಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಲು ಠಾಕ್ರೆ ಬಣದ 7 ಸಂಸದರು ತೆರೆಮರೆಯಲ್ಲಿ ಸಿದ್ಧತೆ ನಡೆಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ. ಈಗಾಗಲೇ ಶಿವಸೇನೆಯ ಸಂಸದರು ಈ ಕುರಿತ ಪ್ರಕ್ರಿಯೆಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ. ನವದೆಹಲಿಯಲ್ಲಿ ಯಾರಿಗೂ ತಿಳಿಯದಂತೆ ಗೌಪ್ಯವಾಗಿ ಠಾಕ್ರೆ ಬಣದ ಸಂಸದರು ಏಕನಾಥ ಶಿಂಧೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

Eknath Shinde chopper makes emergency landing in Satara bad weather  conditions | Maharashtra - India TV News

ಇದನ್ನೂ ಓದಿ : ಕೊಟ್ಟ ಮಾತಿಗೆ ತಪ್ಪಿದವರನ್ನು ನಾಡಿನ ಜನತೆ ಕ್ಷಮಿಸುವುದಿಲ್ಲ : ಗೃಹಲಕ್ಷ್ಮಿ ಪರಿಷ್ಕರಣೆ ವಿರುದ್ಧ ಜೆಡಿಎಸ್‌ ವಾಗ್ದಾಳಿ

ಇನ್ನೂ ಒಟ್ಟು ಏಳು ಜನ ಸಂಸದರು ಠಾಕ್ರೆ ಬಣಕ್ಕೆ ಗುಡ್‌ ಬೈ ಹೇಳುವ ಸಾಧ್ಯತೆಗಳು ದಟ್ಟವಾಗಿವೆ. ಹೀಗಾಗಿ ಇದಕ್ಕೆ ಪೂರಕವೆಂಬಂತೆ ಶಿಂಧೆ ಪುತ್ರ ಹಾಗೂ ಸಂಸದ ಶ್ರೀಕಾಂತ್‌ ಶಿಂಧೆ ಶಿವಸೇನೆ ಯುಬಿಟಿಯ ಸಂಸದರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದರು ಎಂಬ ಮಾಹಿತಿಯೂ ಹೊರ ಬಿದ್ದಿದೆ.

Maharashtra CM Eknath Shinde's Chopper Returns To His Native Village In  Satara Due To Bad Weather | India News - News18

ಈ ನಡುವೆಯೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ಡಿಸಿಎಂ ಏಕನಾಥ ಶಿಂಧೆ ಭೇಟಿಯಾಗಿ ರಾಜಕೀಯ ಬೆಳವಣಿಗೆಗಳನ್ನು ಗಮನಕ್ಕೆ ತಂದಿದ್ದಾರೆ. ಅಲ್ಲದೆ ಮುಂದಿನ ಸ್ಥಿತಿ ಗತಿಗಳ ಬಗ್ಗೆಯೂ ಮಹತ್ವದ ಚರ್ಚೆ ನಡೆಸಿದ್ದಾರೆ. ಆದರೆ ಠಾಕ್ರೆ ಬಣದಿಂದ ಶಿವಸೇನೆಯ ಶಿಂಧೆ ಬಣಕ್ಕೆ ಸೇರಿಕೊಳ್ಳುವ ಸಂಸದರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನವನ್ನು ನೀಡುವುದರ ಕುರಿತೂ ಚರ್ಚೆಗಳು ಮುಂದುವರೆದಿವೆ ಎಂಬುವುದು ಮೂಲಗಳ ಮಾಹಿತಿಯಾಗಿದೆ.

ಈ ರಾಜಕೀಯ ಬೆಳವಣಿಗೆಗಳು ಉದ್ಧವ್ ಠಾಕ್ರೆ ಅವರ ನಿವಾಸ ‘ಮಾತೋಶ್ರೀ’ಯಲ್ಲಿ ಆತಂಕದ ಸ್ಥಿತಿಗೆ ಕಾರಣವಾಗಿವೆ. ಕೇಂದ್ರ ಸಚಿವ ಸಂಪುಟ ವಿಸ್ತರಣೆ ಶೀಘ್ರದಲ್ಲೇ ಆರಂಭವಾಗಲಿದ್ದು, ಈ  ಬಂಡಾಯವು ಠಾಕ್ರೆ ಬಣಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಇದಕ್ಕೆ ವ್ಯತಿರಿಕ್ತವಾಗಿ, ಮುಂಬರುವ ಸಚಿವ ಸಂಪುಟ ವಿಸ್ತರಣೆಯ ಸುತ್ತಲಿನ ಚರ್ಚೆಯಲ್ಲಿ ಸಂಸದ ಡಾ. ಶ್ರೀಕಾಂತ್ ಶಿಂಧೆ ಹೆಸರು ಕೇಳಿ ಬರುತ್ತಿರುವುದು ಶಿಂಧೆ ನೇತೃತ್ವದ ಶಿವಸೇನೆಯ ಕಾರ್ಯಕರ್ತರಲ್ಲಿ ಉತ್ಸಾಹವನ್ನು ಹುಟ್ಟುಹಾಕಿದೆ.

Uddhav Thackrey

ಈ ಸಂಭಾವ್ಯ ಪಕ್ಷಾಂತರದಲ್ಲಿ ಮರಾಠವಾಡ ಪ್ರದೇಶದ ಪ್ರಮುಖ ನಾಯಕರೊಬ್ಬರು ಮುಂಚೂಣಿಯಲ್ಲಿದ್ದಾರೆ. ಮುಂಬೈನ ಇಬ್ಬರು ಸಂಸದರನ್ನು ಹೊರತುಪಡಿಸಿ, ಉಳಿದ ಏಳು ಸಂಸದರು ಯಾವುದೇ ಕ್ಷಣದಲ್ಲಿ ಶಿಂಧೆ ನೇತೃತ್ವದ ಬಣದೊಂದಿಗೆ ಸೇರ್ಪಡೆಯಾಗುವ ಸಾಧ್ಯೆತಗಳಿವೆ ಎನ್ನಲಾಗುತ್ತಿದೆ.

Actor Darshan Case : ಆಧ್ಯಾತ್ಮ ಕಡೆ ವಾಲಿದ್ರಾ ದಾಸ... #pratidhvani #dboss #darshan #sandalwood #court

ಈಗಾಗಲೇ ನವದೆಹಲಿ ಪ್ರವಾಸದಿಂದ ರಾಜ್ಯಕ್ಕೆ ವಾಪಸ್‌ ಆಗಿರುವ ಏಕನಾಥ ಶಿಂಧೆ ತಮ್ಮ ಸ್ವಗ್ರಾಮ ದರೆಗೆ ತೆರಳಿದ್ದಾರೆ. ಖಾಸಗಿ ಕಾರ್ಯದ ನಿಮಿತ್ತ ಈ ಭೇಟಿಯಾಗಿದೆ ಎಂದರೂ ಸಹ, ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಹಾಗೂ ಸಂಚಲನಕಾರಿ ಆಟಗಳಿಗೆ ವೇದಿಕೆಯಾಗುತ್ತದೆ ಎನ್ನುವುದು ಹಿಂದಿನ ಬೆಳವಣಿಗೆಗಳನ್ನು ಗಮನಿಸಿದಾಗ ಆರ್ಥವಾಗುತ್ತದೆ. ಶಿಂಧೆ ಇಲ್ಲಿಗೆ ಬಂದಾಗ ರಾಜಕೀಯ ಚಟುವಟಿಕೆಗಳಿಗೆ ವೇಗ ಬರುತ್ತದೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಶಿಂಧೆ ದೆಹಲಿಯಲ್ಲಿ ಪ್ಲ್ಯಾನ್‌ ಫಿಕ್ಸ್‌ ಮಾಡಿ ಬಂದಿದ್ದಾರೆ, ಯಾವಾಗ ಬೇಕಾದರೂ ಅದು ಕಾರ್ಯರೂಪಕ್ಕೆ ಬರಬಹುದು ಎಂಬುವುದು ಸದ್ಯ ಮಹಾರಾಷ್ಟ್ರ ರಾಜಕೀಯದಲ್ಲಿ ಸ್ಫೋಟಕ ವಿಚಾರವಾಗಿದೆ.

Tags: Amit ShahBJPDr Shreekant ShindeEkanath Shinemaharashtra politicsMahayuti GovernentNarendra ModiNCPOperation TigerPolitical developmentsPratidhvaniShiv Sena (UBT)Shive Shinde TeamUddhav Thackeray
Previous Post

ಜೈಲಿನಲ್ಲಿ ನಟ ದರ್ಶನ್ ಮೌನ! ಆಧ್ಯಾತ್ಮ ಕಡೆ ದಚ್ಚು? ಆತ್ಮಚರಿತ್ರೆ ಬರೀತಾರಂತೆ ಪವಿತ್ರಾ ಗೌಡ!

Next Post

FIFA World Cup 2026: ಫಿಫಾ ವಿಶ್ವಕಪ್ 2026ಕ್ಕೆ ಇಂದು ಅಧಿಕೃತ ಅದ್ಧೂರಿ ಚಾಲನೆ

Related Posts

ಶಬರಿಮಲೆಯಲ್ಲಿ ಎಐ ತಂತ್ರಜ್ಞಾನ ಅಳವಡಿಕೆ: ಭಕ್ತರ ದರ್ಶನಕ್ಕೆ ಮತ್ತಷ್ಟು ಸುಗಮ ವ್ಯವಸ್ಥೆ
Top Story

ಶಬರಿಮಲೆಯಲ್ಲಿ ಎಐ ತಂತ್ರಜ್ಞಾನ ಅಳವಡಿಕೆ: ಭಕ್ತರ ದರ್ಶನಕ್ಕೆ ಮತ್ತಷ್ಟು ಸುಗಮ ವ್ಯವಸ್ಥೆ

by ಪ್ರತಿಧ್ವನಿ
June 13, 2026
0

ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಶಬರಿಮಲೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ತಿರುವಿತಾಂಕುರ್ ದೇವಸ್ವಂ ಬೋರ್ಡ್ (ಟಿಡಿಬಿ) ಮಹತ್ವದ ನಿರ್ಧಾರ ಕೈಗೊಂಡಿದೆ....

Read moreDetails
ರಾಜಕೀಯ ಚದುರಂಗದಲ್ಲಿ ಯಾವ ಕಾಯಿ ನಡೆಸ್ತಾರೆ ಅಂತಾ ಯಾರೂ ಹೇಳಲ್ಲ: ಸಿಎಂ ಡಿಕೆಶಿ

ಅಧಿಕಾರಿಗಳಿಗೆ ಸಿಎಂ ಡಿಕೆ ಶಿವಕುಮಾರ್ ಖಡಕ್ ಸಂದೇಶ: ‘ಲಂಚಕ್ಕೆ ಬ್ರೇಕ್, ಡ್ರಗ್ಸ್‌ಗೆ ಕಡಿವಾಣ, ಜನಸೇವೆಗೆ ಆದ್ಯತೆ’

June 13, 2026
ಇರಾನ್ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತಿಮ ಯಾತ್ರೆಗೆ ದಿನಾಂಕ ನಿಗದಿ:ವಿಧಿವಿಧಾನ ಹೀಗಿರಲಿದೆ

ಇರಾನ್ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತಿಮ ಯಾತ್ರೆಗೆ ದಿನಾಂಕ ನಿಗದಿ:ವಿಧಿವಿಧಾನ ಹೀಗಿರಲಿದೆ

June 13, 2026
‘ಜೋಡಿ ನಂ.1’ನಾ ಅಥವಾ ‘ಡಿವೋರ್ಸ್ ನಂ.1’ನಾ? ರಿಯಾಲಿಟಿ ಶೋ ವಿರುದ್ಧ ವೀಕ್ಷಕರ ಆಕ್ರೋಶ

‘ಜೋಡಿ ನಂ.1’ನಾ ಅಥವಾ ‘ಡಿವೋರ್ಸ್ ನಂ.1’ನಾ? ರಿಯಾಲಿಟಿ ಶೋ ವಿರುದ್ಧ ವೀಕ್ಷಕರ ಆಕ್ರೋಶ

June 13, 2026
Priyanka Kharge: ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನೀತಿ 2025–32ಕ್ಕೆ ಅನುಮೋದನೆ

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ 50 ಕೃತಕ ಬುದ್ಧಿಮತ್ತೆ ಪ್ರಯೋಗಾಲಯ: ಭವಿಷ್ಯಕ್ಕಾಗಿ ಮಹತ್ವದ ಹೆಜ್ಜೆ

June 13, 2026
Next Post
FIFA World Cup 2026: ಫಿಫಾ ವಿಶ್ವಕಪ್ 2026ಕ್ಕೆ ಇಂದು ಅಧಿಕೃತ ಅದ್ಧೂರಿ ಚಾಲನೆ

FIFA World Cup 2026: ಫಿಫಾ ವಿಶ್ವಕಪ್ 2026ಕ್ಕೆ ಇಂದು ಅಧಿಕೃತ ಅದ್ಧೂರಿ ಚಾಲನೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada