ಬ್ಲ್ಯಾಕ್ ಫಂಗಸ್: ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿಯಿಂದ ತ್ರಿವಳಿ ಪ್ರಶ್ನೆ

ದೇಶವಿನ್ನೂ ಕರೋನಾದಿಂದ ಸಂಪೂರ್ಣ ನಿಟ್ಟುಸಿರು ಬಿಡುವಷ್ಟು ಚೇತರಿಸಿಕೊಂಡಿಲ್ಲ, ಆದರೆ, ಅದಾಗಲೇ ಬ್ಲ್ಯಾಕ್‌ ಫಂಗಸ್‌ ಎಂಬ ಇನ್ನೊಂದು ರೋಗ ದೇಶದಲ್ಲಿ ಸದ್ದು ಮಾಡುತ್ತಿದೆ. ಕರೋನಾಗಿಂತಲೂ ಮಾರಣಾಂತಿಕವಾಗಿ ಪರಿಣಮಿಸಿದೆ. ಅದೇ ಬ್ಲ್ಯಾಕ್‌ ಫಂಗಸ್‌. ಕರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು ಸೋತಿರುವ ಸರ್ಕಾರಗಳು ಬ್ಲ್ಯಾಕ್‌ ಫಂಗಸ್‌ಅನ್ನು ಯಾವ ರೀತಿ ನಿಭಾಯಿಸಲಿದೆ ಅನ್ನುವುದೇ ಗೊತ್ತಿಲ್ಲ.

ಈಗಾಗಲೇ ಸಾಂಕ್ರಾಮಿಕ ರೋಗವೆಂದು ಅಂಗೀಕರಿಸಿರುವ ಈ ರೋಗಕ್ಕೆ ನೂರಾರು ಮಂದಿ ಬಲಿಯಾಗಿದ್ದಾರೆ. ದೇಶದಲ್ಲಿ ಕಪ್ಪು ಫಂಗಸ್‌‌ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬ್ಲಾಕ್ ಫಂಗಸ್​ ನಿಯಂತ್ರಣಕ್ಕೆ ಕೇಂದ್ರ ಕೈಗೊಂಡಿರುವ ನೀತಿ ಏನು ಎಂದು ಪ್ರಶ್ನಿಸಿ ಸರ್ಕಾರದ ಎದುರು ಮೂರು ಮಹತ್ವದ ಪ್ರಶ್ನೆಗಳನ್ನಿಟ್ಟಿದ್ದಾರೆ. ಅಲ್ಲದೆ, ಈ ಪ್ರಶ್ನೆಗಳಿಗೆ ಸರ್ಕಾರ ಉತ್ತರ ನೀಡಬೇಕು ಎಂದೂ ತಾಕೀತು ಮಾಡಿದ್ದಾರೆ.

ಕಪ್ಪು ಫಂಗಸ್‌ ನಿಯಂತ್ರಿಸಲು ಕೇಂದ್ರ ಸರ್ಕಾರ ಏನು ಮಾಡಿದೆಯೆಂದು ಪ್ರಶ್ನಿಸಿರುವ ರಾಹುಲ್‌, ಒಂದನೆಯದಾಗಿ ಸೋಂಕಿಗೆ ಬಳಸುವ ಆಂಫೊಟೆರಿಸಿನ್-ಬಿ ಔಷಧದ ಕೊರತೆಗೆ ಸರ್ಕಾರ ಏನು ಮಾಡುತ್ತಿದೆ. ಎರಡನೆಯದ್ದು ಈ ಔಷಧಿಯನ್ನು ರೋಗಿಗಳಿಗೆ ತಲುಪಿಸುವ ವಿಧಾನವೇನು? ಮೂರನೆಯದಾಗಿ, ಚಿಕಿತ್ಸೆ ನೀಡುವ ಬದಲು ಮೋದಿ ಸರ್ಕಾರವು ಜನತೆಯನ್ನು ಔಪಚಾರಿಕತೆಗೆ ಯಾಕೆ ಸಿಲುಕಿಸುತ್ತಿದೆ?” ಎಂದು ಪ್ರಶ್ನಿಸಿದ್ದಾರೆ.

ರಾಹುಲ್‌ ಗಾಂಧಿಯ ಪ್ರಶ್ನೆ ಕೇವಲ ರಾಹುಲ್‌ ಗಾಂಧಿಯದ್ದು ಮಾತ್ರವಲ್ಲ. ದೇಶದ ಹಲವು ತಜ್ಞರು ಇದೇ ಕಳವಳವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಪ್ರಧಾನಮಂತ್ರಿಯನ್ನಾದರೂ ಕೇಳೋಣವೆಂದರೆ ಅವರೂ ಸುದ್ದಿ ಮಾಧ್ಯಮಗಳ ಸಂಪರ್ಕಕ್ಕೆ ಸಿಗುತ್ತಿಲ್ಲ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...