ಬಿಜೆಪಿ ಕಾರ್ಯಕರ್ತರಿಗೆ ಲಸಿಕೆ ಶಿಬಿರ: ಶಾಸಕ ರಘು ವಿರುದ್ಧ ಗಂಭೀರ ಆರೋಪ

ರಾಜ್ಯದಲ್ಲಿ ಆಡಳಿತರೂಢ ಬಿಜೆಪಿ ಶಾಸಕರು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಬೆಡ್‌ ಬ್ಲಾಕಿಂಗ್‌, ವ್ಯಾಕ್ಸಿನ್‌ ಬ್ಲಾಕಿಂಗ್‌ ದಂಧೆಯಲ್ಲಿ ತೊಡಗಿಕೊಂಡಿದ್ದಾರೆಂಬ ಆರೋಪಗಳು ಕೇಳಿ ಬಂದಿರುವ ಹೊತ್ತಿನಲ್ಲೇ ಮತ್ತೋರ್ವ ಬಿಜೆಪಿ ಶಾಸಕ ಸರ್ಕಾರದ ವತಿಯಿಂದ ಉಚಿತವಾಗಿ ವಿತರಿಸಬೇಕಾಗಿದ್ದ ಕೋವಿಡ್‌ ನಿರೋಧಕ ಲಸಿಕೆಗಳಿಗೆ ತನ್ನ ಚಿತ್ರ ಲಗತ್ತಿಸಿ, ಕಾರ್ಯಕರ್ತರಿಗೆ ವಿತರಿಸಿರುವುದಾಗಿ ವರದಿಯಾಗಿದೆ.

ಸಿವಿ ರಾಮನ್‌ ನಗರ್‌ ಕ್ಷೇತ್ರದ ಶಾಸಕ ಎಸ್‌ ರಘು ಅವರ ನಿರ್ದೇಶನದ ಮೇರೆಗೆ ಮೇ 31ರಂದು ಭುವನೇಶ್ವರಿ ನಗರ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ನಡೆಯಬೇಕಿದ್ದ ವ್ಯಾಕ್ಸಿನೇಷನ್‌ ಪ್ರಕ್ರಿಯೆ ರದ್ದುಗೊಳಿಸಲಾಗಿದ್ದು, ಶಾಸಕ ರಘು ವತಿಯಿಂದ ಉಚಿತ ವ್ಯಾಕ್ಸಿನೇಷನ್‌ ಶಿಬಿರ ಎಂಬ ಬ್ಯಾನರ್‌ನೊಂದಿಗೆ ಸ್ಥಳೀಯ ಓಂ ಶಕ್ತಿ ಕಲ್ಯಾಣ ಮಂಟಪದಲ್ಲಿ ಲಸಿಕೆ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸ್ಥಳೀಯ ಜನರು ಹೇಳಿದ್ದಾರೆ. ಅದಾಗ್ಯೂ, ಲಸಿಕೆಗಳು ಸ್ಥಳೀಯರಿಗೆ ಲಭ್ಯವಾಗದೆ, ಶಾಸಕರ ಕುಟುಂಬಸ್ಥರಿಗೂ, ಅವರ ಬೆಂಬಲಿಗರಿಗೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಹಾಕಕಿಸಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಬಿಜೆಪಿಯ ಇನ್ನೋರ್ವ ಶಾಸಕ ರವಿ ಸುಬ್ರಹ್ಮಣ್ಯ ಅವರು ಇಂತದ್ದೇ ಹಗರಣದಲ್ಲಿ ಭಾಗಿಯಾದ ಕುರಿತು ಆರೋಪಗಳು ಎದ್ದ ಬೆನ್ನಲ್ಲೇ ಶಾಸಕ ರಘು ಅವರ ಅಧಿಕಾರ ದುರ್ಬಳಕೆಯೂ ಬೆಳಕಿಗೆ ಬಂದಿದ್ದು, ಬಿಜೆಪಿಯು ಕರೋನಾ ಕಾಲದಲ್ಲೂ ತಮ್ಮ ಪ್ರಚಾರಕ್ಕಾಗಿ ಯಾವ ಹೇಸಿಗೆಗೂ ಇಳಿಯುತ್ತದೆ ಎಂಬ ಆರೋಪವನ್ನು ಸಾಬೀತು ಪಡಿಸಿದೆ.

ಈ ಕುರಿತು ನ್ಯೂಸ್‌ ಮಿನಿಟ್‌ ಜೊತೆ ಪ್ರತಿಕ್ರಿಯಿಸಿದ ಸ್ಥಳೀಯ ನಿವಾಸಿ ಮಂಜು, ತನ್ನ ವೃದ್ಧ ಪೋಷಕರಿಗೆ ಲಸಿಕೆ ಹಾಕಿಸಲು ನೋಂದಣಿ ಮಾಡಿದ್ದೆ. ಬೆಳಗ್ಗೆ 7 ರಿಂದ ಆಸ್ಪತ್ರೆಯಲ್ಲಿ ಕಾದಿದ್ದೇವೆ. 9:45 ರ ಹೊತ್ತಿಗೆ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಳ್ಳಲು ಕಲ್ಯಾಣ ಮಂಟಪಕ್ಕೆ ತೆರಳುವಂತೆ ಸೂಚಿಸಲಾಯಿತು. ಮಧುಮೇಹದ ರೋಗಿಗಳಾಗಿರುವ ನನ್ನ ಪೋಷಕರನ್ನು ಇನ್ನಷ್ಟು ಕಾಯಿಸುವುದು ನನಗೆ ಇಷ್ಟವಿರಲಿಲ್ಲ, ಅಲ್ಲದೆ ಅಲ್ಲಿ ಸಾಮಾಜಿಕ ಅಂತರವನ್ನೂ ಕಾಪಾಡಿರಲಿಲ್ಲ. ನನ್ನ ಪೋಷಕರನ್ನು ನಾನು ಇದುವರೆಗೆ ಎಲ್ಲಿಯೂ ಹೊರಕ್ಕೆ ಬಿಟ್ಟಿರಲಿಲ್ಲ. ಇಷ್ಟೊಂದು ಅಸುರಕ್ಷಿತ ಪ್ರದೇಶದಲ್ಲಿ ಅವರನ್ನು ಇರಿಸುವುದು ನನಗೆ ಸೂಕ್ತವೆನಿಸಿಲ್ಲ ಎಂದು ತಮಗೆದುರಾದ ಅನಾನುಕೂಲವನ್ನು ತೋಡಿಕೊಂಡಿದ್ದಾರೆ.

ಜನರು ಇಷ್ಟೆಲ್ಲಾ ಕಷ್ಟದಲ್ಲಿರುವಾಗಲೂ ಸರ್ಕಾರ ಏನೋ ಮಾಡುತ್ತಿದೆ. ಸಚಿವರು ಏನೋ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ತಮ್ಮ ಕುರ್ಚಿ ಉಳಿಸಲು ಹರಸಾಹಸ ಪಡುತ್ತಿದ್ದಾರೆ. ಮುಖ್ಯಮಂತ್ರಿಯನ್ನು ಇಳಿಸಲು ಇತರೆ ನಾಯಕರು ಶ್ರಮಿಸುತ್ತಿದ್ದಾರೆ. ರವಿ ಸುಬ್ರಹ್ಮಣ್ಯ, ಸತೀಶ್‌ ರೆಡ್ಡಿ, ರಘು ಮೊದಲಾದವರು ಕರೋನಾದ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ನಾಗರಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...