ಕುಸ್ತಿಪಟು ಹತ್ಯೆಯಲ್ಲಿ ಭಾಗಿಯಾದ ಆರೋಪದ ಮೇಲೆ ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಬಂಧಿಸಲಾಗಿದೆ.
ಮೇ 4 ರಂದು ದೆಹಲಿಯ ಛತ್ರಸಾಲ್ ಸ್ಟೇಡಿಯಂನಲ್ಲಿ ಕುಸ್ತಿಪಟುಗಳ ಮಧ್ಯೆ ಗಲಾಟೆ ನಡೆದಿತ್ತು. ಗಲಾಟೆಯಲ್ಲಿ 23 ವರ್ಷದ ಸಾಗರ್ ರಾಣಾ ಎಂಬ ಕುಸ್ತಿಪಟು ಸಾವನ್ನಪ್ಪಿದ್ದರು, ಹಾಗು ಆತನ ಇಬ್ಬರು ಸ್ನೇಹಿತರು ಕೂಡ ಗಂಭೀರವಾಗಿ ಗಾಯಗೊಂಡಿದ್ದರು.
ಮೇ 18 ರಂದು ಸುಶೀಲ್ ಕುಮಾರ್ ಬಂಧನದಿಂದ ರಕ್ಷಣೆ ಕೋರಿ ನ್ಯಾಯಾಲಯದ ಮೊರೆಹೋಗಿದ್ದರು. ಆದರೆ ದೆಹಲಿ ನ್ಯಾಯಾಲಯ ಇವರ ಜಾಮೀನು ಅರ್ಜಿಯನ್ನು ನಿರಾಕರಿಸಿತ್ತು. ನಂತರ ಕೆಲವು ದಿನಗಳಿಂದ ಸುಶೀಲ್ ಕುಮಾರ್ ತಲೆಮರೆಸಿಕೊಂಡಿದ್ದರು.
ಕೆಲವು ದಿನಗಳ ಹಿಂದೆ ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ ಪೊಲೀಸರು ನಗದು ಬಹುಮಾನವನ್ನು ಘೋಷಿಸಿದ್ದರು. ಸುಶೀಲ್ ಕುಮಾರ್ ಬಗ್ಗೆ ಸುಳಿಯು ಕೊಟ್ಟವರಿಗೆ 1 ಲಕ್ಷ ರೂ. ಮತ್ತು 50,000 ರೂ, ಆತನ ಸಹಚರ ಅಜಯ್ ಕುಮಾರ್ ಅವರ ಬಗ್ಗೆ ಸುಳಿವು ನೀಡಿದವರಿಗೆ ಕೊಡುವುದಾಗಿ ಘೋಷಿಸಲಾಗಿತ್ತು.
ಇದೀಗ ಇನ್ಸ್ಪೆಕ್ಟರ್ ಶಿವಕುಮಾರ್, ಕರಂಬೀರ್ ಮತ್ತು ಎಸಿಪಿ ಅತ್ತಾರ್ ಸಿಂಗ್ ನೇತೃತ್ವದ ವಿಶೇಷ ತಂಡ ದೆಹಲಿಯ ಮುಂಡ್ಕಾ ಪ್ರದೇಶದಲ್ಲಿ ಸುಶೀಲ್ ಕುಮಾರ್ ಮತ್ತು ಅಜಯ್ ಅವರನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಪಿ ಎಸ್ ಕುಶ್ವಾಃ ತಿಳಿಸಿದ್ದಾರೆ.
ಏನಿದು ಪ್ರಕರಣ
ಕುಸ್ತಿಪಟು ಸಾಗರ್ ರಾಣಾ ತನ್ನ ಸ್ನೇಹಿತರೊಂದಿಗೆ ಛತ್ರಸಾಲ್ ಕ್ರೀಡಾಂಗಣದ ಹತ್ತಿರದ ಮಾಡೆಲ್ ಟೌನ್ ಪ್ರದೇಶದ ಮನೆಯಲ್ಲಿ ವಾಸಿಸುತ್ತಿದ್ದರು. ಸ್ಥಳದ ವಿಚಾರವಾಗಿ ಮೇ 4 ರಂದು ಸಾಗರ್ ರಾಣಾ ಮತ್ತು ಸುನೀಲ್ ಕುಮಾರ್ ನಡುವೆ ಮಾತಿನ ಚಕಮಕಿ ನಡೆದು ಕೊನೆಗೆ ಎರಡು ಗುಂಪುಗಳ ನಡುವಿನ ಜನಗಳ ಗಂಭೀರ ಸ್ವರೂಪ ಪಡೆದು ಗುಂಡಿನ ಚಕಮಕಿಗೆ ಕಾರಣವಾಗಿತ್ತು. ಇದರಲ್ಲಿ ಗಾಯಗೊಂಡ ಕುಸ್ತಿಪಟುಗಳಲ್ಲಿ, ಸಾಗರ್ ರಾಣಾ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದರು.