ಬೆಂಗಳೂರು :ಏ.೧೩: ಜ್ಯೋತಿಷಿಗಳ ಮೊರೆ ಹೋದ ಮೂರು ಪಕ್ಷದ ಹುರಿಯಾಳುಗಳು. ರಾಜ್ಯ ರಾಜಕರಣದಲ್ಲಿ ನ್ಯೂಮರಾಲಜಿ ಪಾಲಿಟಿಕ್ಸ್.. ಡೇಟ್ ಟೈಮ್ ನಂಬಿ ಉಮೇದುವಾರಿಕೆ ಸಲ್ಲಿಸೋಕೆ ರೆಡಿ. ಜಾತಕ ಹಿಡಿದು ಪಂಡಿತರು, ನ್ಯೂಮರಾಲಜಿಸ್ಟ್ ಗಳಿಗೆ ಅಭ್ಯರ್ಥಿಗಳ ದುಂಬಾಲು. ನಾಮಪತ್ರ ಸಲ್ಲಿಕೆಗೆ ಶುಭಘಳಿಗೆ, ಶುಭ ಮುಹೂರ್ತ ಮೊರೆ ಹೋಗ್ತಿರೋ ರಾಜಕೀಯ ಪಟುಗಳು, ಗೆಲುವಿಗೆ ಅಸ್ತ್ರಾಲಜಿ ಮೊರೆ.




ಏಪ್ರಿಲ್ 17ಕ್ಕೆ ಅತ್ಯಂತ ಶುಭ ಮುಹೂರ್ತ. ಆ ಟೈಂನಲ್ಲೇ ಹಲವರಿಂದ ನಾಮಪತ್ರ. ಅಜ್ಜಯ್ಯನಿಗೆ ನಮಸ್ಕರಿಸಿ ನಾಮಪತ್ರ ವಿತರಣೆ ಶುರುಮಾಡಿದ ಡಿಕೆಶಿ. ಭೈರತಿ ಸುರೇಶ್ ಗೆ ಕಾಂಗ್ರೆಸ್ ನ ಮೊದಲ ನಾಮಪತ್ರ, ಕುರುಬರಿಗೆ ಮೊದಲ ಪ್ರಾಮುಖ್ಯತೆ ಕೊಟ್ರೆ ಗೆಲುವು ಎಂಬ ನಂಬಿಕೆ. ದೇವೇಗೌಡರ ಕುಟುಂಬದಲ್ಲಿ ಶುಭ ಶುಕ್ರವಾರದ ಮುಹೂರ್ತ. ಜೆಡಿಎಸ್ ಟಿಕೆಟ್ ಅನೌನ್ಸ್ ಗೆ ಜ್ಯೋತಿಷಿ ಗಳ ಮೊರೆ. ನಾಮಪತ್ರ ಸಲ್ಲಿಕೆಗೂ ಮುಹೂರ್ತದ ಮೊರೆ ಹೋಗಿರೋ ರೇವಣ್ಣ – ಕುಮಾರಣ್ಣ. ಇತ್ತ ಸಿಎಂ ಬೊಮ್ಮಾಯಿ ಕುಟುಂಬ ದಿಂದ ಟೆಂಪಲ್ ರೌಂಡ್ಸ್..ಧರ್ಮಸ್ಥಳ – ಕೊಲ್ಲೂರು ಮೂಕಾಂಬಿಕೆ ಉಡುಪಿ ಪ್ರವಾಸ. ಎಲ್ಲರೂ ಧೈವವನ್ನ ನಂಬಿ ಮುಂದಿನ ಹೆಜ್ಜೆ ಇಡುತಿರೋ ರಾಜಕರಣಿಗಳು..ಕರ್ನಾಟಕದಲ್ಲಿ ಜೋರಾಗಿದೆ ನಂಬರ್ ಪಾಲಿಟಿಕ್ಸ್.