ಮೊದಲ ಹಂತದಲ್ಲಿ ನಡೆಯಲಿರೋ 14 ಕ್ಷೇತ್ರಗಳ (14 constituencies) ಮತದಾನದ ಬಹಿರಂಗ ಪ್ರಚಾರಕ್ಕೆ ನಾಳೆ ಬುಧವಾರ (Wednesday) ಸಂಜೆ 6 ಗಂಟೆಗೆ ತೆರೆ ಬೀಳಲಿದೆ. ಹೀಗಾಗಿ ಘಟಾನುಘಟಿ ನಾಯಕರು ರಾಜ್ಯದಲ್ಲಿ ಭರ್ಜರಿ ಪ್ರಚಾರ ನಡೆಸ್ತಿದ್ದಾರೆ. ಕೋಟೆನಾಡು ಚಿತ್ರದುರ್ಗದಲ್ಲಿ (chitradurga)ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (priyanka gandhi) ಮತಯಾಚನೆ ಮಾಡಿದ್ದಾರೆ. ನ್ಯಾಯ ಸಂಕಲ್ಪ ರ್ಯಾಲಿ ಹಾಗು ಸಮಾವೇಶದಲ್ಲಿ ಭಾಗಿಯಾಗಿದ್ದ ಪ್ರಿಯಾಂಕಾ ಗಾಂಧಿ, ಬಿ.ಎನ್ ಚಂದ್ರಪ್ಪರನ್ನು (BN Chandrappa) ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ(siddaramaiah), ರಣದೀಪ್ ಸಿಂಗ್ ಸುರ್ಜೇವಾಲ (Randeep Singh surjewala) ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಿದ್ರು.

ಕಾಂಗ್ರೆಸ್ ಪಕ್ಷದ ಖಾತೆ ಸೀಜ್ ಮಾಡಿದ್ರು. ವಿರೋಧ ಪಕ್ಷದ ಇಬ್ಬರು ಮುಖ್ಯಮಂತ್ರಿಗಳನ್ನ ಅರೆಸ್ಟ್ (Arrest) ಮಾಡಿದ್ರು. ವಿಪಕ್ಷ ನಾಯಕರ ಮೇಲೆ ರೇಡ್ (Raid) ಮಾಡಿಸಿ ನಮ್ಮ ಧ್ವನಿಯನ್ನ ಅಡಗಿಸೋ ಕೆಲಸ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಚಿತ್ರದುರ್ಗದಲ್ಲಿ ನಡೆದ ಕಾಂಗ್ರೆಸ್ ನ್ಯಾಯ ಸಂಕಲ್ಪ ಸಮಾವೇಶದಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದರು. ಈ ವೇಳೆ ಹೆಲಿಕಾಪ್ಟರ್ ಲ್ಯಾಂಡಿಗ್ ವೇಳೆ ಪೈಲಟ್ ಎಡವಟ್ಟು ಮಾಡಿದ್ದು, ಸಿಎಂ ಹೆಲಿಕಾಪ್ಟರ್, ನಿಗದಿತ ಹೆಲಿಪ್ಯಾಡ್ ಬದಲು ಪ್ರಿಯಾಂಕಾ ಗಾಂಧಿ ಹೆಲಿಪ್ಯಾಡ್ನಲ್ಲಿ ಲ್ಯಾಂಡಿಗ್ ಮಾಡಿದ್ರು. ತಪ್ಪಿನ ಅರಿವಾಗ್ತಿದ್ದ ಹಾಗೆ ಮತ್ತೆ ಟೇಕಾಫ್ ಮಾಡಿ ಅನಾಹುತ ತಡೆದ್ರು.

ಬೆಂಗಳೂರು ದಕ್ಷಿಣ(Bangalore south)ಲೋಕಸಭಾ ಕ್ಷೇತ್ರದಲ್ಲೂ ಪ್ರಿಯಾಂಕಾ ಗಾಂಧಿ ಅಬ್ಬರದ ಪ್ರಚಾರ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ (Sowmya reddy)ಪರ ಪ್ರಿಯಾಂಕಾ ಗಾಂಧಿ ಪ್ರಚಾರ ನಡೆಸಿದ್ದಯ, ಹೆಚ್ಎಸ್ಆರ್ ಲೇಔಟ್ನ (HSR layout) ಕ್ರೀಡಾಂಗಣದಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ಮತ ಕೇಳಿದ್ದಾರೆ. ಪ್ರಿಯಾಂಕಾ ಗಾಂಧಿ ಜೊತೆ ಡಿಸಿಎಂ ಡಿ.ಕೆ ಶಿವಕುಮಾರ್ (Dk shivakumar) , ಸಚಿವ ರಾಮಲಿಂಗಾರೆಡ್ಡಿ(aramalingareddy), ಕೆ.ಜೆ ಜಾರ್ಜ್ (KJ george) ಸೇರಿದಂತೆ ಹಲವು ನಾಯಕರು ಹಾಜರಾಗಿದ್ದರು. ದೇಶದ ಇವತ್ತಿನ ನಿಜಾಂಶ ಏನಂದ್ರೆ ಸಣ್ಣ ಪುಟ್ಟ ಉದ್ಯಮಿಗಳಿಗೆ ಏನು ಉಪಯೋಗವಿಲ್ಲ. ದೇಶದ ಪ್ರಗತಿಗೆ ಸಹಕರಿಸುವ ಸಣ್ಣ ಸಣ್ಣ ಉದ್ಯಮಿಗಳಿಗೆ ಉಪಯೋಗವಾಗಿಲ್ಲ ಎಂದಿದ್ದಾರೆ ಪ್ರಿಯಾಂಕಾ ಗಾಂಧಿ.
ರೈತರು, ಬಡವರು, ಮದ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಟ್ಟಿಲ್ಲ. ಇವತ್ತು ಪ್ರಜಾಪ್ರಭುತ್ವ ದುರ್ಬಲ ಮಾಡಲು ಹೊರಟಿದ್ದಾರೆ. ಸಾಂವಿಧಾನಿಕ ಹಕ್ಕುಗಳನ್ನ ವೀಕ್ ಮಾಡಲು ಹೊರಟ್ಟಿದ್ದಾರೆ. ಅಷ್ಟೇ ಅಲ್ಲ ಸಂವಿಧಾನವನ್ನೇ ಬದಲಾಯಿಸಲು ಹೊರಟಿದ್ದಾರೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಇಬ್ಬರು ಸಿಎಂಗಳನ್ನ ಜೈಲಿಗೆ ಹಾಕಿದ್ದಾರೆ. ಪ್ರಧಾನಿ ಮೋದಿ ಪ್ರಕಾರ ಎಲ್ಲರೂ ಭ್ರಷ್ಟರು, ತಾನೊಬ್ಬನೇ ಪ್ರಮಾಣಿಕ ಅಂದುಕೊಂಡಿದ್ದಾರೆ. ಆದರೆ ಚುನಾವಣಾ ಬಾಂಡ್ ಮೂಲಕ ಭ್ರಷ್ಟಾಚಾರ ಮಾಡ್ತಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ವಾಗ್ದಾಳಿ ಮಾಡಿದ್ದಾರೆ. ಚುನಾವಣಾ ಬಾಂಡ್ ಬಗ್ಗೆ ಮಾಹಿತಿ ಕೊಡಿ ಅಂತ ಸುಪ್ರೀಂಕೋರ್ಟ್ ಹೇಳಿತ್ತು. ಆದರೆ ಮಾಹಿತಿ ಇಲ್ಲ ಎಂದಿತ್ತು. ಬಿಜೆಪಿ ಸಂಗ್ರಹಿಸಿದ್ದು ಚಂದಾ ಅಲ್ಲ ಇದು, ವಸೂಲಿ ಎಂದಿದ್ದಾರೆ.