ಆಮ್ಲಜನಕ ಮಾತ್ರವಲ್ಲ, ವೈದ್ಯರ ಹಾಗೂ ದಾದಿಯರ ಕೊರತೆಯೂ ಇದೆ: ಡಾ. ದೇವಿ ಪ್ರಸಾದ್‌ ಶೆಟ್ಟಿ

[Sassy_Social_Share]

ಕರೊನಾ 2 ನೇ ಅಲೆ ಇನ್ನೂ 4-5 ತಿಂಗಳು ಭಾರತವನ್ನು ಕಾಡಲಿದೆ. ಮುಂದಿನ ದಿನಗಳಲ್ಲಿ 5 ಲಕ್ಷ ಐಸಿಯು ಬೆಡ್‌ಗಳ ಅಗತ್ಯವಿದೆ. ಭಾರತದಲ್ಲಿ 2 ಲಕ್ಷ ನರ್ಸ್ ಹಾಗೂ 1.5 ಲಕ್ಷ ವೈದ್ಯರ ಅಗತ್ಯ ಬೀಳಬಹುದು ಎಂದು ಖ್ಯಾತ ಹೃದಯ ತಜ್ಞ ಡಾ. ದೇವಿ ಪ್ರಸಾದ್ ಶೆಟ್ಟಿ ಮುನ್ಸೂಚನೆ ನೀಡಿದ್ದಾರೆ.

 ಸದ್ಯ 3 ಲಕ್ಷಗಳಿಗಿಂತ ಅಧಿಕ ಹೊಸ ಕರೋನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಪ್ರತಿದಿನ ಪತ್ತೆಯಾಗುವ ಪ್ರಕರಣಗಳ ಸಂಖ್ಯೆ ಗರಿಷ್ಠ 5 ಲಕ್ಷಕ್ಕೆ ಏರಬಹುದು. ಸೋಂಕಿತರಲ್ಲಿ ಶೇ. 5 ಕ್ಕಿಂತ ಹೆಚ್ಚು ಜನರಿಗೆ ಐಸಿಯು ಬೆಡ್‌ಗಳ ಅಗತ್ಯವಿದೆ. ಭಾರತದಲ್ಲಿ 90 ಸಾವಿರ ಇರುವ ಐಸಿಯು ಬೆಡ್‌ಗಳನ್ನು 5 ಲಕ್ಷಕ್ಕೆ ಏರಿಸಬೇಕಿದೆ ಎಂದು ದೇವಿ ಶೆಟ್ಟಿ ಎಚ್ಚರಿಸಿದ್ದಾರೆ.

ಭೀಕರ ಪರಿಸ್ಥಿತಿಯನ್ನು ಎದುರಿಸಲು ಆಮೂಲಾಗ್ರ ಪರಿಹಾರಗಳನ್ನು ಸಹ ಸೂಚಿಸಿದ್ದಾರೆ. ಪ್ರಸ್ತುತ, ಭಾರತವು ಕೇವಲ 75,000 ರಿಂದ 90,000 ಐಸಿಯು ಹಾಸಿಗೆಗಳು ಮಾತ್ರ ಇವೆ. ಅದಾಗಲೇ ಬಹುತೇಕ ಎಲ್ಲಾ ಹಾಸಿಗೆಗಳೂ ಭರ್ತಿ ಆಗಿವೆ. ಇನ್ನು ಎರಡನೇ ಅಲೆ ಮಧ್ಯದ ಸ್ಥಿತಿಯಲ್ಲಿದ್ದು ಅದು ಉತ್ತುಂಗಕ್ಕೇರಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ ಎಂದಿದ್ದಾರೆ.

ಐಸಿಯುಗಳಲ್ಲಿನ ರೋಗಿಗಳು ಆಮ್ಲಜನಕದ ಕೊರತೆಯಿಂದಾಗಿ ಸಾಯುತ್ತಿದ್ದಾರೆ. ಇದು ಒಂದು ಕಡೆಯಾದರೆ ಮತ್ತೊಂದೆಡೆ ರೋಗಿಗಳನ್ನು ನೋಡಿಕೊಳ್ಳಲು ದಾದಿಯರು ಮತ್ತು ವೈದ್ಯರು ಸಾಲುವುದಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಪುಣೆಯ ಸಿಂಬಯೋಸಿಸ್ ಗೋಲ್ಡನ್ ಜುಬಿಲಿ ಆಯೋಜಿಸಿದ ಆನ್‌ಲೈವ್‌ ಸಭೆಯಲ್ಲಿ ಉಪನ್ಯಾಸ ಮಾಡಿದ ಅವರು, ಕೋವಿಡ್ ಪಾಸಿಟಿವ್ ಬಂದ ಪ್ರತಿ ರೋಗಿಯ ಮನೆಯಲ್ಲಿ ಕನಿಷ್ಠ 5 ರಿಂದ 10 ಜನರಿರುತ್ತಾರೆ. ಆದರೆ ಅವರು ಪರೀಕ್ಷೆಗೆ ಒಳಗಾಗುವುದಿಲ್ಲ. ಇದನ್ನು ಲೆಕ್ಕಾಚಾರ ಮಾಡಿದರೆ ಭಾರತದಲ್ಲಿ ಈಗಲೂ ಪ್ರತಿದಿನ 15 ರಿಂದ 20 ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದ್ದಾರೆ.  

ಸೋಂಕಿಗೆ ಒಳಗಾದವರ ಪೈಕಿ ಹಲವರಿಗೆ ಐಸಿಯು ಹಾಸಿಗೆಯ ಅಗತ್ಯವಿರುತ್ತದೆ. ಸರಾಸರಿ, ಐಸಿಯುನಲ್ಲಿ ರೋಗಿಯು ಕನಿಷ್ಠ 10 ದಿನಗಳ ಕಾಲ ಚಿಕಿತ್ಸೆ ಪಡೆಯಬೇಕಾಗುತ್ತದೆ. ಹಾಗಾಗಿ, ಇನ್ನೂ ಸಾಕಷ್ಟು ಐಸಿಯುಗಳ ಅಗತ್ಯವಿದೆ. ಅದೂ ಅಲ್ಲದೆ, ಕೇವಲ ಐಸಿಯುಗಳಿದ್ದರೆ ಸಾಲದು. ರೋಗಿಗಳಿಗೆ ಚಿಕಿತ್ಸೆ ನೀಡಲು ದಾದಿಯರು, ವೈದ್ಯರು ಮತ್ತು ಅರೆವೈದ್ಯರು ಇರಬೇಕಾಗುತ್ತದೆ. ಐಸಿಯುಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆ ಹೆಚ್ಚಾಗಿ ದಾದಿಯರ ಮೇಲೆ ಅವಲಂಬಿತವಾಗಿರುತ್ತದೆ. ಸಾಂಕ್ರಾಮಿಕ ರೋಗ ಪ್ರಾರಂಭವಾಗುವ ಮೊದಲೇ ಸರ್ಕಾರಿ ಆಸ್ಪತ್ರೆಗಳು ದೇಶಾದ್ಯಂತ ಶೇಕಡಾ 78ರಷ್ಟು ವೈದ್ಯಕೀಯ ತಜ್ಞರ ಕೊರತೆ ಇತ್ತು. ಈಗ, ಮುಂದಿನ ಕೆಲವು ವಾರಗಳಲ್ಲಿ ನಾವು ಕನಿಷ್ಠ ಎರಡು ಲಕ್ಷ ದಾದಿಯರು ಮತ್ತು ಕನಿಷ್ಠ ಒಂದೂವರೆ ಲಕ್ಷ ವೈದ್ಯರನ್ನು ನಿಯೋಜಿಸಬೇಕಿದೆ ಎಂದು ಅವರು ಹೇಳಿದ್ದಾರೆ.  

ಪ್ರಸ್ತುತ ಇರುವ ಕರೋನಾ ಎರಡನೇ ಅಲೆಯು ಸುಮಾರು 4 ರಿಂದ 5 ತಿಂಗಳು ಇರಲಿದ್ದು, ತದನಂತರ ನಾವು ಮೂರನೇ ಅಲೆಗೂ ಸಿದ್ಧರಾಗಿರಬೇಕು ಎಂದು ದೇವಿ ಶೆಟ್ಟಿ ಹೇಳಿದ್ದಾರೆ. 

Related posts

Latest posts

ನೆಹರೂ-ಗಾಂಧಿ ಕುಟುಂಬದಿಂದಲೇ ಭಾರತ ಇಂದು ಉಳಿದುಕೊಂಡಿದೆ: ಕೇಂದ್ರಕ್ಕೆ ಚಾಟಿಯೇಟು ನೀಡಿದ ಶಿವಸೇನೆ

COVID-19 ಅನ್ನು ನಿಭಾಯಿಸಲು ನೆರೆಹೊರೆಯ ಸಣ್ಣ ದೇಶಗಳು ಭಾರತಕ್ಕೆ ಸಹಾಯ ನೀಡುತ್ತಿದ್ದರೆ, ದೆಹಲಿಯಲ್ಲಿ ಬಹುಕೋಟಿ ಸೆಂಟ್ರಲ್ ವಿಸ್ಟಾ ಯೋಜನೆಯ ಕೆಲಸವನ್ನು ನಿಲ್ಲಿಸುವ ಕನಿಷ್ಟ ಸೌಜನ್ಯವನ್ನೂ ಮೋದಿ ಸರ್ಕಾರ ತೋರುತ್ತಿಲ್ಲ ಎಂದು ಕೇಂದ್ರ ಸರ್ಕಾರವನ್ನು...

ರಾಜ್ಯಗಳಿಗೆ ಆಕ್ಸಿಜನ್ ವಿತರಿಸಲು 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆ ಸ್ಥಾಪಿಸಿದ ಸುಪ್ರೀಂ ಕೋರ್ಟ್.!

ದೇಶಾದ್ಯಂತ ಕರೋನ ಎರಡನೇ ಅಲೆ ವ್ಯಾಪಕವಾಗಿ ಹರಡಿರುವ ಮಧ್ಯೆ ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದು ಅದನ್ನು ಸಮರ್ಪಕವಾಗಿ ಎದುರಿಸಲು ಮತ್ತು ವೈಜ್ಞಾನಿಕವಾಗಿ ಮೆಡಿಕಲ್ ಆಕ್ಸಿಜನ್ಗಳನ್ನು ಹಂಚುವ ವಿಧಾನವನ್ನು ರೂಪಿಸಲು...

ಲಾಕ್ ಡೌನ್ ಘೋಷಿಸಿ ಬಡವರ್ಗದವರಿಗೆ ಯಾವುದೇ ಯೋಜನೆ ಘೋಷಿಸದ ರಾಜ್ಯ ಸರ್ಕಾರ

ಕೊರೋನ ಸಾಂಕ್ರಮಿಕವು ದಿನೇ ದಿನೇ ಉಲ್ಪಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಇದಕ್ಕೆ ಕಡಿವಾಣ ಹಾಕಲು ಸರ್ಕಾರಗಳು ಲಾಕ್ ಡೌನ್ ಘೋಷಿಸಿವೆ. ಇದು ಅನಿವಾರ್ಯ ಕ್ರಮವೂ ಕೂಡ ಆಗಿದೆ. ಆದರೆ ಈ ಲಾಕ್ ಡೌನ್ ಘೋಷಣೆಯಿಂದ...