ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು (Droupadi Murmu) ಅವರನ್ನು ಎನ್‌ಡಿಎ ರಾಷ್ಟ್ರಪತಿ (President) ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ʼಸಮಕಾಲೀನ ಭಾರತದಲ್ಲಿ ದಲಿತ ರಾಜಕಾರಣʼದ ಕುರಿತು ಚಿಂತಕ ಕಾಂಚ ಐಲಯ್ಯ (Kancha Ilaiah) ಶೆಪರ್ಡ್ ಅವರೊಂದಿಗೆ ಮಳೆಯಾಲಂ doolnews ಮಾಡಿದ ಸಂದರ್ಶನ ಆಯ್ದ ಭಾಗ ಇಲ್ಲಿದೆ. (ಓದುಗರಿಗೆ ಅನುಕೂಲವಾಗಲು ಹಲವು ಭಾಗಗಳಲ್ಲಿ ಪ್ರಕಟ ಮಾಡಲಾಗುವುದು)
Also Read : ಹಿಂದೂ ಧರ್ಮದಿಂದ ದಲಿತರ ಪ್ರಗತಿ ಸಾಧ್ಯವಿಲ್ಲ, ಅಲ್ಪಸಂಖ್ಯಾತ, ದಲಿತ ಸಮಸ್ಯೆ ಒಂದೇ ಅಲ್ಲ : ಕಾಂಚ ಐಲಯ್ಯ | ಭಾಗ-2
ಪ್ರಶ್ನೆ: ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಎನ್‌ಡಿಎ ಆಯ್ಕೆ ಮಾಡಿದೆ. ಬುಡಕಟ್ಟು ಗುಂಪಿನಿಂದ ಮೊದಲ ಭಾರತೀಯ ರಾಷ್ಟ್ರಪತಿ ಎಂಬ ಇತಿಹಾಸಕ್ಕಾಗಿ ಈ ಅಭ್ಯರ್ಥಿ ಚುನಾವಣೆಯನ್ನು ಮುನ್ನಡೆಸುತ್ತಿದ್ದಾರೆ ಎಂಬುದು ಒಂದು ವಾದ. ಬುಡಕಟ್ಟು ಗುಂಪುಗಳಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಮತ್ತು ತಮ್ಮನ್ನು ಒಳಗೊಳ್ಳುವ ಪಕ್ಷ ಎಂಬ ತಪ್ಪು ಗ್ರಹಿಕೆಯನ್ನು ಹುಟ್ಟುಹಾಕುವ ಮೂಲಕ ರಾಜಕೀಯ ಲಾಭ ಪಡೆಯಲು ಬಿಜೆಪಿಯ ನಡೆ ಇದಾಗಿದೆ ಎಂಬುದು ಪ್ರತಿವಾದ. ಈ ಸಂದರ್ಭಗಳನ್ನು ನೀವು ಹೇಗೆ ಮೌಲ್ಯಮಾಪನ ಮಾಡುತ್ತೀರಿ?
ಕಾಂಚ ಐಲಯ್ಯ : ಆಡಳಿತ ಪಕ್ಷವು ಗೆಲ್ಲುವ ಹೆಚ್ಚಿನ ಸಂಭವನೀಯತೆ ಇರುವ ಸ್ಥಾನಕ್ಕೆ ಬುಡಕಟ್ಟು ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಿದರೆ ಅದು ಸಕಾರಾತ್ಮಕ ಹೆಜ್ಜೆಯಾಗಿದೆ. ಕಾಂಗ್ರೆಸ್, ಯುಪಿಎ ಮೈತ್ರಿಕೂಟ ಅಥವಾ ಇತರ ಪಕ್ಷಗಳು ಇದನ್ನು ಮೊದಲೇ ಮಾಡಬಹುದಿತ್ತು. ಹಾಗೆ ಮಾಡಿದ್ದರೆ ಬುಡಕಟ್ಟು ಮಹಿಳೆಯೊಬ್ಬರು ರಾಷ್ಟ್ರಪತಿ ಅಭ್ಯರ್ಥಿಯಾಗುವುದು ಇಷ್ಟು ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ಇದು ಬುಡಕಟ್ಟು ಜನಾಂಗದ ಮತಗಳನ್ನು ಗೆಲ್ಲುವ, ಪಕ್ಷದ ವರ್ಚಸ್ಸು ಹೆಚ್ಚಿಸುವ ಅಥವಾ ಎಲ್ಲರನ್ನೂ ಒಳಗೊಳ್ಳುವ ಸರ್ಕಾರ ಎಂದು ತೋರಿಸುವ ಪ್ರಯತ್ನ ಎಂಬ ಚರ್ಚೆಯೂ ನಡೆದಿಲ್ಲ.
ಇದೆಲ್ಲವೂ ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷಗಳು ಈ ನೆಲದ ಮೊದಲ ಜನರತ್ತ ಹಿಂತಿರುಗಿ ನೋಡಿಲ್ಲ ಎಂಬುದನ್ನು ಸೂಚಿಸುತ್ತದೆ. ದೇಶದ ಒಟ್ಟು ಜನಸಂಖ್ಯೆಯ ಸುಮಾರು 8.5 ಪ್ರತಿಶತ ಬುಡಕಟ್ಟು ಗುಂಪುಗಳಿಗೆ ಸೇರಿದೆ. ಅವರಲ್ಲಿ ಯಾರನ್ನಾದರೂ ಈಗ ನಿರ್ಣಾಯಕ ಪಕ್ಷದ ಸದಸ್ಯರು ಒಂದು ಹಂತದಲ್ಲಿ ರಾಷ್ಟ್ರಪತಿಯನ್ನಾಗಿ ಮಾಡಬಹುದಿತ್ತು. ಆದರೆ ಅವರ್ಯಾರೂ ಮಾಡಲಿಲ್ಲ ಎಂದು ಹೇಳಿದ್ಧಾರೆ.
ಮುಂದುವರೆಯುವುದು…