ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಎಲ್ಲಾ ರಾಜಕಾರಣಿಗಳು ಮನೆ ಮನೆಗೆ ತೆರಳಿ ಮತ ಕೇಳುತ್ತಿದ್ದಾರೆ. ಯುಪಿಯ ಏರಿಯಾವೊಂದಕ್ಕೆ ಬಿಜೆಪಿ ಅಭ್ಯರ್ಥಿಯ ಪರ ಪ್ರಚಾರಕ್ಕೆ ತೆರಳಿದ ಕೇಂದ್ರ ನಾಯಕರಿಗೆ ಶೂಗಳನ್ನು ತೋರಿ ಪ್ರತಿಭಟಿಸಿರುವ ಘಟನೆ ನಡೆದಿದೆ.
ಹೌದು, ಚುನಾವಣೆ ಪ್ರಚಾರಕ್ಕೆಂದು ನಿನ್ನೆ ಸೆಕ್ಟರ್ 17 ರ ಕೊಳೆಗೇರಿಯನ್ನು ತಲುಪಿದ ತಿವಾರಿಗೆ ಅಲ್ಲಿನ ಜನರು ಅವರ ವಿರುದ್ಧ ಶೂಗಳನ್ನು ತೋರಿಸಿ ಪ್ರತಿಭಟಿಸಿದ್ದಾರೆ. ಅಷ್ಟೇ ಅಲ್ಲ ಮಹಿಳೆಯೊಬ್ಬರು ಅಖಿಲೇಶ್ ಯಾದವ್ ಪರ ಘೋಷಣೆ ಕೂಗಿದ್ದಾರೆ. ಮನೋಜ್ ತಿವಾರಿ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಮನೋಜ್ ತಿವಾರಿ ಬಿಜೆಪಿ ಅಭ್ಯರ್ಥಿ ಪಂಕಜ್ ಸಿಂಗ್ ಅವರಿಗೆ ಮತ ಕೇಳಲು ನೋಯ್ಡಾಕ್ಕೆ ಬಂದಿದ್ದರು. ಮನೆ ಮನೆಗೆ ಪ್ರಚಾರದ ಸಮಯದಲ್ಲಿ, ಮನೋಜ್ ಸೆಕ್ಟರ್ 17 ರ ಕೊಳೆಗೇರಿಯನ್ನು ತಲುಪಿದಾಗ, ಅವರು ಸ್ಥಳೀಯರ ಭಾರೀ ವಿರೋಧವನ್ನು ಎದುರಿಸಬೇಕಾಯಿತು. ಪ್ರತಿಭಟನೆಯಿಂದಾಗಿ ಮನೋಜ್ ತಿವಾರಿ ಅವರು ಸೆಕ್ಟರ್ 66, ಸೆಕ್ಟರ್ 71, ಸೆಕ್ಟರ್ 82 ರಲ್ಲಿ ಮಾತ್ರ ಮನೆ ಮನೆ ಪ್ರಚಾರ ಕೈಗೊಂಡು ಜನರಿಗೆ ಮತ ನೀಡುವಂತೆ ಮನವಿ ಮಾಡಿದರು.