• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಾಂಗ್ರೆಸ್‌ನಲ್ಲಿ ಯಾವ ಸಭೆಯೂ ನಡೆಯಲ್ಲ.. ಪಕ್ಷ ವಿಪಕ್ಷಕ್ಕೆ ಡಿಸಿಎಂ ಡಿಚ್ಚಿ

ಕೃಷ್ಣ ಮಣಿ by ಕೃಷ್ಣ ಮಣಿ
January 10, 2025
in Top Story, ಕರ್ನಾಟಕ, ರಾಜಕೀಯ, ವಿಶೇಷ
0
ಕಾಂಗ್ರೆಸ್‌ನಲ್ಲಿ ಯಾವ ಸಭೆಯೂ ನಡೆಯಲ್ಲ.. ಪಕ್ಷ ವಿಪಕ್ಷಕ್ಕೆ ಡಿಸಿಎಂ ಡಿಚ್ಚಿ
Share on WhatsAppShare on FacebookShare on Telegram

ADVERTISEMENT

ಸಿಎಂ ಸಿದ್ದರಾಮಯ್ಯ ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ್‌ ಮೀಟ್‌ ಮಾಡಿದ್ರು. ಆ ಬಳಿಕ ಡಾ ಜಿ ಪರಮೇಶ್ವರ್‌ ಕೂಡ ದಲಿತ ಸಮುದಾಯದ ಮುಖಂಡರಿಗೆ ಡಿನ್ನರ್‌ ಮಿಟ್‌ ಆಯೋಜನೆ ಮಾಡಿದ್ದರು. ಆದರೆ ಹೈಕಮಾಂಡ್‌ ಮಧ್ಯಪ್ರವೇಶದ ಬಳಿಕ ಡಿನ್ನರ್‌ ಮೀಟ್‌ ರದ್ದು ಮಾಡಲಾಗಿತ್ತು. ಆದರೆ ಇದೀಗ ಸ್ವತಃ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ ಶಿವಕುಮಾರ್‌ ಡಿನ್ನರ್‌ ಮೀಟಿಂಗ್‌ ಮಾಡಿದ್ದಾರೆ. ಕಾಂಗ್ರೆಸ್‌ ಪಕ್ಷ ಸಂಘಟನೆ, ಬೆಳಗಾವಿ ಸಮಾವೇಶದ ಬಗ್ಗೆ ಚರ್ಚೆ ಮಾಡಿದ ಬಳಿಕ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಡಿನ್ನರ್‌ ಸಭೆ ಚರ್ಚೆಗಳಿಗೆಲ್ಲಾ ಡಿ.ಕೆ ಶಿವಕುಮಾರ್‌ ಸ್ಪಷ್ಟ ಉತ್ತರ ನೀಡಿದರು.

DK Shivakumar :ಕುಮಾರಸ್ವಾಮಿ ಕದ್ದು ಪೂಜೆ ಮಾಡ್ತಾನೆ ನಾನ್ ನೇರವಾಗಿ ಪೂಜೆ ಮಾಡ್ತೀನಿ  Dks ವಾರ್ನಿಂಗ್.! #dks #hdk

ರಾಜ್ಯದಲ್ಲಿ 100 ಕಾಂಗ್ರೆಸ್‌‌ ಕಚೇರಿಗಳನ್ನು ಕಟ್ಟಲು ತೀರ್ಮಾನ ಮಾಡಲಾಗಿದೆ. ಜನವರಿ 13ಕ್ಕೆ ಎಲ್ಲಾ ಕಾಂಗ್ರೆಸ್‌ ಪ್ರಮುಖರನ್ನ ಸಭೆಗೆ ಆಹ್ವಾನ ಮಾಡಿದ್ದೇವೆ. ರಣದೀಪ್‌ ಸಿಂಗ್‌ ಸುರ್ಜೇವಾಲ ಕೂಡ ಬರ್ತಾರೆ, ಸಂಜೆ ಶಾಸಕಾಂಗ ಪಕ್ಷದ ಸಭೆ ಇದೆ ಎಂದಿದ್ದಾರೆ ಡಿ.ಕೆ ಶಿವಕುಮಾರ್‌. ಇನ್ನು ಗೃಹ ಸಚಿವ ಪರಮೇಶ್ವರ್‌ ಹಾಗು ಸಚಿವ ಕೆ.ಎನ್‌ ರಾಜಣ್ಣ ಮಾತಿಗೆ ಡಿ.ಕೆ ಶಿವಕುಮಾರ್‌ ತಿರುಗೇಟು ನೀಡುವ ಕೆಲಸ ಮಾಡಿದ್ದಾರೆ. ಡಿನ್ನರ್‌ ಮೀಟ್‌ ರದ್ದು ಆಗಿಲ್ಲ, ಕೇವಲ ಮುಂದೂಡಿಕೆ ಮಾಡಿದ್ದೇವೆ ಎಂದಿದ್ದರು. ದಲಿತ ಸಭೆ ರದ್ದು ಮಾಡಲು ಯಾರಿಗೂ ಸಾಧ್ಯವಿಲ್ಲ ಅಂತಾನೂ ಟಾಂಟ್‌ ಕೊಟ್ಟಿದ್ರು. ಇದೀಗ ಡಿಕೆ ಶಿವಕುಮಾರ್‌ ತಿರುಗೇಟು ನೀಡಿದ್ದಾರೆ. ಯಾವ ಸಭೆನೂ ಇಲ್ಲ, ಯಾರೂ ಸಭೆಯನ್ನೂ ಮಾಡೋದಿಲ್ಲ. ಏನೇ ಇದ್ರೂ ಸಿಎಂ ಸಂಪುಟದಲ್ಲಿ ಚರ್ಚಿಸ್ತಾರೆ ಎಂದಿದ್ದಾರೆ ಡಿ.ಕೆ ಶಿವಕುಮಾರ್‌.

ಯಾರೂ ಸಭೆ ತಡೆಯೋಕೆ ಆಗಲ್ಲ ಅಂದಿದ್ದ ಸಚಿವ ಕೆ.ಎನ್‌.ರಾಜಣ್ಣಗೆ ತಿರುಗೇಟು ನೀಡಿದ್ದಾರೆ. SC.ST ಸಭೆ ನಡೆದೇ ನಡೆಯುತ್ತೆ ಎಂದಿದ್ದ ಪರಮೇಶ್ವರ್‌ಗೂ ಗುದ್ದು ಕೊಟ್ಟಿದ್ದಾರೆ. ಇದೇ ವೇಳೆ ದೊಡ್ಡವರ ಬಗ್ಗೆ ಮಾತಾಡಲ್ಲ ಅನ್ನೋ ಮೂಲಕ ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಡಿದ್ದಾರೆ. ಡಿ.ಕೆ ಶಿವಕುಮಾರ್‌ ಸಿಎಂ ಆಗ್ತಾರೆ ಅಂತ ವಿನಯ್ ಗುರೂಜಿ ಭವಿಷ್ಯ ನುಡಿದ ಬಗ್ಗೆಯೂ ಡಿ.ಕೆ ಶಿವಕುಮಾರ್‌ ಮಾತನಾಡಿ, ನಾನು ಎಲ್ಲಾ ಸ್ವಾಮೀಜಿ, ಗುರೂಜಿಗಳಿಗೆ ವಿನಂತಿ ಮಾಡ್ತೀನಿ, ಸರ್ಕಾರದ ವಿಚಾರದಲ್ಲಿ ಯಾರ ಹೇಳಿಕೆನೂ ಬೇಡ ಎಂದಿದ್ದಾರೆ. ಇನ್ನು ಎಲ್ಲಾ ಇಲಾಖೆಯಲ್ಲಿ ರೇಟ್ ಕಾರ್ಡ್ ಫಿಕ್ಸ್ ಆಗಿದೆ ಅನ್ನೋ ಹೆಚ್‌.ಡಿ ಕುಮಾರಸ್ವಾಮಿ ಆರೋಪಕ್ಕೂ ಡಿ.ಕೆ ಶಿವಕುಮಾರ್‌ ಕಿಡಿಕಾರಿದ್ದು, ಅನುಭವದ ಮಾತು ಅಂತ ವ್ಯಂಗ್ಯವಾಡಿದ್ದಾರೆ.

Tags: :congress leader siddaramaiah100 crore relief fund for kodaguchief minister of karnatakacm announces 100 crore for kodagucongress cm candidatecongress cm candidate in karnatakaCongress High CommandDK Shivakumarkarnataka election resultKarnataka Election Result 2023karnataka election result 2023 datekarnataka election result liveKarnataka Election Resultskarnataka election results livekumaraswamy press meet in kodagu
Previous Post

ಗಾಂಧಿ ಭಾರತ ಕಾರ್ಯಕ್ರಮ, 100 ಕಾಂಗ್ರೆಸ್ ಕಚೇರಿ ನಿರ್ಮಾಣದ ಬಗ್ಗೆ ಚರ್ಚೆ: ಡಿಸಿಎಂ ಡಿ.ಕೆ. ಶಿವಕುಮಾರ್

Next Post

ಶ್ರೀಮಂತರಿಗೆ ಮಾತ್ರ ಸೀಮಿತ ಆದನೇ ವೈಕುಂಠದ ಒಡೆಯ ವೆಂಕಟೇಶ್ವರ..?

Related Posts

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ
Top Story

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

by ಪ್ರತಿಧ್ವನಿ
April 10, 2026
0

ಐಟಿ ದಾಳಿ ನಡೆಯುತ್ತಿರುವ ಸಂದರ್ಭದಲ್ಲೇ ಆತ್ಮಹತ್ಯೆಗೆ ಶರಣಾಗಿ ಭಾರೀ ಚರ್ಚೆಗೆ ಕಾರಣವಾಗಿದ್ದ ಕಾನ್ಫಿಡೆಂಟ್ ಗ್ರೂಪ್ ಸಂಸ್ಥೆಯ ಮುಖ್ಯಸ್ಥ ಸಿಜೆ ರಾಯ್ ಪ್ರಕರಣದ ತನಿಖೆ ಇದೀಗ ಅಂತಿಮ ಹಂತ...

Read moreDetails
ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

April 10, 2026
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

April 9, 2026
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
Next Post
ಶ್ರೀಮಂತರಿಗೆ ಮಾತ್ರ ಸೀಮಿತ ಆದನೇ ವೈಕುಂಠದ ಒಡೆಯ ವೆಂಕಟೇಶ್ವರ..?

ಶ್ರೀಮಂತರಿಗೆ ಮಾತ್ರ ಸೀಮಿತ ಆದನೇ ವೈಕುಂಠದ ಒಡೆಯ ವೆಂಕಟೇಶ್ವರ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada