• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, July 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೊಸ ತಿರುವು; ದರ್ಶನ್ ಪ್ರಕರಣದಲ್ಲಿ ಹೊಸ ಬೆಳವಣಿಗೆ

ಪ್ರತಿಧ್ವನಿ by ಪ್ರತಿಧ್ವನಿ
July 1, 2026
in Top Story
0
ಸಮಂತಾ ಹೇಳ್ತಾರೆ… ‘ಇದು ನನ್ನ ಸಿಕ್ಸ್​ ಪ್ಯಾಕ್’! ಬೇಬಿ ಬಂಪ್ ಫೋಟೋ ಹಂಚಿಕೊಂಡ ನಟಿ
Share on WhatsAppShare on FacebookShare on Telegram

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಆರೋಪಿಗಳ ವಿರುದ್ಧ ನಡೆಯುತ್ತಿರುವ ವಿಚಾರಣೆಗೆ ಮತ್ತೊಂದು ಮಹತ್ವದ ತಿರುವು ಸಿಕ್ಕಿದೆ. ಪ್ರಕರಣದ ಪ್ರಮುಖ ಪ್ರಾಸಿಕ್ಯೂಷನ್ ಸಾಕ್ಷಿದಾರನೊಬ್ಬ, ತನ್ನ ಸಾಕ್ಷ್ಯವನ್ನು ಬದಲಾಯಿಸಲು ಅಪರಿಚಿತರು ಒತ್ತಡ ಹೇರಿದ್ದಾರೆ ಎಂದು ನ್ಯಾಯಾಲಯದಲ್ಲೇ ಹೇಳಿಕೆ ನೀಡಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಕಠಿಣ ಎಚ್ಚರಿಕೆ ನೀಡಿದೆ.ನಗರದ 58ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಮಂಗಳವಾರ ಪ್ರಕರಣದ ವಿಚಾರಣೆ ನಡೆಯಿತು. ಈ ವೇಳೆ 49ನೇ ಪ್ರಾಸಿಕ್ಯೂಷನ್ ಸಾಕ್ಷಿಯಾಗಿರುವ ಚಿತ್ರದುರ್ಗದ ದುರ್ಗಾ ಬಾರ್ ಆ್ಯಂಡ್ ರೆಸ್ಟೋರೆಂಟ್‌ನ ಕ್ಯಾಷಿಯರ್ ಹಾಗೂ ತುಮಕೂರಿನ ರಂಗಾಪುರ ನಿವಾಸಿ ಸಂದೀಪ್ ವಿಚಾರಣೆಗೆ ಹಾಜರಾದರು. ರೇಣುಕಾಸ್ವಾಮಿ ಹಾಗೂ ಆರೋಪಿಗಳು ಬಾರ್‌ಗೆ ಬಂದಿದ್ದ ವೇಳೆ ಅಲ್ಲಿ ಇದ್ದ ಕಾರಣ, ಸಂದೀಪ್ ಈ ಪ್ರಕರಣದ ಪ್ರಮುಖ ಸಾಕ್ಷಿದಾರರಾಗಿದ್ದಾರೆ.

ADVERTISEMENT
Bengaluru's First Hebbal Tunnel Road : CM ಡಿಕೆಶಿ ಕನಸಿನ ಕೂಸು ಟನಲ್ ರಸ್ತೆ ನಿರ್ಮಾಣ.! #pratidhvani

ವಿಶೇಷ ಸರ್ಕಾರಿ ಅಭಿಯೋಜಕರ ಮುಖ್ಯ ಪರೀಕ್ಷೆ ಆರಂಭವಾಗುವ ಮುನ್ನವೇ, ಸಂದೀಪ್ ನ್ಯಾಯಾಲಯದ ಅನುಮತಿ ಪಡೆದು ಮಹತ್ವದ ವಿಷಯವೊಂದನ್ನು ತಿಳಿಸುವುದಾಗಿ ಹೇಳಿದರು. ಕೆಲ ಅಪರಿಚಿತರು ತನ್ನನ್ನು ಸಂಪರ್ಕಿಸಿ ಪ್ರಕರಣಕ್ಕೆ ಸಂಬಂಧಿಸಿದ ಹೇಳಿಕೆಯನ್ನು ಬದಲಾಯಿಸಲು ಪ್ರಯತ್ನಿಸಿದ್ದಾರೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು.ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶೆ ಸುಜಾತಾ ಎಂ. ಸಾಂಬ್ರಾಣಿ, ಸಾಕ್ಷ್ಯವನ್ನು ತಿರುಚಲು ಅಥವಾ ನಾಶಪಡಿಸಲು ಯತ್ನಿಸುವವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಯಾವುದೇ ವ್ಯಕ್ತಿ ಸಾಕ್ಷಿದಾರರ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆಸಿದರೆ ನ್ಯಾಯಾಲಯ ಅದನ್ನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಂದೀಪ್ ಅವರು ನೀಡಿದ ಮೌಖಿಕ ಹೇಳಿಕೆಗೆ ಸಂಬಂಧಿಸಿದಂತೆ ಪ್ರತ್ಯೇಕ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಅಲ್ಲದೆ, ವಿಚಾರಣೆ ಪೂರ್ಣಗೊಳ್ಳುವವರೆಗೆ ಅವರಿಗೆ ಅಗತ್ಯ ಪೊಲೀಸ್ ರಕ್ಷಣೆ ಒದಗಿಸುವಂತೆ ತನಿಖಾಧಿಕಾರಿಗೆ ಆದೇಶಿಸಲಾಗಿದೆ.

🌧️☔ರಾಜ್ಯ ಹವಾಮಾನ ವರದಿ.! CS Patil | Weather Report | Heavy Rain | PRATIDHVANI | FULL RANI

 

ವಿಚಾರಣೆ ವೇಳೆ ನ್ಯಾಯಾಧೀಶರು ಸಾಕ್ಷಿದಾರರಿಗೆ ಧೈರ್ಯ ತುಂಬಿ, “ಯಾರಿಗೂ ಹೆದರಬೇಡಿ. ನ್ಯಾಯಾಲಯ ನಿಮ್ಮ ರಕ್ಷಣೆಗೆ ನಿಂತಿದೆ. ನಿಮಗೆ ತಿಳಿದಿರುವ ಸತ್ಯವನ್ನು ನಿರ್ಭಯವಾಗಿ ಹೇಳಿ” ಎಂದು ಸೂಚಿಸಿದರು.ಪ್ರಕರಣದ ಮುಂದಿನ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಗಿದ್ದು, ಸಾಕ್ಷಿದಾರ ಸಲ್ಲಿಸುವ ಅಫಿಡವಿಟ್ ಆಧರಿಸಿ ಸಾಕ್ಷ್ಯ ತಿರುಚಲು ಯತ್ನಿಸಿದ ಆರೋಪಗಳ ಕುರಿತು ಪ್ರತ್ಯೇಕ ತನಿಖೆ ನಡೆಸುವ ಸಾಧ್ಯತೆ ಇದೆ. ಈ ಬೆಳವಣಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಮತ್ತಷ್ಟು ಮಹತ್ವ ಪಡೆದಿದೆ.

Tags: @RenukaswamyMurderCase#BengaluruCourt#darshan#indianews#justice#karnataka#LegalUpdate#PoliceInvestigation#SessionsCourt#WitnessProtection#WitnessTamperingbreakingnewscrimenewsDARSHANTHOOGUDEEPAkannadaactor
Previous Post

‘ತಪ್ಪು ಮಾಡಿದರೆ ಬಹಿರಂಗಪಡಿಸಿ, ಸುಳ್ಳು ಸುದ್ದಿ ಪ್ರಸಾರ ಮಾಡಬೇಡಿ’ – ಮಾಧ್ಯಮಗಳಿಗೆ ಡಿಕೆಶಿ ಕಿವಿಮಾತು

Next Post

ಮತ್ತೆ ಸುದ್ದಿಯಲ್ಲಿ ಡಾರ್ಲಿಂಗ್‌ ಕೃಷ್ಣ! ಇದು ಪಿ.ಸಿ.ಶೇಖರ್‌ ಸಿನಿಮಾ

Related Posts

ನಿಂಗಿದು ಬೇಕಿತ್ತಾ..! ಗಗನಚುಂಬಿ ಕಟ್ಟಡದ ಮೇಲೆ ಡಿಫರೆಂಟ್‌ ಪ್ರಪೋಸ್‌..ಪ್ರೇಮಿಗಳು ಅರೆಸ್ಟ್‌..!
Top Story

ನಿಂಗಿದು ಬೇಕಿತ್ತಾ..! ಗಗನಚುಂಬಿ ಕಟ್ಟಡದ ಮೇಲೆ ಡಿಫರೆಂಟ್‌ ಪ್ರಪೋಸ್‌..ಪ್ರೇಮಿಗಳು ಅರೆಸ್ಟ್‌..!

by ಪ್ರತಿಧ್ವನಿ
July 2, 2026
0

ನ್ಯೂಯಾರ್ಕ್: ಏನೋ ಮಾಡಲು ಹೋಗಿ ಏನು ಮಾಡಿದೆ ನೀನು ಎನ್ನುತ್ತರಲ್ಲಾ ಹಾಗಾಯ್ತು ಇಲ್ಲೋಬ್ಬ ಪ್ರೇಮಿಯ ಕಥೆ.. ಪ್ರಿಯತಮೆಗೆ ವಿಭಿನ್ನವಾಗಿ ಪ್ರೇಮ ನಿವೇದನೆ ಮಾಡಿಕೊಳ್ಳಬೇಕು ಎಂದು ಡಿಫರೆಂಟ್‌ ಪ್ಲಾನ್‌...

Read moreDetails
BIG BREAKING: ತಾವರೆಕೆರೆಯಲ್ಲಿ ಭೀಕರ ದುರಂತ..ಬಂಡೆ ಕುಸಿದು 7 ಮಂದಿ ಸಾ**

BIG BREAKING: ತಾವರೆಕೆರೆಯಲ್ಲಿ ಭೀಕರ ದುರಂತ..ಬಂಡೆ ಕುಸಿದು 7 ಮಂದಿ ಸಾ**

July 2, 2026
ಆರ್‌ಎಸ್‌ಎಸ್‌ ನೋಂದಣಿ ವಿವಾದದ ಬಗ್ಗೆ ಸಂಘದ ಹೊಸ ನಿಲುವು

ಆರ್‌ಎಸ್‌ಎಸ್‌ ನೋಂದಣಿ ವಿವಾದದ ಬಗ್ಗೆ ಸಂಘದ ಹೊಸ ನಿಲುವು

July 2, 2026
ಬೆಂಗಳೂರಲ್ಲಿ ಫುಟ್‌ಪಾತ್ ಒತ್ತುವರಿ ತೆರವು: ಹಲವೆಡೆ ಘರ್ಜಿಸಿದ ಜೆಸಿಬಿ

ಫುಟ್‌ಪಾತ್‌ ತೆರವಿಗೆ ಜೆಸಿಬಿ ಘರ್ಜನೆ..ರಾಜಕಾಲುವೆ ಒತ್ತುವರಿಗೆ VIP ಟ್ರೀಟ್‌ಮೆಂಟ್‌?: ಏನಿದು ಸರ್ಕಾರದ ಡಬಲ್‌ ಸ್ಟ್ಯಾಂಡರ್ಡ್?

July 2, 2026
ಭಾರೀ ಮಳೆ ಎಚ್ಚರಿಕೆ:ಈ ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಭಾರೀ ಮಳೆ ಎಚ್ಚರಿಕೆ:ಈ ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

July 2, 2026
Next Post
ಸಮಂತಾ ಹೇಳ್ತಾರೆ… ‘ಇದು ನನ್ನ ಸಿಕ್ಸ್​ ಪ್ಯಾಕ್’! ಬೇಬಿ ಬಂಪ್ ಫೋಟೋ ಹಂಚಿಕೊಂಡ ನಟಿ

ಮತ್ತೆ ಸುದ್ದಿಯಲ್ಲಿ ಡಾರ್ಲಿಂಗ್‌ ಕೃಷ್ಣ! ಇದು ಪಿ.ಸಿ.ಶೇಖರ್‌ ಸಿನಿಮಾ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada