• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, July 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

‘ತಪ್ಪು ಮಾಡಿದರೆ ಬಹಿರಂಗಪಡಿಸಿ, ಸುಳ್ಳು ಸುದ್ದಿ ಪ್ರಸಾರ ಮಾಡಬೇಡಿ’ – ಮಾಧ್ಯಮಗಳಿಗೆ ಡಿಕೆಶಿ ಕಿವಿಮಾತು

ಪ್ರತಿಧ್ವನಿ by ಪ್ರತಿಧ್ವನಿ
July 1, 2026
in Top Story
0
‘ತಪ್ಪು ಮಾಡಿದರೆ ಬಹಿರಂಗಪಡಿಸಿ, ಸುಳ್ಳು ಸುದ್ದಿ ಪ್ರಸಾರ ಮಾಡಬೇಡಿ’ – ಮಾಧ್ಯಮಗಳಿಗೆ ಡಿಕೆಶಿ ಕಿವಿಮಾತು
Share on WhatsAppShare on FacebookShare on Telegram

ಬೆಂಗಳೂರು: ನಿರ್ಭೀತಿಯಿಂದ ಹಾಗೂ ತತ್ವನಿಷ್ಠೆಯಿಂದ ಪತ್ರಿಕೋದ್ಯಮ ಮಾಡುವುದು ಇಂದಿನ ಕಾಲದಲ್ಲಿ ಅತ್ಯಂತ ಸವಾಲಿನ ಕೆಲಸವಾಗಿದೆ. ಪತ್ರಕರ್ತರು ನೈತಿಕತೆ, ವೃತ್ತಿಪರತೆ ಮತ್ತು ಆತ್ಮಸಾಕ್ಷಿಗೆ ಬದ್ಧರಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಸಮಾಜದ ವಿಶ್ವಾಸವನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಗಾಂಧಿ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT
CM DK Shivakumar : ನಾನಲ್ಲಿ ಹೋಗಕ್ಕಾಗುತ್ತಾ..? #pratidhvani

ಇತ್ತೀಚಿನ ದಿನಗಳಲ್ಲಿ ಸುಳ್ಳು ಸುದ್ದಿಗಳ (ಫೇಕ್ ನ್ಯೂಸ್) ಹರಡುವಿಕೆ ಪತ್ರಿಕೋದ್ಯಮಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಈ ಪ್ರವೃತ್ತಿಯಿಂದ ಮಾಧ್ಯಮಗಳು ಹೊರಬರಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.ತಮ್ಮದೇ ಅನುಭವವನ್ನು ಹಂಚಿಕೊಂಡ ಡಿ.ಕೆ. ಶಿವಕುಮಾರ್, “ಬೆಳಗ್ಗೆ ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಆದರೆ, ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂಬ ತಪ್ಪು ಸುದ್ದಿಯನ್ನು ಕೆಲವು ಟಿವಿ ವಾಹಿನಿಗಳು ಪ್ರಸಾರ ಮಾಡಿದ್ದವು. ಇದು ಸಂಪೂರ್ಣ ಸುಳ್ಳು” ಎಂದು ಅಸಮಾಧಾನ ವ್ಯಕ್ತಪಡಿಸಿದರು.

Street Vendors : ಕಾಡಿ ಬೇಡಿಕೊಂಡರು ಅಧಿಕಾರಿಗಳು ಡೋಂಟ್ ಕೇರ್.!   #pratidhvani

ಮೇಕೆದಾಟು ಪಾದಯಾತ್ರೆಯ ವೇಳೆ ನಡೆದ ಘಟನೆಯನ್ನೂ ಕೆಲ ಮಾಧ್ಯಮಗಳು ತಪ್ಪಾಗಿ ಬಿಂಬಿಸಿದ್ದವು ಎಂದು ಅವರು ಉಲ್ಲೇಖಿಸಿದರು. “ನಿತ್ರಾಣಗೊಂಡು ಕಾರ್ಯಕರ್ತರ ಸಹಾಯದಿಂದ ನಡೆಯುತ್ತಿದ್ದ ಘಟನೆಯನ್ನು ‘ಮದ್ಯಪಾನ ಮಾಡಿ ಬರುತ್ತಿದ್ದಾರೆ’ ಎಂಬ ರೀತಿಯಲ್ಲಿ ಪ್ರಸಾರ ಮಾಡಿದ್ದು ಜನರಿಗೆ ತಪ್ಪು ಸಂದೇಶ ನೀಡುವ ಪ್ರಯತ್ನವಾಗಿತ್ತು” ಎಂದು ಹೇಳಿದರು.”ನಾನು ತಪ್ಪು ಮಾಡಿದರೆ ಅದನ್ನು ಬಹಿರಂಗಪಡಿಸಿ. ಆದರೆ ಸುಳ್ಳು ಸುದ್ದಿಗಳನ್ನು ಪ್ರಕಟಿಸಬೇಡಿ ಅಥವಾ ಪ್ರಸಾರ ಮಾಡಬೇಡಿ. ಒಂದು ಸುದ್ದಿ ಪ್ರಕಟವಾಗುವವರೆಗೆ ಅದು ಪತ್ರಕರ್ತರ ಜವಾಬ್ದಾರಿಯಾಗಿರುತ್ತದೆ. ಪ್ರಕಟವಾದ ನಂತರ ಅದು ಸಮಾಜದ ಆಸ್ತಿಯಾಗುತ್ತದೆ. ಆದ್ದರಿಂದ ಪ್ರತಿಯೊಂದು ಸುದ್ದಿಯಲ್ಲೂ ಸತ್ಯ ಮತ್ತು ಪ್ರಾಮಾಣಿಕತೆ ಇರಬೇಕು” ಎಂದು ಅವರು ಪತ್ರಕರ್ತರಿಗೆ ಕಿವಿಮಾತು ಹೇಳಿದರು.

D K  Shivakumar : ಮಾಧ್ಯಮಗಳು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಲು ಸಿಎಂ ಡಿಕೆಶಿ ಕರೆ.. #pratidhvani

ಮಹಾತ್ಮ ಗಾಂಧಿ ಸೇರಿದಂತೆ ಅನೇಕ ಮಹನೀಯರು ಪತ್ರಿಕೋದ್ಯಮದ ಮೂಲಕ ಸಮಾಜದ ಪರಿವರ್ತನೆಗೆ ಕೊಡುಗೆ ನೀಡಿದ್ದಾರೆ. ಅವರ ಆದರ್ಶಗಳನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಪತ್ರಕರ್ತರ ಮೇಲಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.ಕಾರ್ಯಕ್ರಮದಲ್ಲಿ ವಾರ್ತಾಭಾರತಿ ಸಂಪಾದಕ ಅಬುಸಾಲಂ ಪುತ್ತಿಗೆ ಪ್ರಧಾನ ಭಾಷಣ ಮಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಸಚಿವ ದಿನೇಶ್ ಗುಂಡೂರಾವ್, ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಆರ್. ಪೂರ್ಣಿಮಾ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯಿಷಾ ಖಾನುಂ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಅನುಚೇತ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Tags: #bengaluru#dkshivakumar#indianews#KannadaNews#karnataka#media#MediaEthics#NationalPressDay#NewsUpdate#PressFreedom#TruthInJournalismFakeNewsjournalismJournalistsPressday
Previous Post

ಚಪ್ಪಲಿ ಎಸೆತ ಕೇಸ್: ಶಾಸಕ ಪ್ರದೀಪ್ ಈಶ್ವರ್ ಪರ ನಿಂತ ಅಹಿಂದ ಎಸ್‌ಐಟಿ ತನಿಖೆಗೆ ಒತ್ತಾಯ

Next Post

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೊಸ ತಿರುವು; ದರ್ಶನ್ ಪ್ರಕರಣದಲ್ಲಿ ಹೊಸ ಬೆಳವಣಿಗೆ

Related Posts

Karnataka Drought: ಬತ್ತಿದ ತುಂಗಭದ್ರಾ ನದಿ: ಏಕಾಏಕಿ ಸಾವಿರಾರು ಮೀನುಗಳ ಸಾವು
Top Story

Karnataka Drought: ಬತ್ತಿದ ತುಂಗಭದ್ರಾ ನದಿ: ಏಕಾಏಕಿ ಸಾವಿರಾರು ಮೀನುಗಳ ಸಾವು

by ಪ್ರತಿಧ್ವನಿ
July 20, 2026
0

ಕೊಪ್ಪಳ: ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಕಡಿಮೆಯಾಗಿದ್ದು, ಬಹುತೇಕ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸುತ್ತಿದೆ. ಸಮರ್ಪಕ ಮಳೆಯ ಕೊರತೆಯಿಂದ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು,...

Read moreDetails
ಮೇಕೆದಾಟು ಯೋಜನೆಗೆ ಲೋಕಸಭೆಯಲ್ಲಿ ಡಿಎಂಕೆ ತೀವ್ರ ವಿರೋಧ: ಸದನದ ಬಾವಿಗಿಳಿದು ಪ್ರತಿಭಟನೆ

ಮೇಕೆದಾಟು ಯೋಜನೆಗೆ ಲೋಕಸಭೆಯಲ್ಲಿ ಡಿಎಂಕೆ ತೀವ್ರ ವಿರೋಧ: ಸದನದ ಬಾವಿಗಿಳಿದು ಪ್ರತಿಭಟನೆ

July 20, 2026
ದಾಂಡೇಲಿಯಲ್ಲಿ ಜಿಪ್‌ಲೈನ್‌ ದುರಂತ: ಪ್ರವಾಸಿಗನ ಸ್ಥಿತಿ ಚಿಂತಾಜನಕ

ದಾಂಡೇಲಿಯಲ್ಲಿ ಜಿಪ್‌ಲೈನ್‌ ದುರಂತ: ಪ್ರವಾಸಿಗನ ಸ್ಥಿತಿ ಚಿಂತಾಜನಕ

July 20, 2026
FIFA World Cup 2026: ವಿಶ್ವಕಪ್ ಫೈನಲ್‌ನಲ್ಲಿ ಸ್ಪೇನ್ ಅಬ್ಬರ..! ಮೆಸ್ಸಿ ಕನಸಿಗೆ ಕಣ್ಣೀರ ತೆರೆ..!

FIFA World Cup 2026: ವಿಶ್ವಕಪ್ ಫೈನಲ್‌ನಲ್ಲಿ ಸ್ಪೇನ್ ಅಬ್ಬರ..! ಮೆಸ್ಸಿ ಕನಸಿಗೆ ಕಣ್ಣೀರ ತೆರೆ..!

July 20, 2026
Prajwal Revanna: ಜೈಲಿನಿಂದಲೇ ಅಜ್ಜಿ ಅಂತ್ಯಕ್ರಿಯೆಯಲ್ಲಿ ಪ್ರಜ್ವಲ್ ರೇವಣ್ಣ ಭಾಗಿ

Prajwal Revanna: ಜೈಲಿನಿಂದಲೇ ಅಜ್ಜಿ ಅಂತ್ಯಕ್ರಿಯೆಯಲ್ಲಿ ಪ್ರಜ್ವಲ್ ರೇವಣ್ಣ ಭಾಗಿ

July 20, 2026
Next Post
ಸಮಂತಾ ಹೇಳ್ತಾರೆ… ‘ಇದು ನನ್ನ ಸಿಕ್ಸ್​ ಪ್ಯಾಕ್’! ಬೇಬಿ ಬಂಪ್ ಫೋಟೋ ಹಂಚಿಕೊಂಡ ನಟಿ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೊಸ ತಿರುವು; ದರ್ಶನ್ ಪ್ರಕರಣದಲ್ಲಿ ಹೊಸ ಬೆಳವಣಿಗೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada