ದೆಹಲಿ : ಪ್ರಧಾನಿ ನರೇಂದ್ರ ಮೋದಿ ಇಂದು ನೂತನ ಸಂಸತ್ ಭವನವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಹಾಗೂ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕಾಲ ಪೂಜೆಯಲ್ಲಿ ಭಾಗಿಯಾದರು. ಇದಾದ ಬಳಿಕ ಸೆಂಗೋಲ್ನ್ನು ಸ್ವೀಕರಿಸಿದ ಪ್ರಧಾನಿ ಮೋದಿ ಅದನ್ನು ಸಂಸತ್ನಲ್ಲಿ ಸ್ಥಾಪಿಸುವ ಮೂಲಕ ನೂತನ ಸಂಸತ್ ಭವನವನ್ನು ಲೋಕಾರ್ಪಣೆಗೊಳಿಸಿದ್ರು .
ನೂತನ ಸಂಸತ್ ಭವನದಲ್ಲಿ ಸರ್ವಧರ್ಮದ ಪ್ರಾರ್ಥನಾ ಸಭೆ ನಡೆದಿದ್ದು ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರುಗಳು ಸಹ ಹಾಜರಿದ್ದರು.
ನೂತನ ಸಂಸತ್ ಭವನಕ್ಕೆ ಸೆಂಗೋಲ್ ತೆಗೆದುಕೊಂಡು ಬಂದ ಪ್ರಧಾನಿ ಮೋದಿ ಅದನ್ನು ಸ್ಪೀಕರ್ ಆಸನದ ಬಳಿಯಲ್ಲಿ ಸ್ಥಾಪಿಸುವ ಮೂಲಕ ನೂತನ ಸಂಸತ್ ಭವನ ಲೋಕಾರ್ಪಣೆಗೊಳಿಸಿದ್ರು.