ಕಡಿಮೆ ದರದಲ್ಲಿ ಆಸ್ತಿ ನೋಂದಣಿ ಮಾಡಲು ಆಗುತ್ತೆ ಅಂದರೆ ಯಾರಿಗೆ ತಾನೇ ಬೇಡ ಹೇಳಿ.. ಈ ರೀತಿಯಾಗಿ ನೀವು ಸ್ಟ್ಯಾಂಪ್ ಸುಂಕದ ಲಾಭವನ್ನು ಪಡೆಯಬಹುದಾಗಿದೆ. ಮಹಿಳೆಯರ ಹೆಸರಿನಲ್ಲಿ ನೀವು ಆಸ್ತಿ ಖರೀದಿ ಮಾಡಿದಲ್ಲಿ ಈ ಪ್ರಯೋಜನ ನಿಮ್ಮದಾಗಲಿದೆ.
ರಿಯಲ್ ಎಸ್ಟೇಟ್ ಹೊಂದಿರುವ ಮಹಿಳೆಯರಿಗೆ ಈ ಲಾಭವನ್ನು ನೀಡಲಾಗುತ್ತಿದ್ದು ವಿವಿಧ ರಾಜ್ಯಗಳ ಮಹಿಳೆಯರು ಈಗಾಗಲೇ ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಆಸ್ತಿ ಖರೀದಿ ಮಾಡುವ ಮಹಿಳೆಯರಿಗೆ ಸ್ಟ್ಯಾಂಪ್ ಡ್ಯೂಟಿಯಲ್ಲಿ ಕಡಿತ, ಗೃಹ ಸಾಲದಲ್ಲಿಯೂ ರಿಯಾಯಿತಿ ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಲಾಭ ಸಿಗಲಿದೆ.
ಕಡಿಮೆ ಸ್ಟ್ಯಾಂಪ್ ಸುಂಕದ ಲಾಭವನ್ನು ಪಡೆಯಲು ಮನೆ ಹಾಗೂ ಆಸ್ತಿಯನ್ನು ಪತ್ನಿ, ತಾಯಿ ಇಲ್ಲವೇ ಪುತ್ರಿಯ ಹೆಸರಲ್ಲಿ ಖರೀದಿ ಮಾಡಬಹುದಾಗಿದೆ. ಇದರಿಂದ ಬ್ಯಾಂಕ್ನಲ್ಲಿಯೂ ಸಾಲದಲ್ಲಿ ರಿಯಾಯಿತಿ ಸಿಗಲಿದೆ ಮಾತ್ರವಲ್ಲದೇ ಸರ್ಕಾರ ಕೂಡ ರಿಯಾಯಿತಿ ನೀಡಲಿದೆ.