ಸಾಮಾಜಿಕ ಜಾಲತಾಣಗಳು ಬಂದಾಗುವ ಸಾಧ್ಯತೆ? ಹೊಸ ನಿಯಮ ಪಾಲನೆಯ ಗಡುವು ಇಂದಿಗೆ ಮುಕ್ತಾಯ!

ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿದ ಹೊಸ ಐಟಿ ಮಾರ್ಗ ಸೂಚಿಗಳನ್ನು ಅನುಸರಿಸದಿದ್ದರೆ ಸಾಮಾಜಿಕ ಜಾಲತಾಣಗಳಾದ ಫೇಸ್, ಟ್ವಿಟರ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳ ವಿರುದ್ಧ ಕ್ರಮ ಜರುಗಿಸಿ ಸೇವೆ ಸ್ಥಗಿತಗೊಳಿಸುವ ಸಾಧ್ಯತೆಯಿದೆ.

ಕೇಂದ್ರ ಸರ್ಕಾರ ಕಳೆದ ಫೆಬ್ರವರಿಯಲ್ಲಿ ಸಾಮಾಜಿಕ ಜಾಲತಾಣಗಳು, ಒಟಿಟಿ ಮಾಧ್ಯಮಗಳಿಗೆ ಸಂಬಂಧಿಸಿದಂತೆ ಹೊಸ ಐಟಿ ನಿಯಮವನ್ನು ರೂಪಿಸಿದೆ. ಆ ನಿಯಮಗಳ ಪಾಲನೆಗೆ ಮೂರು ತಿಂಗಳ ಗಡುವು ನೀಡಲಾಗಿತ್ತು. ಇದೀಗ ಗಡುವು ಮೇ 25 ಕ್ಕೆ ಕೊನೆಗೊಳ್ಳುತ್ತದೆ ಆದರೆ ಇದುವರೆಗೂ ವಾಟ್ಸಪ್, ಫೇಸ್ಬುಕ್, ಟ್ವಿಟರ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳು ಹೊಸ ನಿಯಮಗಳನ್ನು ಪಾಲಿಸಿಲ್ಲ, ಟ್ವಿಟರ್‌ನ ಭಾರತೀಯ ಆವೃತ್ತಿಯಾದ ಕೂ, ಮೇ 25 ರ ಗಡುವಿಗೆ ಮುಂಚಿತವಾಗಿ ಹೊಸ ಮಾರ್ಗಸೂಚಿಗಳನ್ನು ಅನುಸರಿಸಿದ ಏಕೈಕ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಆಗಿದೆ. ಇದರಿಂದ ಸರ್ಕಾರ ಸಾಮಾಜಿಕ ಜಾಲತಾಣಗಳ ವಿರುದ್ಧ ಕ್ರಮಕೈಗೊಳ್ಳುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ನಿಯಮ ಅನುಸರಿಸದ ಸಾಮಾಜಿಕ ಜಾಲತಾಣ ಸಂಸ್ಥೆಯ ಮಾನ್ಯತೆ ರದ್ದಾಗುವ ಸಾಧ್ಯತೆಯಿದೆ ಹಾಗು ಕಾನೂನಿನ ಪ್ರಕಾರ ಅವರ ವಿರುದ್ಧ ಕ್ರಿಮಿನಲ್ ಕ್ರಮ ತೆಗೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.

ಸೋಷಿಯಲ್ ಮೀಡಿಯಾ ಕಂಪೆನಿಗಳಿಗೆ ಇದೊಂದು ನಿರ್ಣಾಯಕ ಕ್ಷಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಫೇಸ್ಬುಕ್ ವಕ್ತಾರರು ನಾವು ಐಟಿ ನಿಯಮಗಳ ನಿಬಂಧನೆಗಳನ್ನು ಪಾಲಿಸುವ ಗುರಿ ಹೊಂದಿದ್ದೇವೆ ಮತ್ತು ಕೆಲವು ಸಮಸ್ಯೆಗಳ ಬಗ್ಗೆ ಸರ್ಕಾರದ ಜತೆ ಹೆಚ್ಚಿನ ವಿವರಣೆ ಅಗತ್ಯವಿರುವುದರಿಂದ ಚರ್ಚೆಯನ್ನು ಮುಂದುವರಿಸಲಿದ್ದೇವೆ ಎಂದು ತಿಳಿಸಿದ್ದಾರೆ. ಜೊತೆಗೆ ಹೊಸ ಐಟಿ ನಿಯಮಗಳಿಗೆ ಅನುಸಾರವಾಗಿ, ನಾವು ಕಾರ್ಯಾಚರಣೆಯ ಪ್ರಕ್ರಿಯೆಗಳನ್ನು ಕಾರ್ಯಗತಗೊಳಿಸಲು ಹಾಗು ದಕ್ಷತೆಯನ್ನು ಸುಧಾರಿಸಲು ಕೆಲಸ ಮಾಡುತ್ತಿದ್ದೇವೆ. ತಮ್ಮ ವೇದಿಕೆಯಲ್ಲಿ ಮುಕ್ತ ಹಾಗೂ ಸುರಕ್ಷಿತವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವ ಜನರ ಆಯ್ಕೆಗೆ ಫೇಸ್ಬುಕ್ ಬದ್ಧವಾಗಿರಲಿದೆ ಎಂದು ಹೇಳಿದ್ದಾರೆ.

ಎಲೆಕ್ಟ್ರಾನಿಕ್ಸ್ ಹಾಗು ಮಾಹಿತಿ ತಂತ್ರಜ್ಞಾನ ಸಚಿವಾಲಯ ಘೋಷಿಸಿದ ಹೊಸ ನಿಯಮಗಳು ವಿದೇಶಿ ಮತ್ತು ಸ್ವದೇಶಿ ಕಂಪನಿಗಳೆರಡಕ್ಕೂ ಅನ್ವಯವಾಗಲಿದೆ. ಈ ನಿಯಮಗಳನ್ನು ಸಾಮಾಜಿಕ ಜಾಲತಾಣ ಕೂ ಹೊರತುಪಡಿಸಿ ಬೇರೆಯಾವ ಸಾಮಾಜಿಕ ಜಾಲತಾಣವು ಸ್ಥಳೀಯ ಅಹವಾಲು ಅಧಿಕಾರಿಗಳನ್ನು ನೇಮಕ ಮಾಡಿಲ್ಲ, ಅಂದರೆ ಹೊಸ ಕಾನೂನಿನ ಪ್ರಕಾರ ಸಾಮಾಜಿಕ ಜಾಲತಾಣಗಳು ಹಾಗೂ ಒಟಿಟಿಗಳು ಸ್ಥಳೀಯ ಅಹವಾಲು ಅಧಿಕಾರಿಗಳನ್ನು ನೇಮಕ ಮಾಡಬೇಕು ಅವರ ಹೆಸರು ಮತ್ತು ಭಾರತದಲ್ಲಿನ ಅವರ ಸಂಪರ್ಕ ವಿಳಾಸಗಳನ್ನು ನೀಡಬೇಕು. ಆಕ್ಷೇಪಾರ್ಹ ವಿಷಯಗಳ ಪರಿಶೀಲನೆ, ದೂರು ನಿರ್ಣಯ, ಆಕ್ಷೇಪಾರ್ಹ ವಿಷಯಗಳನ್ನು ತೆಗೆದುಹಾಕುವುದು, ವರದಿಗಳನ್ನು ಸಲ್ಲಿಸುವುದು ಅವರ ಜವಾಬ್ದಾರಿ ಎಂದು ಸೂಚಿಸಲಾಗಿದೆ.

ರಕ್ಷಣೆ, ವಿದೇಶಾಂಗ, ಗೃಹ ಸಚಿವಾಲಯ, ಕಾನೂನು, ವಾರ್ತಾ ಮತ್ತು ಪ್ರಸಾರ, ಐಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯು ನೀತಿ ಸಂಹಿತೆ ಜಾರಿಯ ಮೇಲುಸ್ತುವಾರಿ ವಹಿಸಲಿದೆ. ನಿಯಮ ಉಲ್ಲಂಘನೆಯಾದರೆ ಈ ಸಮಿತಿಯು ಸ್ವಯಂ ಪ್ರೇರಿತ ವಿಚಾರಣೆ ನಡೆಸಬಹುದು. ಅಂತಹ ವಿಷಯಗಳನ್ನು ಬ್ಲ್ಯಾಕ್ ಮಾಡಲು ಸೂಚಿಸ ಬಹುದು.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...