
‘ನೀಟ್’ (NEET Exam)ಪರೀಕ್ಷೆಯಿಂದ ಕರ್ನಾಟಕ ರಾಜ್ಯ ಹೊರಕ್ಕೆ ಬರಬೇಕೆಂದು ಆಗ್ರಹಿಸಿ ವಿಧಾನಸಭೆಯಲ್ಲಿ ನಿಲುವಳಿ ಮಂಡಿಸಲು ನಿರ್ಧರಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ (MLC Disoza) ತಿಳಿಸಿದರು.
ಜುಲೈ 16ರಿಂದ (July 16th) ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಲಿದೆ. ‘ನೀಟ್’ ಕುರಿತು ಚರ್ಚೆ, ಅದರಿಂದ ಹೊರಬರುವ ಕುರಿತು ಸ್ವತಃ ನಾನೇ ನಿಲುವಳಿ ಮಂಡಿಸುತ್ತೇನೆ.
ನೀಟ್’ನಿಂದ ಹೊರಗುಳಿಯಲು ಈಗಾಗಲೇ ತಮಿಳುನಾಡು(Tamil Nadu), ಕೇರಳ(Kerala) ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕೇಂದ್ರ ಸರ್ಕಾರವು ‘ನೀಟ್'(NEET) ದುರುಪಯೋಗ ಪಡಿಸಿಕೊಂಡು ಅದರಲ್ಲಿ ದೊಡ್ಡ ಪ್ರಮಾಣದಲ್ಲಿ ಹಗರಣ ನಡೆಸಿದೆ. ಇದರಿಂದ ಅನೇಕ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ. ಅನೇಕ ವಿದ್ಯಾರ್ಥಿಗಳು ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ನಡೆಸುವ ‘ನೀಟ್’ ಮೇಲೆ ಭರವಸೆ ಉಳಿದಿಲ್ಲ. ವೀರಪ್ಪ ಮೊಯಿಲಿ (Veerappa Mohili) ಅವರು ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಿಇಟಿ (CET) ಪರೀಕ್ಷೆ ಪರಿಚಯಿಸಿದ್ದರು. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೆರಿಟ್ ಆಧರಿಸಿ ವೃತ್ತಿಪರ ಕೋರ್ಸ್‌ಗಳಲ್ಲಿ ಪ್ರವೇಶ ದೊರಕಿಸಿಕೊಡುವುದು ಅದರ ಉದ್ದೇಶವಾಗಿತ್ತು. ಪುನಃ ಆ ರೀತಿಯ ವ್ಯವಸ್ಥೆ ತರಲು ಚಿಂತನೆ ನಡೆದಿದೆ ಎಂದು ತಿಳಿಸಿದರು.