• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಗುಜರಾತ್‌ಗೆ ವಿದಾಯ ಹೇಳಿ ದಿಲ್ಲಿಯ ರೈಲು ಹತ್ತಿದ್ದರು ನರೇಂದ್ರ ಮೋದಿ

ಪ್ರತಿಧ್ವನಿ by ಪ್ರತಿಧ್ವನಿ
June 9, 2025
in Top Story, ಕರ್ನಾಟಕ, ರಾಜಕೀಯ
0
ಗುಜರಾತ್‌ಗೆ ವಿದಾಯ ಹೇಳಿ ದಿಲ್ಲಿಯ ರೈಲು ಹತ್ತಿದ್ದರು ನರೇಂದ್ರ ಮೋದಿ
Share on WhatsAppShare on FacebookShare on Telegram

ADVERTISEMENT

ಬಿಜೆಪಿ ಹೈಕಮಾಂಡ್‌ನಿಂದ, 1995 ರ ಅಕ್ಟೋಬರ್ ನಲ್ಲಿ ಗುಜರಾತ್‌ ಬಿಜೆಪಿ ಘಟಕದಲ್ಲಿ “ಸಂಘಟನಾ ಕಾರ್ಯದರ್ಶಿ ಆಗಿದ್ದ ನರೇಂದ್ರ ಮೋದಿ” ಅವರಿಗೆ “ನೀವು ಈ ಕ್ಷಣವೇ ಅಹಮದಾಬಾದ್‌ನಿಂದ ದಿಲ್ಲಿಗೆ ಹೊರಟು ಬರಬೇಕು.ಅಲ್ಲಿಯ ಯಾವ ರಾಜಕೀಯ ಚಟುವಟಿಕೆಯಲ್ಲೂ ನೀವು ಭಾಗಿಯಾಗುವಂತಿಲ್ಲ. ಗುಜರಾತ್‌ ಬಿಜೆಪಿಯ ಯಾವ ನಾಯಕರ ಜತೆಯೂ ಮಾತನಾಡುವಂತಿಲ್ಲ.ಇನ್ನು ಮುಂದೆ ಗುಜರಾತ್‌ ಬಿಜೆಪಿಗೂ ನಿಮಗೂ ಸಂಬಂಧವಿಲ್ಲ.” ಅಂತ ಆಜ್ಞೆ ಬಂತು.

ನರೇಂದ್ರ ಮೋದಿಯವರು ದೂಸರಾ ಮಾತನಾಡದೆ ಅಹಮದಾಬಾದ್‌ನಿಂದ ದಿಲ್ಲಿಗೆ ಹೊರಟುಬಿಟ್ಟರು.ಗುಜರಾತ್‌ ಮುಖ್ಯಮಂತ್ರಿ ಯಾರು ಆಗ್ಬೇಕು ಅಂತ ನಿರ್ಧರಿಸುವಷ್ಟು ಪ್ರಬಲ ನಾಯಕರಾಗಿ ಬೆಳೆದಿದ್ದರು ಮೋದಿಯವರು. ಆದರೂ ಹೈಕಮಾಂಡ್‌ ಆದೇಶಕ್ಕೆ ಕಮಕ್‌ಕಿಮಕ್‌ ಅನ್ನದೆ “ಪಕ್ಷದ ಸರಕಾರ ಉಳಿಸಲು ಮಹಾತ್ಯಾಗ”ಮಾಡಿ ಗುಜರಾತ್‌ಗೆ ವಿದಾಯ ಹೇಳಿ ದಿಲ್ಲಿಯ ರೈಲು ಹತ್ತಿದ್ದರು!

Chetan Ahimsa Podcast: ಸ್ಟೇಡಿಯಂ ದುರಂತಕ್ಕೆ ಸಿದ್ದರಾಮಯ್ಯ, ಡಿಕೆಶಿ ನೇರ ಹೊಣೆ.? #siddaramaiah #dkshivakumar

ಮೋದಿಯವರು ತಮ್ಮ 18ನೇ ವಯಸ್ಸಿನಲ್ಲಿ ಅಹಮದಾಬಾದ್‌ನಲ್ಲಿರುವ RSS ಕೇಂದ್ರ ಕಚೇರಿ “ಜಗನ್ನಾಥ ಭವನ” ಸೇರಿ ಬೆಳಿಗ್ಗೆ 5 ಗಂಟೆಗೇ ಎದ್ದು ಕಸ ಗುಡಿಸುತ್ತಿದ್ದರು.ಅಲ್ಲಿ ಬರುವ ಸಂಘ ಪರಿವಾರದ ಹಿರಿಯರಿಗೆ, ಅತಿಥಿಗಳಿಗೆ ಚಾ-ತಿಂಡಿ ತಂದುಕೊಡುತ್ತಿದ್ದರು.ನಂತರ ವಿಭಾಗ ಪ್ರಚಾರಕ, ಪ್ರಾಂತ ಪ್ರಚಾರಕ ಆಗಿ, “ಬಿಜೆಪಿ ಗುಜರಾತ್‌ ಘಟಕದ ಸಂಘಟನಾ ಕಾರ್ಯದರ್ಶಿ” ಯಂಥ ಅತ್ಯಂತ ಪವರ್‌ಫುಲ್‌ ಹುದ್ದೆಗೇರಿದರು ಮೋದಿಯವರು.

ಪಾಲಿಕೆ ಎಲೆಕ್ಷನ್‌ ಗೆಲುವಿನಿಂದ ಹಿಡಿದು 1995 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತದಿಂದ ಸರ್ಕಾರ ರಚನೆ ಆಗುವತನಕ ಮುಖ್ಯಪಾತ್ರವನ್ನು ಮೋದಿಯವರು ನಿರ್ವಹಿಸಿದ್ದರು.ಗುಜರಾತ್‌ ಮುಖ್ಯಮಂತ್ರಿ ಯಾರು ಆಗ್ಬೇಕು ಅಂತ ನಿರ್ಧರಿಸುವಷ್ಟು ಪ್ರಬಲ ನಾಯಕರಾಗಿ ಬೆಳೆದಿದ್ದರು ಮೋದಿಯವರು.ನರೇಂದ್ರ ಮೋದಿಯವರು ಕೇಶುಭಾಯಿ ಪಟೇಲ್‌ರನ್ನು ಮುಖ್ಯಮಂತ್ರಿ ಪಟ್ಟದಲ್ಲಿ ಕೂರಿಸಿದ್ದರು.

ಆದರೆ ಸರ್ಕಾರ ರಚನೆಯಾದ ಮೂರೇ ತಿಂಗಳೊಳಗೆ ಬಿಜೆಪಿಯೊಳಗಿನ ಭಿನ್ನಮತ ಸ್ಫೋಟ !!ಶಂಕರ್‌ ಸಿಂಘ್‌ ವಘೇಲಾ 47 ಶಾಸಕರ ಜತೆ ಬಂಡಾಯ ಎದ್ದು ಮಧ್ಯಪ್ರದೇಶ ಖಜುರಾಹೊದಲ್ಲಿನ ಹೋಟೆಲ್ ನಲ್ಲಿ ಬೀಡುಬಿಟ್ಟಿದ್ದರು.ಭರ್ಜರಿ ಬಹುಮತ ಪಡೆದ ಬಳಿಕವೂ ಗುಜತಾತ್‌ ಬಿಜೆಪಿ ಸರ್ಕಾರ ಬೀಳುವ ಅಪಾಯದಲ್ಲಿತ್ತು .

ಸರ್ಕಾರ ಉಳಿಸಲು ಬಿಜೆಪಿ ವರಿಷ್ಠರು ಬಂದರು.ಆಗ ವಘೇಲಾ ಹಾಕಿದ ಕಂಡಿಷನ್‌: “ನರೇಂದ್ರಮೋದಿಯವರನ್ನು ಗುಜರಾತ್‌ನಿಂದ ಹೊರಗೆ ಕಳುಹಿಸಬೇಕು.ಪಕ್ಷದ ಗುಜರಾತಿನ ಚಟುವಟಿಕೆಗಳಲ್ಲಿ ಪ್ರತ್ಯಕ್ಷವಾಗಿಯಾಗಲೀ, ಪರೋಕ್ಷವಾಗಿಯಾಗಲೀ ಭಾಗಿಯಾಗಲೇಬಾರದು” ಅಂತ.ಸರ್ಕಾರ ಉಳಿಸಿಕೊಳ್ಳಲು ಪಕ್ಷದ ವರಿಷ್ಠರು ಈ ಷರತ್ತನ್ನು ಅನಿವಾರ್ಯವಾಗಿ ಒಪ್ಪಿದರು.

ಆರು ವರ್ಷ ಮೋದಿಯವರು ಗುಜರಾತ್‌ ಕಡೆ ತಲೆ ಹಾಕಿಯೂ ಮಲಗಲಿಲ್ಲ. ಪಕ್ಷದ ತೀರ್ಮಾನದ ವಿರುದ್ಧ ಅಪ್ಪಿತಪ್ಪಿಯೂ ಚಕಾರ ಎತ್ತಲಿಲ್ಲ. ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಬೇರೆ ಬೇರೆ ರಾಜ್ಯಗಳ ಉಸ್ತುವಾರಿಯಾಗಿ ದುಡಿಯುತ್ತ ಗೆಲುವು ತಂದುಕೊಡುತ್ತ ಹೋದರು.

ಯಾವ ವಾಜಪೇಯಿಯವರು ಮೋದಿಯವರಿಗೆ ಗುಜರಾತ್‌ ಬಿಟ್ಟು ಬಾ ಅಂದಿದ್ದರೋ ಅದೇ ವಾಜಪೇಯಿ 2001 ರ ಅಕ್ಟೋಬರ್ 1ರಂದು ಮೋದಿಯವರಿಗೆ “ನೀವು ತಕ್ಷಣವೇ ಅಹಮದಾಬಾದ್‌ಗೆ ಹೋಗಬೇಕು.ಗುಜರಾತ್‌ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಬೇಕು” ಅಂದರು. ನರೇಂದ್ರ ಮೋದಿ ಆಗ MLA ಕೂಡ ಆಗಿರಲಿಲ್ಲ.ಅಕ್ಟೋಬರ್ 7ರಂದು ಮೋದಿಯವರು ಗುಜರಾತ್‌ ಮುಖ್ಯಮಂತ್ರಿಯಾ ಗಿ ಪ್ರಮಾಣ ವಚನ ಸ್ವೀಕರಿಸಿದರು..

ಆದಿತ್ಯನಾಥ್ ಯೋಗೀಜೀ ::

ಯೋಗಿಯನ್ನು ಕರೆದು ನೀವೇ ಸಿಎಂ ಎಂದರು.ಯೋಗಿ ಆದಿತ್ಯನಾಥ್‌ ಅವರದು ಸಿಡಿಲಿನಂಥ ಮಾತುಗಳು. ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೂ ತಾರಾ ಪ್ರಚಾರಕರಾಗಿ ಯೋಗಿ ಇದ್ದೇ ಇರಬೇಕಿತ್ತು. ಆದರೆ 2014ರ ಲೋಕಸಭೆ ಚುನಾವಣೆಯ ಬಿಜೆಪಿ ತಾರಾ ಪ್ರಚಾರಕರ ಪಟ್ಟಿಯಿಂದ ಯೋಗಿ ಆದಿತ್ಯನಾಥ್‌ರನ್ನು ಹೊರಗಿಡಲಾಯಿತು.

Energy Minister KJ George: ನಮ್ಮ ಸರ್ಕಾರ ಬಂದ್ಮೇಲೆ ರೈತರಿಗೆ ನಿರಂತರ ವಿದ್ಯತ್‌: ಸಚಿವ ಕೆಜೆ ಜಾರ್ಜ್‌ #kusumc

ಆಂಗ್ಲ ಪತ್ರಿಕೆಗಳ ಮುಖಪುಟದ ಹೆಡ್ ಲೈನ್ಸ್ ನಲ್ಲಿ “ಈತ ವಿವಾದಾತ್ಮಕ ವ್ಯಕ್ತಿ ಎಂಬ ಕಾರಣಕ್ಕೆ ಯೋಗಿಯನ್ನು ಬಿಜೆಪಿ ಹೈಕಮಾಂಡ್‌ ಹೊರದಬ್ಬಿದೆ” ಅಂತ ರಾರಾಜಿಸಿದವು.ಆದರೆ ಯೋಗಿ ಯಾವುದೇ ಅಸಮಾಧಾನ,ಬೇಸರ ಮಾಡಿಕೊಳ್ಳದೆ ಪಕ್ಷ ಕೊಟ್ಟ ಕೆಲಸ ಮಾಡಿಕೊಂಡು ಮುಂದುವರಿದರು.ಅದೇ ಬಿಜೆಪಿ ಹೈಕಮಾಂಡ್‌

2017 ರಲ್ಲಿ ಯೋಗಿ ಆದಿತ್ಯನಾಥ್‌ರನ್ನು ದಿಲ್ಲಿಗೆ ಕರೆಸಿ “ಉತ್ತರ ಪ್ರದೇಶದ ಮುಂದಿನ ಮುಖ್ಯಮಂತ್ರಿ” ನೀವೇ ಎಂದಿತು! ಮತ್ತೊಂದು ಅವಧಿಯಲ್ಲೂ ಯೋಗಿ ಸಿಎಂ ಆಗಿ ಮುಂದುವರಿದಿದ್ದಾರೆ..

ಈ ಎರಡು ಸಂಗತಿಗಳು ಈಗ ಯಾಕೆಂದರೆ::

ಈ ಬಾರಿಯ ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಪಟ್ಟಿಯಿಂದ ಅನಂತ್‌ ಕುಮಾರ್‌ ಹೆಗಡೆ ಮತ್ತು ಪ್ರತಾಪ್‌ ಸಿಂಹ ಅವರನ್ನು ಬಿಜೆಪಿ ಹೈಕಮಾಂಡ್‌ ಕೈಬಿಟ್ಟಿದೆ.ಈ ಹಿನ್ನೆಲೆಯಲ್ಲಿ ಈ ಇಬ್ಬರು ನಾಯಕರ ಅಭಿಮಾನಿಗಳ ಆಕ್ರೋಶ, ನಿರಾಸೆ, ಅಸಮಾಧಾನದ ಹೊಗೆ ಸಾಮಾಜಿಕ ಜಾಲತಾಣಗಳನ್ನು ಆವರಿಸಿದೆ.

20 ವರ್ಷ ತುಂಬುವ ಮೊದಲೇ ಅನಂತ್‌ ಕುಮಾರ್‌ ಹೆಗಡೆ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕನ ಹೊಣೆ ಹೊತ್ತಿದ್ದರು.ಭಟ್ಕಳದಲ್ಲಿ ಕೋಮು ಗಲಭೆ ಭುಗಿಲೆದ್ದಿತ್ತು.ಸಾಲುಸಾಲು ಹಿಂದೂಗಳ ಹೆಣ ಬಿದ್ದಿತ್ತು.ಆಗ ತಕ್ಷಣ ಶಿರಸಿಯಿಂದ ಭಟ್ಕಳಕ್ಕೆ ಬಂದು ಸಂತ್ರಸ್ತ ಹಿಂದೂಗಳನ್ನು ಸಂಘಟಿಸಿದರು .

1994ರ ಆಗಸ್ಟ್ 15ರಂದು ಬೆಳಗ್ಗೆ ಪೊಲೀಸರನ್ನು ಭೇದಿಸಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಅರಳಿಸಿ ರಾಷ್ಟ್ರಮಟ್ಟದಲ್ಲಿ ಹೀರೊ ಆಗಿಬಿಟ್ಟರು.

DK Shivakumar: ಹೈಕಮಾಂಡ್‌ ಭೇಟಿ ಬಳಿಕ ಡಿಕೆ ಶಿವಕುಮಾರ್‌..! #rahulgandhi #rcb #rcbfans #pratidhvani

ಆದರೆ ಅವರ ಫೋಟೊ ಸಮೇತ WANTED ಪೋಸ್ಟರ್‌ಗಳನ್ನು ಪೊಲೀಸರು ಅಂಟಿಸಿದರು. ಅನಂತ್‌ ಕುಮಾರ್‌ ರನ್ನು ಪೊಲೀಸ್‌ ಎನ್‌ಕೌಂಟರ್‌ ಮಾಡಲು ಕಾಯುತಿದ್ದರು.ಸಂಘ ಪರಿವಾರದ ಹಿರಿಯ ನಾಯಕರನ್ನು ಚಿಂತೆಗೀಡು ಮಾಡಿತು.ಅಷ್ಟರಲ್ಲಿ 1996 ರ ಲೋಕಸಭೆ ಚುನಾವಣೆ ಬಂತು. ಆಗ ಸಂಘ ಪರಿವಾರವು “ಈ ಹುಡುಗನನ್ನು ಬಿಜೆಪಿ ಅಭ್ಯರ್ಥಿಯಾಗಿ ಉತ್ತರಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಕಣಕ್ಕಿಳಿಸೋಣ; ಆಗ ಯಾವ ಪೊಲೀಸರೂ ಈತನ ಮೈಮುಟ್ಟಲು ಸಾಧ್ಯವಾಗುವುದಿಲ್ಲ!”

ಹೀಗೆ ಆಕಸ್ಮಿಕವಾಗಿ ಅನಂತ್‌ ಕುಮಾರ್‌ ಬಿಜೆಪಿ ಅಭ್ಯರ್ಥಿಯಾದರು.ಆಗ ಕೇವಲ 27 ವರ್ಷ! ಅನಂತ್ ಕುಮಾರ್ ಗೆದ್ದಿದ್ದರು.ಶಿರಸಿಯಲ್ಲಿ ಮೆರವಣಿಗೆಯಲ್ಲಿ ಬೀದಿಬೀದಿಗಳಲ್ಲಿ ಮಹಿಳೆಯರು, ಯುವತಿಯರು ಆರತಿ ಹಿಡಿದು ದೀಪ ಬೆಳಗಿಸಿ ಹಣೆಗೆ ತಿಲಕ ಹಚ್ಚಿದರು.ಶಿರಸಿ ರಂಗುರಂಗಾಗಿತ್ತು. ಸಿಡಿಮದ್ದುಗಳ ಅಬ್ಬರ. ಭಟ್ಕಳದಲ್ಲಿ ಅಂದು ರಾತ್ರಿ ಮನೆಗಳಲ್ಲಿ ಪಾಯಸದ ಊಟ.ಅನಂತ್ ಮುಂದೆ ಇನ್ನೂ ಐದು ಬಾರಿ ಗೆಲುವಿನ ಜಯಭೇರಿ ಬಾರಿಸಿದರು.

ಪ್ರತಾಪ ಸಿಂಹ

ಆ ದಿನಗಳಲ್ಲಿ ಮಾಧ್ಯಮಗಳಿಗೆ ಅಪಥ್ಯವೆನಿಸಿದ್ದ ಹಿಂದುತ್ವ,ರಾಷ್ಟ್ರೀಯವಾದದ ಪ್ರಖರ ವಿಚಾರಗಳನ್ನು ಪ್ರತಿವಾರ ವಿಜಯ ಕರ್ನಾಟಕದ “ಬೆತ್ತಲೆ ಜಗತ್ತುʼ ಅಂಕಣದ ಮೂಲಕ ಓದುಗರಿಗೆ ತಲುಪಿಸುತಿದ್ದರು. ಅವರಿಗೆ ಉದ್ಯೋಗ ಕಳೆದುಕೊಳ್ಳುವ ಆತಂಕ ಮತ್ತು ಜೀವ ಬೆದರಿಕೆಯಿತ್ತು. ಕೊಡಗಿನ ಅಭಿಮಾನಿಯೊಬ್ಬರು ಜೀವ ರಕ್ಷಣೆಗಾಗಿ ಪ್ರತಾಪ್‌ಗೆ ಲೈಸೆನ್ಸ್‌ ಹೊಂದಿರುವ ಗನ್‌ ತಂದುಕೊಟ್ಟಿದ್ದರು.

2014 ಮತ್ತು 2019 ರಲ್ಲಿ ಲೋಕಸಭೆ ಚುನಾವಣೆಗೆ ಮೈಸೂರು ಲೋಕಸಭೆ ಕ್ಷೇತ್ರದ ಟಿಕೆಟ್‌ ಸಿಕ್ಕಿತು.ಹೀಗೆ ಪತ್ರಿಕೋದ್ಯಮದಿಂದ ರಾಜಕಾರಣದ ಹಾದಿಯಲ್ಲಿ ಪ್ರತಾಪ್‌ ಹೆಜ್ಜೆ ಇಟ್ಟರು.

ತಾವು ನಂಬಿದ ತತ್ತ್ವ, ಸಿದ್ಧಾಂತಗಳಿಗೆ ಬದ್ಧರಾಗಿ ಅನಂತ್‌ಕುಮಾರ್‌ ಮತ್ತು ಪ್ರತಾಪ್‌ ಸಿಂಹ ಇಬ್ಬರೂ ತಮ್ಮ ಜೀವ ಪಣಕ್ಕಿಟ್ಟು ಮುನ್ನುಗ್ಗಿದರು. ಇಬ್ಬರಿಗೂ ಸಂಸದ್‌ ಸದಸ್ಯರಾಗ್ತೀವಿ ಅನ್ನೋದೇ ಗೊತ್ತಿರ್ಲಿಲ್ಲ.

C M Siddaramaiah On RCB Stampede: ಬಿಜೆಪಿಗರ ಆ ಲೆಟರ್‌.. ಎಲ್ಲರೂ ಮುಂದೆ ಓದಿದ ಸಿದ್ರಾಮಯ್ಯ  #pratidhvani

ಯಾರಿಗೆ ಗೊತ್ತು? ಮೋದಿ-ಯೋಗಿಯಂತೆ ಅನಂತ್‌ ಕುಮಾರ್‌ ಹೆಗಡೆ ಮತ್ತು ಪ್ರತಾಪ್‌ ಸಿಂಹ ಅವರಿಗೂ ಮುಂದೆ ರಾಜ್ಯ ರಾಜಕಾರಣದಲ್ಲಿ ಉಜ್ವಲ ಅವಕಾಶದ ಬಾಗಿಲು ತೆರೆಯಬಹುದು! ಪಕ್ಷನಿಷ್ಠೆ ಇರ್ಲೇಬೇಕು .ಜನಪ್ರಿಯತೆ ಮಹತ್ವಾಕಾಂಕ್ಷೆಯ ಗುಂಗು ನೆತ್ತಿಗೇರಬಾರದಷ್ಟೆ

ನವೀನ ಹೆಚ್ಎ
ಹನುಮನಹಳ್ಳಿ ಅಂಕಣಕಾರರು ಲೇಖಕರು ಕೆಆರ್ ನಗರ

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

Kusum -C ಯೋಜನೆಯಿಂದ ರೈತರಿಗೆ ಸಿಹಿ ಸುದ್ದಿ

Next Post

ಸಾಲುಮರದ ತಿಮ್ಮಕ್ಕನ ಬಯೋಪಿಕ್ ಪಾತ್ರದಲ್ಲಿ ನಟಿ ಸೌಜನ್ಯ.

Related Posts

ಬೌರಿಂಗ್ ದುರಂತದ ಬಳಿಕ ಎಚ್ಚರಗೊಂಡ ಸರ್ಕಾರ: ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ತಪಾಸಣೆ ಆದೇಶ
Top Story

ಬೌರಿಂಗ್ ದುರಂತದ ಬಳಿಕ ಎಚ್ಚರಗೊಂಡ ಸರ್ಕಾರ: ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ತಪಾಸಣೆ ಆದೇಶ

by ಪ್ರತಿಧ್ವನಿ
April 30, 2026
0

ಬೆಂಗಳೂರು: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿತ ದುರಂತದ ಹಿನ್ನೆಲೆ, ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ ಪಾಟೀಲ ಅವರು ಗುರುವಾರ ಆಸ್ಪತ್ರೆಗೆ ಭೇಟಿ...

Read moreDetails
ಸೌಜನ್ಯ ಪ್ರಕರಣಕ್ಕೆ ಮತ್ತೆ ಜೀವ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಠಿಣ ಸೂಚನೆ

ಸೌಜನ್ಯ ಪ್ರಕರಣಕ್ಕೆ ಮತ್ತೆ ಜೀವ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಠಿಣ ಸೂಚನೆ

April 30, 2026
ಬೇಡ್ತಿ ನದಿಯ ಏತ ನೀರಾವರಿ ಯೋಜನೆ ಎರಡನೇ ಹಂತಕ್ಕೆ ₹180 ಕೋಟಿ

ಮಳೆ ದುರಂತಕ್ಕೆ ಆಘಾತ ವ್ಯಕ್ತಪಡಿಸಿದ ಡಿಕೆಶಿ: “ಆರೋಪದ ಸಮಯವಲ್ಲ, ಪರಿಹಾರವೇ ಮುಖ್ಯ”

April 30, 2026
ಮಳೆಯಲ್ಲಿ ಮುಳುಗಿದ ಬೆಂಗಳೂರು: ಡಿಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

ಮಳೆಯಲ್ಲಿ ಮುಳುಗಿದ ಬೆಂಗಳೂರು: ಡಿಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

April 30, 2026
ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

April 29, 2026
Next Post

ಸಾಲುಮರದ ತಿಮ್ಮಕ್ಕನ ಬಯೋಪಿಕ್ ಪಾತ್ರದಲ್ಲಿ ನಟಿ ಸೌಜನ್ಯ.

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada