ಪ್ರತಿಯೊಂದು ಹಣ್ಣಿನಲ್ಲೂ ದೇಹಕ್ಕೆ ಅಗತ್ಯವಿರುವ ಅಂಶಗಳು ಹೆಚ್ಚಿರುತ್ತದೆ , ಅವುಗಳಲ್ಲಿ ಮೋಸಂಬಿ ಕೂಡ ಒಂದು, ಸಿಟ್ರಿಕ್ ಫ್ರೂಟ್ಸ್ ಗಳ ಪೈಕಿ ಮೋಸಂಬಿ ಕೂಡ ಒಂದಾಗಿದ್ದು ಇದರಲ್ಲಿ ದೇಹಕ್ಕೆ ಅಗತ್ಯವಿರುವ , ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವುದರಿಂದ. ಇಷ್ಟೇ ಅಲ್ಲದೆ ಈ ಹಣ್ಣು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಮೋಸಂಬಿ ಹಣ್ಣನ್ನು ಸೇವಿಸುವುದರಿಂದಾಗುವ ಕೆಲವು ಪ್ರಯೋಜನಗಳು ಬಗ್ಗೆ ಮಾಹಿತಿ ಹೀಗಿದೆ
ವಿಟಮಿನ್ ಸಿ
ಮೋಸಂಬಿಯಲ್ಲಿ ಸಿಟ್ರಿಕ್ ಅಂಶ ಹೆಚ್ಚಿರೋದರ ಜೊತೆಗೆ ವಿಟಮಿನ್ ಸಿ ಕೂಡ ಅಷ್ಟೇ ಇದೆ. ಈ ಹಣ್ಣು ದೇಹಕ್ಕೆ ಅಗತ್ಯವಿರುವಷ್ಟು ಇಮ್ಮ್ಯೂನಿಟಿಯನ್ನು ಬೂಸ್ಟ್ ಮಾಡುತ್ತದೆ ಹಾಗೂ ಹಾಗೂ ಮುಖ್ಯವಾಗಿ ಇನ್ಫೆಕ್ಷನ್ ವಿರುದ್ಧ ಹೋರಾಡುತ್ತದೆ. ಹಾಗಾಗಿ ಜ್ವರ ಬಂದಾಗ ಅಥವಾ ಆರೋಗ್ಯದಲ್ಲಿ ಸಮಸ್ಯೆಯಾದಾಗ ಮೋಸಂಬಿ ಹಣ್ಣನ್ನ ತಿನ್ನಲು ಹೇಳುತ್ತಾರೆ.
ಫೈಬರ್ ಅಂಶ
ಈ ಹಣ್ಣಿನಲ್ಲಿ ನಾರಿನ ಅಂಶ ಜಾಸ್ತಿ ಇರುತ್ತದೆ ಹಾಗೂ ಇದರಿಂದ ಡೈಜೇಶನ್ ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ ಮುಖ್ಯವಾಗಿ ಕಾನ್ಸ್ಟಿಪೇಶನ್ ಇದ್ದವರು ಈ ಹಣ್ಣನ್ನ ತಿನ್ನುವುದು ಉತ್ತಮ. ಮತ್ತು ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯಾವನ್ನು ಬೆಂಬಲಿಸುತ್ತದೆ.
ಮೂಳೆಗಳ ಆರೋಗ್ಯ
ಮೋಸಂಬಿ ಹಣ್ಣಿನಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಿರುತ್ತದೆ. ಹಾಗಾಗಿ ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ ಗಟ್ಟಿ ಮೂಳೆ ನಿಮ್ಮದಾಗುತ್ತದೆ ಹಾಗೂ ಹಲ್ಲುಗಳಿಗೂ ಕೂಡ ಒಳ್ಳೆಯದು.