ರಾಜ್ಯ ಕಾಂಗ್ರೆಸ್ (Congress) ಪಾಳಯದಲ್ಲಿ ಬಣ ಬಡಿದಾಟ ಹೆಚ್ಚಾಗಿದ್ದು, ಪರಸ್ಪರ ನಾಯಕರ ನಡುವೆ ಪರೋಕ್ಷ ವಾಕ್ಸಮರಗಳು ಹೆಚ್ಚಾಗಿವೆ. ಸಿಎಂ ರೇಸ್ ನಲ್ಲಿರುವ ನಾಯಕರ ಗುಂಪುಗಳ ನಡುವೆ ನಿಧಾನವಾಗಿಯೇ ಜಿದ್ದಾಜಿದ್ದಿ ಶುರುವಾಗುತ್ತಿದೆ. ಆದ್ರೆ ಈ ಮಧ್ಯೆ ವಿನಯ್ ಗುರೂಜಿ (Vinay guruji) ಭವಿಷ್ಯ, ಕಾಂಗ್ರೆಸ್ ನಲ್ಲಿ ತಲ್ಲಣ ಸೃಷ್ಟಿಸಿದೆ.
ವೈಕುಂಠ ಏಕಾದಶಿಯ ದಿನದಂದು ರಾಜ್ಯ ರಾಜಕಾರಣದ ಬಗ್ಗೆ ವಿನಯ್ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದು, ಶತಾಯ ಗತಾಯ ಡಿಕೆ ಶಿವಕುಮಾರ್ (Dk Shivakumar) ಮುಖ್ಯಮಂತ್ರಿ ಆಗೋದು ನಿಶ್ಚಿತ ಅಂತ ಹೇಳಿದ್ದಾರೆ. ಈ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ಅಕ್ಷರಶಃ ತಲ್ಲಣ ಸೃಷ್ಟಿಸಿದೆ.
ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಇದ್ದಾರೆ. ಅವರಿಗೆ ಗುರು ನಿಷ್ಠೆಯಿದೆ. ಅಜ್ಜಯ್ಯ ಅವರನ್ನು ನಂಬಿದ್ದಾರೆ. ಜೊತೆಗೆ ಡಿಕೆ ಗೆ ನಾಟಕ ಮಾಡಲು ಬರಲ್ಲ. ಅವರು ನಾಟಕ ಮಾಡುವ ಪ್ರವೃತ್ತಿಯ ರಾಜಕಾರಿಣಿಯಲ್ಲ. ಹೀಗಾಗಿ ಅವರು ಸಿಎಂ ಆದಲ್ಲಿ ನಾವು ಖುಷಿ ಪಡುತ್ತೇವೆ ಎಂದಿದ್ದಾರೆ.