• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, September 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದೆಹಲಿ ಚುನಾವಣೆ.. INDIA ಒಕ್ಕೂಟದಲ್ಲಿ ಏಕಾಂಗಿ ಆದ ಕಾಂಗ್ರೆಸ್‌

ಕೃಷ್ಣ ಮಣಿ by ಕೃಷ್ಣ ಮಣಿ
January 10, 2025
in Top Story, ಕರ್ನಾಟಕ, ದೇಶ, ರಾಜಕೀಯ
0
ದೆಹಲಿ ಚುನಾವಣೆ.. INDIA ಒಕ್ಕೂಟದಲ್ಲಿ ಏಕಾಂಗಿ ಆದ ಕಾಂಗ್ರೆಸ್‌
Share on WhatsAppShare on FacebookShare on Telegram

ADVERTISEMENT

ದೆಹಲಿ ಚುನಾವಣೆ ಘೋಷಣೆ ಆಗಿದ್ದು, ಫೆಬ್ರವರಿ 5ರಂದು ಮತದಾನ ನಡೆಯಲಿದೆ. ಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗು ಆಮ್‌ ಆದ್ಮಿ ಪಾರ್ಟಿ ಪೈಪೋಟಿ ನಡೆಸುತ್ತಿದೆ. ಆದರೆ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟ ದೆಹಲಿ ಚುನಾವಣೆ ಬಳಿಕ ಛಿದ್ರಛಿದ್ರ ಆಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ದೆಹಲಿಯಲ್ಲಿ ಆಮ್‌ ಆದ್ಮಿ ಪಾರ್ಟಿ ಬೆಂಬಲಕ್ಕೆ ಸಮಾಜವಾದಿ ಪಾರ್ಟಿ ಹಾಗು ತೃಣಮೂಲ ಕಾಂಗ್ರೆಸ್‌, ಶಿವಸೇನೆ ಸೇರಿದಂತೆ ಇಂಡಿಯಾ ಒಕ್ಕೂಟದ ಪಕ್ಷಗಳೇ ನಿಂತಿದ್ದು, ಕಾಂಗ್ರೆಸ್‌ ಏಕಾಂಗಿ ಆಗುತ್ತಿದೆಯಾ ಅನ್ನೋ ಪ್ರಶ್ನೆ ಎದುರಾಗಿದೆ.

ದೆಹಲಿ ಚುನಾವಣೆಯಲ್ಲಿ ಎಎಪಿಗೆ ನಮ್ಮ ಬೆಂಬಲ ಎಂದು ಪ್ರಾದೇಶಿಕ ಪಕ್ಷಗಳು ಬಹಿರಂಗವಾಗಿಯೇ ಘೋಷಣೆ ಮಾಡಿವೆ. INDIA ಒಕ್ಕೂಟದಲ್ಲಿ AAP ಬಹುಮುಖ್ಯ ಪಕ್ಷ. 2013 ರಿಂದ AAP ದೆಹಲಿಯಲ್ಲಿ ಯಶಸ್ವಿಯಾಗಿ ಸರ್ಕಾರ ನಡೆಸುತ್ತಿದೆ. AAPಗೆ ನಮ್ಮ ಬೆಂಬಲ ಇರುತ್ತದೆ. ಕಾಂಗ್ರೆಸ್‌ ಸ್ಥಳೀಯ ಪಾರ್ಟಿಗಳನ್ನು ಗೌರವಿಸಬೇಕು. ಅದೇ ರೀತಿ ದೆಹಲಿಯಲ್ಲಿ AAP ಬೆಂಬಲಿಸಬೇಕು. ಆಮ್‌ ಆದ್ಮಿ ಪಾರ್ಟಿ ಜೊತೆಗೆ ಸ್ಪರ್ಧೆ ಮಾಡುತ್ತಿರುವುದು ಸರಿಯಲ್ಲ ಎಂದು ಟಿಎಂಸಿ ಸಂಸದ ಕೀರ್ತಿ ಆಜಾದ್‌ ಹೇಳಿದ್ದಾರೆ.

CM Atishi: ರಮೇಶ್ ಬಿಧುರಿ ಟಾಂಗ್‌ ಕೊಟ್ಟ ಸಿಎಂ ಅತಿಶಿ..! #delhielection #atishi #arvindkejriwal #cm

ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌‌ ಹಾಗೂ ಎನ್‌ಸಿಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದು, ದೆಹಲಿಯಲ್ಲಿ ಆಮ್‌ ಆದ್ಮಿ ಪಾರ್ಟಿಗೆ ಬೆಂಬಲ ಸೂಚಿಸಿದೆ. ಸಂಸದೆ ಪ್ರಿಯಾಂಕಾ ಚೌಧರಿ ಮಾತನಾಡಿ, ಅರವಿಂದ್‌ ಕೇಜ್ರಿವಾಲ್‌ ಜನರ ಮನಸ್ಸು ಗೆದ್ದಿದ್ದಾರೆ. ದೆಹಲಿ ಜನರ ಹೃದಯದಲ್ಲಿ ಅರವಿಂದ್‌ ಕೇಜ್ರಿವಾಲ್‌ಗೆ ಸ್ಥಾನ ಸಿಕ್ಕಿದೆ. ದೆಹಲಿಯ ಜನರು ಕೇಜ್ರಿವಾಲ್‌ಗೆ ಸಪೋರ್ಟ್‌ ಮಾಡಲಿದ್ದು, ಮತ್ತೊಮ್ಮೆ ಸರ್ಕಾರ ರಚನೆ ಮಾಡಲು ದೆಹಲಿ ಜನ ಬೆಂಬಲಿಸ್ತಾರೆ. ದೆಹಲಿಯಲ್ಲಿ ಮುಂದೆಯೂ ಅರವಿಂದ್‌ ಕೇಜ್ರಿವಾಲ್‌ ಉತ್ತಮ ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೆಹಲಿ ಚುನಾವಣೆಗೂ ಮುನ್ನ ಇಂಡಿಯಾ ಒಕ್ಕೂಟದ ಸಭೆ ನಡೆಸಿ ಆಮ್‌ ಆದ್ಮಿ ಪಾರ್ಟಿ ಹಾಗು ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡು ಚುನಾವಣೇ ಮಾಡದೆ ಇರುವುದಕ್ಕೆ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ಬೇಸರ ಹೊರ ಹಾಕಿದ್ದಾರೆ. ಕಾಂಗ್ರೆಸ್‌ ಹಾಗು ಆಮ್‌ ಆದ್ಮಿ ಪಾರ್ಟಿ ಪ್ರತ್ಯೇಕವಾಗಿ ಚುನಾವಣೆ ಮಾಡ್ತಿರೋದು ಸರಿಯಲ್ಲ. ಇಂಡಿಯಾ ಒಕ್ಕೂಟ ರಚನೆ ಆಗಿದ್ದು ಕೇವಲ ಲೋಕಸಭಾ ಚುನಾವಣೆಗಾಗಿ ಮಾತ್ರವೇ ಆಗಿದ್ದರೆ ಇಂಡಿಯಾ ಒಕ್ಕೂಟವನ್ನು ವಿಸರ್ಜನೆ ಮಾಡುವುದು ಸೂಕ್ತ. ಆ ಬಳಿಕ ನಾವು ಪ್ರತ್ಯೇಕವಾಗಿ ರಾಜಕೀಯ ಮಾಡಬಹುದು ಎಂದಿದ್ದಾರೆ.

ಇಂಡಿಯಾ ಒಕ್ಕೂಟದ ಪ್ರಾದೇಶಿಕ ಪಕ್ಷಗಳು ಆಮ್‌ ಆದ್ಮಿ ಪಾರ್ಟಿ ಜೊತೆಗೆ ನಿಂತಿವೆ. ಆದರೂ ಕಾಂಗ್ರೆಸ್‌ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಇಂಡಿಯಾ ಒಕ್ಕೂಟವನ್ನು ಉಳಿಸಿಕೊಳ್ಳುವ ಬಗ್ಗೆಯೂ ಏನನ್ನೂ ಹೇಳಿಲ್ಲ. ಇದು ಬಿಜೆಪಿಗೆ ಭಾರೀ ಲಾಭ ಮಾಡಿಕೊಡುವ ಸಂಭವವಿದೆ. ಇದೀಗ ಲೋಕಸಭೆಯಲ್ಲಿ ಕಾಂಗ್ರೆಸ್‌ ವಿರೋಧ ಪಕ್ಷವಾಗಿದ್ದು, ಇಂಡಿಯಾ ಒಕ್ಕೂಟದ ಮೂಲಕ ಬಿಜೆಪಿಯನ್ನ ಎದುರಿಸುತ್ತಿದೆ. ಒಂದು ವೇಳೆ ಇಂಡಿಯಾ ಒಕ್ಕೂಟ ಛಿದ್ರವಾಗಿ ಕಾಂಗ್ರೆಸ್‌ ಏಕಾಂಗಿ ಆದರೆ ಲೋಕಸಭೆಯಲ್ಲೂ ವಿರೋಧ ಪಕ್ಷಕ್ಕೆ ಭಾರೀ ಹಿನ್ನಡೆ ಆಗಲಿದೆ ಎನ್ನುವುದು ನಿಶ್ಚಿತ.

Tags: aap and congress alliance in delhiaap congress alliance in delhicongresscongress aap alliance in delhiDelhi Assembly Electiondelhi assembly election 2025Delhi assembly electionsdelhi assembly elections 2025Delhi Electiondelhi election 2025delhi election 2025 datedelhi election datedelhi election date announceddelhi election newsdelhi electionsdelhi elections 2025delhi vidhan sabha election 2025
Previous Post

ಕೆರೆಗಳ ಉಳಿವಿನ ಹೋರಾಟಕ್ಕಾಗಿ ಸರ್ಕಾರ ಎಷ್ಟೇ ಕೇಸುಗಳನ್ನು ಹಾಕಿದರು ನಾವು ಬಗ್ಗುವುದಿಲ್ಲ ಜಗ್ಗುವುದಿಲ್ಲ – ಮುಖ್ಯಮಂತ್ರಿ ಚಂದ್ರು

Next Post

ಫೆ.15 ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ – ಎಲ್ಲಾ ಗೊಂದಲಗಳಿಗೆ ತೆರೆ ! 

Related Posts

ಅಕ್ಟೋಬರ್ 20ರಿಂದ ಹೊಸ ವ್ಯಾಪಾರ ನಿಯಮ; ಭಾರತ-ನ್ಯೂಜಿಲೆಂಡ್ FTAಯಿಂದ ಏನೆಲ್ಲ ಬದಲಾವಣೆ?
Top Story

ಅಕ್ಟೋಬರ್ 20ರಿಂದ ಹೊಸ ವ್ಯಾಪಾರ ನಿಯಮ; ಭಾರತ-ನ್ಯೂಜಿಲೆಂಡ್ FTAಯಿಂದ ಏನೆಲ್ಲ ಬದಲಾವಣೆ?

by ಪ್ರತಿಧ್ವನಿ
September 21, 2026
0

ನವದೆಹಲಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ (FTA) ಅಕ್ಟೋಬರ್ 20, 2026ರಿಂದ ಜಾರಿಗೆ ಬರಲಿದೆ. ಎರಡೂ ದೇಶಗಳು ಒಪ್ಪಂದವನ್ನು ಅನುಮೋದಿಸಿದ ಬಳಿಕ ಈ...

Read moreDetails
ಸಾರ್ವಜನಿಕರೇ ಹಾವು ಕಚ್ಚಿದಾಗ ಈ ತಪ್ಪುಗಳನ್ನು ಮಾಡಬೇಡಿ.!

ಸಾರ್ವಜನಿಕರೇ ಹಾವು ಕಚ್ಚಿದಾಗ ಈ ತಪ್ಪುಗಳನ್ನು ಮಾಡಬೇಡಿ.!

September 21, 2026
ಪ್ರತಾಪ್ ಸಿಂಹ ಹೇಳಿಕೆಗೆ ಪ್ರದೀಪ್ ಈಶ್ವರ್ ತಿರುಗೇಟು; ದಲಿತರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಎಂದ ಶಾಸಕ

ಪ್ರತಾಪ್ ಸಿಂಹ ಹೇಳಿಕೆಗೆ ಪ್ರದೀಪ್ ಈಶ್ವರ್ ತಿರುಗೇಟು; ದಲಿತರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಎಂದ ಶಾಸಕ

September 21, 2026
108 ಆ್ಯಂಬುಲೆನ್ಸ್ ಸೇವೆ ಸ್ಥಗಿತದ ಎಚ್ಚರಿಕೆ; ಬೇಡಿಕೆ ಈಡೇರಿಕೆಗೆ ನೌಕರರ ಗಡುವು ಮುಕ್ತಾಯ

108 ಆ್ಯಂಬುಲೆನ್ಸ್ ಸೇವೆ ಸ್ಥಗಿತದ ಎಚ್ಚರಿಕೆ; ಬೇಡಿಕೆ ಈಡೇರಿಕೆಗೆ ನೌಕರರ ಗಡುವು ಮುಕ್ತಾಯ

September 21, 2026
ಪಿಲಿಕುಳ ನಿಸರ್ಗಧಾಮದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ಸಚಿವ ಡಾ. ಅಜಯ್ ಧರ್ಮಸಿಂಗ್ ಸೂಚನೆ

ಪಿಲಿಕುಳ ನಿಸರ್ಗಧಾಮದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ಸಚಿವ ಡಾ. ಅಜಯ್ ಧರ್ಮಸಿಂಗ್ ಸೂಚನೆ

September 21, 2026
Next Post
ಫೆ.15 ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ – ಎಲ್ಲಾ ಗೊಂದಲಗಳಿಗೆ ತೆರೆ ! 

ಫೆ.15 ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ - ಎಲ್ಲಾ ಗೊಂದಲಗಳಿಗೆ ತೆರೆ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada