ಬಿಜೆಪಿಯ ನಾಯಕರಿಗೆ ಕೋವಿಡ್ ದೃಢವಾಗುತ್ತಿರುವ ಪ್ರಕರಣಗ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಈಗ ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜ್ ಅವರಿಗೆ ಸೋಂಕು ತಗುಲಿದೆ. ಈ ಕುರಿತು ಟ್ವೀಟ್ ಮಾಡಿರುವ ಅವರು, “ನನಗೆ ಕೋವಿಡ್ ದೃಢವಾಗಿದ್ದು ನಾನು ಆರೋಗ್ಯವಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ತಿಳಿಸಿದ್ದಾರೆ.
ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ಪ್ರಿಯಾಂಕ ಖರ್ಗೆಗೂ ಸಹ ಸೋಂಕು ಕಾಣಿಸಿಕೊಂಡಿದ್ದು, ನಾನು ಮೊದಲ ಮತ್ತು ಎರಡನೇ ಅಲೆ ಸಮಯದಲ್ಲಿ ಸೋಂಕಿನಿಂದ ಪಾರಾಗಿದ್ದೆ. ಆದರೆ, ಈ ಬಾರಿ ಸೋಂಕು ನನ್ನ ದೇಹ ಪ್ರವೇಶಿಸಿದೆ. ನನ್ನ ಕಚೇರಿಯಲ್ಲಿರುವ ಎಲ್ಲಾ ಸಿಬ್ಬಂದಿಗಳಿಗೂ ನೆಗಟಿವ್ ವರದಿ ಬಂದಿದ್ದು ನನ್ನ ಸಂಪರ್ಕದಲ್ಲಿದ್ದವರು ದಯಮಾಡಿ ಪರೀಕ್ಷೀಸಿಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ.