ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು ( Prime minister modhi ) ದಿಲ್ಲಿ ( Dehli ) ವಿವಿಗೆ ಭೇಟಿ ನೀಡಿದ್ದು ಹಾಗೂ ಈ ಕಾರ್ಯಕ್ರಮಕ್ಕಾಗಿ ಪ್ರಧಾನಿ ಮೆಟ್ರೋದಲ್ಲಿ ( Dehli metro ) ಪ್ರಯಾಣಿಸಿದ ವಿಚಾರ ದೇಶಾದ್ಯಂತ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ, ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಈ ನಡೆಗೆ ವ್ಯಾಪಕ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ. ಆದರೆ ಇದೇ ವೇಳೆ ( AISA )AISA ನ ವಿದ್ಯರ್ಥಿಗಳ ದನಿಯನ್ನ ( Voice ) ಅಡಗಿಸಲು ತಮ್ಮ ಫ್ಲ್ಯಾಟ್ ಗಳಲ್ಲಿ ದಿಗ್ಬಂಧನದಲ್ಲಿ ಇರಿಸಲಾಗಿತ್ತು ಮತ್ತು ಹೊರಗೆ ಹೋಗೋದಕ್ಕೂ ಅವಕಾಶ ನೀಡಿರಲಿಲ್ಲ ಎಂದು ಸಿಪಿಐ-ಎಂಎಲ್ ( CPI-LM) ವಿದ್ಯಾರ್ಥಿ ಘಟಕದ ಆಲ್ ಇಂಡಿಯಾ ಸ್ಟುಡೆಂಟ್ಸ್ ಅಸೋಸಿಯೇಷನ್ (AISA) ಶುಕ್ರವಾರ ಆರೋಪಿಸಿತ್ತು.
ಇನ್ನು ಈ ವಿಚಾರ ಹೊರ ಬರುತ್ತಿದ್ದಂತೆ ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ದೇಶದ ವಿವಿಧ ವಿಪಕ್ಷಗಳು ಹಾಗೂ ಪ್ರಜ್ಙಾವಂತ ನಾಗರೀಕರ ವೇದಿಕೆಗಳು ಆಕ್ರೋಶ ವ್ಯಕ್ತ ಪಡಿಸುತ್ತಿವೆ. ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ದೆಹಲಿ ಪೊಲೀಸರು ಯಾವುದೇ ವಿದ್ಯಾರ್ಥಿಯನ್ನು ದಿಗ್ಬಂಧನದಲ್ಲಿ ಇರಿಸಲಾಗಿರಲಿಲ್ಲಅಂತ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಭೇಟಿಯ ಕಾರಣವನ್ನು ನೀಡಿದ ನನ್ನನ್ನು ಮತ್ತು ಎಐಎಸ್ಎ ದಿಲ್ಲಿ ವಿವಿ ಕಾರ್ಯದರ್ಶಿ ಅಂಜಲಿ ಅವರನ್ನು ನಮ್ಮ ಫ್ಲ್ಯಾಟ್ ಗಳಲ್ಲಿ ದಿಗ್ಬಂಧನದಲ್ಲಿ ಇರಿಸಲಾಗಿತ್ತು ಹಾಗೂ ನಾವು ನಮ್ಮ ಕ್ಯಾಂಪಸ್ಗೆ ಹೋಗಲು ಅವಕಾಶವನ್ನೂ ನೀಡುತ್ತಿರಲಿಲ್ಲ’ ಎಂದು ಎಐಎಸ್ಎ ದಿಲ್ಲಿ ಅಧ್ಯಕ್ಷ ಅಭಿಜ್ಞಾನ ಹೇಳಿಕೆಯನ್ನ ನೀಡಿದ್ದಾರೆ.
ಒಟ್ಟಾರೆಯಾಗಿ ಪ್ರಜಾಪ್ರಭುತ್ವದ ಮುಂದಿನ ಪೀಳಿಗೆ ಮತ್ತು ಅಸ್ಮಿತೆ ಎಂದು ಕರೆಯಲ್ಪಡುವ ವಿದ್ಯಾರ್ಥಿಗಳನ್ನ ಹೀಗೆ ದಿಗ್ಭಂದನದಲ್ಲಿರಿಸಿ, ವಿದ್ಯಾರ್ಥಿಗಳನ್ನ ಧಣಿಯನ್ನ ಅಡಗಿಸುವುದು ಮತ್ತು ಟೀಕೆ ಟಿಪ್ಪಣಿಗಳನ್ನ ಸ್ವೀಕರಿಸಲು ಸಾಧ್ಯವಾಗದ ಪ್ರಧಾನಿ ನರೇಂದ್ರ ಮೋದಿ ಅವರ ಈ ವಿಲಕ್ಷಣ ನಡೆಗೆ ವ್ಯಾಪಕವಾದ ಟೀಕೆಗಲು ಕೂಡ ವ್ಯಕ್ತವಾಗುತ್ತಿದೆ.