• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ರಾಜ್ಯಗಳಿಗೆ ಲಸಿಕೆ ಪೂರೈಸಲು ಅಂತರಾಷ್ಟ್ರೀಯ ಲಸಿಕಾ ತಯಾರಕರ ಹಿಂದೇಟು; ಸಂಕಷ್ಟದಲ್ಲಿ ರಾಜ್ಯ ಸರ್ಕಾರಗಳು

Any Mind by Any Mind
May 24, 2021
in ದೇಶ
0
ರಾಜ್ಯಗಳಿಗೆ ಲಸಿಕೆ ಪೂರೈಸಲು ಅಂತರಾಷ್ಟ್ರೀಯ ಲಸಿಕಾ ತಯಾರಕರ ಹಿಂದೇಟು; ಸಂಕಷ್ಟದಲ್ಲಿ ರಾಜ್ಯ ಸರ್ಕಾರಗಳು
Share on WhatsAppShare on FacebookShare on Telegram

ADVERTISEMENT

ಅಸಮರ್ಥ ನಾಯಕತ್ವ, ಅಧಿಕಾರದ ಮಹದಾಸೆ, ಗುರಿಯಿಲ್ಲದ ದೂರದೃಷ್ಟಿತ್ವದಿಂದಾಗಿ ಈಗಾಗಲೇ ಭಾರತ ಕರೋನಾ ಸೋಂಕಿನ ಕರಿನೆರಳಿಗೆ ತುತ್ತಾಗಿ ಒದ್ದಾಡುತ್ತಿದೆ. ಕಳೆದ ಒಂದು ವರ್ಷದಲ್ಲಿ ದಾಖಲಾದ ಕರೋನಾ ಪ್ರಕರಣಗಳ ಸಂಖ್ಯೆ, ಒಂದು ತಿಂಗಳಲ್ಲಿ ದಾಖಲಾಗುವ ಮಟ್ಟಕ್ಕೆ ದೇಶದಲ್ಲಿ ಸೋಂಕು ಹಬ್ಬಿದೆ. ಸರ್ಕರವೇ ಹೇಳುವಂತೆ ಸೋಂಕು ತಡೆಗಟ್ಟಲು ಇರುವ ಮಾರ್ಗವೆಂದರೆ ಕೋವಿಡ್ ಲಸಿಕೆ ಪಡೆಯುವುದು. ಈಗ ಆ ಲಸಿಕೆಯ ಅಭಾವವು, ದೇಶವನ್ನು ಮತ್ತಷ್ಟು ಕಠಿಣ ಪರಿಸ್ಥಿತಿಗೆ ತಳ್ಳಿದೆ. 

ರಾಜ್ಯಗಳಿಗೆ ಬೇಕಾಗುವಷ್ಟು ಲಸಿಕೆಗಳನ್ನು ಆಯಾ ರಾಜ್ಯಗಳೇ ಖರೀದಿಸಬೇಕು ಎಂಬ ಷರತ್ತನ್ನು ಕೇಂದ್ರ ವಿಧಿಸಿದ್ದರೂ, ಲಸಿಕೆಗಳ ಕೊರತೆ ರಾಜ್ಯ ಸರ್ಕಾರಗಳ ಕೈ ಕಟ್ಟಿ ಹಾಕಿದೆ. ಈಗಾಗಲೇ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್’ಗಳ ಕೊರತೆ ಭಾರತವನ್ನು ಇನ್ನಿಲ್ಲದಂತೆ ಬಾಧಿಸುತ್ತಿದ್ದರೆ, ಅಂತರಾಷ್ಟ್ರೀಯ ಲಸಿಕಾ ತಯಾರಕರು, ರಾಜ್ಯ ಸರ್ಕಾರಗಳಿಗೆ ಲಸಿಕೆ ಪೂರೈಸಲು ಹಿಂದೇಟು ಹಾಕುತ್ತಿವೆ. 

ದೇಸೀಯ ಲಸಿಕಾ ತಯಾರಕರು ಪ್ರತಿ ತಿಂಗಳು ಸುಮಾರು ಎಂಬತ್ತು ಮಿಲಿಯನ್ ಡೋಸ್’ಗಳನ್ನು ಉತ್ಪಾದಿಸುತ್ತಿದ್ದರೂ, ಭಾರತದ ಬೃಹತ್ ಜನಸಂಖ್ಯೆಗೆ ಅದು ಸಾಲುತ್ತಿಲ್ಲ. ಈಗ ಅನಿವಾರ್ಯವಾಗಿ ವಿದೇಶಿ ಲಸಿಕೆ ತಯಾರಕರ ಮೊರೆ ಹೋಗುವ ಸಂದರ್ಭ ಎದುರಾಗಿದೆ. ಆದರೆ, ಅಮೇರಿಕಾ ಮೂಲದ ಲಸಿಕೆ ತಯಾರಕಾ ಸಂಸ್ಥೆಯಾದ ಮೋಡೆರ್ನಾ, ಪಂಜಾಬ್ ರಾಜ್ಯ ಸರ್ಕಾರಕ್ಕೆ ಲಸಿಕೆ ಪೂರೈಸುವುದಿಲ್ಲ ಎಂದು ಹೇಳಿದೆ. ಬದಲಾಗಿ ಕೇಂದ್ರ ಸರ್ಕಾರದೊಂದಿಗೆ ಮಾತ್ರ ವ್ಯವಹಾರವನ್ನು ಇಟ್ಟುಕೊಳ್ಳುವುದಾಗಿ ನೇರ ಮಾತುಗಳನ್ನಾಡಿದೆ. 

ರಾಜ್ಯದಲ್ಲಿ ಲಸಿಕೆ ಹಾಹಾಕಾರ: ಹಸೀಸುಳ್ಳಿಗೆ ಅಂಟಿಕೊಂಡ ಸರ್ಕಾರ..!

27 ಮಿಲಿಯನ್ ಜನಸಂಖ್ಯೆ ಇರುವಂತಹ ಪಂಜಾಬ್ ರಾಜ್ಯದಲ್ಲಿ ಲಸಿಕೆ ಪಡೆಯಲು ಅರ್ಹರಾಗಿರುವವರಿಗೆ ಲಸಿಕೆ ನೀಡುವ ಪ್ರಕ್ರಿಯೆ ಈಗಾಗಲೇ ನಿಂತು ಹೋಗಿದೆ. ಕೇಂದ್ರ ಸರ್ಕಾರದಿಂದ ಕೇವಲ 4.4 ಮಿಲಿಯನ್ ಡೋಸ್ ಲಸಿಕೆ ಪಡೆದಿದ್ದ ಪಂಜಾಬ್ ಸರ್ಕಾರ, ಲಸಿಕೆ ಖರೀದಿಗಾಗಿ ಮೋಡೆರ್ನಾ ಸಂಸ್ಥೆಯನ್ನು ಸಂಪರ್ಕಿಸಿತ್ತು. ಆದರೆ, ಪಂಜಾಬ್ ಮನವಿಗೆ ಸಕಾಲದಲ್ಲಿ ಸ್ಪಂದಿಸದ ಮೋಡೆರ್ನಾ, ನಂತರ ಕೇವಲ ಕೇಂದ್ರ ಸರ್ಕಾರದೊಂದಿಗೆ ವ್ಯವಹಾರ ಇಟ್ಟುಕೊಳ್ಳುವುದಾಗಿ ಹೇಳಿತ್ತು. 

ರಾಜ್ಯದಲ್ಲಿ ಕೋವಿಡ್‌ ಮೊದಲ ಡೋಸ್‌ ಪಡೆದವರಿಗೆ ಎರಡನೇ ಡೋಸ್‌ ಪಡೆಯಲು ಕೊರತೆ ಎದುರಾಗಿದೆ.

ಈ ಕುರಿತಾಗಿ ಅಧಿಕೃತ ಹೇಳಿಕೆ ನೀಡಿರುವ ಪಂಜಾಬ್’ನ ಉನ್ನತ ಪಟ್ಟದ ಅಧಿಕಾರಿಯಾಗಿರುವ ವಿಕಾಸ್ ಗರ್ಗ್ ಅವರು, ಪಂಜಾಬ್ ಸರ್ಕಾರದ ಪರವಾಗಿ ಫೈಜರ್, ಜೋನ್ಸನ್ & ಜೋನ್ಸನ್ ಕಂಪನಿಗಳಿಗೆ ಕೂಡಾ ಮನವಿ ಸಲ್ಲಿಸಲಾಗಿತ್ತು. ಆದರೆ, ಅವರಿಂದ ಈವರೆಗೆ ಯಾವುದೇ ಉತ್ತರ ಬಂದಿಲ್ಲ ಎಂದು ಹೇಳಿದ್ದಾರೆ. 

ಗುಜರಾತ್ ಕಣ್ಣಿಗೆ ಬೆಣ್ಣೆ-ಮಹಾರಾಷ್ಟ್ರ ಕಣ್ಣಿಗೆ ಸುಣ್ಣ: ಕೋವಿಡ್ ಲಸಿಕೆ ವಿತರಣೆಯಲ್ಲಿ ತಾರತಮ್ಯ!

ಇದು ಕೇವಲ ಪಂಜಾಬ್ ಪರಿಸ್ಥಿತಿ ಮಾತ್ರವಲ್ಲ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ 18-44ರ ಒಳಗಿನವರಿಗೆ ಲಸಿಕೆ ನಿಡುವುದನ್ನು ತಡೆಹಿಡಿಯಲಾಗಿದೆ. ಲಸಿಕೆಗಳ ಕೊರತೆ ಕರೋನಾ ಸೋಂಕು ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡುತ್ತಿದೆ. ಪ್ರಪಂಚದಲ್ಲಿ ಅತೀ ಹೆಚ್ಚು ಲಸಿಕೆಗಳನ್ನು ಉತ್ಪಾದಿಸುವ ದೇಶವಾದ ಭಾರತದಲ್ಲಿ ಈವರೆಗೆ ಕೇವಲ 41.6 ಮಿಲಿಯನ್ ಜನರಿಗಷ್ಟೇ ಲಸಿಕೆ ತಲುಪಿದೆ. ಅಂದರೆ, ಭಾರತದ ಒಟ್ಟು ಜನಸಂಖ್ಯೆಯ 3.8% ಜನರು ಮಾತ್ರ ಲಸಿಕೆಯನ್ನು ಪಡೆದಿದ್ದಾರೆ. ಉಳಿದವರೆಲ್ಲರೂ, ಈಗಲೂ ಕರೋನಾ ಸೋಂಕಿಗೆ ತುತ್ತಾಗುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿವೆ. 

3ನೇ ಹಂತದ ಕರೋನಾ ಲಸಿಕೆ ಅಭಿಯಾನ ಆರಂಭವಾದರೂ ನೀಗದ ಲಸಿಕೆ‌‌ ಕೊರತೆ

ಇನ್ನು ಭಾರತಕ್ಕೆ ಫೈಜರ್ ಲಸಿಕೆಯನ್ನು ಆಮದು ಮಾಡಿಕೊಳ್ಳುವ ಕುರಿತು ಇನ್ನು ಕೂಡಾ ಮಾತುಕತೆಗಳು ನಡೆಯುತ್ತಿದ್ದು, ಯಾವುದೇ ನಿರ್ಣಾಯಕ ಹಂತ ತಲುಪಲಾಗಿಲ್ಲ. ಇದಕ್ಕೂ ಹಿಂದೆ, ಫೈಜರ್ ಕುಡಾ ತಾನು ಕೇಂದ್ರ ಸರ್ಕಾರದೊಂದಿಗೆ ಮಾತ್ರ ವ್ಯವಹಾರವನ್ನು ಇಟ್ಟುಕೊಳ್ಳುವುದಾಗಿ ಹೇಳಿತ್ತು. 

ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳಿಗೆ ಲಸಿಕೆಯನ್ನು ಪಡೆಯಲು ಅವಕಾಶ ನೀಡದಿದ್ದರೆ, ರಾಜ್ಯಗಳ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಲಿದೆ. 

ಕೋವಿಡ್-19: ಲಸಿಕೆ ಕೊರತೆಯಿಂದ ಹಲವು ಕೇಂದ್ರಗಳನ್ನು ಸ್ಥಗಿತಗೊಳಿಸಲು ಮುಂದಾದ ಮಹಾರಾಷ್ಟ್ರ

ಈಗಾಗಲೇ ಕರ್ನಾಟಕವು ಅತೀ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ರಾಜ್ಯವಾಗಿದೆ. ಇಲ್ಲಿಯೂ 18-44 ವರ್ಷದೊಳಗಿನವರಿಗೆ ಲಸಿಕೆಯನ್ನು ನೀಡಲಾಗುತ್ತಿಲ್ಲ. ಸರ್ಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರ ಸೋಂಕು ಹರಡುವ ವೇಗ ಕಡಿಮೆಯಾಗಿದ್ದರೂ, ಮರಣ ಪ್ರಮಾಣ ಇನ್ನೂ ಕಡಿಮೆಯಾಗಿಲ್ಲ. ಕೋವಿಡ್ ಮೂರನೇ ಅಲೆ ಎದುರು ನೋಡುತ್ತಿರುವ ಈ ಸಂದರ್ಭದಲ್ಲಿ, ದೇಶದ ಬಹುಪಾಲು ಜನರಿಗೆ ಲಸಿಕೆ ಲಭ್ಯವಾಗಬೇಕಿದೆ. 

Previous Post

ಕೋವಿಡ್‌ನಿಂದ ಮೃತಪಟ್ಟ ಶಿಕ್ಷಕರನ್ನು ಕರೋನಾ ವಾರಿಯರ್ಸ್ ಎಂದು ಪರಿಗಣಿಸಿ 50 ಲಕ್ಷ ರೂ ಪರಿಹಾರ ನೀಡಿ –ಹೆಚ್‌ಡಿಕೆ

Next Post

ತನ್ನ ಪಾಸ್‌ಪೋರ್ಟ್‌‌‌‌‌ನಲ್ಲಿ ಇಸ್ರೇಲ್ ಗೆ ಮಾನ್ಯತೆ ನೀಡಲು ನಿರ್ಧರಿಸಿದ‌ ಬಾಂಗ್ಲಾ

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

April 19, 2026
Next Post
ತನ್ನ ಪಾಸ್‌ಪೋರ್ಟ್‌‌‌‌‌ನಲ್ಲಿ ಇಸ್ರೇಲ್ ಗೆ ಮಾನ್ಯತೆ ನೀಡಲು ನಿರ್ಧರಿಸಿದ‌ ಬಾಂಗ್ಲಾ

ತನ್ನ ಪಾಸ್‌ಪೋರ್ಟ್‌‌‌‌‌ನಲ್ಲಿ ಇಸ್ರೇಲ್ ಗೆ ಮಾನ್ಯತೆ ನೀಡಲು ನಿರ್ಧರಿಸಿದ‌ ಬಾಂಗ್ಲಾ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada